ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ ಅಪ್ರಾಪ್ತ ಸನ್ಯಾಸಿ ನೇಮಕ ಎತ್ತಿ ಹಿಡಿದ ಹೈಕೋರ್ಟ್‌: ಕಾನೂನುಬದ್ಧತೆ ಪ್ರಶ್ನಿಸಿದ್ದ ಅರ್ಜಿ ವಜಾ

ಬೆಂಗಳೂರು: ಉಡುಪಿಯ ಅಷ್ಟಮಠಗಳ ಪೈಕಿ ಒಂದಾಗಿರುವ ಶಿರೂರು ಮಠಕ್ಕೆ ಬಾಲ ಸನ್ಯಾಸಿ ನೇಮಕ ಮಾಡಿರುವುದನ್ನು ಬುಧವಾರ ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್‌ ಅಪ್ರಾಪ್ತರು ಸ್ವಾಮಿಯಾಗಬಾರದು ಎಂಬುದಕ್ಕೆ ಕಾನೂನಿನ ತೊಡಕು ಇಲ್ಲ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ. :16 ವರ್ಷದ ಅಪ್ರಾಪ್ತನನ್ನು ಉಡುಪಿ ಶಿರೂರು ಮಠದ ಪೀಠಾಧಿಪತಿಗಳನ್ನಾಗಿ ನೇಮಕ ಮಾಡಿರುವ ಕಾನೂನುಬದ್ಧತೆ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು … Continued

ಧಾರವಾಡ: ಕ್ಯಾಂಟರ್ ಪಲ್ಟಿ, ಸ್ಥಳದಲ್ಲಿಯೇ ಇಬ್ಬರು ಸಾವು

ಧಾರವಾಡ: ಕ್ಯಾಂಟರ್ ವಾಹನ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಮನಸೂರ ಗ್ರಾಮದ ಬಳಿಯ ಬೈಪಾಸ್ ಹೆದ್ದಾರಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಅಪಘಾತದಲ್ಲಿ ಮತ್ತಿಬ್ಬರಿಗೆ ಗಾಯಗಳಾಗಿದ್ದು, ಬುಧವಾರ ಬೆಳಗಿನ ಜಾವ ಅಪಘಾತ ನಡೆದಿದೆ ಎನ್ನಲಾಗಿದೆ. ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ. … Continued

ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ತಾಯಿ: ಇಬ್ಬರು ಮಕ್ಕಳು ಬಚಾವ್‌

ಗದಗ: ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ತಾಯಿಯೊಬ್ಬಳು ತನ್ನ ಮೂವರು ಮಕ್ಕಳ ಜತೆ ಮಲಪ್ರಭಾ ನದಿಗೆ ಹಾರಿದ್ದು,  ಇಬ್ಬರು ಮಕ್ಕಳು ತಾಯಿ ಕೈಯಿಂದ ತಪ್ಪಿಸಿಕೊಂಡು ಬಚಾವ್ ಆಗಿದ್ದಾರೆ. ಸಾಮೂಹಿಕ ಆತ್ಮಹತ್ಯೆ ಪ್ರಯತ್ನದಲ್ಲಿ  ತಾಯಿ ಉಮಾದೇವಿ(45) ಮೂರು ಮಕ್ಕಳ ಸಮೇತ ಸಾಯಲು ಬಂದ ತಾಯಿ, ಚಿಕ್ಕ ಮಗಳನ್ನು ( 8) ತಬ್ಬಿಕೊಂಡೇ ನದಿಗೆ ಹಾರಿದ … Continued

ಭಾರತದಲ್ಲಿ 18,870 ಹೊಸ ಕೋವಿಡ್ -19 ಪ್ರಕರಣಗಳು, 378 ಸಾವುಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 18,870 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 0.4 % ಹೆಚ್ಚಾಗಿದೆ. ಇದರೊಂದಿಗೆ, ದೇಶದ ಪ್ರಕರಣಗಳ ಸಂಖ್ಯೆ 3,37,16,451 ಕ್ಕೆ ತಲುಪಿದೆ. ಮಂಗಳವಾರದ ದೈನಂದಿನ ಪ್ರಕರಣಗಳ ಸಂಖ್ಯೆ 18,795 ಆಗಿತ್ತು. ಕಳೆದ ಆರು ತಿಂಗಳಲ್ಲಿ ಸೋಮವಾರ ಪ್ರಕರಣಗಳ ಸಂಖ್ಯೆ 20,000 ಕ್ಕಿಂತ ಕಡಿಮೆಯಾಗಿರವುದು ಎರಡನೇ ದಿನವೂ … Continued

ಅರಸಿಕೆರೆ ಜಂಕ್ಷನ್ನಿನಲ್ಲಿ ನಿಂತಿದ್ದ ರೈಲು ಬೋಗಿಗಳಲ್ಲಿ ಬೆಂಕಿ

ಹಾಸನ: ಕೊರೋನಾ ರೋಗಿಗಳ ಐಸೊಲೇಷನ್ ಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದ ರೈಲು ಬೋಗಿಗಳಿಗೆ ಅರಸಿಕೆರೆ ಜಂಕ್ಷನ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ. ಮಂಗಳವಾರ ರಾತ್ರಿ ಈ ಘಟನೆ ವರದಿಯಾಗಿದ್ದು, ಸೂಕ್ತ ಸಮಯಕ್ಕೆ ಅಗ್ನಿಶಾಮಕ ಪಡೆ ಆಗಮಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಅವಘಡ ಸಂಭವಿಸುವುದಕ್ಕೂ ಮುನ್ನ ಬೆಂಕಿಯನ್ನು ನಂದಿಸಲಾಗಿದೆ. ರೈಲ್ವೆ ಪೊಲೀಸರ ಮಾಹಿತಿಯ ಪ್ರಕಾರ ಬೆಂಕಿ ಅವಘಡಕ್ಕೆ ಕಾರಣ … Continued

1 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡ ಬೆಂಗಳೂರು ಪೊಲೀಸರು: ಇಬ್ಬರು ಇರಾನ್‌ ಪ್ರಜೆಗಳ ಬಂಧನ

ಬೆಂಗಳೂರು: ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ) ಇಬ್ಬರು ಇರಾನಿನ ಪ್ರಜೆಗಳು ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಅವರಿಂದ 1 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ. ಸೆಪ್ಟೆಂಬರ್ 28ರಂದು (ಮಂಗಳವಾರ) ಸಿಸಿಬಿಯು ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೈಡ್ರೋ ಗಾಂಜಾ ಮತ್ತು ಎಲ್‌ಎಸ್‌ಡಿ ಪಟ್ಟಿಗಳನ್ನು ಮಾರಾಟ ಮಾಡುತ್ತಿದ್ದ … Continued

ಬೆಂಗಳೂರು: ಬೋರ್ಡಿಂಗ್ ಶಾಲೆಯ 60 ವಿದ್ಯಾರ್ಥಿಗಳಿಗೆ ಕೋವಿಡ್ -19 ಸೋಂಕು..!

ಬೆಂಗಳೂರು: ಕರ್ನಾಟಕದ ರಾಜಧಾನಿಯ ಬೋರ್ಡಿಂಗ್ ಶಾಲೆಯ 60 ವಿದ್ಯಾರ್ಥಿಗಳು ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ. ಶ್ರೀ ಚೈತನ್ಯ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿಗಳು ಭಾನುವಾರ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದ್ದಾರೆ. ಧನಾತ್ಮಕ ಪರೀಕ್ಷೆ ಮಾಡಿದ 60 ವಿದ್ಯಾರ್ಥಿಗಳಲ್ಲಿ ಇಬ್ಬರು ರೋಗಲಕ್ಷಣ ಹೊಂದಿದ್ದರೆ ಉಳಿದ … Continued

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ಅಂಗೀಕರಿಸದ ಪಕ್ಷದ ಉನ್ನತ ಸಮಿತಿ; ಇಂದು ನಿರ್ಣಯ ಸಾಧ್ಯತೆ

ನವದೆಹಲಿ: ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕೆಲವೇ ಗಂಟೆಗಳಲ್ಲಿ ನವಜೋತ್ ಸಿಂಗ್ ಸಿಧು ರಾಜೀನಾಮೆಯನ್ನು ನವದೆಹಲಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಸ್ವೀಕರಿಸಿಲ್ಲ ಎಂದು ತಿಳಿದುಬಂದಿದೆ. ಈ ವಿಷಯವನ್ನು ಮೊದಲು ತಮ್ಮದೇ ಆದ ಮಟ್ಟದಲ್ಲಿ ಪರಿಹರಿಸಿಕೊಳ್ಳುವಂತೆ ನಾಯಕತ್ವವು ರಾಜ್ಯ ನಾಯಕರನ್ನು ಕೇಳಿದೆ ಎಂದು ತಿಳಿದುಬಂದಿದೆ. ನವಜೋತ್ ಸಿಂಗ್ ಸಿಧು ರಾಜೀನಾಮೆಯನ್ನು ಅಂಗೀಕರಿಸಿಲ್ಲ, ಈ ವಿಷಯವನ್ನು … Continued

ಮಹಾರಾಷ್ಟ್ರದಲ್ಲಿ ಮಳೆಗೆ 17 ಮಂದಿ ಸಾವು

ಔರಂಗಾಬಾದ್: ಗುಲಾಬ್ ಚಂಡಮಾರುತದ ಪ್ರಭಾವದಿಂದ ಮಹಾರಾಷ್ಟ್ರದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಎರಡು ದಿನಗಳ ಅವಧಿಯಲ್ಲಿ ಸುಮಾರು ಹದಿನೇಳು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಮಧ್ಯ ಮಹಾರಾಷ್ಟ್ರ, ಮರಾಠವಾಡ ಪ್ರದೇಶ, ವಿದರ್ಭಾ, ಕೊಂಕಣ ಇತರೆ ಪ್ರದೇಶಗಳಲ್ಲಿ ಮಳೆ ಸಂಬಂಧಿ ಅವಘಡಗಳಲ್ಲಿ ಸುಮಾರು ಹದಿನೇಳು ಮಂದಿ ಮೃತಪಟ್ಟಿದ್ದಾರೆ. ಮನೆಗಳು … Continued

ಟಿಪ್ಪು ಸುಲ್ತಾನ್ ಸಿಂಹಾಸನ, ಔರಂಗಜೇಬನ ಉಂಗುರ, ಛತ್ರಪತಿ ಶಿವಾಜಿಯ ಭಗವದ್ಗೀತೆ ಪ್ರತಿ ತನ್ನ ಬಳಿ ಇದೆ ವಂಚಿಸಿದ್ದ ಯೂ ಟ್ಯೂಬರ್ ಬಂಧನ

ಆಲಪ್ಪುಳ: ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ನಕಲಿ ಪುರಾತನ ವಸ್ತುಗಳನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ ಆರೋಪದ ಮೇಲೆ 52 ವರ್ಷದ ಯೂಟ್ಯೂಬರನನ್ನು ಬಂಧಿಸಲಾಗಿದೆ. ಚೆರ್ತಾಲಾ ನಿವಾಸಿ ಮಾನ್ಸನ್ ಮಾವುಂಕಲ್‌ನನ್ನು ಕ್ರೈಂ ಬ್ರಾಂಚ್ ತಂಡವು ಆಲಪ್ಪುಳ ಜಿಲ್ಲೆಯಿಂದ ಬಂಧಿಸಿದೆ. ಕೇರಳ ಮೂಲದ ಯೂಟ್ಯೂಬರ್ ಮಾವುಂಕಲ್ ಕಳೆದ ಹಲವು ವರ್ಷಗಳಿಂದ ಕಲಾಕೃತಿಗಳು ಮತ್ತು ಅವಶೇಷಗಳ ಸಂಗ್ರಾಹಕನಂತೆ ನಟಿಸುತ್ತಿದ್ದ … Continued