ಗ್ರಾನೈಟ್ ಲಾರಿಯಲ್ಲಿ ಮಹಿಳೆಯ ರುಂಡ ಪತ್ತೆ!

posted in: ರಾಜ್ಯ | 0

ಬಾಗಲಕೋಟೆ: ತಮಿಳುನಾಡಿನಿಂದ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಪಟ್ಟಣಕ್ಕೆ ಬಂದಿದ್ದ ಗ್ರಾನೈಟ್ ತುಂಬಿದ ಲಾರಿಯಲ್ಲಿ ಮಹಿಳೆಯ ರುಂಡ ಪತ್ತೆಯಾಗಿದ್ದು, ಮಹಿಳೆಯ ರುಂಡ ಕಂಡ ಲಾರಿ ಚಾಲಕ ಇಳಕಲ್ಲ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾನೆ. ತಮಿಳುನಾಡಿನ ಮಧುರೈನಿಂದ ಇಳಕಲ್ಲ ಪಟ್ಟಣಕ್ಕೆ ಟಿಎನ್-೫೨ ಆರ್-೭೯೫೨ ಸಂಖ್ಯೆಯ ಲಾರಿ ಗ್ರಾನೈಟ್ ತುಂಬಿಕೊಂಡು ಬಂದಿದೆ. ಗ್ರಾನೈಟ್ ಇಳಿಸುವ ಸಂದರ್ಭದಲ್ಲಿ ಮಹಿಳೆಯ ರುಂಡ ಇರುವ … Continued

ಭಾರತ ಸ್ವಾತಂತ್ರ್ಯ ಸಂಗ್ರಾಮದ ವಿಶಿಷ್ಟ ಹುತಾತ್ಮರ ಅನ್ವೇಷಣೆಯಾಗಲಿ: ಡಾ.ಅಜಿತ ಪ್ರಸಾದ

ಧಾರವಾಡ: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ವೀರರು ಎಲೆಮರೆಯ ಕಾಯಿಯಂತೆ ವಿಶಿಷ್ಟವಾಗಿ ಹೋರಾಟ ಮಾಡಿ ಸ್ವಾತಂತ್ರ್ಯದ ಕಹಳೆಯನ್ನು ಊದಿದ್ದಾರೆ. ಬ್ರಿಟೀಷರ ದೌರ್ಜನ್ಯವನ್ನು ಧೈರ್ಯದಿಂದ ಎದುರಿಸಿದ ಅನೇಕ ಚೇತನಗಳು ನಿಜಕ್ಕೂ ಬೆಳಕಿಗೆ ಬರಬೇಕಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಅಜಿತ್ ಪ್ರಸಾದ್ ಹೇಳಿದರು. ಭಾರತ ಸರ್ಕಾರ ಹಮ್ಮಿಕೊಂಡಿರುವ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡದ ಜೆ.ಎಸ್.ಎಸ್ ಶ್ರೀ … Continued

7 ಗ್ರಾಮಗಳು ಮುಳುಗಡೆ: ಜನರ ಸ್ಥಳಾಂತರಿಸುವಾಗ ದೋಣಿ ಮಗುಚಿ ಇಬ್ಬರು ನಾಪತ್ತೆ, ರಕ್ಷಣೆಗೆ ಹ್ಯಾಲಿಕಾಪ್ಟರ್ ಮೊರೆ

ಅಂಕೋಲಾ: ಉತ್ತರಕನ್ನಡ ಜಿಲ್ಲೆಯಲ್ಲಿ ಗಂಗಾವಳಿ, ಕಾಳಿ ನದಿ ಉಕ್ಕಿ ಹರಿಯುತ್ತಿದ್ದು, ಶಿರೂರು, ಬೆಳ್ಸೆ ಕೂರ್ವೆ, ಕೊಡ್ಸಣಿ ಸೇರಿದಂತೆ ಹಲವು ಗ್ರಾಮ ಸಂಪೂರ್ಣ ಮುಳುಗಡೆ‌ಯಾಗಿದೆ. ಮನೆಗೆ ನೀರು ತುಂಬಿದ ಕಾರಣ ಸುರಕ್ಷಿತ ಸ್ಥಳಕ್ಕೆ ತೆರಳುವ ವೇಳೆ ದೋಣಿ ಮಗುಚಿ ನಾಪತ್ತೆಯಾದ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ ಗಂಗಾವಳಿ ನದಿಯ ಶೀರೂರು ಬಳಿ ದೋಣಿ ಮೂಲಕ ಜನರನ್ನು ರಕ್ಷಿಸುವ … Continued

ಜುಲೈ 24 ರಿಂದ ಸ್ವರ್ಣವಲ್ಲಿ ಶ್ರೀಗಳ  ಚಾತುರ್ಮಾಸ್ಯ ವ್ರತ ಆರಂಭ

ಶಿರಸಿ: ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಚಾತುರ್ಮಾಸ್ಯ ವ್ರತಾಚರಣೆ ಜುಲೈ 24 ರಿಂದ ಸಪ್ಟೆಂಬರ್ 20ರವರೆಗೆ ನಡೆಯಲಿದೆ.ಜುಲೈ 24ರಂದು ಬೆಳಗ್ಗೆ ಶ್ರೀ ವೇದವ್ಯಾಸ ಪೂಜೆ ನೆರವೇರಿಸಿ ಶ್ರೀಗಳವರು ಚಾತುರ್ಮಾಸ್ಯ ವ್ರತದ ಸಂಕಲ್ಪ ಕೈಗೊಳ್ಳಲಿದ್ದಾರೆ. ಮಧ್ಯಾಹ್ನ 3ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಮತ್ತು … Continued

ಹೆಚ್ಚಿದ ಮಳೆ ಅಬ್ಬರ: ಪ್ರವಾಹ ಭೀತಿ, ಶಾಲಾ ಕಟ್ಟಡ-ಮನೆಗಳ ಕುಸಿತ, ತೋಟ-ಹೊಲ ಗದ್ದೆಗಳಿಗೆ ನುಗ್ಗಿದ ನೀರು, ಸೇತುವೆಗಳು ಮುಳುಗಡೆ, ಭೂ ಕುಸಿತ

ಬೆಂಗಳೂರು: ರಾಜ್ಯದ ಬಹುತೇಕ ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಅನೇಕ ಕಡೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ನದಿ, ಹಳ್ಳ- ಕೊಳ್ಳಗಳು ಉಕ್ಕಿ ಹರಿಯುತ್ತಿವೆ.ಜಮೀನು, ಹೊಲ, ಗದ್ದೆ, ತೋಟಗಳು ಜಲಾವೃತಗೊಂಡು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹಲವೆಡೆ ರಸ್ತೆ, ಸೇತುವೆ ಮುಳುಗಡೆಯಾಗಿದೆ. ಕೆಲವು ಕಡೆ ಭೂ ಕುಸಿತಗಳು ಸಂಭವಿಸಿದ ವರದಿಯಾಗಿದೆ. ಹೆದ್ದಾರಿಗಳಲ್ಲಿ ನೀರುಹರಿಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. … Continued

ಮುಂಬೈ: ಭಾರಿ ಮಳೆಗೆ ಕಟ್ಟಡ ಕುಸಿದು 3 ಮಂದಿ ಸಾವು, 10 ಜನರಿಗೆ ಗಾಯ

ಮುಂಬೈ: ಮುಂಬೈನ ಗೋವಂಡಿ ಪ್ರದೇಶದಲ್ಲಿ ಕಟ್ಟಡವೊಂದು ಕುಸಿದಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಹಾಗೂ ಹತ್ತು ಮಂದಿ ಗಾಯಗೊಂಡಿದ್ದಾರೆ. ಎರಡು ಅಂತಸ್ತಿನ ಕಟ್ಟಡ ಕುಸಿದು ಕನಿಷ್ಠ ಮೂರು ಸಾವುಗಳಿಗೆ ಕಾರಣವಾಗಿದ್ದರೆ, ಇನ್ನೂ 10 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ಗೋವಂಡಿ ಪ್ರದೇಶದ ಶಿವಾಜಿ ನಗರದ 3 ನೇ ಪ್ಲಾಟಿನಲ್ಲಿ ಈ … Continued

ಜಮ್ಮು -ಕಾಶ್ಮೀರದಲ್ಲಿ ಪ್ರಮುಖ ಪಿತೂರಿ ವಿಫಲ: ಅಖ್ನೂರಿನಲ್ಲಿ ಡ್ರೋನ್‌ ಹೊಡೆದುರುಳಿಸಿದ ಸೇನೆ: 5 ಕೆಜಿ ಸ್ಫೋಟಕ ವಶ

ನವದೆಹಲಿ: ಜಮ್ಮು ಜಿಲ್ಲೆಯ ಅಖ್ನೂರ್ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೆಕ್ಸಾಕೋಪ್ಟರ್ ಡ್ರೋನ್ ಅನ್ನು ಶುಕ್ರವಾರ ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ. ಡ್ರೋನ್ ಅನ್ನು ಅಂತರರಾಷ್ಟ್ರೀಯ ಗಡಿಯ (ಐಬಿ) 8 ಕಿ.ಮೀ.ಒಳಗೆ ಪತ್ತೆ ಹಚ್ಚಿ ಹೊಡೆದುರುಳಿಸಲಾಯಿತು. ಭಯೋತ್ಪಾದಕರು ಬಳಸಬೇಕಾಗಿದ್ದ 5 ಕೆಜಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡ್ರೋನ್ ಚಟುವಟಿಕೆಯ … Continued

ರಷ್ಯಾದಲ್ಲಿ ಕೊರೊನಾ ವೈರಸ್ಸಿನ ಗಾಮಾ ರೂಪಾಂತರ ಪತ್ತೆ

ರಷ್ಯಾ : ಬ್ರೆಜಿಲ್ ನಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್ ಗಾಮಾ ರೂಪಾಂತರವು ರಷ್ಯಾದಲ್ಲಿ ಸಣ್ಣ ಪ್ರಮಾಣದಲ್ಲಿ ಪತ್ತೆಯಾಗಿದೆ ಎಂದು ಇಂಟರ್ ಫ್ಯಾಕ್ಸ್ ಸುದ್ದಿ ಸಂಸ್ಥೆ ರಷ್ಯಾದ ಎಪಿವ್ಯಾಕ್ಕೊರೊನಾ ಲಸಿಕೆಯ ಹಿಂದಿನ ಡೆವಲಪರ್ ಗುರುವಾರ ತಿಳಿಸಿದೆ. ಡೆಲ್ಟಾ ರೂಪಾಂತರ (Delta variant ) ಮತ್ತು ಲಸಿಕೆಗಳ ನಿಧಾನಗತಿಯ ದರವನ್ನು ದೂಷಿಸಿದ ಅಧಿಕಾರಿಗಳು ಕೊರೊನಾ ವೈರಸ್ ಪ್ರಕರಣಗಳಲ್ಲಿ … Continued

ಪತ್ತೆಯಾಗದ ಶಿರ್ಲೆ ಫಾಲ್ಸ್ ತೆರಳಿದ್ದ ಪ್ರವಾಸಿಗರು: ಅರಣ್ಯ ಅಧಿಕಾರಿಗಳಿಂದ ಹುಡುಕಾಟ

ಯಲ್ಲಾಪುರ: ಹುಬ್ಬಳ್ಳಿ ನೊಂದಣಿ ಹೊಂದಿರುವ ಮೂರು ಬೈಕಿನಲ್ಲಿ ಬಂದ 6 ಜನ ಪ್ರವಾಸಿಗರು ಇನ್ನೂ ಶಿರ್ಲೆ ಫಾಲ್ಸ್ ನಿಂದ ಮರಳಿ ಬಾರದಿರುವುದು ಆತಂಕಕ್ಕೆ ಕಾರಣವಾಗಿದೆ. ಅಂಕೋಲಾ -ಯಲ್ಲಾಪುರ ಮಧ್ಯದ ಶಿರ್ಲೆ ಜಲಪಾತಕ್ಕೆ ಇವರು ಪ್ರವಾಸಕ್ಕೆ ಬಂದಿದ್ದರು. ಗುರುವಾರ ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದ್ದು ಅಲ್ಲಿರುವ ಸಂಕ ಕೊಚ್ವಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಪ್ರವಾಸಿಗರ ಹುಡುಕಾಟದಲ್ಲಿ ಅರಣ್ಯ … Continued

ಮಹಾರಾಷ್ಟ್ರದಲ್ಲಿ ಭಾರಿ ಮಳೆ : ರೈಲಿನಲ್ಲೇ ಸಿಲುಕಿದ 6,000 ಪ್ರಯಾಣಿಕರು..!

ಮುಂಬೈ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿದ್ದು, ಮಾರ್ಗ ಮಧ್ಯೆಯೇ ರೈಲಿನಲ್ಲೇ 6 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಿಲುಕಿಕೊಂಡಿರುವ ಘಟನೆ ನಡೆದಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಹಾರಾಷ್ಟ್ರದ ಹಲವೆಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಕೊಂಕಣ ರೈಲು ಮಾರ್ಗದ ವಿವಿಧ ನಿಲ್ದಾಣಗಳಲ್ಲಿ ರೈಲು ಸಂಚಾರ ಬಂದ್ … Continued