ರಾಜ್ಯ ಸರ್ಕಾರ ತಕ್ಷಣವೇ ಸಚಿವ ಸಂಪುಟ ರಚಿಸಲಿ: ಸಿದ್ದರಾಮಯ್ಯ ಒತ್ತಾಯ

ಹುಬ್ಬಳ್ಳಿ: ರಾಜ್ಯ ಸರ್ಕಾರ ಕೂಡಲೇ ಸಚಿವ ಸಂಪುಟ ರಚಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಎರಡು ತಿಂಗಳು ಕಳೆದ ನಂತರ ಸಚಿವ ಸಂಪುಟ ರಚನೆಯಾಗಿತ್ತು. ಇದೀಗ ಅದೇ ಸ್ಥಿತಿ ಮುರುಕಳಿಸದಿರಲಿ. ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಜನರಿಗೆ ಸ್ಪಂದಿಸಲು ಮಂತ್ರಿ ಮಂಡಲದ ಅವಶ್ಯಕತೆಯಿದೆ ಎಂದರು. ಕೊರೊನಾ … Continued

ಕಳಚೆ ಭೀಕರ ಭೂಕುಸಿತ, ಉ.ಕ. ಜಿಲ್ಲೆ ನೈಸರ್ಗಿಕ ಅವಘಡ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸ್ವರ್ಣವಲ್ಲಿ ಶ್ರೀ ಒತ್ತಾಯ

  ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಭಾರಿ ಪ್ರಕೃತಿ ಅವಘಡಗಳನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಭೂಕುಸಿತ ಪ್ರವಾಹದ ಹಿನ್ನೆಲೆಯಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲಿಯಲ್ಲಿ ನಡೆದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಆಡಳಿತ ಮಂಡಳಿ ಜುಲೈ 31ರಂದು ತುರ್ತು ಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು,ನಾಶವಾದ ಮನೆಗಳನ್ನು … Continued

ಮೈಲಾರಲಿಂಗೇಶ್ವರನ ಭವಿಷ್ಯವಾಣಿ: ಬೊಮ್ಮಾಯಿ ೬-೭ ತಿಂಗಳು ಮಾತ್ರ ಸಿಎಂ, ನಂತರ ಗಡ್ಡಧಾರಿ ವ್ಯಕ್ತಿ ಸಿಎಂ

posted in: ರಾಜ್ಯ | 0

ವಿಜಯನಗರ: ಯಡಿಯೂರಪ್ಪನವರು ರಾಜೀನಾಮೆ ಬಳಿಕ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರು ಕೇವಲ ೬ ರಿಂದ ೭ ತಿಂಗಳು ಮಾತ್ರ ಸಿಎಂ ಹುದ್ದೆಯಲ್ಲಿರಲಿದ್ದಾರೆ. ಬಳಿಕ ಗಡ್ಡದಾರಿ ವ್ಯಕ್ತಿಯೊಬ್ಬರು ರಾಜ್ಯದ ಮುಖ್ಯಮಂತ್ರಿಗಳಾಗಲಿದ್ದಾರೆ ಎಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಧರ್ಮಕರ್ತರು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ರಾಜ್ಯ ರಾಜಕೀಯ, ನೆರೆ, ಪ್ರವಾಹ ಕುರಿತಂತೆ ಸ್ಪೋಟಕ ಭವಿಷ್ಯವನ್ನು ಕೋಡಿ ಮಠದ … Continued

ಹೊನ್ನಾವರ: ತಾಯಿ ಬಟ್ಟೆ ಒಗೆಯುವಾಗ ಆಡುತ್ತಿದ್ದ ಒಂದೂವರೆ ವರ್ಷದ ಮಗು ನದಿಯಲ್ಲಿ ಬಿದ್ದು ನಾಪತ್ತೆ…!

ಹೊನ್ನಾವರ : ಹೊನ್ನಾವರ ತಾಲೂಕಿನ ಹುಡಗೋಡ ಬಳಿ ಒಂದೂವರೆ ವರ್ಷದ ಮಗು ಆಕಸ್ಮಿಕವಾಗಿ ಹೊಳೆಯಲ್ಲಿ ಬಿದ್ದು ನೀರುಪಾಲಾದ ಮನ ಕಲಕುವ ಘಟನೆ ನಡೆದಿದೆ. ತಾಯಿಯ ಜೊತೆಗೆ ಬಟ್ಟೆ ತೊಳೆಯಲು ನದೀ ತೀರಕ್ಕೆ ಬಂದಿದ್ದ ಪುಟ್ಟ ಮಗು ಕಾರ್ತಿಕ ರಮೇಶ ನಾಯ್ಕ ಎಂಬಾತನೇ ಗುಂಡಬಾಳಾ ನದಿ ಪಾಲಾದ ದುರ್ದೈವಿಯಾಗಿದ್ದಾನೆ. ಭಾನುವಾರ ಮಧ್ಯಾಹ್ನ ತಾಯಿ ಶ್ರುತಿ ರಮೇಶ ನಾಯ್ಕ … Continued

ಮಾನವೀಯತೆಯ ಸಾವು…ಆಂಧ್ರದ ಪಶ್ಚಿಮ ಗೋದಾವರಿಯಲ್ಲಿ ಪಂಚಾಯತ್‌ ಆದೇಶದ ಮೇಲೆ 300 ನಾಯಿಗಳ ಕೊಂದು ಹೂಳಿದರು..!

ವಿಜಯವಾಡ: ಪ್ರಾಣಿ ಹಿಂಸೆಯ ಭೀಕರ ಘಟನೆಯಲ್ಲಿ, ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಹಳ್ಳಿಯ ಪಂಚಾಯತ್ ಆದೇಶದ ಮೇರೆಗೆ 300 ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ವಿಷವುಣಿಸಿ ಸಾಯಿಸಲಾಗಿದೆ ಎಂದು ಪ್ರಾಣಿ ಹಕ್ಕುಗಳ ಗುಂಪು ಆರೋಪಿಸಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಲಿಂಗಪಾಲೆಮ್ ಪ್ರದೇಶದ ಹಳ್ಳಿಯಲ್ಲಿ ನಾಯಿಗಳನ್ನುಕೊಂದು ಹೂಳಲಾಗಿದೆ ಎಂದು ಹೇಳಲಾಗಿದೆ. ಪ್ರಾಣಿ ಹಕ್ಕುಗಳ ಸಂಘಟನೆಯಾದ ಚಲ್ಲಪಲ್ಲಿ … Continued

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ಗೆದ್ದ ಸಿಂಧು

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಕಂಚಿನ ಪದಕ ಗೆದ್ದಿದ್ದಾರೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಚೀನಾದ ಹೀ ಬಿಂಗ್ಜಿಯಾವೊ ( ಅವರನ್ನು 21-13, 12-21 ಸೆಟ್​ಗಳಿಂದ ಮಣಿಸುವ ಮೂಲಕ ಪದಕ ಗೆದಿದ್ದಿದ್ದಾರೆ.ಈ ಪಂದ್ಯದಲ್ಲಿ ಬಿಂಗ್ಜಿಯಾವೊ ವಿರುದ್ದ ಮೊದಲ ಸುತ್ತಿನ ಆರಂಭದಲ್ಲೇ ಸಿಂಧು ಮೇಲುಗೈ ಸಾಧಿಸಿದ್ದರು . ಸಿಂಧು ಅವರ … Continued

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬರೋಬ್ಬರಿ 7 ಪದಕ ಗೆದ್ದು ದಾಖಲೆ ಬರೆದ ಈಜುಗಾರ್ತಿ..!

ಟೋಕಿಯೋ ಒಲಂಪಿಕ್ಸ್‌ನಲ್ಲಿ ಬರೋಬ್ಬರಿ ಏಳು ಪದಕ ಗೆದ್ದು ಆಸ್ಟ್ರೇಲಿಯಾದ ಈಜುಗಾರ್ತಿ ಎಮ್ಮಾ ಮೆಕಿಯನ್ ಮಹಿಳಾ ಕ್ರೀಡಾಪಟುವಾಗಿ ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಪದಕಗಳಿಸಿದ ಮಹಿಳೆ ಎಂಬ ವಿಶ್ವ ದಾಖಲೆ ಬರೆದಿದ್ದಾರೆ. ಭಾನುವಾರ ನಡೆದ 4X100 ಮಹಿಳೆಯರ ಫ್ರೀ ಸ್ಟೈಲ್ ರಿಲೆಯಲ್ಲಿ ಚಿನ್ನ ಗಳಿಸುವ ಮೂಲಕ ಎಮ್ಮಾ ಮೆಕಿಯನ್ ದಾಖಲೆ ನಿರ್ಮಿಸಿದರು. ಇದಕ್ಕೂ ಮೊದಲು … Continued

ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಪೊನ್ನುರಾಜ್ ನೇಮಕ

posted in: ರಾಜ್ಯ | 0

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವಿ.ಪೊನ್ನುರಾಜ್ ಅವರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾಗಿದ್ದ ಡಾ.ಎಸ್. ಸೆಲ್ವಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರಿಂದ ತೆರವಾದ ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಗೆ ಪೊನ್ನುರಾಜ್ ವರ್ಗಾಯಿಸಿದ್ದು, ಕೆಪಿಸಿಎಲ್ ವ್ಯವಸ್ಥಾಪಕ ಹುದ್ದೆಯಲ್ಲಿ ಮುಂದಿನ ಆದೇಶದವರೆಗೆ ಮುಂದುವರೆಸಿ ಸಿಬ್ಬಂದಿ ಮತ್ತು ಆಡಳಿತ … Continued

ಕರ್ನಾಟಕದ 13 ಜಿಲ್ಲೆಗಳಲ್ಲಿ ಪ್ರವಾಹ, 510 ಕೋಟಿ ರೂ. ಬಿಡುಗಡೆ, ಮನೆ ಸಂಪೂರ್ಣ ಹಾನಿಯಾಗಿದ್ದರೆ 5 ಲಕ್ಷ ರೂ. ಪರಿಹಾರ: ಬೊಮ್ಮಾಯಿ

ಬೆಂಗಳೂರು: ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. 466 ಗ್ರಾಮಗಳಲ್ಲಿ ತೊಂದರೆ ಉಂಟಾಗಿದೆ. 13 ಜನರು ಪ್ರವಾಹದಿಂದ ಮೃತಪಟ್ಟಿದ್ದಾರೆ. ಪರಿಹಾರ ಕೆಲಸಕ್ಕೆ ರಾಜ್ಯ ಸರ್ಕಾರದಿಂದ 510 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಶನಿವಾರ) ಹೇಳಿದ್ದಾರೆ. ಎನ್​ಡಿಆರ್​ಎಫ್​ನಿಂದ 150 ಕೋಟಿ ರೂಪಾಯಿ ಖರ್ಚು ಮಾಡಲು ತೀರ್ಮಾನ ಮಾಡಲಾಗಿದೆ. 700 ಕೋಟಿಗೂ … Continued

ಕರ್ನಾಟಕದಲ್ಲಿ 200ಕ್ಕೂ ಶತಾಯುಷಿಗಳಿಗೆ ಕೋವಿಡ್ -19 ಸೋಂಕು, 11 ಮಂದಿ ಸಾವು..!

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ -19 ಗೆ ತುತ್ತಾದ ಶತಾಯುಷಿಗಳ ಸಂಖ್ಯೆ ಏಪ್ರಿಲ್ ಮಧ್ಯದಲ್ಲಿ 67 ರಿಂದ ಜುಲೈ 29 ಕ್ಕೆ 212 ಕ್ಕೆ ಏರಿದೆ. ಮಾರ್ಚ್ ಅಂತ್ಯದಲ್ಲಿ, ರಾಜ್ಯದೊಳಗೆ ಕೋವಿಡ್ ಗೆ ತುತ್ತಾದ 63 ಶತಾಯುಷಿಗಳಿದ್ದರು. ಇದು ಮೇಕೊನೆಯಲ್ಲಿ 137 ಕ್ಕೆ ಮತ್ತು ಜೂನ್ 30 ರ ವೇಳೆಗೆ 151 ಕ್ಕೆ ಏರಿತು. 212 ರೋಗಿಗಳಲ್ಲಿ … Continued