ಕಲ್ಲಿದ್ದಲು ಕೊರತೆ, ವಿದ್ಯುತ್​ ಪೂರೈಕೆ ವ್ಯತ್ಯಯ ಎಂಬುದೆಲ್ಲ ತಪ್ಪು ಕಲ್ಪನೆ, ಯಾವುದೇ ಭಯ ಬೇಡ ಎಂದ ಕೇಂದ್ರ ಸರ್ಕಾರ

ನವದೆಹಲಿ: ಚೀನಾ ಮತ್ತು ಯುರೋಪ್​​​ಗಳಲ್ಲಿ ಶುರುವಾಗಿರುವ ಕಲ್ಲಿದ್ದಲು ಅಭಾವದ ಬಿಕ್ಕಟ್ಟು (Coal Crisis) ಭಾರತದಲ್ಲೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಗುಜರಾತ್, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇದು ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಕಲ್ಲಿದ್ದಲು ಬಗ್ಗೆ ಅಭಯ ನೀಡಿದೆ. ಕಲ್ಲಿದ್ದಲು ಕೊರತೆ ಆತಂಕ … Continued

ಲಖಿಂಪುರ್ ಘಟನೆ ಹಿಂದೂ- ಸಿಖ್ ನಡುವಿನ ಕದನ ಮಾಡುವ ಪ್ರಯತ್ನ: ವರುಣ್ ಗಾಂಧಿ ಕಿಡಿ

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಘಟನೆಯನ್ನು ಹಿಂದೂ-ಸಿಖ್ಖರ ನಡುವಿನ ಕದನ ಮಾಡಲು ನಡೆಸುತ್ತಿರುವ ಪ್ರಯತ್ನ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ಎಚ್ಚರಿಸಿದ್ದಾರೆ. ಹಾಗೂ ಇದನ್ನು ಅನೈತಿಕ ಮತ್ತು ತಪ್ಪು ಕ್ರಮ ಎಂದು ಕಿಡಿಕಾರಿದ್ದಾರೆ. ಈ ತಪ್ಪುಗಳನ್ನು ಸೃಷ್ಟಿಸುವುದು ದೇಶಕ್ಕೆ ಮತ್ತು ಸಮಾಜಕ್ಕೆ ಅಪಾಯಕಾರಿ. ಗಾಯ ಆರಲು ತಲೆಮಾರುಗಳನ್ನು ತೆಗೆದುಕೊಂಡದ್ದಕ್ಕೆ ಮತ್ತೆ ಗಾಯವಾಗುವಂತೆ ಮಾಡುವುದು … Continued

ಆನ್‌ಲೈನ್ ಜೂಜುಕೋರರಿಗೆ ಶಾಕ್: ಕರ್ನಾಟಕದಲ್ಲಿ ಇಂದಿನಿಂದ ಆನ್ಲೈನ್ ಗೇಮ್ ಗಳಿಗೆ ಬ್ಯಾನ್‌

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಆನ್‌ಲೈನ್ ಗ್ಯಾಂಬ್ಲಿಂಗ್ ಆನ್​ಲೈನ್ ಗೇಮ್ ನಿಷೇಧಿಸಿ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಆನ್‌ಲೈನ್ ಜೂಜುಕೋರರಿಗೆ ಸರ್ಕಾರದಿಂದ ಶಾಕ್ ನೀಡಲಾಗಿದ್ದು, ಡ್ರೀಮ್ ಇಲೆವೆನ್ (Dream 11), ಪೇ ಟೀಂ ಫಸ್ಟ್ (PayTM first), ಗೇಮ್​ಜಿ (Gamezy) ಆಪ್ ಸೇರಿದಂತೆ ಹಲವು ಫ್ಯಾಂಟಸಿ ಗೇಮ್ ಆಪ್​ಗಳನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚೆಗಷ್ಟೇ ಸರ್ಕಾರ ಆನ್‌ಲೈನ್ ಗೇಮ್‌, ಆನ್‌ಲೈನ್ … Continued

ಕುಮಟಾ: ಬರ್ಗಿ ಬಳಿ ಮನೆಗೇ ಬಂದ ಚಿರತೆ, ಸ್ಪಲ್ಪದರಲ್ಲೇ ಮಗು ಪಾರು

posted in: ರಾಜ್ಯ | 0

ಕುಮಟಾ: ಮನೆಗೆ ನುಗ್ಗಿದ ಚಿರತೆಯೊಂದು ಮನೆಗೇ ಬಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ. ಚಿರತೆ ಬರ್ಗಿಯ ನಾರಾಯಣ ನಾಯ್ಕ ಎಂಬುವವರ ಮನೆಗೆ ರಾತ್ರಿ ವೇಳೆ  ಚಿರತೆ ಮನೆಗೆ ಬಂದಿದೆ. ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಬಳಿಯೇ ಕಾಣಿಸಿಕೊಂಡಿದೆ.  ಈ ವೇಳೆ ಮನೆಯವರು ಇದನ್ನು ತಕ್ಷಣವೇ ಗಮನಿಸಿ ಬೊಬ್ಬೆ ಹೊಡೆದು ಮಗುವನ್ನು … Continued

ಲಖಿಂಪುರ್ ಹಿಂಸಾಚಾರ: ಆರೋಪಿ ಆಶಿಶ್ ಮಿಶ್ರಾ 14 ದಿನ ನ್ಯಾಯಾಂಗ ಬಂಧನಕ್ಕೆ

ಲಖಿಂಪುರ್: ಅಕ್ಟೋಬರ್ 3ರಂದು ನಡೆದಿದ್ದ ಲಖಿಂಪುರ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ಸಚಿವ ಅಜಯ್ ಮಿಶ್ರ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕಳೆದ ತಡರಾತ್ರಿ ಆಶಿಶ್ ಮಿಶ್ರಾ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಸತತ 12 ಗಂಟೆಗಳ ಕಾಲ ಎಸ್‌ಐಟಿ ತಂಡ … Continued

ಕಾಶ್ಮೀರ ಕಣಿವೆಯ 16 ಸ್ಥಳಗಳ ಮೇಲೆ ಎನ್‌ಐಎ ದಾಳಿ

ನವದೆಹಲಿ: ಐಸಿಸ್ ಪ್ರಕರಣ ಮತ್ತು ಟಿಆರ್‌ಎಫ್ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಕಾಶ್ಮೀರ ಕಣಿವೆಯ 16 ಸ್ಥಳಗಳಲ್ಲಿ ದಾಳಿ ನಡೆಸಿದೆ. ಮೂಲಗಳ ಪ್ರಕಾರ, ಶ್ರೀನಗರ, ಅನಂತನಾಗ್, ಕುಲ್ಗಾಮ್ ಮತ್ತು ಬಾರಾಮುಲ್ಲಾದ ಒಂಬತ್ತು ಸ್ಥಳಗಳಲ್ಲಿ ದಾಳಿಗಳು ನಡೆಯುತ್ತಿವೆ. ಹಲವಾರು ಕಲ್ಲು ತೂರಾಟಗಾರರು ಮತ್ತು ಭಾರತ ವಿರೋಧಿ ಅಂಶಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಅವರನ್ನು … Continued

ಸತತ 6ನೇ ದಿನವೂ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ..!

ನವದೆಹಲಿ: ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಸತತ ಆರನೇ ದಿನವೂ ಏರಿಕೆಯಾಗಿದೆ. ಪೆಟ್ರೋಲ್ 30 ಪೈಸೆ, ಡಿಸೇಲ್ 35 ಪೈಸೆ ಹೆಚ್ಚಾಗಿದೆ. ಈ ಮೂಲಕ ದೇಶದ ಹಲವು ಭಾಗಗಳಲ್ಲಿ ಇಂಧನ ದರ ದಾಖಲಾರ್ಹ ಮಟ್ಟಕ್ಕೆ ಏರಿದೆ. ಬೆಂಗಳೂರು, ದೆಹಲಿ, ಮುಂಬೈ, ಲೇಹ್ ಸೇರಿದಂತೆ ಹಲವು … Continued

ಭಾರತದಲ್ಲಿ 18,166 ಹೊಸ ಕೋವಿಡ್‌ ಪ್ರಕರಣಗಳು ದಾಖಲು.. ಏಳು ತಿಂಗಳಲ್ಲಿ ಇದು ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ಸಿನ 18,166 ಹೊಸ ಪ್ರಕರಣಗಳನ್ನು ಭಾರತವು ದಾಖಲಿಸಿದೆ, ಇದು 214 ದಿನಗಳಲ್ಲಿ ಅತ್ಯಂತ ಕಡಿಮೆ. ಇದೇ ಸಮಯದಲ್ಲಿ 214 ಸಾವುಗಳು ಕಡಿಮೆಯಾಗಿವೆ. ಭಾನುವಾರ ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 23,624 ಚೇತರಿಕೆಗಳನ್ನು ಕಂಡಿದೆ, ಒಟ್ಟು ಚೇತರಿಕೆಯ ಪ್ರಮಾಣವು ಸುಮಾರು … Continued

ಕಲಬುರಗಿ: ಗಡಿಕೇಶ್ವಾರ ಸುತ್ತಲ ಗ್ರಾಮಗಳಲ್ಲಿ ಮತ್ತೆ ಭೂಕಂಪನ 3.4 ತೀವ್ರತೆ ದಾಖಲು

posted in: ರಾಜ್ಯ | 0

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಸುತ್ತಲಿನ ಗ್ರಾಮಗಳಲ್ಲಿ ಮತ್ತೆ ಭೂಕಂಪ ಸಂಭವಿದೆ. ಇದರಿಂದ ಮನೆಯಲ್ಲಿ ಪಾತ್ರದ ಸಾಮಾನುಗಳು, ಗೋಡೆಗೆ ಹಾಕಿದ್ದ ಗಡಿಯಾರ ಮತ್ತಿತರ ವಸ್ತುಗಳು ಕೆಳಕ್ಕೆ ಬಿದ್ದಿವೆ. ಇಂದು (ಭಾನುವಾರ) ಬೆಳಿಗ್ಗೆ 6.05 ನಿಮಿಷಕ್ಕೆ ಭೂಮಿಯಿಂದ ಜೋರು ಸದ್ದು ಕೇಳಿ ಬಂದಿದ್ದಲ್ಲದೇ ಭೂಮಿ ನಡುಗಿದ ಅನುಭವವಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಭೂಕಂಪದ ಭೀತಿಯಲ್ಲಿಯೇ ಜನ … Continued

ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಸತ್ಯಜಿತ್ ನಿಧನ..ಬಸ್​ ಡ್ರೈವರ್​ ನಿಂದ ಸಿನೆಮಾ ರಂಗದ ವರೆಗೆ ಅವರ ಬದುಕಿನ ಪಯಣವೇ ರೋಚಕ

posted in: ರಾಜ್ಯ | 0

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ‌ ಬಳಲುತ್ತಿದ್ದ ಕನ್ನಡದ ಖ್ಯಾತ ನಟ ಸತ್ಯಜಿತ್ ಇಂದು (ಭಾನುವಾರ) ನಿಧನರಾದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಪುತ್ರ ಆಕಾಶ್ ಮಾಹಿತಿ ನೀಡಿದ್ದಾರೆ. ಹೆಗಡೆ ನಗರದ ಶಬರಿ ನಗರದ … Continued