ಸರ್ಕಾರದ ಅನುಮತಿ ಇಲ್ಲದೆ ಎಸ್‌ಸಿ-ಎಸ್‌ಟಿ ಭೂಮಿ ಪರಿವರ್ತನೆ ಮಾಡುವಂತಿಲ್ಲ

ಬೆಂಗಳೂರು: ಸರ್ಕಾರದಿಂದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಮೀನನ್ನು ಭೂ ಪರಿವರ್ತನೆ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ಕೆಲವು ಭೂಮಿಗಳ ಪರಭಾಷೆ ನಿಷೇಧ) ಅನಿಯಮ 1978ರ ಪ್ರಕಾರ ಸರ್ಕಾರದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆದ ನಂತರವಷ್ಟೇ ಭೂ ಪರಿವರ್ತನೆ ಮಾಡಬೇಕು ಎಂದು ಸೂಚಿಸಲಾಗಿದೆ. … Continued

ಜಲಾಂತರ್ಗಾಮಿಯಿಂದ ಶಬ್ದಕ್ಕಿಂತ 9 ಪಟ್ಟು ವೇಗದ ಹೈಪರ್​ಸಾನಿಕ್ ಕ್ಷಿಪಣಿ ಯಶಸ್ವಿಯಾಗಿ ಉಡಾವಣೆ ಮಾಡಿದ ರಷ್ಯಾ

ಮಾಸ್ಕೊ: ಶಬ್ದದ ವೇಗಕ್ಕಿಂತಲೂ ಹಲವು ಪಟ್ಟು ವೇಗದಲ್ಲಿ ಸಂಚರಿಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಹೈಪರ್​ಸಾನಿಕ್ ಕ್ಷಿಪಣಿಯೊಂದನ್ನು ರಷ್ಯಾ ನೌಕಾಪಡೆಅಣುಶಕ್ತಿ ಚಾಲಿತ ಜಲಾಂತರ್ಗಾಮಿಯಿಂದ (nuclear submarine) ಸೋಮವಾರ ಪರೀಕ್ಷಾರ್ಥ ಮಾಡಿದ ಉಡಾವಣೆ ಯಶಸ್ವಿಯಾಗಿದೆ. ಪರೀಕ್ಷೆಯು ಯಶಸ್ವಿಯಾಗಿದ್ದು, ನಿಗದಿಪಡಿಸಿದ್ದ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ರಷ್ಯಾದ ರಕ್ಷಣಾ ಇಲಾಖೆ ತಿಳಿಸಿದೆ. ಬರೆಂಟ್ಸ್​ ಸಾಗರದಲ್ಲಿದ್ದ ಅಣಕು ಗುರಿಯನ್ನು ಸೆವೆರೊಡ್ವಿನ್​ಸ್ಕ್​ ಜಲಾಂತರ್ಗಾಮಿಯಿಂದ ಹಾರಿಬಿಟ್ಟ … Continued

ಕೇರಳದಲ್ಲಿ ಇಳಿಕೆ ಪ್ರವೃತ್ತಿ ತೋರಿಸುತ್ತಿರುವ ಹೊಸ ಕೋವಿಡ್ -19 ಪ್ರಕರಣಗಳು

ತಿರುವನಂತಪುರಂ: ಆಗಸ್ಟ್‌ನಲ್ಲಿ ಓಣಂ ಹಬ್ಬದ ನಂತರ 30,000 ದಾಟಿದ ನಂತರ ದೈನಂದಿನ ಹೊಸ ಪ್ರಕರಣಗಳಲ್ಲಿ ಇಳಿಕೆ ಕಾಣುತ್ತಿರುವ ಕೇರಳ, ಅನೇಕ ದಿನಗಳ ನಂತರ ಸೋಮವಾರ 10,000 ಕ್ಕಿಂತ ಕಡಿಮೆ ಪ್ರಕರಣಗಳನ್ನು ದಾಖಲಿಸಿದೆ. ಸೋಮವಾರ ಕೇರಳವು 8,850 ಹೊಸ ಸೋಂಕುಗಳು ಮತ್ತು 149 ಸಾವುಗಳನ್ನು ದಾಖಲಿಸಿದೆ. ಹೊಸ ಪ್ರಕರಣಗಳು 10,000 ಕ್ಕಿಂತ ಕಡಿಮೆ ಇರುವುದಕ್ಕೆ ಒಂದು ಕಾರಣವೆಂದರೆ … Continued

ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ೫೦ ಸಾವಿರ ಪರಿಹಾರ ನೀಡಿ: ಸುಪ್ರೀಂ ಕೋರ್ಟ್‌ ಸೂಚನೆ

ನವದೆಹಲಿ: ಮಾರಕ ಕೊರೊನಾಗೆ ಮೃತಪಟ್ಟವರ ಕುಟುಂಬಕ್ಕೆ ೫೦ ಸಾವಿರ ರೂ. ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯಮಮಾವಳಿ ಪ್ರಕಾರ ಪರಿಹಾರ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗಾಗಿ ಪರಿಹಾರ ನೀಡುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಚಾರ ಮಾಡಬೇಕು ಎಂದು ಸುಪ್ರೀಂಕೋರ್ಟ್ ಎಲ್ಲ ರಾಜ್ಯ ಸರ್ಕಾರಗಳಿಗೂ ನಿರ್ದಶನ ನೀಡಿದೆ. … Continued

ಕರ್ನಾಟಕದಲ್ಲಿ ಏಳೆಂಟು ತಿಂಗಳ ನಂತರ 400ಕ್ಕಿಂತ ಕೆಳಕ್ಕೆ ಕುಸಿದ ಕೊರೊನಾ ದೈನಂದಿನ ಸೋಂಕು..!

ಬೆಂಗಳೂರು: ರಾಜ್ಯದಲ್ಲಿಂದು ಬಹಳ ದಿನಗಳ ನಂತರ ಸೋಮವಾರ ಅತಿ ಕಡಿಮೆ ಕೊರೊನಾ ಸೋಂಕು ಧೃಢಪಟ್ಟಿದೆ. ರಾಜ್ಯದಲ್ಲಿ ಇಂದು (ಸೋಮವಾರ) ಹೊಸದಾಗಿ 397 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 13 ಮದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇವೇಳೆ 693 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 11,992 ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. … Continued

ಕೈ ಕೊಟ್ಟ ವಾಟ್ಸಾಪ್, ಫೇಸ್ ಬುಕ್, ಇನ್‍ಸ್ಟಾಗ್ರಾಂ : ಬಳಕೆದಾರರು ಕಂಗಾಲು

ಬೆಂಗಳೂರು: ಸೋಷಿಯಲ್ ಮೀಡಿಯಾ ಹಾಗೂ ಮೆಸೇಜಿಂಗ್ ಆಪ್​ಗಳನ್ನು ಬಳಸುತ್ತಿರುವವರಿಗೆ ಇಂದು (ಸೋಮವಾರ) ಇದ್ದಕ್ಕಿದ್ದಂತೆ ಸರ್ವರ್ ​ ಕೈಕೊಟ್ಟಿದೆ. ಸೋಷಿಯಲ್​ ಮೀಡಿಯಾ ಹಾಗೂ ಮೆಸೇಜಿಂಗ್ ದಿಗ್ಗಜ ಕಂಪನಿ ಆಗಿರುವ ಫೇಸ್​ಬುಕ್​, ವಾಟ್ಸ್​ಆಪ್​, ಇನ್​ಸ್ಟಾಗ್ರಾಮ್​ ಸರ್ವರ್ ಡೌನ್​ ಆಗಿದ್ದು, ಸಂವಹನ ವ್ಯವಸ್ಥೆಯಲ್ಲಿ ಸಾಕಷ್ಟು ತೊಂದರೆಯಾಗಿದೆ. ಈ ಬಗ್ಗೆ ಬಳಕೆದಾರರು ಟ್ವಿಟರ್​ನಲ್ಲಿ ಸಮಸ್ಯೆ ಹೇಳಿಕೊಳ್ಳಲಾರಂಭಿಸಿದ್ದು, ವಾಟ್ಸ್​​ಆಪ್ ಕುರಿತು ಲಕ್ಷಾಂತರ ಟ್ವೀಟ್​ … Continued

ಧಾರವಾಡ: ಪಂ.ವೆಂಕಟೇಶಕುಮಾರ್‌ಗೆ ಪಂ.ರಾಜಗುರು ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಧಾರವಾಡ : ಸ್ವರ ಸಮ್ರಾಟ್ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ ಪಂ.ಬಸವರಾಜ ರಾಜಗುರು ಜನ್ಮದಿನಾಚರಣೆ ಅಂಗವಾಗಿ ನೀಡುವ ರಾಷ್ಟ್ರೀಯ ಪ್ರಶಸ್ತಿಯನ್ನು ಹಿರಿಯ ಗಾಯಕ, ಪದ್ಮಶ್ರೀ ಪಂಡಿತ ಎಂ.ವೆಂಕಟೇಶಕುಮಾರ ಅವರಿಗೆ ಸೋಮವಾರ ಪ್ರದಾನ ಮಾಡಲಾಯಿತು. ಪಂ. ಬಸವರಾಜ ರಾಜಗುರು ಅವರ 101ನೇ ನೇ ಜನ್ಮದಿನ ಅಂಗವಾಗಿ ನಗರದ ಸೃಜನಾ ರಂಗಮಂದಿರದಲ್ಲಿ ನಡೆದ ಸಂಗೀತೋತ್ಸವದಲ್ಲಿ … Continued

ಆರೆಸ್ಸೆಸ್‌ ವಿರುದ್ಧ ಹೇಳಿಕೆ : ಜಾವೇದ್ ಅಖ್ತರ್ ವಿರುದ್ಧ ಎಫ್‍ಐಆರ್

ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ಹೇಳಿಕೆ ನೀಡಿರುವ ಆರೋಪದ ಮೇರೆಗೆ ಬಾಲಿವುಡ್‌ನ ಖ್ಯಾತ ಗೀತೆ ರಚನೆಕಾರ ಜಾವೇದ್ ಅಖ್ತರ್ ಅವರ ವಿರುದ್ಧ ವಕೀಲ ಸಂತೋಷ್ ದುಬೆ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ. ಮುಲುಂಡ್ ಪೊಲೀಸ್ ಠಾಣೆಯಲ್ಲಿ ವಕೀಲ ಸಂತೋಷ್ ದುಬೆ ನೀಡಿದ ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಾಗಿದೆ. ಐಪಿಸಿ … Continued

ಡ್ರಗ್ಸ್‌ ಪ್ರಕರಣ: ಆರ್ಯನ್ ಖಾನ್‌ ಸೇರಿ ಮೂವರು ಮತ್ತೆ ಮೂರು ದಿನ ಎನ್ ಸಿಬಿ ವಶಕ್ಕೆ

ಮುಂಬೈ: ಮಾದಕ ವಸ್ತು ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ ಮೂರು ಮಂದಿಗೆ ಮುಂಬೈನ ಕಿಲ್ಲಾ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಅಲ್ಲದೆ, ಅಕ್ಟೋಬರ್‌ 7ರ ತನಕ ಎನ್‌ಸಿಬಿ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಪುತ್ರನಿಗೆ ಜಾಮೀನು ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಬಾಲಿವುಡ್ ನಟ ಶಾರುಖ್ ಖಾನ್ … Continued

ಪಂಡೋರಾ ಪೇಪರ್ಸ್‌ ಲೀಕ್‌: ಪ್ರಕರಣಗಳ ಕುರಿತು ತನಿಖೆ ಎಂದ ಕೇಂದ್ರ ಸರ್ಕಾರ

ನವದೆಹಲಿ: ಸಿಬಿಡಿಟಿ ಅಧ್ಯಕ್ಷರ ನೇತೃತ್ವದ ಮಲ್ಟಿ ಏಜೆನ್ಸಿ ಗುಂಪು ಪಂಡೋರಾ ಪೇಪರ್ಸ್ ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಹೇಳಿಕೆ ಸೋಮವಾರ ತಿಳಿಸಿದೆ. 300 ಕ್ಕೂ ಹೆಚ್ಚು ಶ್ರೀಮಂತ ಭಾರತೀಯರ ಹೆಸರುಗಳು ಸೇರಿದಂತೆ ‘ಪಂಡೋರಾ ಪೇಪರ್ಸ್’ ನಲ್ಲಿ ವಿಶ್ವದಾದ್ಯಂತ ಶ್ರೀಮಂತ ವ್ಯಕ್ತಿಗಳ ಆರ್ಥಿಕ ಆಸ್ತಿಗಳನ್ನು ಪತ್ತೆಹಚ್ಚಿವೆ, ಮತ್ತು ಅನೇಕ ಭಾರತೀಯರು ಈ ಆರೋಪಗಳನ್ನು … Continued