ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್, ಮ್ಯಾನ್ಮಾರ್‌ ಮಹಿಳೆಯರ ಮದುವೆಯಾಗುವವರಿಗೆ ಸೌದಿಯಲ್ಲಿ ಬಿಗಿ ನಿಯಮ: ವರದಿ

ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್ ಮತ್ತು ಮ್ಯಾನ್ಮಾರ್‌ ಮಹಿಳೆಯರನ್ನು ಮದುವೆಯಾಗುವುದನ್ನು ಸೌದಿ ಅರೇಬಿಯಾ ನಿಷೇಧಿಸಿದೆ ಎಂದು ಸೌದಿ ಮಾಧ್ಯಮದಲ್ಲಿ ವರದಿ ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ.
ಅನಧಿಕೃತ ಅಂಕಿಅಂಶಗಳ ಪ್ರಕಾರ, ಈ ನಾಲ್ಕು ದೇಶಗಳಿಂದ ಸುಮಾರು 5,00,000 ಮಹಿಳೆಯರು ಪ್ರಸ್ತುತ ಸೌದಿಯಲ್ಲಿ ವಾಸಿಸುತ್ತಿದ್ದಾರೆ.
ವಿದೇಶಿಯರನ್ನು ಮದುವೆಯಾಗಲು ಇಚ್ಛಿಸುವ ಸೌದಿ ಪುರುಷರು ಈಗ ಕಠಿಣ ನಿಯಮಗಳನ್ನು ಎದುರಿಸುತ್ತಿದ್ದಾರೆ ಎಂದು ಮಕ್ಕಾ ಪೊಲೀಸ್ ಡೈರೆಕ್ಟರ್ ಮೇಜರ್ ಜನರಲ್ ಅಸ್ಸಫ್ ಅಲ್-ಕುರಾಶಿ ಉಲ್ಲೇಖಿಸಿ ವರದಿ ಮಾಡಿದೆ.
ಈ ಕ್ರಮವು ಸೌದಿ ಪುರುಷರು ವಿದೇಶಿ ಮಹಿಳೆಯರನ್ನು ಮದುವೆಯಾಗುವುದನ್ನು ನಿರುತ್ಸಾಹಗೊಳಿಸುವ ಗುರಿ ಹೊಂದಿದೆ ಮತ್ತು ವಿದೇಶಿಯರೊಂದಿಗೆ ವಿವಾಹಕ್ಕೆ ಅನುಮತಿ ನೀಡುವ ಮೊದಲು ಹೆಚ್ಚುವರಿ iಔಪಚಾರಿಕತೆ ಇರಿಸಲಾಗಿದೆ ಎಂದು ಡಾನ್ ವರದಿ ಮಾಡಿದೆ.
ವಿದೇಶಿ ಮಹಿಳೆಯರನ್ನು ಮದುವೆಯಾಗಲು ಬಯಸುವವರು ಮೊದಲು ಸರ್ಕಾರದ ಒಪ್ಪಿಗೆ ಪಡೆಯಬೇಕು ಮತ್ತು ಅಧಿಕೃತ ಚಾನೆಲ್‌ಗಳ ಮೂಲಕ ವಿವಾಹ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಖುರಾಶಿ ಹೇಳಿದ್ದಾರೆ.
ವಿಚ್ಛೇದನದ ಆರು ತಿಂಗಳೊಳಗೆ ವಿಚ್ಛೇದಿತ ಪುರುಷರಿಗೆ ಅರ್ಜಿ ಸಲ್ಲಿಸಲು ಅನುಮತಿ ನೀಡುವುದಿಲ್ಲ. ಅರ್ಜಿದಾರರು 25 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು ಸ್ಥಳೀಯ ಜಿಲ್ಲಾ ಮೇಯರ್ ಸಹಿ ಮಾಡಿದ ಗುರುತಿನ ದಾಖಲೆಗಳು ಮತ್ತು ಅವರ ಕುಟುಂಬ ಕಾರ್ಡ್‌ನ ಪ್ರತಿ ಸೇರಿದಂತೆ ಇತರ ಎಲ್ಲಾ ಗುರುತಿನ ಪತ್ರಗಳನ್ನು ಲಗತ್ತಿಸಬೇಕು ಎಂದು ಎಂದು ಕುರಾಶಿ ಹೇಳಿದ್ದಾರೆ.
ಅರ್ಜಿದಾರನು ಈಗಾಗಲೇ ಮದುವೆಯಾಗಿದ್ದರೆ, ಅವನು ತನ್ನ ಹೆಂಡತಿ ಅಂಗವಿಕಲ, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದಾಳೆ ಅಥವಾ ಮಕ್ಕಳನ್ನು ಹೆರುವುದಿಲ್ಲ ಎಂದು ಸಾಬೀತುಪಡಿಸುವ ಆಸ್ಪತ್ರೆಯಿಂದ ವರದಿ ಲಗತ್ತಿಸಬೇಕು” ಎಂದು ಅವರು ಹೇಳಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement