ವಿಶ್ವ ಕುಸ್ತಿ ಚಾಂಪಿಯನ್ ಶಿಪ್; ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಅಂಶು ಮಲಿಕ್

ಓಸ್ಲೋ: ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯೆಂದು ಕುಸ್ತಿಪಟು ಅಂಶು ಮಲಿಕ್ ಭಾಜನರಾಗಿದ್ದಾರೆ. ನಾರ್ವೆಯ ಓಸ್ಲೋದಲ್ಲಿ ಗುರುವಾರ ನಡೆದ 57 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ 2016ರ ಒಲಿಂಪಿಕ್ ಚಾಂಪಿಯನ್ ಹೆಲೆನ್ ಲೌಸಿ ಮಾರೌಲಿ ವಿರುದ್ಧ ಸೋಲುವ ಮೂಲಕ ಅಂಶು ಮಲಿಕ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. ವಿಶ್ವ … Continued

ಕರ್ನಾಟಕದಲ್ಲಿ ದೈನಂದಿನ ಕೊರೊನಾ ಸೋಂಕು ಮತ್ತಷ್ಟು ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದೆ. ರಾಜ್ಯದಲ್ಲಿ ಇಂದು (ಗುರುವಾರ) ಹೊಸದಾಗಿ 442 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 7 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇವೇಳೆ 635 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 11,619 ರಷ್ಟು ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಬಾಗಲಕೋಟೆ, … Continued

ಬಡಾಲ ಅಂಕಲಗಿ ದುರಂತ :ಮೃತರ ಕುಟುಂಬಕ್ಕೆ 35 ಲಕ್ಷ ರೂ. ಚೆಕ್ ವಿತರಿಸಿದ ಸಚಿವ ಕಾರಜೋಳ

ಬೆಳಗಾವಿ :ಧಾರಾಕಾರ ಮಳೆಯಿಂದ ಮನೆ ಗೋಡೆ ಕುಸಿದು ಒಂದೇ ಕುಟುಂಬದ 7 ಜನರು ಮೃತಪಟ್ಟಿರುವ ಬಡಾಲ ಅಂಕಲಗಿ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಗುರುವಾರ(ಅ.7) ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮನೆಯ ಗೋಡೆ ಕುಸಿದು ಏಳು ಜನರು ಪ್ರಾಣ ಕಳೆದುಕೊಂಡಿರುವುದು ಬಹಳ ನೋವಿನ ಸಂಗತಿ. ನಾವು ಸರ್ಕಾರದಿಂದ ಪರಿಹಾರ ಕೊಡಬಹುದು; … Continued

ಶಿಕ್ಷಣ ಸಚಿವರಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್- ರಸಾಯನ ಶಾಸ್ತ್ರ ಪ್ರಯೋಗಾಲಯ ಉದ್ಘಾಟನೆ

ಕುಮಟಾ; ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಮಹತ್ವ ನೀಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಮಹತ್ವ ನೀಡುತ್ತಿದ್ದು .ಭಾರತ ಶಿಕ್ಷಣದಲ್ಲಿ ಯಾವ ದೇಶಕ್ಕಿಂತ ಕಡಿಮೆ ಇಲ್ಲ. ಜಗತ್ತಿನ ಪ್ರಮುಖ ದೇಶದಲ್ಲಿ ಶೇ.೫೦ ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಭಾರತೀಯರಿದ್ದಾರೆ. ಇಂದು ಭಾರತದ ಹಳ್ಳಿ-ಹಳ್ಳಿಗಳಲ್ಲಿ ಪುರೋಹಿತರು ಸಿಗದಿದ್ದರೂ ಸೋಪ್ಟ್‌ವೇರ್ ಎಂಜಿನಿಯರ್ ಸಿಗುತ್ತಿದ್ದಾರೆ ಎಂದು … Continued

ಮೂಢನಂಬಿಕೆಗೆ ಸಡ್ಡು ಹೊಡೆದು ಚಾಮರಾಜನಗರಕ್ಕೆ ಬಂದ ಸಿಎಂ

ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಸಿಮ್ಸ್ ಬೋಧನಾ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡಿ ಮೂಢನಂಬಿಕೆಯನ್ನು ಮೆಟ್ಟಿನಿಂತಿದ್ದಾರೆ. ಮೈಸೂರಿನಿಂದ ನಂಜನಗೂಡು ಮಾರ್ಗವಾಗಿ ರಸ್ತೆ ಮೂಲಕ ಆಗಮಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ನಗರದ ಬೈಪಾಸ್ ರಸ್ತೆಯ ಬಳಿ ಬಿಜೆಪಿ ಮುಖಂಡರು ಶಾಲು, ಹಾರ ಹಾಕಿ ಸ್ವಾಗತಿಸಿದರು. ಬಳಿಕ ಬೊಮ್ಮಾಯಿ … Continued

ಲಖಿಂಪುರ್ ಖೇರಿ: ಪಂಜಾಬ್ ಗಡಿಯಲ್ಲಿ ಸಿಧು ಬಂಧನ, ಕೇಂದ್ರ ಸಚಿವರ ಮಗನ ವಿಚಾರಣೆಗೆ ಕರೆಸಿದ ಪೊಲೀಸರು

ನವದೆಹಲಿ: ಲಖಿಂಪುರ್ ಖೇರಿ ಘಟನೆಯಲ್ಲಿ ರೈತರ ಮೇಲೆ ವಾಹನ ಹರಿಸಿದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ ಬಳಿಕ ಕೇಂದ್ರ ಸಚಿವರ ಮಗ ಆಶಿಶ್ ಮಿಶ್ರಾನನ್ನು (Union Minister Son Ashish Mishra) ವಿಚಾರಣೆಗೆ ಕರೆಸಿಕೊಳ್ಳಲಾಗಿದೆ ಎಂದು ಲಕ್ನೋ ಐಜಿ ಲಕ್ಷ್ಮಿ ಸಿಂಗ್ ಗುರುವಾರ ತಿಳಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ (ನಿವೃತ್ತ) ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರನ್ನು … Continued

ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ನಾಲ್ವರ ದುರ್ಮರಣ; ಓರ್ವನ ರಕ್ಷಿಸಲು ಹೋಗಿ ಮತ್ತೆ ಮೂವರು ಸಾವು

ಬಾಗಲಕೋಟೆ: ನಾರಾಯಣಪುರ ಅಣೆಕಟ್ಟು ಹಿನ್ನೀರಿನಲ್ಲಿ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಬಳಿ ಓರ್ವ ವ್ಯಕ್ತಿಯನ್ನು ರಕ್ಷಿಸಲು ಹೋಗಿ ನಾಲ್ವರು ಮೃತಪಟ್ಟಿದ್ದಾರೆ. ಶಿವಪ್ಪ ಅಮಲೂರು, ಯಮನಪ್ಪ ಅಮಲೂರು(45), ಶರಣಗೌಡ ಬಿರಾದರ್(30) ಮತ್ತು ಪರಶು ಎಂಬುವವರು ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಮಾನಸಿಕ ಅಸ್ವಸ್ಥ ಶಿವಪ್ಪ ಅಮಲೂರು ಎಂಬುವವರು ನದಿಯಲ್ಲಿ ಮುಳುಗಿದ್ದಾರೆ. … Continued

2021: ತಾಂಜಾನಿಯಾ ಕಾದಂಬರಿಕಾರ ಅಬ್ದುಲ್​ರಜಾಕ್ ಗುರ್ನಾಹ್​ಗೆ ಸಾಹಿತ್ಯದ ನೊಬೆಲ್

ತಾಂಜಾನಿಯಾ ದೇಶದ ಕಾದಂಬರಿಕಾರ ಅಬ್ದುಲ್​ರಜಾಕ್ ಗುರ್ನಾಹ್ ಅವರಿಗೆ 2021ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಬುಧವಾರ ಮಹತ್ವದ ಈ ಪ್ರಶಸ್ತಿಗೆ ಅಬ್ದುಲ್​ರಜಾಕ್ ಗುರ್ನಾಹ್ ಅವರ ಹೆಸರನ್ನು ಘೋಷಿಸಿದೆ. ಗಲ್ಫ್ ದೇಶಗಳಲ್ಲಿನ ನಿರಾಶ್ರಿತರ ಮೇಲೆ ವಸಾಹತುಶಾಹಿಯ ಪರಿಣಾಮ ಮತ್ತು ಅವರ ಸಂಸ್ಕೃತಿಯಲ್ಲಿ ಒಳನುಸುಳುವಿಕೆಯ ಕುರಿತು ರಾಜಿಯಿಲ್ಲದ ಮತ್ತು ಉದಾತ್ತವಾದ … Continued

ಡ್ರಗ್ಸ್‌ ಪ್ರಕರಣ: ಆರ್ಯನ್‌ ಖಾನ್‌ಗೆ ಇಂದೂ ಜಾಮೀನು ಸಿಗಲಿಲ್ಲ

ಮುಂಬೈ : ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ. ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತನಾಗಿರುವ ಆರ್ಯನ್‌ ಖಾನ್‌ಗೆ ಕಿಲ್ಲಾ ನ್ಯಾಯಾಲಯ ಅಕ್ಟೋಬರ್‌ 9ರ ವರೆಗೆ ಎನ್‌ಸಿಬಿ ಕಸ್ಟಡಿಗೆ ವಹಿಸಿ ಆದೇಶ ಮಾಡಿದೆ. ಜಾಮೀನು ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಶಾರೂಖ್‌ ಖಾನ್‌ ದಂಪತಿಗೆ ನಿರಾಸೆಯಾಗಿದೆ. ಮುಂಬೈ ಸಮುದ್ರದ ಮಧ್ಯದಲ್ಲಿ ಹಡಗಿನಲ್ಲಿ ನಡೆದಿದ್ದ … Continued

ಪಾಕಿಸ್ತಾನ: ಭೂಕಂಪಕ್ಕೆ 42 ಮಂದಿ ಸಾವು

ಇಸ್ಲಾಮಾಬಾದ್: ದಕ್ಷಿಣ ಪಾಕಿಸ್ತಾನದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು ೪೨ ಜನರು ಮೃತಪಟ್ಟಿದ್ದಾರೆ. ೨೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅನೇಕರ ಸ್ಥಿತಿ ಶೋಚನೀಯವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಗುರುವಾರ ಮುಂಜಾನೆ ೩:೩೦ಕ್ಕೆ ಈ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ೫.೭ರಷ್ಟು ತೀವ್ರತೆ ದಾಖಲಾಗಿದೆ. ಪಾಕಿಸ್ತಾನದ ಕ್ವೆಟ್ಟಾ ಜಿಲ್ಲೆಯ ಹರ್ನಾಯ್ ಪ್ರದೇಶದಲ್ಲಿ ಮುಂಜಾನೆ ಭೂಕಂಪ … Continued