ಲಖಿಂಪುರ್ ಹಿಂಸಾಚಾರ ಘಟನೆ: ನನ್ನ ಮಗ ವಾಹನ ಚಲಾಯಿಸುತ್ತಿರಲಿಲ್ಲ, ಇದೆಲ್ಲಾ ಷಡ್ಯಂತ್ರ -ಕೇಂದ್ರ ಸಚಿವ ಅಜಯ್ ಮಿಶ್ರಾ

ಲಕ್ನೋ: ಲಖಿಮಪುರ ಖೇರಿ ಹಿಂಸಾಚಾರದ ಕುರಿತು ಕೇಂದ್ರ ಸಚಿವ ಅಜಯ್ ಮಿಶ್ರಾ ಪ್ರತಿಕ್ರಿಯೆ ನೀಡಿದ್ದು, ಘಟನೆ ನಡೆದ ವೇಳೆ ನನ್ನ ಪುತ್ರ ಆಶೀಶ್ ಮಿಶ್ರಾ ಅಲ್ಲಿ ಇರಲೇ ಇಲ್ಲ. ಪ್ರತಿಭಟನಾಕಾರ ಗುಂಪಿನಲ್ಲಿ ಕೆಲ ಸಮಾಜ ವಿರೋಧಿಗಳು ಶಾಮೀಲಾಗಿದ್ದಾರೆ. ಪ್ರತಿಭಟನಾಕಾರು ಕಲ್ಲು ತೂರಾಟ ನಡೆಸಿ ವಾಹನಗಳನ್ನು ಪಲ್ಟಿ ಮಾಡಿದರು. ಈ ವೇಳೆ ವಾಹನಗಳ ಕೆಳಗೆ ಸಿಲುಕಿ ರೈತರಿಬ್ಬರು … Continued

ಶಾಹೀನ್‌ ಚಂಡ ಮಾರುತ: ಒಮನ್‌ನಲ್ಲಿ ವಿಮಾನ ಹಾರಾಟ ಬಂದ್‌, ಯುಎಇನಲ್ಲಿ ಹೈ ಅಲರ್ಟ್‌ ಘೋಷಣೆ

ಯುಎಇ : ಶಾಹೀನ್‌ ಚಂಡಮಾರುತದ ಕಾರಣದಿಂದ ಯುಎಇನಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಒಮನ್‌ನಲ್ಲಿ ಒಳಬರುವ ಹಾಗೂ ಹೊರ ಹೋಗುವ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಶಾಹೀನ್ ಚಂಡಮಾರುತವು ಭಾನುವಾರ ಓಮನ್ ರಾಜಧಾನಿ ಮಸ್ಕತ್ ಅನ್ನು 116 ಕಿಲೋಮೀಟರ್ (72 ಮೈಲಿಗಳು) ವೇಗದಲ್ಲಿ ತಲುಪುತ್ತಿದೆ. ಇದು ವರ್ಗ 1 ರ ಉಷ್ಣವಲಯದ ಚಂಡಮಾರುತವಾಗಿ ಬಲಗೊಳ್ಳುವ ನಿರೀಕ್ಷೆಯಿದೆ … Continued

ಮಕ್ಕಳ ಕೋವಿಡ್ -19 ಲಸಿಕೆ ಅಭಿಯಾನದಲ್ಲಿ ಕೊಮೊರ್ಬಿಡಿಟಿ ಇರುವ ಮಕ್ಕಳಿಗೆ ಸರ್ಕಾರ ಆದ್ಯತೆ:ಎನ್‌ಟಿಜಿಐ ಮುಖ್ಯಸ್ಥ

ನವದೆಹಲಿ: ದೇಶದಲ್ಲಿ ಮಕ್ಕಳಿಗೆ ಕೋವಿಡ್ -19 ಲಸಿಕೆ ಹಾಕುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರೋಗ ಅಥವಾ ತೊಂದರೆ ಹೊಂದಿರುವ ಮಕ್ಕಳಿಗೆ ಆದ್ಯತೆ ನೀಡಲಿದೆ ಎಂದು ರಾಷ್ಟ್ರೀಯ ಇಮ್ಯುನೈಸೇಶನ್ ತಾಂತ್ರಿಕ ಸಲಹಾ ಗುಂಪು (ಎನ್‌ಟಿಜಿಐ) ಅಧ್ಯಕ್ಷೆ ಡಾ ಎನ್ ಕೆ ಅರೋರಾ ಭಾನುವಾರ ಹೇಳಿದ್ದಾರೆ. ನಾವು ಕೊಮೊರ್ಬಿಡಿಟಿ ಹೊಂದಿರುವ ಮಕ್ಕಳಿಗೆ ಕೋವಿಡ್ -19 ಲಸಿಕೆಯನ್ನು ಆದ್ಯತೆ ನೀಡುತ್ತೇವೆ. … Continued

ಕಾಬೂಲ್‌ ಬಾಂಬ್‌ ಸ್ಫೋಟ: ಮೃತರ ಸಂಖ್ಯೆ 12ಕ್ಕೆ ಏರಿಕೆ:32 ಜನರಿಗೆ ಗಾಯ

ಕಾಬೂಲ್(ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ಭಾನುವಾರ ನಡೆದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಏರಿದೆ. ಮತ್ತು 32 ಜನರು ಗಾಯಗೊಂಡಿದ್ದಾರೆ. ತಾಲಿಬಾನ್ ವಕ್ತಾರರ ಪ್ರಕಾರ, ಸ್ಫೋಟವು ಕಾಬೂಲ್‌ನ ಮಸೀದಿಯ ಹೊರಗೆ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಅಫ್ಘಾನ್ ಆಂತರಿಕ ಸಚಿವಾಲಯದ ವಕ್ತಾರ ಖಾರಿ ಸಯೀದ್ ಖೋಸ್ಟಿ ಹೇಳಿದ್ದಾರೆ. ಮಾಹಿತಿ ಮತ್ತು ಸಂಸ್ಕೃತಿಯ ಉಪ … Continued

ಲಖಿಂಪುರ್ ಖೇರಿ ಹಿಂಸಾಚಾರ: ಸಾವಿನ ಸಂಖ್ಯೆ 8 ಕ್ಕೆ ಏರಿಕೆ, ರೈತರಿಂದ ಸಚಿವರ ಮಗನ ವಿರುದ್ಧ ರೈತರ ಮೇಲೆ ಕಾರು ಓಡಿಸಿದ ಆರೋಪ

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು, ಎಂಟು ಜನರು ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಉಪಮುಖ್ಯಮಂತ್ರಿ ಕೇಶವ ಮೌರ್ಯ ಅವರ ಭೇಟಿ ಸಂದರ್ಭದಲ್ಲಿ ರೈತರು ಬೆಳಿಗ್ಗೆಯಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಹಿಂಸಾಚಾರದಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಜನರು … Continued

ಕುಮಟಾ ಕಡ್ಲೆ ತೀರದಲ್ಲಿ ಅಪರೂಪದ ೨ ಮೀಟರ್‌ ಉದ್ದದ ಮೂರಿಯಾ ಮೀನಿನ ಕಳೇಬರಪತ್ತೆ: ಚಂಡಮಾರುತ ಪ್ರಭಾವ ಜಲಚರಗಳಿಗೆ ಕುತ್ತು…?

posted in: ರಾಜ್ಯ | 0

ಕುಮಟಾ; ಭಾನುವಾರ ಸಂಜೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕಡ್ಲೆ ತೀರಕ್ಕೆ ಮೂರಿಯಾ ಮೀನಿನ ಕಳೆಬರಹ ಬಂದು ಬಿದ್ದಿದೆ. ಸುಮಾರು ೧.೫ಯಿಂದ ೨ ಮೀಟರ್‌ ಉದ್ದ ೨೦ ಕೆಜಿ ತೂಕ ಇರಬಹುದು ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಈ ಮೀನು ಸಮುದ್ರದಲ್ಲಿ ಬಂಡೆಯ ಮಧ್ಯದಲ್ಲಿ ಇರುತ್ತದೆ.ಅರಬ್ಬೀ ಸಮುದ್ರದ ಆಳದಲ್ಲಿ ದ್ವಿಪದ ಬಂಡೆಯ ಮಧ್ಯ ಹೆಚ್ಚಾಗಿ ಕಂಡುಬರುತ್ತದೆ. ಪರ್ಶಿಯನ್ … Continued

ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಮೇಲೆ ಕಾರು ಹಾಯ್ದು ಇಬ್ಬರು ರೈತರು ಸಾವು: ಕೇಂದ್ರ ಸಚಿವರ ಮಗ ಹಾಯಿಸಿದ ಆರೋಪ, ಸಚಿವರಿಂದ ನಿರಾಕರಣೆ

ಲಕ್ನೋ: ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭಾನುವಾರ ಟಿಕೊನಿಯಾ-ಬನ್ಬೀರ್‌ಪುರ ರಸ್ತೆಗೆ ಭೇಟಿ ನೀಡುವುದಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಕೃಷಿ ವಿರೋಧಿ ಪ್ರತಿಭಟನಾಕಾರರ ಗುಂಪಿನ ಮೇಲೆ ಎರಡು ಎಸ್‌ಯುವಿಗಳು ಹಾಯ್ದ ಪರಿಣಾಮ ಇಬ್ಬರು ರೈತರು ಮೃತಪಟ್ಟ ನಂತರ ಹಿಂಸಾಚಾರ ಆರಂಭವಾಯಿತು. ಹಾಗೂ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ … Continued

ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ಭಾನುವಾರ ಬಾಂಬ್ ಸ್ಫೋಟಿಸಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಕಾಬೂಲಿನ ಈದ್ಗಾ ಮಸೀದಿಯಲ್ಲಿ ಸೇರಿದ್ದವರನ್ನು ಈ ಬಾಂಬ್ ಸ್ಫೋಟದ ಮೂಲಕ ಗುರಿಯಾಗಿಸಲಾಗಿತ್ತು. ಬಾಂಬ್ ಸ್ಫೋಟ ಸಂಭವಿಸಿದಾಗ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿತ್ತು ಎಂದು ತಾಲಿಬಾನ್ ವಕ್ತಾರ ಝಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಇಬ್ಬರು ನಾಗರಿಕರು ಮೃತಪಟ್ಟಿದ್ದು, ಮೂವರು … Continued

ಕರ್ನಾಟಕದಲ್ಲಿ ಭಾನುವಾರ ಹೊಸದಾಗಿ 664 ಜನರಿಗೆ ಕೊರೊನಾ ದೃಢ

posted in: ರಾಜ್ಯ | 0

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಭಾನುವಾರ (ಅಕ್ಟೋಬರ್ 3) ಹೊಸದಾಗಿ 664 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,77,889 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದೇ ಸಮಯದಲ್ಲಿ ಕೊರೊನಾ ಸೋಂಕಿನಿಂದ 8 ಜನರು ಮೃತಪಟ್ಟಿದ್ದಾರೆ ಸೋಂಕಿತರ ಪೈಕಿ 29,27,740 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 37,819 … Continued

ಶಾಸಕರ ಕಾರಿಗೆ ಕಾರು-ಬೈಕ್ ಡಿಕ್ಕಿ: 58 ವರ್ಷದ ಮಹಿಳೆ ಸ್ಥಳದಲ್ಲೇ ಸಾವು, ಮೊಮ್ಮಗನಿಗೆ ಗಾಯ

posted in: ರಾಜ್ಯ | 0

ಹಾಸನ: ಶಾಸಕರ‌ ಕಾರು ಬೈಕೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ 58 ವರ್ಷದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗೀಡಾಗಿದ್ದು, ಆಕೆಯ ಮೊಮ್ಮಗ ಕೂಡ ಗಾಯಗೊಂಡ ಘಟನೆ ಹಾಸನ ಜಿಲ್ಲೆಯ ಬೇಲೂರಿನ ಹನುಮಂತನಗರದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಹನುಮಂತನಗರದ ನಿವಾಸಿ ಹೂವಮ್ಮ‌ (58) ಎಂಬವರು ಮೃತಪಟ್ಟವರ ಎಂದು ಗುರುತಿಸಲಾಗಿದೆ. ಈಕೆಯ ಮೊಮ್ಮಗ ಪ್ರೀತಂ ಗಾಯಗೊಂಡಿದ್ದಾರೆ. ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ … Continued