ನ.30ರ ವರೆಗೆ ಮಾತ್ರ ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆಯಡಿ ಬಡವರಿಗೆ ಉಚಿತ ಪಡಿತರ

ನವದೆಹಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ, ನವೆಂಬರ್ 30ರ ನಂತರ ಬಡವರಿಗೆ ಉಚಿತ ಪಡಿತರ ಸಿಗುವುದಿಲ್ಲ. ಕೇಂದ್ರ ಸರ್ಕಾರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ನವೆಂಬರ್ ನಂತರ ಈ ಯೋಜನೆಯಡಿ ಉಚಿತ ಪಡಿತರ ವಿತರಣೆಯನ್ನ ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ. … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ದೇಶಮುಖ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಮುಂಬೈ ಸೆಷನ್ಸ್ ನ್ಯಾಯಾಲಯವು ಶನಿವಾರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹೆಚ್ಚುವರಿ ತನಿಖೆಗಾಗಿ ಜಾರಿ ನಿರ್ದೇಶನಾಲಯ (ಇಡಿ) ಒಂಬತ್ತು ದಿನಗಳ ಕಸ್ಟಡಿಗೆ ಕೋರಿದ್ದರೆ, ನ್ಯಾಯಾಲಯ ಅದನ್ನು ನಿರಾಕರಿಸಿದೆ. 12 ಗಂಟೆಗಳ ತನಿಖೆಯ ನಂತರ ಮನಿ … Continued

ನಾನು ಕೇದಾರನಾಥದ​ ಆದಿ ಶಂಕರಾಚಾರ್ಯರ ಮೂರ್ತಿ ನೋಡಬೇಕು, ನಾನು ಶೃಂಗೇರಿ ಮಠದ ಭಕ್ತ ; ಪ್ರಶಂಸಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು: ನನಗೆ ನೀವು (ಪ್ರಧಾನ ಮಂತ್ರಿ ನರೇಂದ್ರ ಮೋದಿ) ಕೇದಾರನಾಥದಲ್ಲಿ ಉದ್ಘಾಟಿಸಿದ ಶ್ರೀ ಆದಿಶಂಕರಾಚಾರ್ಯರ ಕಪ್ಪು ಕಲ್ಲಿನ ಸುಂದರ ಮೂರ್ತಿಯನ್ನು ನೋಡಬೇಕು ಅನಿಸಿದೆ. ಈ ಪವಿತ್ರ ಕ್ಷೇತ್ರವನ್ನು ಪುನರ್​ನಿರ್ಮಾಣ ಮಾಡುವಲ್ಲಿ ನೀವು ಕೈಗೊಂಡ ಕಾರ್ಯಗಳಿಗಾಗಿ ನಾನು ನಿಮಗೆ ಶುಭಾಶಯ ಕೋರುತ್ತೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರು ಪ್ರಶಂಸಿಸಿ ಪ್ರಧಾನಿ ಮೋದಿಗೆ … Continued

ತಮ್ಮ ನೆಚ್ಚಿನ ನಟ ಪುನೀತ ರಾಜಕುಮಾರ ಸಮಾಧಿ ಬಳಿ ಮದುವೆಯಾಗಲು ಆಗಮಿಸಿದ ಪ್ರೇಮಿಗಳು..!

ಬೆಂಗಳೂರು: ಪುನೀತ್​ ರಾಜ್​ಕುಮಾರ್​ ಸಮಾಧಿ ಬಳಿ ಪ್ರತಿ ದಿನ ಸಾವಿರಾರು ಅಭಿಮಾನಿಗಳು ಬಂದು ತಮ್ಮ ನಮನ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರ ಅಭಿಮಾನ ಕೂಡ ಭಿನ್ನ ಹಾಗೂ ವಿಭಿನ್ನ. ಈಗ ಪ್ರೇಮಿಗಳು ಬಂದು ಅಪ್ಪು ಸಮಾಧಿಯ ಎದುರು ಮದುವೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ತಮ್ಮ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಮಾಧಿ ಬಳಿಯೇ ಮದುವೆಯಾಗಲು ಪ್ರೇಮಿಗಳ ಜೋಡಿಯೊಂದು … Continued

ಅಹ್ಮದ್‌ನಗರ ಆಸ್ಪತ್ರೆಯ ಐಸಿಯುನಲ್ಲಿ ಭಾರಿ ಬೆಂಕಿ: 10 ಕೋವಿಡ್ ರೋಗಿಗಳು ಸಾವು, ಹಲವರಿಗೆ ಗಾಯ

ಅಹ್ಮದ್​ನಗರ: ಮಹಾರಾಷ್ಟ್ರದ ಅಹ್ಮದ್‌ನಗರದ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಶನಿವಾರ ಮಧ್ಯಾಹ್ನ ಭಾರಿ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ 10 ಕೋವಿಡ್‌-19 ರೋಗಿಗಳು – ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಇದೀಗ ಬೆಂಕಿಯನ್ನು ನಂದಿಸಲಾಗಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಭೋಸಲೆ ತಿಳಿಸಿದ್ದಾರೆ. 25 ಜನರನ್ನು ದಾಖಲಿಸಿದ … Continued

ಆಸ್ಟ್ರೋವರ್ಲ್ಡ್ ಉತ್ಸವದಲ್ಲಿ ಕಾಲ್ತುಳಿತದಿಂದ 8 ಮಂದಿ ಸಾವು, ನೂರಾರು ಮಂದಿಗೆ ಗಾಯ..!

ಹೂಸ್ಟನ್: ಅಮೆರಿಕದ ಹೂಸ್ಟನ್‌ನಲ್ಲಿ ಶುಕ್ರವಾರ ನಡೆದ ಆಸ್ಟ್ರೋವರ್ಲ್ಡ್ ಸಂಗೀತ ಉತ್ಸವದ ಮೊದಲ ರಾತ್ರಿಯಲ್ಲಿ ಕನಿಷ್ಠ ಎಂಟು ಜನರು ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೂಸ್ಟನ್ ಅಗ್ನಿಶಾಮಕ ಮುಖ್ಯಸ್ಥ ಸ್ಯಾಮ್ಯುಯೆಲ್ ಪೆನಾ ಅವರು ಎನ್‌ಆರ್‌ಜಿ ಪಾರ್ಕ್‌ನ ಹೊರಗೆ ಮುಂಜಾನೆ ಸುದ್ದಿಗೋಷ್ಠಿಯಲ್ಲಿ ಅಪಘಾತದ ಅಂಕಿಅಂಶಗಳನ್ನು ದೃಢಪಡಿಸಿದರು. ರಾತ್ರಿ 9 ಅಥವಾ 9:15 ರ … Continued

ಗ್ಯಾಸ್ ಸಿಲಿಂಡರ್ ಸ್ಫೋಟ: 7 ಜನರಿಗೆ ಗಂಭೀರ ಗಾಯ

ಬೆಂಗಳೂರು: ಮನೆಯಲ್ಲಿದ್ದ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡು 7 ಜನರು ಗಾಯಗೊಂಡ ಘಟನೆ ಬೆಂಗಳೂರು ಸಮೀಪದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿದೆ. ಜಿಗಣಿ ಪೊಲೀಸ್ ಠಾಣೆ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಮಂಜುನಾಥ್ ರೆಡ್ಡಿ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಬಾಡಿಗೆಗೆ ಇದ್ದ ಉತ್ತರ ಭಾರತ ಮೂಲದ ಏಳು ಕಾರ್ಮಿಕರು ಗಾಯಗೊಂಡಿದ್ದಾರೆ. ಬೆಳಿಗ್ಗೆ 8 … Continued

ಹಳೆ ವೈಷಮ್ಯ: ಗ್ರಾ.ಪಂ ಉಪಾಧ್ಯಕ್ಷ ಸೇರಿ ಇಬ್ಬರ ಕೊಲೆ

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆಯಲ್ಲಿ ತಡರಾತ್ರಿ ಜೋಡಿ ಕೊಲೆಯಾದ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಶೋಕ್ (46) ಹಾಗೂ ಸೋಮೇಶ್ವರ್   (35) ಕೊಲೆಯಾದವರು. ಎಂದು ಗುರುತಿಸಲಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆಯ ನಿವಾಸಿಯಾದ ಅಶೋಕ್ ಮತ್ತು ಸೋಮಶೇಖರ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಟಾಟಾ ಏಸ್ ವಾಹನವನ್ನು ಅವರ … Continued

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ‘ಅಪಾಯಕಾರಿ’ ಹಂತಕ್ಕೆ, ಕೆಲವೆಡೆ ವಾಯು ಗುಣಮಟ್ಟ ಸೂಚ್ಯಂಕ 600 ಕ್ಕಿಂತ ಹೆಚ್ಚು..!:ಹಲವರಿಗೆ ಗಂಟಲಿನ ತುರಿಕೆ, ಕಣ್ಣಿನ ತೊಂದರೆ

ದೀಪಾವಳಿಯ ಎರಡು ದಿನಗಳ ನಂತರ, ದೆಹಲಿಯ ಗಾಳಿಯ ಗುಣಮಟ್ಟವು ನಗರದ ಹಲವಾರು ಭಾಗಗಳಲ್ಲಿ “ಅಪಾಯಕಾರಿ” ವಿಭಾಗದಲ್ಲಿ ಉಳಿದಿದೆ, ಆನಂದ್ ವಿಹಾರ್ ಮತ್ತು ಫರಿದಾಬಾದ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 600 ಕ್ಕಿಂತ ಹೆಚ್ಚು ದಾಖಲಾಗಿದೆ. ಶನಿವಾರ ಬೆಳಗ್ಗೆ ಸಿಸ್ಟಂ ಆಫ್ ಏರ್ ಕ್ವಾಲಿಟಿ ಅಂಡ್ ವೆದರ್ ಫೋರ್ಕಾಸ್ಟಿಂಗ್ ಮತ್ತು ರಿಸರ್ಚ್ (SAFAR) ಬಿಡುಗಡೆ ಮಾಡಿದ ಮಾಹಿತಿಯ … Continued

ಭಾರತದಲ್ಲಿ 10,929 ಹೊಸ ಕೋವಿಡ್ ಪ್ರಕರಣಗಳು ದಾಖಲು, ನಿನ್ನೆಗಿಂತ 14.1% ಕಡಿಮೆ

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 10,929 ಹೊಸ ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 14.1 ಶೇಕಡಾ ಕಡಿಮೆಯಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಮುಂಜಾನೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ತಾಜಾ ಪ್ರಕರಣಗಳೊಂದಿಗೆ, ದೇಶದ ಒಟ್ಟಾರೆ ಸಂಖ್ಯೆ 3,43,44,683 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 392 ಸಾವುಗಳು … Continued