ಮತ್ತೊಂದು ದಾಖಲೆ :ಒಂದೇ ದಿನದಲ್ಲಿ 1.21 ಕೋಟಿ ಕೋವಿಡ್‌ ಲಸಿಕೆ ಡೋಸ್ ನೀಡಿದ ಭಾರತ..!

ನವದೆಹಲಿ: ಭಾರತವು ಇಂದು (ಮಂಗಳವಾರ) 1.21 ಕೋಟಿ ಡೋಸ್‌ಗಳ ನೀಡುವುದರೊಂದಿಗೆ ಹೊಸ ಲಸಿಕೆ ಮೈಲಿಗಲ್ಲನ್ನು ಸಾಧಿಸಿದೆ. ಒಟ್ಟಾರೆಯಾಗಿ, ದೇಶದಲ್ಲಿ ಇದುವರೆಗೆ 65 ಕೋಟಿಗೂ ಅಧಿಕ ಡೋಸ್‌ಗಳನ್ನು ನೀಡಲಾಗಿದೆ. ಕೋ-ವಿನ್ ವೆಬ್‌ಸೈಟ್‌ನಲ್ಲಿನ ಇಂದಿನ ಅಂಕಿಅಂಶಗಳು ದಿನಕ್ಕೆ ಇಲ್ಲಿಯವರೆಗೆ 1,21,99,230 ಡೋಸ್‌ಗಳನ್ನು ನೀಡಲಾಗಿದೆ ಎಂದು ತೋರಿಸಿದೆ. ಭಾರತವು ಈ ವರ್ಷ ಆಗಸ್ಟ್ 27 ರಂದು ಮೊದಲ ಬಾರಿಗೆ ಒಂದು … Continued

ಯಾವುದೇ ವಿವಾದ ಸೃಷ್ಟಿಸಿಕೊಳ್ಳದೆ ಸರ್ಕಾರ ನಡೆಸಲಿದ್ದಾರೆ ಬೊಮ್ಮಾಯಿ: ಕೋಡಿಮಠ ಶ್ರೀಗಳ ಭವಿಷ್ಯ

ಶಿವಮೊಗ್ಗ: ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯ ಸೊರಬದ ಜಡೆ ಸಂಸ್ಥಾನ ಮಠದ ಶ್ರೀ ಸಿದ್ದವೃಷಭೇಂದ್ರ ಸ್ವಾಮೀಜಿ ಅವರ ಕರ್ತೃ ಗದ್ದುಗೆಯ ದರ್ಶನ ಪಡೆದ ನಂತರಸುದ್ದಿಗಾರರ ಜೊತೆ ಮಾತನಾಡಿದ ಶ್ರೀಗಳು, ಬೊಮ್ಮಾಯಿ ಅವರು ಸರಳ, ಸಜ್ಜನಿಕೆಯ ಚಾಣಾಕ್ಷ್ಯತನದಿಂದ ಮುಖ್ಯಮಂತ್ರಿ ಜವಾಬ್ದಾರಿ ನಿಭಾಯಿಸಲಿದ್ದಾರೆ … Continued

ಮಹತ್ವದ ಬೆಳವಣಿಗೆಯಲ್ಲಿ ತಾಲಿಬಾನ್ ಜೊತೆಗೆ ಭಾರತದ ಮೊದಲ ರಾಜತಾಂತ್ರಿಕ ಸಭೆ

ಕತಾರ್‌ನಲ್ಲಿರುವ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರು ಮಂಗಳವಾರ ದೋಹಾದಲ್ಲಿ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ತಾನೆಕ್‌ಜಾಯ್ ಅವರನ್ನು ಭೇಟಿ ಮಾಡಿದರು ಮತ್ತು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ, ಭದ್ರತೆ ಮತ್ತು ಆರಂಭಿಕ ವಾಪಸಾತಿ ಕುರಿತು ಚರ್ಚೆ ನಡೆಸಿದರು. ತಾಲಿಬಾನ್ ಕೋರಿಕೆಯ ಮೇರೆಗೆ ದೋಹಾದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ಈ ಸಭೆ … Continued

ಸೋಮವಾರದಿಂದ 6ರಿಂದ 8ನೇ ತರಗತಿಗಳು ಆರಂಭ: ಮಾರ್ಗಸೂಚಿ-ತರಗತಿಗಳ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: 6 ರಿಂದ 8 ನೇ ತರಗತಿವರೆಗೆ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಆದರೆ ಒಂದೇ ಶಾಲೆಯ ಕಟ್ಟಡದಲ್ಲಿ ಎಲ್ಲ ಮಕ್ಕಳೂ ಪಾಠ ಕೇಳಬೇಕಾದ್ದರಿಂದ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ‌ಮಾಡಿದೆ. ಯಾವ ತರಗತಿಯ ಮಕ್ಕಳು ಯಾವಾಗ ಶಾಲೆಗೆ ಬರಬೇಕು, ತರಗತಿಯೊಳಗೆ ಎಷ್ಟು ಮಕ್ಕಳಿರಬೇಕು, ಶಿಕ್ಷಕರು ಮತ್ತು ಸಿಬ್ಬಂದಿಗೆ ಯಾವ ನಿಯಮ…ಇವುಗಳ ಬಗ್ಗೆ ವಿವರ … Continued

ತೆಲಂಗಾಣದಲ್ಲಿ ಭಾರೀ ಮಳೆ: ಪ್ರವಾಹದಲ್ಲಿ ನವವಧು ಸೇರಿ ಏಳು ಮಂದಿ ಸಾವು

ಹೈದರಾಬಾದ್‌: ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ನವ ವಿವಾಹಿತೆ ಸೇರಿದಂತೆ ಕನಿಷ್ಠ ಏಳು ಮಂದಿ ಕೊಚ್ಚಿ ಹೋಗಿದ್ದಾರೆ. ವಿಕಾರಾಬಾದ್‌ ಜಿಲ್ಲೆಯಲ್ಲಿ ಮದುವೆ ಮುಗಿಸಿಕೊಂಡು  ವಧು ಪ್ರವಾಲಿಕಾ ಮತ್ತು ವರ ನವಾಜ್‌ ರೆಡ್ಡಿ ಜೊತೆಗೆ ಇತರೆ ನಾಲ್ಕು ಜನ ಪ್ರಯಾಣಿಸುತ್ತಿದ್ದಾಗ  ಪ್ರವಾಹದ ರಭಸದಲ್ಲಿ ಸಿಲುಕಿದ್ದಾರೆ.  ಅತ್ತಿಗೆ ಶ್ವೇತಾ ಮತ್ತು ಅವರ ಎಂಟು … Continued

ಶ್ರೀ ಕೃಷ್ಣಾ ಮಿಲ್ಕ್ ಅಧ್ಯಕ್ಷ ಪುತ್ತು ಪೈ ನಿಧನ

ಭಟ್ಕಳ: ಕಿರವತ್ತಿಯ ಪ್ರಸಿದ್ಧ ಶ್ರೀಕೃಷ್ಣಾ ಮಿಲ್ಕ್ಸ್ ಲಿ. ಅಧ್ಯಕ್ಷ ಪುತ್ತು (ಹನುಮಂತ) ಪೈ( 68) ಸೋಮವಾರ ರಾತ್ರಿ ತಮ್ಮ ಕಿರವತ್ತಿಯ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೋಮವಾರ ಕಿರವತ್ತಿಯ ತಮ್ಮ ನಿವಾಸದಲ್ಲಿ ಶ್ರೀ ಕೃಷ್ಣಾಷ್ಟಮಿಯ ಪೂಜೆಯನ್ನು ನೇರವರಿಸಿದ್ದ. ಇವರಿಗೆ ಪೂಜೆಯ ಬಳಿಕ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಹಾಂಗ್ಯೋ ಕಾರ್ಯನಿರ್ವಾಹಕ ನಿರ್ದೇಶಕ … Continued

ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದ ಕಾವೇರಿ ನಿರ್ವಹಣಾ ಪ್ರಾಧಿಕಾರ

ನವದೆಹಲಿ:ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 13ನೇ ಸಭೆ ದೆಹಲಿಯ ಸೇವಾ ಭವನದಲ್ಲಿ ನಡೆಯುತ್ತಿದ್ದು, ಮೇಕೆದಾಟು ಯೋಜನೆ ಬಗ್ಗೆ ಚರ್ಚೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ. ಮೇಕೆದಾಟು DPR ಬಗ್ಗೆ ಪ್ರಸ್ತಾಪಿಸಲು ಕರ್ನಾಟಕ ಮುಂದಾದಾಗ ತಕರಾರು ತೆಗೆದ ತಮಿಳುನಾಡು, ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ ಹೀಗಾಗಿ ಚರ್ಚೆಗೆ ಅವಕಾಶ ನೀಡಬಾರದು ಎಂದು ಕಾವೇರಿ ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ತಿಳಿಸಿದೆ. ಕಾವೇರಿ ನೀರು … Continued

ನೋಯ್ಡಾ: 40 ಅಂತಸ್ತಿನ ಅವಳಿ ಕಟ್ಟಡ ಕೆಡವಲು ಸುಪ್ರೀಂಕೋರ್ಟ್ ಆದೇಶ

ನವದೆಹಲಿ: ಕಟ್ಟಡದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನೋಯ್ಡಾದಲ್ಲಿರುವ ಸೂಪರ್ ಟೆಕ್ ಎಮರಾಲ್ಡ್‌ ಯೋಜನೆಯ 40 ಅಂತಸ್ತಿನ ಟವರುಗಳನ್ನು ಕೆಡವಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಮೂರು ತಿಂಗಳು ಗಡುವು ನೀಡಿದೆ. ಮನೆ ಖರೀದಿದಾರಿಗೆ ಬುಕಿಂಗ್ ಮಾಡಿದ ಸಮಯದಿಂದ ಸಂಪೂರ್ಣ ಮೊತ್ತವನ್ನು ಶೇ.12 ರ ಬಡ್ಡಿಯೊಂದಿಗೆ ಮರುಪಾವತಿ ಮಾಡಬೇಕು ಮತ್ತು ಅವಳಿ ಗೋಪುರಗಳ ನಿರ್ಮಾಣದಿಂದ ಉಂಟಾದ ಕಿರುಕುಳಕ್ಕೆ ನಿವಾಸಿಗಳ … Continued

ಮಹಿಳಾ ಅಧಿಕಾರಿಯ ಬೆರಳು ಕತ್ತರಿಸಿದ ಬೀದಿ ವ್ಯಾಪಾರಿ..!

ಥಾಣೆ: ಬೀದಿ ವ್ಯಾಪಾರಿಗಳ ಅತಿಕ್ರಮಣ ವಿರೋಧಿ ಅಭಿಯಾನದ ಸಮಯದಲ್ಲಿ ಬೀದ ವ್ಯಾಪಾಯೊಬ್ಬರಿ ಚಾಕು ಬೀಸಿದ ಪರಿಣಾಮ ಮಹಿಳಾ ಅಧಿಕಾರಿಯೊಬ್ಬರ ಮೂರು ಬೆರಳು ತುಂಡಾಗಿ ತಲೆಗೆ ಗಾಯವಾದ ಘಟನೆ ಮಹಾರಾಷ್ಟ್ರದಲ್ಲಿ ನೆಡದಿದೆ. ಮಜಿವಾಡ-ಮಾನ್ಪಡಾ ಪ್ರದೇಶದಲ್ಲಿ ಕಾಸರ್ವದಾವಲಿ ಜಂಕ್ಷನ್‍ನಲ್ಲಿ ಬೀದಿ ವ್ಯಾಪಾರಿಗಳ ಅತಿಕ್ರಮಣ ತೆರವು ನೋಡಿಕೊಳ್ಳುತ್ತಿದ್ದಾಗ, ಒಬ್ಬ ವ್ಯಾಪಾರಿ ಮಹಿಳಾ ಅಧಿಕಾರಿ ಕಲ್ಪಿತ ಪಿಂಪಲ್ ಎಂಬವರ ಮೇಲೆ ಚಾಕುವಿನಿಂದ … Continued

ಪಾಕ್‌ ಜೈಲಿನಲ್ಲಿದ್ದ ಇಬ್ಬರು ಭಾರತೀಯರು ಹಸ್ತಾಂತರ

ಲಾಹೋರ್: ಅಕ್ರಮ ಗಡಿ ಪ್ರವೇಶದ ಆರೋಪದ ಮೇಲೆ ಎಂಟು ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿದ್ದ ಇಬ್ಬರು ಭಾರತೀಯರನ್ನು ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆಯ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2013ರಲ್ಲಿ ಭಾರತೀಯ ಪ್ರಜೆಗಳಾದ ಶರ್ಮಾ ರಜಪೂತ್ ಮತ್ತು ರಾಮ್ ಬುಹಾದರ್ ಅವರನ್ನು ಕಾಶ್ಮೀರದಿಂದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಪ್ರದೇಶವನ್ನು ಪ್ರವೇಶಿಸಿದರು ಎಂದು … Continued