ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಹುಬ್ಬಳ್ಳಿಯಲ್ಲಿ ಅಪಹರಣವಾಗಿದ್ದ ಮಗು ಬೆಂಗಳೂರಿನಲ್ಲಿ ಪತ್ತೆ

ಹುಬ್ಬಳ್ಳಿ: ಇಲ್ಲಿಯ ರಾಮಲಿಂಗೇಶ್ವರ ನಗರದಲ್ಲಿ ಅಪಹರಣಕ್ಕೊಳಗಾಗಿದ್ದ ಆರು ವರ್ಷದ ಮಗುವನ್ನು ಗೋಕುಲ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿ ಶಬನಂ ಗದಗಕರ ಎಂಬುವವರೇ ಬಂಧಿತ ಆರೋಪಿ. ಶನಿವಾರ ಮಧ್ಯಾಹ್ನ ಪಕ್ಕದ ಮನೆಯ ಅಸ್ಲಂ ಬಳ್ಳಾರಿ ಎಂಬವರ ಮಗುವನ್ನು ಮಾರುಕಟ್ಟೆಗೆ ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದಳು. ಅಸ್ಲಂ ಅವರು … Continued

ಟೋಕಿಯೊ ಒಲಿಂಪಿಕ್ಸ್‌..: ಭಾರತ ಮಹಿಳಾ ಹಾಕಿ ತಂಡದಿಂದ ಇತಿಹಾಸ..ಚೊಚ್ಚಲ ಒಲಿಂಪಿಕ್ ಸೆಮಿಫೈನಲ್ ಪ್ರವೇಶ

ಟೋಕಿಯೋ: ರಾಣಿ ರಾಂಪಾಲ್ ನೇತೃತ್ವದಲ್ಲಿ, ಭಾರತೀಯ ಮಹಿಳಾ ಹಾಕಿ ತಂಡವು ಒಲಿಂಪಿಕ್ಸ್‌ ಇತಿಹಾಸದಲ್ಲಿ ತನ್ನ ಮೊದಲ ಸೆಮಿಫೈನಲ್‌ಗೆ ಪ್ರವೇಶಿಸಿತು. 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 1-0 ಗೆಲುವು ಸಾಧಿಸಿದ ಭಾರತ ಈ ಸಾಧನೆ ಮಾಡಿದೆ. ಭಾರತ ತಂಡವು ತನ್ನ ರಕ್ಷಣೆಯಲ್ಲಿ ಅದ್ಭುತವಾಗಿತ್ತು ಏಕೆಂದರೆ ಆಸ್ಟ್ರೇಲಿಯಾ ತಮ್ಮಲ್ಲಿದ್ದ ಏಳು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪರಿವರ್ತಿಸಲು … Continued

ಮೂರನೆ ಕೋವಿಡ್ ಅಲೆ ಈ ತಿಂಗಳು ಭಾರತಕ್ಕೆ ಅಪ್ಪಳಿಸುವ ಸಾಧ್ಯತೆ, ಅಕ್ಟೋಬರ್‌ನಲ್ಲಿ ಉತ್ತುಂಗ ತಲುಪಬಹುದು:ವರದಿ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ನಿರೀಕ್ಷಿತ ಮೂರನೇ ಅಲೆಯು ಆಗಸ್ಟ್‌ನಲ್ಲಿ ಭಾರತವನ್ನು ಮುಟ್ಟುವ ಸಾಧ್ಯತೆಯಿದೆ. ಇದು ಅಕ್ಟೋಬರ್‌ನಲ್ಲಿ ಉತ್ತುಂಗಕ್ಕೇರಬಹುದಾಗಿದ್ದು, ಅದರ ಉಲ್ಬನದ ಸಮಯದಲ್ಲಿ ದೇಶವು ಪ್ರತಿದಿನ 1,00,000 ಕ್ಕಿಂತ ಕಡಿಮೆ ಸೋಂಕುಗಳನ್ನು ವರದಿ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಒಂದು ಅಧ್ಯಯನವು ಅಂದಾಜು ಮಾಡಿದೆ. ಹೈದರಾಬಾದ್ ಮತ್ತು ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ … Continued

ಮೇಕೆದಾಟು ಯೋಜನೆ: ಶೀಘ್ರದಲ್ಲೇ ಸರ್ವ ಪಕ್ಷ ಸಭೆ ಕರೆಯುವೆ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ನಡುವೆ ವಿವಾದಕ್ಕೆ ಕಾರಣವಾಗಿರುವ ಮೇಕೆದಾಟು ಅಣೆಕಟ್ಟು ಕುರಿತು ಶೀಘ್ರದಲ್ಲಿ ಸರ್ವ ಪಕ್ಷ ಸಭೆ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದ್ದಾರೆ. ರಾಜ್ಯದ ನೆಲ ಮತ್ತು ಜಲಕ್ಕೆ ಸಂಬಂಧಿಸಿದ ಸಮಸ್ಯೆಗೆ ಬಂದಾಗ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕು, ಪ್ರತಿಯೊಬ್ಬರನ್ನು ಜೊತೆಗೆ ತೆಗೆದುಕೊಂಡು ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುವುದು, ಮುಂದಿನ ದಿನಗಳಲ್ಲಿ … Continued

ಬಿಜೆಪಿ ಸೇರಿದ ಮಣಿಪುರ ಕಾಂಗ್ರೆಸ್ ಮುಖ್ಯಸ್ಥ ಗೋವಿಂದಾಸ್ ಕೊಂತೋಜಂ

ಇಂಪಾಲ: ಮಣಿಪುರ ಕಾಂಗ್ರೆಸ್‍ನ ಮಾಜಿ ಮುಖ್ಯಸ್ಥ ಗೋವಿಂದಾಸ್ ಕೊಂತೋಜಮ್ ಭಾನುವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ದೆಹಲಿಯ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಸಮ್ಮುಖದಲ್ಲಿ ಗೋವಿಂದಾಸ್ ಕೊಂತೋಜಮ್ ಬಿಜೆಪಿ ಸೇರಿದರು. ರಾಜ್ಯದಲ್ಲಿ ಬರೀ ಹಿಂಸೆ, ಮುಷ್ಕರ, ಬಂದ್ ಇತ್ತು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಮಣಿಪುರ ಶಾಂತಿಯುತವಾಗಿ ಮತ್ತು ಉತ್ತಮವಾಗಿ … Continued

ಮೂರು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ಸಂಖ್ಯೆ ಸಾವಿರ ಸಾವಿರ..!

ನವದೆಹಲಿ: ಮಕ್ಕಳ ಆತ್ಮಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಎನ್‌ಸಿಆರ್‌ಬಿ ವರದಿ ಅಂಕಿಅಂಶವನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. 2017–19ರಲ್ಲಿ 14 ರಿಂದ 18 ವಯಸ್ಸಿನೊಳಗಿನ 13,325 ಬಾಲಕಿಯರು ಸೇರಿದಂತೆ ಒಟ್ಟು 24,568 ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ 4,000ಕ್ಕೂ ಹೆಚ್ಚು ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದ … Continued

ಜುಲೈ ತಿಂಗಳಲ್ಲಿ ಮತ್ತೆ 1 ಲಕ್ಷ ಕೋಟಿ ರೂ.ದಾಟಿದ ಭಾರತದ ಜಿಎಸ್​ಟಿ ಸಂಗ್ರಹ

ದೆಹಲಿ: ಜುಲೈ ತಿಂಗಳಲ್ಲಿ ಒಟ್ಟು ಜಿಎಸ್​ಟಿ ಆದಾಯ ಸಂಗ್ರಹ 1,16,393 ಕೋಟಿ ರೂ.ಗಳಷ್ಟಾಗಿದ್ದು, ಆ ಪೈಕಿ ಸಿಜಿಎಸ್​ಟಿ 22,197 ಕೋಟಿ ರೂ.ಗಳು, ಎಸ್​ಜಿಎಸ್​ಟಿ 28,541 ಕೋಟಿ ರೂ.ಗಳು, ಐಜಿಎಸ್​ಟಿ 57,864 ಕೋಟಿ ರೂ.ಗಳು (ಇದರಲ್ಲಿ 27,900 ಕೋಟಿ ರೂ.ಗಳು ಆಮದು ವಸ್ತುಗಳ ಆಮದಿನಿಂದ ಸಂಗ್ರಹವಾಗಿದೆ) ಮತ್ತು 7,790 ಕೋಟಿ ರೂ.ಗಳು ಸೆಸ್ ಆಗಿದೆ. (815 ಕೋಟಿ … Continued

ಗ್ರೇಟ್ ಬ್ರಿಟನ್ ಸೋಲಿಸಿ 49 ವರ್ಷಗಳ ನಂತರ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದ ಭಾರತದ ಪುರುಷರ ಹಾಕಿ ತಂಡ..!

ಟೋಕಿಯೋ: ಭಾರತೀಯ ಪುರುಷರ ಹಾಕಿ ತಂಡವು ಭಾನುವಾರ ಇಲ್ಲಿ 49 ವರ್ಷಗಳ ನಂತರ ಒಲಿಂಪಿಕ್ಸ್ ಕ್ರೀಡಾಕೂಟದ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಅನ್ನು 3-1 ಗೋಲುಗಳಿಂದ ಸೋಲಿಸಿತು. ದಿಲ್‌ಪ್ರೀತ್ ಸಿಂಗ್ (7 ನೇ ನಿಮಿಷ), ಗುರ್ಜಂತ್ ಸಿಂಗ್ (16 ನೇ) ಮತ್ತು ಹಾರ್ದಿಕ್ ಸಿಂಗ್ (57 ನೇ) ಮೂಲಕ ಭಾರತವು … Continued

ಸಂಪುಟ ವಿಸ್ತರಣೆ : ಬಿಜೆಪಿ ವರಿಷ್ಠರೊಂದಿಗೆ ಸಮಾಲೋಚನೆಗೆ ದೆಹಲಿಗೆ ತೆರಳಿದ ಸಿಎಂ

ಬೆಂಗಳೂರು: ಸಂಪುಟ ವಿಸ್ತರಣೆ ಕುರಿತು ಕೇಂದ್ರದ ಬಿಜೆಪಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ದೆಹಲಿಗೆ ತೆರಳಿದರು. ರಾಷ್ಟ್ರ ರಾಜಧಾನಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಬಹುಶಹ ನಾಳೆ ಸಭೆ ನಡೆಯುವ ಸಾಧ್ಯತೆಯಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದರು. ಸಂಪುಟ ವಿಸ್ತರಣೆ … Continued

ಕರ್ನಾಟಕದಲ್ಲಿ ಭಾನುವಾರ 1875 ಹೊಸ ಕೊರೊನಾ ಸೋಂಕು ವರದಿ

ಬೆಂಗಳೂರು: ರಾಜ್ಯದಲ್ಲಿ ಇಂದು(ಭಾನುವಾರ) 1875 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ.ಇದೇ ಸಮಯದಲ್ಲಿ 25 ಮಂದಿ ಮೃತಪಟ್ಟಿದ್ದು, 1502 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 24,144 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,06,999 ಮಂದಿಗೆ ಕೊರೊನಾ ಬಂದಿದೆ. 28,46,244 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.2.33ರಷ್ಟಿದೆ.ಜಿಲ್ಲಾವಾರು … Continued