ಕರ್ನಾಟಕದಲ್ಲಿ ಜು.27ರ ವರೆಗೆ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು: ನೈರುತ್ಯ ಮಾನ್ಸೂನ್ ಈಗಾಗಲೇ ರಾಜ್ಯವನ್ನು ಆವರಿಸಿದೆ. ಈ ನಡುವೆ ಬಂಗಾಳ ಉಪಸಾಗರದಲ್ಲಿ ವಾಯು ಭಾರ ಕುಸಿತ ಈ ಹಿನ್ನೆಲೆ ಜುಲೈ 27ರ ವರೆಗೆ ರಾಜ್ಯದಲ್ಲಿ ಭರ್ಜರಿ ಮಳೆ ಆಗಲಿದೆ . ಅದರಲ್ಲಿಯೂ ರಾಜ್ಯದ ಕರಾವಳಿ ಜೆಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಎಂದು ಐಎಂಡಿ ತಿಳಿಸಿದೆ. ಕರ್ನಾಟಕದ ಕರಾವಳಿ, … Continued

ಆಲಮಟ್ಟಿ ಜಲಾಶಯದಿಂದ 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

ವಿಜಯಪುರ : ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಕೃಷ್ಣೆ ಆಲಮಟ್ಟಿ ಲಾಲ ಬಹದ್ದೂರ ಶಾಸ್ತ್ರಿ ಜಲಾಶಯದಿಂದ 3 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯದ ಎಲ್ಲ 26 ಗೇಟ್ ತೆರೆದು ಕೃಷ್ಣಾ ನದಿಗೆ 2,57,000 ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ. … Continued

ಇಂದಿನಿಂದ ಅವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ಸ್ವಾಮೀಜಿ ಚಾತುರ್ಮಾಸ್ಯ

ಬೆಂಗಳೂರು:ಇಲ್ಲಿನ ಚಾಮರಾಜಪೇಟೆಯ ಅವಿಚ್ಛಿನ್ನ ಪರಂಪರೆ ಕೂಡ್ಲಿ ಶೃಂಗೇರಿ ಮಠದ ನೂತನ ಪೀಠಾಧಿಪತಿಗಳಾದ ಶ್ರೀ ವಿದ್ಯಾವಿಶ್ವೇಶ್ವರ ಭಾರತಿ ಶ್ರೀಗಳ ಚಾತುರ್ಮಾಸ್ಯ ಬೆಂಗಳೂರಿನ ಶ್ರೀಮಠದಲ್ಲಿಯೇ ನಡೆಯಲಿದೆ. ಆಷಾಢ ಮಾಸದ ಹುಣ್ಣಿಮೆಯ ದಿನವಾದ ನಾಳೆ (ಜುಲೈ 24) ವ್ಯಾಸ ಪೂಜೆಯೊಂದಿಗೆ ನೂತನ ಶ್ರೀಗಳು ಚಾತುರ್ಮಾಸ್ಯ ವ್ರತ ಆರಂಭಿಸಲಿದ್ದಾರೆ. ಭಾದ್ರಪದ ಮಾಸದ ಸೆಪ್ಟಂಬರ್ 20ರ ಅನಂತನ ಹುಣ್ಣಿಮೆ ದಿನದಂದು ಜಗದ್ಗುರುಗಳು ಸೀಮೊಲ್ಲಂಘನ … Continued

ಮಳೆ ಅಬ್ಬರ: ಬಸವಸಾಗರದಿಂದ 3 ಲಕ್ಷ ಕ್ಯೂಸೆಕ್‌ ನೀರು ಬಿಡುವ ಸಾಧ್ಯತೆ..!

ಯಾದಗಿರಿ: ಕೃಷ್ಣಾ ನದಿಗೆ ಪ್ರಸಕ್ತ 2.30 ಲಕ್ಷ ಕ್ಯೂಸೆಕ ನೀರು ಬಿಡಲಾಗಿದ್ದು, ಇನ್ನೂ ಕೆಲವು ಗಂಟೆಗಳಲ್ಲಿ 3 ಲಕ್ಷ ಕ್ಯೂಸೆಕ್‌  ನೀರು ಬಿಡುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಅವರು ತಿಳಿಸಿದ್ದಾರೆ. ಪ್ರಸ್ತುತ ಕೃಷ್ಣಾ ನದಿಯಿಂದ 2,30,680 ಕ್ಯೂಸೆಕ್‌ ಹಾಗೂ ಭೀಮಾ ನದಿಯಿಂದ 13,500 ಕ್ಯೂಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ಶುಕ್ರವಾರ ನಾರಾಯಣಪುರ … Continued

ಭಾರಿ ಮಳೆಗೆ ಉಕ್ಕಿದ ಅಘನಾಶಿನಿ: ಗ್ರಾಮಗಳೇ ಜಲಾವೃತ, ಮನೆಗಳಿಗೆ ನುಗ್ಗಿದ ನೀರು, ಮಣ್ಣು ಕುಸಿದು ಸಾವು, ರಸ್ತೆ ಸಂಪರ್ಕ ಕಡಿತ, ಜನರ ಸ್ಥಳಾಂತರ

ಕುಮಟಾ/ಸಿದ್ದಾಪುರ; ಘಟ್ಟದ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಕರಾವಳಿಯಲ್ಲಿ ಪ್ರವಾಹದ ವೇಗ ಹಾಗೂ ಭೀಕರತೆ ಹೆಚ್ಚಾಗಿದೆ. ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪ ಹೊಸಗದ್ದೆಯಲ್ಲಿ ಧರೆ ಕುಸಿದು ಮಣ್ಣಲ್ಲಿ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೃತನನ್ನು ದ್ಯಾವ ರಾಮ ನಾಯ್ಕ(65) ಎಂದು ಗುರುತಿಸಲಾಗಿದೆ. ಸಿದ್ದಾಪುರ, ಶಿರಸಿ ಹಾಗೂ ಕುಮಟಾ ತಾಲೂಕಿನಲ್ಲಿ ಸುರಿಯುತ್ತರುವ ಬಾರಿ ಮಳೆಯಿಂದಾಗಿ ಅಘನಾಶಿನಿ ನದಿಯಲ್ಲಿ ನೀರು ಅಪಾಯದ … Continued

ಬಿಎಸ್​ವೈ-ಬಿಜೆಪಿ ಹೈಕಮಾಂಡ್ ನಡುವೆ 2 ವರ್ಷದ ಒಪ್ಪಂದ ಆಗಿತ್ತು. ಇದು ಬಿಜೆಪಿ ಸಂಸದರೇ ಹೊರಹಾಕಿದ ಮಾಹಿತಿ

ಚಾಮರಾಜನಗರ: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಕ್ಷಣಕ್ಕೊಂದು ಹೊಸ ಬೆಳವಣಿಗೆ ಕಾಣುತ್ತಿದೆ. ಶುಕ್ರವಾರ ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ ಈಗ ಮತ್ತೊಂದು ಮಾಹಿತಿ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಸ್ಥಾನ ಕುರಿತು ಹೈಕಮಾಂಡ್ ಮತ್ತು ಬಿ.ಎಸ್​.ಯಡಿಯೂರಪ್ಪ ನಡುವೆ 2 ವರ್ಷಕ್ಕೆ ಒಪ್ಪಂದ ಆಗಿತ್ತು. ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಾಗಲೇ ಈ ಒಪ್ಪಂದ … Continued

ಮಹಾರಾಷ್ಟ್ರದಲ್ಲಿ ಮಳೆ ಪ್ರಕೋಪ: ರಾಯಗಡದಲ್ಲಿ ಭೂಕುಸಿತದಿಂದ 36 ಮಂದಿ ಸಾವು, ಅನೇಕರು ಸಿಲುಕಿರುವ ಶಂಕೆ

ಮುಂಬೈ: ಮಹಾರಾಷ್ಟ್ರದ ಪ್ರವಾಹದಿಂದ ಹಾನಿಗೊಳಗಾದ ರಾಯಗಡ್ ಜಿಲ್ಲೆಯಲ್ಲಿ ಭಾರಿ ಭೂಕುಸಿತ ಸಂಭವಿಸಿದ ನಂತರ ಕನಿಷ್ಠ 36 ಜನರು ಮೃತಪಟ್ಟಿದ್ದಾರೆ ಮತ್ತು ಇನ್ನೂ ಅನೇಕರು ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ 32 ತಲೈನಲ್ಲಿ ಮತ್ತು 4 ಸಖರ್ ಸುತಾರ್ ವಾಡಿಯಲ್ಲಿ ಮೃತಪಟ್ಟಿದ್ದಾರೆ. ಕನಿಷ್ಠ 30 ಜನರು ಸಿಕ್ಕಿಬಿದ್ದಿದ್ದಾರೆ ಎಂದು ರಾಯಗಡ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮುಂಬೈಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ … Continued

ಆರ್ಬಿಐನಿಂದ ಶೀಘ್ರ ಡಿಜಿಟಲ್ ಕರೆನ್ಸಿ ಬಿಡುಗಡೆ: ಉಪಗವರ್ನರ್

ನವದೆಹಲಿ: ಬಿಟ್ಕಾಯಿನ್ ಕ್ರಿಪ್ಟೋಕರೆನ್ಸಿ ಮಾದರಿಯಲ್ಲಿ ನಮ್ಮದೇ ಆದ ಡಿಜಿಟಲ್ ಕರೆನ್ಸಿ ಜಾರಿಗೊಳಿಸುವ ನಿಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸುವುದಾಗಿ ಆರ್.ಬಿ.ಐ.ನ ಉಪ ಗವರ್ನರ್ ಟಿ.ರವಿಶಂಕರ್ ತಿಳಿಸಿದ್ದಾರೆ. ವಿಶ್ವದ ಬಹುತೇಕ ದೇಶಗಳ ಕೇಂದ್ರೀಯ ಬ್ಯಾಂಕ್ ಗಳು ತಮ್ಮದೇ ಆದ ಡಿಜಿಟಲ್ ಕರೆನ್ಸಿ ಬಿಡುಗಡೆ ಪ್ರಕ್ರಿಯೆಯಲ್ಲಿವೆ. ಆರ್.ಬಿ.ಐ. ಸಹ ಅದೇ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದೆ. ಹಂತ … Continued

ಶಿರಸಿ ತಾಲೂಕಿನಲ್ಲಿ ದಾಖಲೆಯ 24 ಸೆಂಮೀ ಮಳೆ, ಉಕ್ಕಿದ ನದಿಗಳು, ತೋಟ-ಗದ್ದೆಗಳು ಜಲಾವೃತ

ಶಿರಸಿ: ಕಳೆದ ಇಪ್ಪತ್ನಾಲ್ಕು ತಾಸುಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ 24 ಸೆಂಮೀ. ಮಳೆ ಸುರಿದಿದೆ. ನದಿ, ಕೊಳ್ಳಗಳು ಭರ್ತಿಯಾಗಿದ್ದು ಹಲವೆಡೆ ತೋಟ, ಗದ್ದೆಗಳು ಜಲಾವೃತಗೊಂಡಿವೆ. ಮಾರಿಗದ್ದೆ, ಸರಕುಳಿ, ಮಾದ್ನಕಳ ಸೇತುವೆಗಳ ಮೇಲೆ ನದಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿದೆ. ಪಟ್ಟಣಹೊಳೆ, ಕೆಂಗ್ರೆ ಹೊಳೆಯೂ ಉಕ್ಕಿ ಹರಿಯುತ್ತಿದ್ದು ಸಂಚಾರ ಸ್ಥಗಿತಗೊಂಡಿದೆ. … Continued

ಶಿರ್ಲೆ ಜಲಪಾತದಲ್ಲಿ ಕಾಣೆಯಾಗಿದ್ದ ಹುಬ್ಬಳ್ಳಿಯ ಯುವಕರು ಪತ್ತೆ…!

ಹುಬ್ಬಳ್ಳಿ: ಇಲ್ಲಿನ ನವನಗರದಿಂದ ಯಲ್ಲಾಪುರ ತಾಲೀಕಿನ ಶಿರ್ಲೆ ಜಲಪಾತಕ್ಕೆ ಬಂದಿದ್ದ ಆರು ಯುವಕರು ಕೊನೆಗೂ ಪತ್ತೆಯಾಗಿದ್ದಾರೆ. ನಿನ್ನೆಯಿಂದ ಅವರ ಹುಡುಕಾಟ ನಡೆಸಲಾಗಿತ್ತು.ಅಂಕೋಲಾ -ಯಲ್ಲಾಪುರ ಮಧ್ಯದ ಶಿರ್ಲೆ ಜಲಪಾತಕ್ಕೆ ಇವರು ಪ್ರವಾಸಕ್ಕೆ ಬಂದಿದ್ದರು. ಗುರುವಾರ ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದ್ದು ಅವರು ವಾಪಸ್‌ ಬಂದಿರಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಇವರ ಹುಡುಕಾಟ ನಡೆಸಿದ್ದರು. ಅದೃಷ್ಟವಶಾತ್ ಯುವಕರು ಯಲ್ಲಾಪುರ … Continued