ಲಖೀಂಪುರ್ ಹಿಂಸಾಚಾರ :ಇಂದು ಸುಪ್ರೀಂಕೋರ್ಟಿನಲ್ಲಿ ವಿಚಾರಣೆ

ನವದೆಹಲಿ: ಲಖೀಂಪುರ್ ಖೇರ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ಗುರುವಾರ ವಿಚಾರಣೆ ನಡೆಯಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ. ಉತ್ತರ ಪ್ರದೇಶದ ಲಖೀಂಪುರ್ – ಖೇರ್ ಹಿಂಸಾಚಾರ ಘಟನೆ ಸಂಬಂಧ ಸುಪ್ರೀಂಕೋರ್ಟ್ ಬುಧವಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಲಖೀಂಪುರ್ ಖೇರ್ ನಲ್ಲಿ ಭಾನುವಾರ ಸಂಭವಿಸಿದ ಹಿಂಸಾಚಾರದಲ್ಲಿ ನಾಲ್ವರು … Continued

ಕ್ರೂಸ್‌ ಹಡಗು ಡ್ರಗ್ಸ್ ಪ್ರಕರಣ: ಇನ್ನೂ ನಾಲ್ವರನ್ನು ಎನ್‌ಸಿಬಿ ವಶಕ್ಕೆ ನೀಡಿದ ಮುಂಬೈ ಕೋರ್ಟ್‌

ಮುಂಬೈ: ಕ್ರೂಸ್‌ ಹಡಗು ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಇನ್ನೂ ನಾಲ್ವರನ್ನು ಮುಂಬೈನ ನ್ಯಾಯಾಲಯವೊಂದು ಅಕ್ಟೋಬರ್ 14ರ ವರೆಗೆ ಎನ್‌ಸಿಬಿ ವಶಕ್ಕೆ ಒಪ್ಪಿಸಿದೆ. ಆ ಮೂಲಕ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಒಟ್ಟು 16 ಮಂದಿಯನ್ನು ಎನ್‌ಸಿಬಿ ವಶಕ್ಕೆ ನೀಡಲಾಗಿದೆ. ಗೋಪಾಲ್ ಆನಂದ್, ಸಮೀರ್ ಸೈಗಲ್, ಮಾನವ್ ಸಿಂಘಾಲ್ ಮತ್ತು … Continued

ಮಸೀದಿಗಳಲ್ಲಿನ ಧ್ವನಿವರ್ಧಕಗಳಿಂದ ಶಬ್ದ ಮಾಲಿನ್ಯ: ಆಕ್ಷೇಪಣೆ ಸಲ್ಲಿಕೆಗೆ ರಾಜ್ಯ ಸರ್ಕಾರಕ್ಕೆ ತಿಂಗಳ ಕಾಲಾವಕಾಶ ನೀಡಿದ ಹೈಕೋರ್ಟ್‌

posted in: ರಾಜ್ಯ | 0

ಬೆಂಗಳೂರು: ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳಿಂದ ಅಗತ್ಯಕ್ಕಿಂತ ಹೆಚ್ಚು ಶಬ್ದಮಾಲಿನ್ಯ ಉಂಟಾಗುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಒಂದು ತಿಂಗಳ ಕಾಲಾವಕಾಶ ನೀಡಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ. ಪಿ.ರಾಕೇಶ್ ಮತ್ತು ಅಯ್ಯಪ್ಪ ದಾಸ್ ಬಾಲಗೋಪಾಲ್ ಸೇರಿದಂತೆ ಥಣಿಸಂದ್ರ ಮುಖ್ಯ ರಸ್ತೆಯ ಐಕಾನ್ … Continued

ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ

ಕುಮಟಾ;ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ಗುರುವಾರದಿಂದ ನವರಾತ್ರಿ ಉತ್ಸವ ಆರಂಭವಾಗಲಿದೆ.ಶ್ರೀದೇವಾಲಯದಲ್ಲಿ ಪ್ರತಿವರ್ಷದಂತೆ ನವರಾತ್ರಿ ಪೂಜಾ ಕಾರ್ಯಕ್ರಮ ಗುರುವಾರ ಮುಂಜಾನೆಯಿಂದ ಆರಂಭವಾಗಲಿದೆ. ಶ್ರೀದುರ್ಗಾಪಾರಾಯಣ,ಸರ್ವಾಂಕಾರ ಪೂಜೆ,ಸರ್ವಾಪೂಜಾಸೇವೆ,ಫಲಪಂಚಾಮೃತ ಪೂಜೆ,ಪಂಚಾವಾದ್ಯ ಸೇವೆ ಮಹಾಮಂಗಳಾರತಿ ಪೂಜೆ ದಿನಾಂಕ ೧೫ ಶುಕ್ರವಾರದ ತನಕ ಪ್ರತಿನಿತ್ಯ ನಡೆಯಲಿದೆ.ದಿನಾಂಕ ೧೧ ರಂದು ಶಾರದಾಸ್ಥಾಪನೆ,೧೨ ತ್ರಿದಿನ ದೇವಿ ಪೂಜೆ,೧೩ ರಂದು ದುರ್ಗಾಷ್ಟಮಿ,೧೪ ರಂದು ಮಹಾನವಮಿ ಹಾಗೂ ೧೫ ಶುಕ್ರವಾರದಂದು … Continued

ಬಡಾಲ ಅಂಕಲಗಿ: ಮನೆ ಕುಸಿದು ಒಂದೇ ಕುಟುಂಬದ ಏಳು ಜನರು ಸಾವು

posted in: ರಾಜ್ಯ | 0

ಬೆಳಗಾವಿ : ಧಾರಾಕಾರ ಮಳೆಗೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆ ಕುಸಿದ ಪರಿಣಾಮ ಒಟ್ಟು ಏಳು ಜನ ಮೃತಪಟ್ಟ ಘಟನೆ ನಡೆದ ಬಗ್ಗೆ ಬುಧವಾರ ವರದಿಯಾಗಿದೆ, ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಸ್ಥಳೀಯ ಖನಗಾವಿ ಕುಟುಂಬದ 7 ಜನರು  ಮೃತಪಟ್ಟಿದ್ದಾರೆ. ಮನೆಯೊಳಗೆ ಸಿಲುಕಿದ ಇನ್ನಿಬ್ಬರನ್ನು ಸುರಕ್ಷಿತವಾಗಿ ಹೊರ ತಂದು ಆಸ್ಪತ್ರೆಗೆ … Continued

ಪತ್ರಕರ್ತ ಹಬ್ಬುಗೆ ಜೀವಮಾನ ಸಾಧನೆ, ಪ್ರತಿಮಾಗೆ ‘ಅವ್ವ ಪತ್ರಕರ್ತೆ’ ಪ್ರಶಸ್ತಿ, ಅಕ್ಟೋಬರ್‌ ೧೦ರಂದು ಪ್ರಶಸ್ತಿ ಪ್ರದಾನ

posted in: ರಾಜ್ಯ | 0

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ದಿ. ೧೦ರಂದು ರವಿವಾರ ಬೆಳಗ್ಗೆ ೧೧.೩೦ಕ್ಕೆ ಹುಬ್ಬಳ್ಳಿಯ ವಿದ್ಯಾನಗರದ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪೂರ್ವ ಶಾಸಕ … Continued

ಬರೋಬ್ಬರಿ 2,700 ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಪತ್ತೆ..!

ಇಸ್ರೇಲ್​ನ ಜೆರುಸಲೇಂನಲ್ಲಿ ಎರಡು ಸಾವಿರ ವರ್ಷಗಳಗಿಂತಲೂ ಹಿಂದಿನ ಐಷಾರಾಮಿ ಟಾಯ್ಲೆಟ್ ಒಂದು ಪತ್ತೆಯಾಗಿದೆ…! ಇಸ್ರೇಲ್​ನ ಹಳೆಯ ನಗರವೊಂದರಲ್ಲಿ ಸುಮಾರು 2,700 ವರ್ಷಗಳ ಹಿಂದಿನ ಕಲ್ಲಿನ ಅಪರೂಪದ ಟಾಯ್ಲೆಟ್ ಪತ್ತೆಯಾಗಿದ್ದು, ಕುಳಿತುಕೊಳ್ಳಲು ಆರಾಮದಾಯಕವಾಗುವ ರೀತಿಯಲ್ಲಿ ಕಲ್ಲನ್ನು ವಿನ್ಯಾಸಗೊಳಿಸಲಾಗಿದೆ. ಇಸ್ರೇಲಿ ಪುರಾತನ ಪ್ರಾಧಿಕಾರವು ನಯವಾದ, ಕೆತ್ತಿದ ಸುಣ್ಣದ ಕಲ್ಲಿನ ಶೌಚಾಲಯ ಪತ್ತೆಯಾಗಿದೆ ಎಂದು ತಿಳಿಸಿದೆ. ವಿಶಾಲವಾದ ಮಹಲಿನಲ್ಲಿ ಇದು … Continued

ಬೆಂಗಳೂರಿನಲ್ಲಿ ತಾಯಿ, ಎರಡೂವರೆ ವರ್ಷದ ಮಗುವಿನ ಹತ್ಯೆ

posted in: ರಾಜ್ಯ | 0

ಬೆಂಗಳೂರು: ನಗರದ ಬೇಗೂರು ಠಾಣಾ ವ್ಯಾಪ್ತಿಯ ಚೌಡೇಶ್ವರಿ ಲೇಔಟ್​ನಲ್ಲಿ ತಾಯಿ ಮತ್ತು ಎರಡೂವರೆ ವರ್ಷದ ಮಗುವನ್ನು ಹತ್ಯೆ ಮಾಡಲಾಗಿದೆ. ಇಬ್ಬರನ್ನೂ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ತಾಯಿ ಮತ್ತು ಮಗುವಿನ ಮೃತದೇಹಗಳು ಬುಧವಾರ ಪತ್ತೆಯಾಗಿವೆ. ಸಂಬಂಧಿಕರು ಮನೆಗೆ ಬಂದಾಗ ಕೊಲೆಯ ಘಟನೆ ಬೆಳಕಿಗೆ ಬಂದಿದೆ. ಗಂಡ ಮುಂಜಾನೆ ಕೆಲಸಕ್ಕೆ ಹೋದ ಬಳಿಕ ಕೊಲೆ ಆಗಿರುವ ಶಂಕೆ … Continued

4,445 ಕೋಟಿ ರೂ.ಗಳ ವೆಚ್ಚದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಕೇಂದ್ರ ಒಪ್ಪಿಗೆ

ನವದೆಹಲಿ: ದೇಶದಲ್ಲಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ 4,445 ಕೋಟಿ ರೂಪಾಯಿ ವೆಚ್ಚದಲ್ಲಿ ಏಳು ಜವಳಿ ಪಾರ್ಕ್ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಪಿಎಂ ಮೇಘಾ ಇಂಟಿಗ್ರೇಟೆಡ್ ಟೆಕ್ಸ್ ಟೈಲ್ಸ್ ರೀಜನ್ ಅಂಡ್ ಅಪಾರೆಲ್ಸ್ – ಪಿಎಂ ಮಿತ್ರ ಪಾರ್ಕ್ ದೇಶದ ವಿವಿಧ ಕಡೆ ಆರಂಭಿಸಲು ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ. … Continued

ರಸಾಯನಶಾಸ್ತ್ರದಲ್ಲಿ ಬೆಂಜಮಿನ್ ಲಿಸ್ಟ್, ಡೇವಿಡ್ ಮ್ಯಾಕ್ ಮಿಲನ್ ಗೆ ನೊಬೆಲ್ ಪ್ರಶಸ್ತಿ

ಸ್ಟಾಕ್‌ಹೋಮ್: ರಸಾಯನಶಾಸ್ತ್ರದಲ್ಲಿ ಅಸಿಮ್ಮೆಟ್ರಿಕ್ ಆರ್ಗನೊಕಟಾಲಿಸಿಸ್ ಅಭಿವೃದ್ಧಿಗಾಗಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ವಿಜ್ಞಾನ ಪ್ರಸಕ್ತ ಸಾಲಿನ ನೊಬೆಲ್ ಪ್ರಶಸ್ತಿ ಘೋಷಿಸಿದೆ. ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜರ್ಮನಿಯ ಬೆಂಜಮಿನ್ ಲಿಸ್ಟ್ ಮತ್ತು ಯುಎಸ್ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಡೇವಿಡ್ ಡಬ್ಲ್ಯೂಸಿ ಮ್ಯಾಕ್‌ಮಿಲನ್‌ ಅವರಿಗೆ ನೀಡಲಾಗಿದೆ. “ಅಣುಗಳನ್ನು ನಿರ್ಮಿಸುವುದು ಒಂದು ಕಷ್ಟಕರ ಕಲೆ. ಬೆಂಜಮಿನ್ ಲಿಸ್ಟ್ ಮತ್ತು ಡೇವಿಡ್ ಮ್ಯಾಕ್‌ಮಿಲನ್‌ಗೆ … Continued