ಹಾಲಕ್ಕಿ ಸಮಾಜದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ಪದ್ಮಶ್ರೀ ಪ್ರಶಸ್ತಿ ಮರಳಿಸುವೆ, ವಿಧಾನಸೌಧದ ಮುಂದೆ ಧರಣಿ ಕೂಡ್ರುವೆ:ಸುಕ್ರಿ ಬೊಮ್ಮಗೌಡ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಸೀಮಿತವಾಗಿರುವ ಬುಡಕಟ್ಟು ಜನಾಂಗವಾದ ಹಾಲಕ್ಕಿ ಸಮುದಾಯವನ್ನು ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ಕೇಂದ್ರ ಸರ್ಕಾರ ತನಗೆ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್‌ ಮಾಡಲು ಜನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ನಿರ್ಧರಿಸಿದ್ದಾರೆ. ಅಲ್ಲದೆ ತಮ್ಮ ಹಾಲಕ್ಕಿ ಜನಾಂಗದ ಹಕ್ಕಿಗಾಗಿ ವಿಧಾನಸೌಧದಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಕುರಿತು … Continued

ಸಿಎ ಸೈಟ್ ಹಂಚಿಕೆ: ಬಿಜೆಪಿ ಸಂಸದ ಉಮೇಶ್ ಜಾಧವ್ ಪತ್ನಿ ಟ್ರಸ್ಟ್‌ಗೆ ಸೈಟ್ ಹಂಚಿಕೆ‌ ರದ್ದು; ಕೆಎಚ್‌ಬಿಗೆ 1 ಲಕ್ಷ ರೂ ದಂಡ

ಬೆಂಗಳೂರು: ಕರ್ನಾಟಕ ಗೃಹ ಮಂಡಳಿಯು (ಕೆಎಚ್‌ಬಿ) ಬೆಂಗಳೂರಿನಲ್ಲಿ ಸಾರ್ವಜನಿಕ ಸೌಕರ್ಯ ಕಲ್ಪಿಸಲು ಮೀಸಲಾಗಿರುವ ನಿವೇಶನವನ್ನು (ಸಿ ಎ ಸೈಟ್‌) ಕಲಬುರ್ಗಿ ಲೋಕಸಭಾ ಸದಸ್ಯ ಬಿಜೆಪಿಯ ಉಮೇಶ್‌ ಜಾಧವ್‌ ಪತ್ನಿ ಹಾಗೂ ಮೂರ್ತಿ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷರಾದ ಗಾಯತ್ರಿ ಅವರಿಗೆ ಷರತ್ತುಬದ್ಧ ಕ್ರಯಪತ್ರದ ನಿಯಮಗಳಿಗೆ ವಿರುದ್ಧವಾಗಿ ಕ್ರಯ ಮಾಡಿಕೊಡುವ ಮೂಲಕ ಪಕ್ಷಪಾತ ಎಸಗಿದೆ ಎಂದು ಕರ್ನಾಟಕ ಹೈಕೋರ್ಟ್‌ … Continued

ಸಿಎಂ ಚನ್ನಿ ಮನವೊಲಿಕೆ ಸಭೆ ಯಶಸ್ವಿ:ರಾಜೀನಾಮೆ ಹಿಂಪಡೆಯಲು ಸಿಧು ಒಪ್ಪಿಗೆ

ಚಂಡೀಗಡ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ( Navjot Singh Sidhu) ಮತ್ತು ಪಂಜಾಬ್‌ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಸಭೆ ಯಶಸ್ವಿಯಾಗಿದೆ ಎಂದು ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ, ನವಜೋತ್ ಸಿಂಗ್ ಸಿಧು ಹಾಕಿದ್ದ ಬಹುತೇಕ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಅಸ್ತು ಎಂದಿದ್ದಾರೆ. ಬೇಡಿಕೆ ಈಡೇರಿಸುವ ಕುರಿತು ಮೌಖಿಕ ಒಪ್ಪಿಗೆ ನೀಡಿರುವ ಮುಖ್ಯಮಂತ್ರಿ ಚನ್ನಿ, … Continued

ಕಪಿಲ್ ಸಿಬಲ್ ಟೀಕೆಯ ನಂತರ, ಶೀಘ್ರವೇ ಸಿಡಬ್ಲ್ಯುಸಿ ಸಭೆ ನಡೆಯಲಿದೆ ಎಂದ ಕಾಂಗ್ರೆಸ್

ನವದೆಹಲಿ: ಜಿ -23 ನಾಯಕರ ಬೇಡಿಕೆಯನ್ನು ಅನುಸರಿಸಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯೂಸಿ) ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಗುರುವಾರ ತಿಳಿಸಿದ್ದಾರೆ. ಜಿ -23 – ಕಾಂಗ್ರೆಸ್ ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಗಳನ್ನು ಕೋರಿ ಕಾಂಗ್ರೆಸ್ ಉನ್ನತಾಧಿಕಾರಿಗಳಿಗೆ ಪತ್ರ ಬರೆದ ನಾಯಕರ ಗುಂಪು -ಅದು ಪಕ್ಷದಲ್ಲಿ ಸಾಂಸ್ಥಿಕ ಚುನಾವಣೆಗೆ ಒತ್ತಾಯಿಸುತ್ತಿದೆ. … Continued

ಏಪ್ರಿಲ್​ನಿಂದ ಆಗಸ್ಟ್​ ಅವಧಿಯ ಕೇಂದ್ರದ ವಿತ್ತೀಯ ಕೊರತೆ 4.7 ಲಕ್ಷ ಕೋಟಿ ರೂ.

ನವದೆಹಲಿ: 2021ರ ಏಪ್ರಿಲ್​ನಿಂದ ಆಗಸ್ಟ್‌ ಅವಧಿಯಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 4.7 ಲಕ್ಷ ಕೋಟಿ ರೂ.ಗಳು ಅಥವಾ ಪೂರ್ಣ ವರ್ಷದ ಬಜೆಟ್ ಅಂದಾಜಿನ ಶೇ 31ರಷ್ಟು ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ಶೇಕಡಾ 109ರಷ್ಟು ಆಗಿತ್ತು ಎಂದು ಸೆಪ್ಟೆಂಬರ್ 30ರಂದು ಅಧಿಕೃತ ಮಾಹಿತಿಯು ತೋರಿಸಿದೆ. ಈ ಬೆಳವಣಿಗೆಯು ಪ್ರಾಥಮಿಕವಾಗಿ ನೇರ ಮತ್ತು … Continued

ಬೆಂಗಳೂರು: ಬೀಗ ಜಡಿದ ನಂತರ ೫ ಕೋಟಿ ರೂ. ತೆರಿಗೆ ಪಾವತಿಸಿದ ಮಂತ್ರಿ ಮಾಲ್‌

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತೆರಿಗೆ ವಂಚಕರ ವಿರುದ್ಧ ಬಿಬಿಎಂಪಿ ಸಮರ ಮುಂದುವರಿದಿದ್ದು, ಪ್ರತಿಷ್ಠಿತ ಮಂತ್ರಿ ಮಾಲ್ ಮುಖ್ಯದ್ವಾರಕ್ಕೆ ಬೀಗ ಜಡಿದ ನಂತರ ತೆರಿಗೆ ಹಣ ಪಾವತಿಸಲಾಗಿದೆ. ಮಂತ್ರಿ ಮಾಲ್ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಬಗ್ಗೆ ಹಲವು ಬಾರಿ ನೋಟಿಸ್ ನೀಡಿ ಕಟ್ಟುವಂತೆ ಬಿಬಿಎಂಪಿ ಮಲ್ಲೇಶ್ವರಂನಲ್ಲಿರುವಂತ ಮಂತ್ರಿ ಮಾಲ್ ಗೆ ಸೂಚಿಸಲಾಗಿತ್ತು. ಆದರೇ ನೋಟಿಸ್‌ಗೂ ಉತ್ತರಿಸಿರಲಿಲ್ಲ … Continued

ಧಾರವಾಡ: ಅಪಘಾತದಲ್ಲಿ ಇಬ್ಬರು ಸಾವು

ಧಾರವಾಡ: ಸಂಜೀವಿನಿ ಉದ್ಯಾನವನದ ಬಳಿ ಮುಂಬದಿ ಹೋಗುತ್ತಿದ್ದ ಕಾರಿಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಮೇಲೆ ಹೋಗುತ್ತಿದ್ದ ಇಬ್ಬರು ಸವಾರರು ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಮೃತಪಟ್ಟವರನ್ನು ಮದಾರಮಡ್ಡಿಯ ರವಿ ಹಾವನೂರ (32), ಸದಾನಂದ ಸಾಂಬ್ರಾಣಿ (31) ಎಂದು ಗುರುತಿಸಲಾಗಿದೆ. ಇಬ್ಬರು ಒಂದೇ ಬೈಕ್‌ ಮೇಲೆ ಧಾರವಾಡದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ವೇಳೆ ಮುಂದೆ ಹೋಗುತ್ತಿದ್ದ … Continued

ಆರ್‌ಬಿಐನ ಹೊಸ ಆಟೋ ಡೆಬಿಟ್ ನಿಯಮಗಳು ಅಕ್ಟೋಬರ್ 1ರಿಂದ ಆರಂಭ: ತಿಳಿದುಕೊಳ್ಳಬೇಕಾದದ್ದು

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವಿಸ್ತರಿಸಿದ ಗಡುವು ಅಂತ್ಯಗೊಳ್ಳಲಿದ್ದು, (RBI) ಕ್ರೆಡಿಟ್ ಕಾರ್ಡ್‌ಗಳ ಮೂಲಕ ಇ-ಆದೇಶಗಳು ಅಥವಾ ಮರುಕಳಿಸುವ ಪಾವತಿಗಳ (recurring payment) ಕುರಿತು ಹೊಸ ಮಾರ್ಗಸೂಚಿಗಳು ಅಕ್ಟೋಬರ್ 1, 2021ರಿಂದ ಜಾರಿಗೆ ಬರಲಿದೆ. ಹೊಸ ನಿಯಮವು ಈಗಾಗಲೇ ಆನ್‌ಲೈನ್ ಪಾವತಿಗಳಿಗಾಗಿ ತಮ್ಮ ಕಾರ್ಡ್‌ಗಳಲ್ಲಿ ಸ್ಥಾಯಿ ಸೂಚನೆಗಳನ್ನು ಹಾಕಿರುವ ಕಾರ್ಡುದಾರರ ಮೇಲೆ ಪ್ರಭಾವ ಬೀರುವ … Continued

ಮಹತ್ವದ ನಿರ್ಧಾರ.. ಡಿಪ್ಲೊಮಾ ಕೋರ್ಸ್ ಇನ್ಮುಂದೆ ಪಿಯುಸಿಗೆ ತತ್ಸಮಾನ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಡಿಪ್ಲೊಮಾ ವಿದ್ಯಾರ್ಹತೆಯನ್ನು ದ್ವಿತೀಯ ಪಿಯುಸಿ ವಿದ್ಯಾರ್ಹತೆಗೆ ತತ್ಸಮಾನ ಎಂದು ಪರಿಗಣಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸುವ ಮೂಲಕ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶರಣಪ್ಪ ನಡವಳಿ ಹೊರಡಿಸಿದ್ದು, ಮೂರು ವರ್ಷಗಳ … Continued

ಕಾಂಗ್ರೆಸ್ಸಿನಲ್ಲಿ ಕಾಣುತ್ತಿರುವ ಬಿಕ್ಕಟ್ಟಿಗೆ ಮೂವರು ಗಾಂಧಿಗಳೇ ಹೊಣೆ: ಮಾಜಿ ಕೇಂದ್ರ ಸಚಿವ ನಟ್ವರ್ ಸಿಂಗ್ ವಾಗ್ದಾಳಿ

ನವದೆಹಲಿ: ಮಾಜಿ ವಿದೇಶಾಂಗ ಸಚಿವ ನಟ್ವರ್ ಸಿಂಗ್ ಕಾಂಗ್ರೆಸ್ ತೊರೆದಿದ್ದರೂ ಅದರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ವಿದ್ಯಮಾನದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿನ ಬಿಕ್ಕಟ್ಟಿಗೆ ಸೋನಿಯಾ, ರಾಹುಲ್ ಹಾಗೂ ಪ್ರಿಯಾಂಕಾ ಈ ಮೂವರು ಗಾಂಧಿಗಳೇ ಹೊಣೆಗಾರರು ಎಂದು ವಾಗ್ದಾಳಿ ನಡೆಸಿರುವ ಅವರು, ರಾಹುಲ್ … Continued