ಇಸಿಜಿಸಿ ಐಪಿಒಗೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ; ಮುಂದಿನ 5 ವರ್ಷಗಳಲ್ಲಿ 4,400 ಕೋಟಿ ರೂ.ಗಳ ಹೂಡಿಕೆ

ನವದೆಹಲಿ: ಸ್ಟಾಕ್ ಎಕ್ಸ್‌ಚೇಂಜ್‌ಗಳ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಸರ್ಕಾರಿ ಸ್ವಾಮ್ಯದ ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (Export Credit Guarantee Corporation) ಪಟ್ಟಿ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಬುಧವಾರ ತಿಳಿಸಿದ್ದಾರೆ. ಇಸಿಜಿಚಿ(ECGC)ಯಲ್ಲಿ 4,400 ಕೋಟಿ ರೂ.ಗಳ ಬಂಡವಾಳ … Continued

ಕರ್ನಾಟಕದ 4 ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕಲಿಕೆ

ಬೆಂಗಳೂರು: ಕರ್ನಾಟಕದ ನಾಲ್ಕು ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಕಲಿಕೆ ಆರಂಭ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ನಾಲ್ಕು ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್‌ ಬೋಧನೆ ಆರಂಭಿಸಲಾಗುವುದು. ಭಾಲ್ಕಿಯ ಭೀಮಣ್ಣ ಖಂಡ್ರೆ ಕಾಲೇಜು, ವಿಜಯಪುರದ ಬಿಎಲ್ ಡಿಇ ಕಾಲೇಜು, ಚಿಕ್ಕಬಳ್ಳಾಪುರದ ಎಸ್.ಜೆ.ಆರ್ ಕಾಲೇಜು, ಮೈಸೂರಿನ … Continued

ಕೋರ್ಟ್ ಆವರಣದಲ್ಲೇ ಮಚ್ಚಿನಿಂದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಾಜಿ ಸೈನಿಕ..!

ಬೆಳಗಾವಿ: ಮಾಜಿ ಸೈನಿಕನೋರ್ವ ಕೋರ್ಟ್ ಆವರಣದಲ್ಲೇ ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕಾಲನ್ನೇ ಕತ್ತರಿಸಿದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮಾಜಿ ಸೈನಿಕ ಶಿವಪ್ಪ ನಿಂಗಪ್ಪ ಅಡಕಿ (35), ತನ್ನ ಪತ್ನಿ ಜಯಮಾಲಾ (33) ಅವರ ಮೇಲೆ ಮಚ್ಚನಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಜಯಮಾಲಾ ಅವರ ತಲೆ, ಕೈ, ಕಾಲಿಗೆ … Continued

ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ; ತೀರ್ಪು ಪ್ರಕಟಿಸಿದ ಹೈಕೋರ್ಟ್​

ಬೆಂಗಳೂರು: ವಿಕೃತಕಾಮಿ ಉಮೇಶ್ ರೆಡ್ಡಿ (Umesh Reddy)ಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ (Karnataka high court)​ ಎತ್ತಿ ಹಿಡಿದಿದೆ. ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡು ಮಾಡುವಂತೆ ಹೈಕೋರ್ಟ್​​​ಗೆ ಉಮೇಶ್ ರೆಡ್ಡಿ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು. 10 ವರ್ಷಗಳಿಂದ ಒಂಟಿಯಾಗಿ ಜೈಲಿನಲ್ಲಿ ಸೆರೆಯಲ್ಲಿಡಲಾಗಿದೆ. ಕ್ಷಮಾದಾನ ಅರ್ಜಿ ಇತ್ಯರ್ಥ ವಿಳಂಬ ಮಾಡಲಾಗಿದೆ. ಇದರಿಂದ … Continued

ಭಾರತ -ಅಫ್ಘಾನಿಸ್ತಾನ ನಡುವೆ ವಿಮಾನಯಾನ ಪುನರಾರಂಭಕ್ಕೆ ಭಾರತಕ್ಕೆ ಪತ್ರ ಬರೆದ ತಾಲಿಬಾನ್‌..!

ನವದೆಹಲಿ: ಅಫ್ಘಾನಿಸ್ತಾನ ಮತ್ತು ಭಾರತದ ತಾಲಿಬಾನ್ ಆಡಳಿತದ ನಡುವಿನ ಮೊದಲ ಅಧಿಕೃತ ಸಂವಹನದಲ್ಲಿ, ಉಭಯ ದೇಶಗಳ ನಡುವೆ ವಿಮಾನಯಾನ ಪುನರಾರಂಭಕ್ಕಾಗಿ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದಲ್ಲಿ ಹೊಸ ಆಡಳಿತವು ಭಾರತ ಸರ್ಕಾರಕ್ಕೆ ಪತ್ರ ಬರೆದಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶಕ ಅರುಣ್ ಕುಮಾರ್ ಅವರನ್ನು ಉದ್ದೇಶಿಸಿ ಬರೆದ ಪತ್ರವನ್ನು ಅಫ್ಘಾನಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರದ ಹಂಗಾಮಿ ಸಚಿವ … Continued

ಸಿಧು ಜೊತೆ ಮಾತನಾಡಿದ ಚನ್ನಿ: ಎಲ್ಲ ವಿಷಯಗಳ ಬಗ್ಗೆ ಅವರೊಂದಿಗೆ ಮಾತನಾಡಲು ಸಿದ್ಧ ಎಂದ ಪಂಜಾಬ್‌ ಸಿಎಂ

ಚಂಡೀಗಡ:ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರು ರಾಜ್ಯ ಕಾಂಗ್ರೆಸ್ ನಾಯಕರು ಕುಳಿತು ಪಕ್ಷದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಮಾತನಾಡಬೇಕು ಹಾಗೂ ಪರಿಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ ಮತ್ತು ಬುಧವಾರ ನವಜೋತ್ ಸಿಂಗ್ ಸಿಧು ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ. . ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ನವಜೋತ್ ಸಿಂಗ್ ಸಿಧು ಇದ್ದಕ್ಕಿದ್ದಂತೆ ನಿರ್ಗಮಿಸಿದ ಒಂದು ದಿನದ ನಂತರ, ಮುಖ್ಯಮಂತ್ರಿ … Continued

ಕರ್ನಾಟಕದ ಕರಾವಳಿ, ಉತ್ತರ ಒಳನಾಡಿನಲ್ಲಿ ಇನ್ನೂ ನಾಲ್ಕು ದಿನ ಮಳೆ

ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನಲ್ಲಿ ಅಕ್ಟೋಬರ್ 3ರ ವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬಳ್ಳಾರಿ, … Continued

ಕೌಟುಂಬಿಕ ಕಲಹ; ಒಂದೇ ಮನೆಯ ಮೂವರ ದಾರುಣ ಕೊಲೆ‌‌

ರಾಯಚೂರು: ಸಮೀಪದ ಯರಮರಸ್ ಕ್ಯಾಂಪ್ ನಲ್ಲಿ ಕೌಟುಂಬಿಕ ಕಲಹದಿಂದ ಮೂವರ ದಾರುಣವಾಗಿ ಕೊಲೆಯಾದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಒಂದೇ ಕುಟುಂಬದ ಸಂತೋಷಿ(45) ವೈಷ್ಣವಿ (25) ಮತ್ತು ಆರತಿ(16)ಎಂಬುವವರ ಕೊಲೆಯಾದವರು ಎಂದು ಗುರುತಿಸಲಾಗಿದೆ. ಸಾವಿಗೆ ಕುಟುಂಬ ಕಲಹವೇ ಕಾರಣ ಎಂದು ಶಂಕಿಸಲಾಗಿದೆ. ಕಳೆದ ಆರು ತಿಂಗಳ ಹಿಂದೆಯಷ್ಟೇ ಮಗಳು ವೈಷ್ಣವಿ ಮದುವೆಯಾಗಿತ್ತು. ಆದರೆ, ಅಳಿಯ ಮಗಳ … Continued

ಜಾರ್ಖಂಡ್‌: ಮಹಿಳೆ -ಪ್ರೇಮಿಯನ್ನು ಬೆತ್ತಲೆಯಾಗಿ ಮೆರವಣಿಗೆ ನಡೆಸಿದ ಗ್ರಾಮಸ್ಥರು..!

ಆಘಾತಕಾರಿ ಘಟನೆಯಲ್ಲಿ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ ಗ್ರಾಮಸ್ಥರು ವಿವಾಹೇತರ ಸಂಬಂಧ ಹೊಂದಿದ್ದ ದಂಪತಿಯನ್ನು ಹಳ್ಳಿಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ. ಭಾಗಿಯಾಗಿರುವ ಕನಿಷ್ಠ 50-60 ಜನರ ಮೇಲೆ ಈಗ ಪೊಲೀಸರು ಈಗ ದಾಖಲಿಸಿದ್ದಾರೆ. ಆಘಾತಕಾರಿ ಪ್ರಸಂಗ ನಡೆದಿದ್ದು ದುಮ್ಕಾ ಜಿಲ್ಲೆಯ ಬಡ್ತಳ್ಳಿ ಪಂಚಾಯತ್ ವ್ಯಾಪ್ತಿಯ ಗ್ರಾಮದಲ್ಲಿ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರೇಮಿಯನ್ನು ವಿವಸ್ತ್ರಗೊಳಿಸಿ ಗ್ರಾಮಸ್ಥರು ಮೆರವಣಿಗೆ … Continued

ಥಾಣೆ: ಕೋವಿಡ್‌ ಬದಲು ರೇಬಿಸ್‌ ಚುಚ್ಚುಮದ್ದು ನೀಡಿದ ಆಸ್ಪತ್ರೆ : ವೈದ್ಯರು, ದಾದಿ ಅಮಾನತು

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವೈದ್ಯಕೀಯ ಕೇಂದ್ರದಲ್ಲಿ ಒಬ್ಬ ವ್ಯಕ್ತಿಗೆ ಕೋವಿಡ್ -19 ಲಸಿಕೆಯ ಬದಲು ರೇಬೀಸ್ ವಿರೋಧಿ ಔಷಧವನ್ನು ನೀಡಲಾಯಿತು. ಅದರ ನಂತರ ವೈದ್ಯರು ಮತ್ತು ದಾದಿಯರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳೀಯ ನಿವಾಸಿ ರಾಜಕುಮಾರ್ ಯಾದವ್ ಕೊರೊನಾವೈರಸ್ ಸೋಂಕಿನ ವಿರುದ್ಧ ಲಸಿಕೆ ತೆಗೆದುಕೊಳ್ಳಲು ಸೋಮವಾರ ಕಲ್ವಾ ಪ್ರದೇಶದ ನಾಗರಿಕ ವೈದ್ಯಕೀಯ ಕೇಂದ್ರಕ್ಕೆ … Continued