ಪಾಟಿ ಸವಾಲಿನ ವೇಳೆ ಸಂತ್ರಸ್ತೆ ಮುಂದೆ ಅತ್ಯಾಚಾರ ಕೃತ್ಯದ ಇಂಚಿಂಚೂ ವಿವರ: ವಿಚಾರಣಾ ನ್ಯಾಯಾಲಯದ ಬಗ್ಗೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ
ಮುಂಬೈ: ವಿಚಾರಣಾ ನ್ಯಾಯಾಲಯವೊಂದರಲ್ಲಿ ಪಾಟಿ ಸವಾಲಿನ ವೇಳೆ ಪ್ರತಿವಾದಿ ಪರ ವಕೀಲರು ಅತ್ಯಾಚಾರ ಕೃತ್ಯದ ಇಂಚಿಂಚೂ ವಿವರಗಳನ್ನು ಸಂತ್ರಸ್ತೆಯ ಮುಂದೆ ಸಲಹೆಯ ಹೆಸರಿನಲ್ಲಿ ನಡೆಸಿರುವುದು ಬಾಂಬೆ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದೆ. ಸಂತ್ರಸ್ತೆಗೆ ಕೇಳಲಾದ ಪ್ರಶ್ನೆಗಳು ಸೂಕ್ತ ರೀತಿಯ ಪಾಟಿ ಸವಾಲು ಎಂದು ಕರೆಸಿಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಾಧನಾ ಎಸ್ ಜಾಧವ್ ಮತ್ತು ಎಸ್. ವಿ. ಕೊತ್ವಾಲ್ … Continued