ಹುಬ್ಬಳ್ಳಿ: ಈಗ ದೇವರಗುಡಿಹಾಳ-ಬೂದನಗುಡ್ಡದ ಬಳಿಯೂ ಚಿರತೆ ಪ್ರತ್ಯಕ್ಷ….!

ಹುಬ್ಬಳ್ಳಿ: ಈಗ ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕಿನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಕಲಘಟಗಿಯ ದೇವರ ಗುಡಿಹಾಳ ಮತ್ತು ಬೂದನಗುಡ್ಡದ ಸಮೀಪ ದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ವರದಿಯಾಗಿದೆ. ಹುಬ್ಬಳ್ಳಿ ತಾಲೂಕಿನ ದೇವರಗುಡುಹಾಳ, ಕಲಘಟಗಿ ತಾಲೂಕಿನ ಬೂದನಗುಡ್ಡದಲ್ಲಿ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸುತ್ತಾಡಿದೆ ಎಂದು ವರದಿಯಾಗಿದೆ. ಅರಣ್ಯ ಇಲಾಖೆ ಇದನ್ನು ಖಚಿತಪಡಿಸಿದೆ ಎಂದು ವಿಜಯವಾಣಿ ವರದಿ ಮಾಡಿದೆ. ಇದು … Continued

ಬೆಂಗಳೂರು: ಬಾಕಿ ತೆರಿಗೆ ಪಾವತಿಸದ ಮಂತ್ರಿ ಮಾಲ್​ಗೆ ಬೀಗ ಜಡಿದ ಬಿಬಿಎಂಪಿ

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ಕಟ್ಟದ ಸತಾಯಿಸುತ್ತಿದ್ದ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ (Mantri Square Mall)ಗೆ ಇಂದು (ಸೆಪ್ಟಂಬರ್‌30, ಗುರುವಾರ) ಬೆಳಿಗ್ಗೆ ಬೀಗ ಹಾಕಲಾಗಿದೆ. ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆ ಮಂತ್ರಿ ಮಾಲ್‌ಗೆ ಬೀಗ ಹಾಕಿದ ಕಾರಣ ಮಾಲ್‌ಗೆ ಬಿಬಿಎಂಪಿ ಅಧೀಕಾರಿಗಳು ಬೀಗ ಜಡಿದಿದ್ದಾರೆ. 2017ರ ಬಳಿಕ ಇದೂವರೆಗೂ ಮಂತ್ರಿ ಮಾಲ್​ ಆಸ್ತಿ … Continued

ನಮ್ಮ ಮೆಟ್ರೊ ಕಾಮಗಾರಿ ಸ್ಥಳದಲ್ಲಿ ಮುಚ್ಚಿದ ಬಾವಿಯಿಂದ 30 ಅಡಿ ಮಣ್ಣು ಕುಸಿತ..!

ಬೆಂಗಳೂರು : ನಮ್ಮ ಮೆಟ್ರೋ ಕಾಮಗಾರಿಯ ವೇಳೆ ಮುಚ್ಚಿದ ಬಾವಿಯಿಂದ ಸುಮಾರು ಮೂವತ್ತು ಅಡಿಗಳಷ್ಟು ಮಣ್ಣು ಕುಸಿದಿರುವ ಘಟನೆ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಗೊಟ್ಟಿಗೆರೆಯಿಂದ ನಾಗವಾರದ ವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಟಿವಿಎಂ ಮೆಶಿನ್‌ ಊರ್ಜಾ ಸುರಂಗ ಕೊರೆದಿತ್ತು. ಆದ್ರೆ ಈಗ ಮೆಟ್ರೋ ಕಾಮಗಾರಿಯಿಂದಾಗಿ ಟ್ಯಾನರಿ … Continued

ರೇಣುಕಾಚಾರ್ಯ, ಜೀವರಾಜ್​ಗೆ ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿ ಮತ್ತೆ ನೇಮಕ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ರಾಜಕೀಯ ಕಾರ್ಯದರ್ಶಿಗಳಾಗಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಡಿ.ಎನ್.ಜೀವರಾಜ್ ಮರು ನೇಮಕಗೊಂಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ರೇಣುಕಾಚಾರ್ಯ ಮತ್ತು ಜೀವರಾಜ್ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಈಗ ಬಸವರಾಜ ಬೊಮ್ಮಾಯಿ‌ ಮುಖ್ಯಮಂತ್ರಿಯಾಗಿ ಎರಡು ತಿಂಗಳ ಬಳಿಕ ಇವರಿಬ್ಬರು ಮತ್ತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ. ಇವರಿಗೆ ಸಂಪುಟ ದರ್ಜೆ ಸಚಿವರ … Continued

ಮಗುವಿನೊಂದಿಗೆ ನದಿಗೆ ಹಾರಿದ್ದ ತಾಯಿ ಜೀವಂತವಾಗಿ ಪತ್ತೆ, ಮಗುವಿಗಾಗಿ ಮುಂದುವರಿದ ಶೋಧ

ಗದಗ: ಮೂರು ವರ್ಷದ ಮಗುವಿನೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ರೋಣ ತಾಲ್ಲೂಕಿನ ಹೊಳೆಆಲೂರ ಗ್ರಾಮದ ಮಹಿಳೆ ನದಿಯಲ್ಲಿರುವ ಮುಳ್ಳು ಕಂಟಿಯಲ್ಲಿ ಜೀವಂತ ಪತ್ತೆಯಾಗಿದ್ದಾರೆ. ಆದರೆ ಮೂರು ವರ್ಷದ ಮಗು ಸಿಕ್ಕಿಲ್ಲ. ಶೋಧ ಕಾರ್ಯಾಚರಣೆ ಮುಂದುವರಿದಿದೆ. ಉಮಾದೇವಿ ಸಂಗಮೇಶ ಶೆಲ್ಲಿಕೇರಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದವರು. ಅವರಿಗೆ ನಾಲ್ವರು ಹೆಣ್ಣುಮಕ್ಕಳಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಮೂರು … Continued

ಭಾರತದಲ್ಲಿ 23,529 ಹೊಸ ಕೋವಿಡ್ -19 ಪ್ರಕರಣಗಳು ದಾಖಲು..ನಿನ್ನೆಗಿಂತ 24.7% ಹೆಚ್ಚು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 23,529 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 24.7 % ಹೆಚ್ಚಾಗಿದೆ. ಹೊಸ ಪ್ರಕರಣಗಳೊಂದಿಗೆ, ದೇಶದ ಒಟ್ಟಾರೆ ಸೋಂಕುಗಳು ಈಗ 3,37,39,980 ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಬೆಳಿಗ್ಗೆ ಮಾಹಿತಿ ಬಿಡುಗಡೆ ಮಾಡಿದೆ. ಇದೇ ಸಮಯದಲ್ಲಿ ಅಲ್ಲದೆ, ಕಳೆದ … Continued

ಪಾಕಿಸ್ತಾನಕ್ಕೆ ಸಂಕಷ್ಟ..?: ಅಫ್ಘಾನಿಸ್ತಾನದ ತಾಲಿಬಾನ್ ದಾಳಿಯಲ್ಲಿ ಪಾಕಿಸ್ತಾನದ ಪಾತ್ರದ ಮೌಲ್ಯಮಾಪನದ ಮಸೂದೆ ಅಮೆರಿಕದ ಸೆನೆಟ್ಟಿನಲ್ಲಿ ಮಂಡನೆ..!

ಕಾಬೂಲ್ ಪತನದ ಮೊದಲು ಮತ್ತು ನಂತರ ಅಫ್ಘಾನಿಸ್ತಾನದಲ್ಲಿ ಮತ್ತು ಪಂಜಶೀರ್ ಕಣಿವೆಯಲ್ಲಿ ತಾಲಿಬಾನ್ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ನಿರ್ಣಯಿಸಲು ಇಪ್ಪತ್ತೆರಡು ಅಮೆರಿಕ ಸೆನೆಟರ್‌ಗಳು ಮಸೂದೆಯೊಂದನ್ನು ಸೆನೆಟ್ ನಲ್ಲಿ ಮಂಡಿಸಿದ್ದಾರೆ. ಸೆನೆಟರ್ ವಿದೇಶಿ ಸಂಬಂಧಗಳ ಸಮಿತಿಯ ಶ್ರೇಯಾಂಕ ಸದಸ್ಯ ಸೆನೆಟರ್ ಜಿಮ್ ರಿಶ್ ಮತ್ತು ಇತರ ರಿಪಬ್ಲಿಕನ್ನರು ಸೋಮವಾರ ಅಫಘಾನಿಸ್ತಾನ ಭಯೋತ್ಪಾದನೆ ನಿಗ್ರಹ, ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ … Continued

ಇನ್ನೂ ಮುಗಿದಿಲ್ಲ ಅಫ್ಘನ್‌ ಆಟ..:ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದಿಂದ ಸಲೇಹ್ ನೇತೃತ್ವದ ಗಡಿಪಾರು ಸರ್ಕಾರ ರಚನೆಯ ಘೋಷಣೆ..!

ನವದೆಹಲಿ: ಇತ್ತೀಚಿನ ಬೆಳವಣಿಗೆಯಲ್ಲಿ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದ ಮಾಜಿ ಅಧಿಕಾರಿಗಳು, ಅಫ್ಘಾನಿಸ್ತಾನದ ಇಸ್ಲಾಮಿಕ್ ಗಣರಾಜ್ಯದಿಂದ  ಅಮರುಲ್ಲಾ ಸಲೇಹ್ ನೇತೃತ್ವದ ಹೊಸ ಸರ್ಕಾರವನ್ನು ರಚಿಸುವುದಾಗಿ ಘೋಷಿಸಿದ್ದಾರೆ..! ಅಶ್ರಫ್ ಘನಿ ಆಡಳಿತದ ಮೊದಲ ಉಪಾಧ್ಯಕ್ಷ, ಸಲೇಹ್ ಘಾನಿಯ ಅನುಪಸ್ಥಿತಿಯಲ್ಲಿ ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದರು. ಅಮ್ರುಲ್ಲಾ ಸಲೇಹ್ ನೇತೃತ್ವದ ಗಡಿಪಾರು ಸರ್ಕಾರವು ಅಫ್ಘಾನಿಸ್ತಾನದ ಏಕೈಕ “ಕಾನೂನುಬದ್ಧ … Continued

ಇಸಿಎಲ್‌ಜಿಎಸ್‌: ಎಂಎಸ್​ಎಂಇ ತುರ್ತು ಸಾಲ ಯೋಜನೆ ಅವಧಿ 2022ರ ಮಾರ್ಚ್ ತನಕ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಹಣಕಾಸು ಸಚಿವಾಲಯವು ಸೆಪ್ಟೆಂಬರ್ 29ರಂದು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ವ್ಯಾಪ್ತಿಯನ್ನು ಆರು ತಿಂಗಳವರೆಗೆ, ಅಂದರೆ ಮಾರ್ಚ್ 2022ರ ವರೆಗೆ ವಿಸ್ತರಿಸಿದೆ. ಕೊವಿಡ್ 19 ಸಾಂಕ್ರಾಮಿಕದ ಎರಡನೇ ಅಲೆಯಿಂದ ಪ್ರಭಾವಕ್ಕೆ ಒಳಗಾಗಿರುವ ವಿವಿಧ ವ್ಯವಹಾರಗಳನ್ನು ಬೆಂಬಲಿಸುವ ದೃಷ್ಟಿಯಿಂದ, ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ಗಡುವನ್ನು 31.03.2022ರ ವರೆಗೆ ಅಥವಾ … Continued

ಮಧ್ಯಾಹ್ನದ ಬಿಸಿಯೂಟದ ಯೋಜನೆಗೆ ಪ್ರಧಾನ ಮಂತ್ರಿ ಪೋಷಣ್ ಯೋಜನೆ ಎಂದು ಮರುನಾಮಕರಣ: ಹೆಸರು ಬದಲಾವಣೆ ಮಾತ್ರ ವ್ಯತ್ಯಾಸವಲ್ಲ, ಇನ್ನೂ ಇದೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು (ಸಿಸಿಇಎ) ಐದು ವರ್ಷಗಳ ಅವಧಿಗೆ ಶಾಲೆಗಳಲ್ಲಿ ಪ್ರಧಾನ ಮಂತ್ರಿ ಪೋಷಣ್ ರಾಷ್ಟ್ರೀಯ ಯೋಜನೆ ಮುಂದುವರಿಸಲು ನಿರ್ಧರಿಸಿದೆ. ಈ ಮೊದಲು ಮಧ್ಯಾಹ್ನದ ಬಿಸಿಯೂಟದ ಯೋಜನೆ ಎಂದು ಕರೆಯುತ್ತಿದ್ದು ಈ ಯೋಜನೆಗೆ ಈಗ ಪ್ರಧಾನ ಮಂತ್ರಿ ಪೋಷಣ್ ರಾಷ್ಟ್ರೀಯ ಯೋಜನೆ ಎಂಬ ಹೆಸರಿನಲ್ಲಿ … Continued