ಭಾರತದಲ್ಲಿ ಕೋವಿಡ್‌ ಬೂಸ್ಟರ್ ಡೋಸ್ ಅನ್ನು ಯಾವುದೇ ವೈಜ್ಞಾನಿಕ ಪುರಾವೆಗಳು ಬೆಂಬಲಿಸುವುದಿಲ್ಲ: ಐಸಿಎಂಆರ್

ನವದೆಹಲಿ: ಭಾರತದಲ್ಲಿನ ಪ್ರಾಥಮಿಕ ವೈದ್ಯಕೀಯ ಸಂಶೋಧನಾ ಸಂಸ್ಥೆಯು ಕೋವಿಡ್-19 ಲಸಿಕೆಗಳ ಬೂಸ್ಟರ್ ಡೋಸ್‌ಗಳನ್ನು ನೀಡುವಂತೆ ಕರೆ ನೀಡುವ ಯಾವುದೇ ವೈಜ್ಞಾನಿಕ ಪುರಾವೆಗಳು ದೇಶದೊಳಗೆ ಇಲ್ಲ ಎಂದು ಹೇಳಿದೆ. ಎರಡು ಡೋಸ್‌ ಕೊರೊನಾ ಲಸಿಕೆ ಪಡೆದವರು ಬೂಸ್ಟರ್‌ ಡೋಸ್‌ ಪಡೆದರೆ ಹೇಳಿಕೊಳ್ಳುವಂಥ ಪ್ರಯೋಜನವೇನೂ ಆಗುವುದಿಲ್ಲ ಎಂದು ಭಾರತೀಯ ಔಷಧೀಯ ಸಂಶೋಧನಾ ಮಂಡಳಿ(ಐಸಿಎಂಆರ್‌) ಬಗ್ಗೆ ಕೇಂದ್ರ ಸರ್ಕಾರಕ್ಕೆ ಇಂಥದ್ದೊಂದು … Continued

ಆಂಧ್ರ ಪ್ರವಾಹ: 30 ದಾಟಿದ ಸಾವಿನ ಸಂಖ್ಯೆ; ಕೊಚ್ಚಿಹೋದ ಗ್ರಾಮಗಳು

ಹೈದರಾಬಾದ್: ಒಂದು ವಾರದಿಂದ ಆಂಧ್ರಪ್ರದೇಶದಲ್ಲಿ ಪ್ರವಾಹವುಂಟಾಗಿದ್ದು ಸಾಕಷ್ಟು ಹಾನಿ ಮಾಡಿದೆ. ಮಳೆ ಹಾಗೂ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ ಭಾನುವಾರ 31 ಕ್ಕೆ ತಲುಪಿದೆ. ಪೆನ್ನಾರ್ ಮತ್ತು ಚೆಯ್ಯೆರು ನದಿಗಳ ಪ್ರವಾಹಕ್ಕೆ ಹಲವಾರು ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ ಮತ್ತು ರಸ್ತೆಗಳು ಜಲಾವೃತವಾಗಿವೆ. ಪೆನ್ನಾರ್‌ ನದಿಯು ಚೆನ್ನೈ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿ-16ರಲ್ಲಿ ಉಕ್ಕಿ ಹರಿದಿದೆ. ಪಡುಗುಪಾಡು ರೈಲ್ವೆ ಹಳಿ ಮೇಲೆ … Continued

ಪುಲ್ವಾಮಾ ದಾಳಿಯಲ್ಲಿ ಬಳಸಿದ ಸ್ಫೋಟಕ ತಯಾರಿಕೆಗೆ ಬೇಕಾದ ರಾಸಾಯನಿಕಗಳನ್ನು ಅಮೆಜಾನ್ ಇ-ಕಾಮರ್ಸ್ ಪೋರ್ಟಲ್ ಮೂಲಕ ಖರೀದಿ: ಸಿಎಐಟಿ

ನವದೆಹಲಿ: ಅಮೆಜಾನ್ ಇ-ಕಾಮರ್ಸ್ ಪೋರ್ಟಲ್‌ನಲ್ಲಿ ಮರಿಜುವಾನಾ ಮಾರಾಟವು ಇ-ಕಾಮರ್ಸ್ ಚಿಲ್ಲರೆ ವ್ಯಾಪಾರಿಗಳ ಹೊಸ ಮತ್ತು ಮೊದಲ ಅಪರಾಧವಲ್ಲ ಎಂದು ಟ್ರೇಡರ್ಸ್ ಬಾಡಿ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (Traders’ body Confederation of All India Traders -CAIT) ಹೇಳಿದೆ. 2019 ರಲ್ಲಿ, 40 ಸಿಆರ್‌ಪಿಎಫ್ ಯೋಧರ ದುರದೃಷ್ಟಕರ ಸಾವಿಗೆ ಕಾರಣವಾದ ಪುಲ್ವಾಮಾ ಭಯೋತ್ಪಾದಕ … Continued

ಉತ್ತರ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಬಿ.ಎನ್. ವಾಸರೆಗೆ ಭರ್ಜರಿ ಜಯ

posted in: ರಾಜ್ಯ | 0

ಅಂಕೋಲಾ: ಕನ್ನಡ ಸಾಹಿತ್ಯ ಪರಿಷತ್ತಿನಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪತ್ರಕರ್ತ, ಸಾಹಿತಿ ಬಿ.ಎನ್. ವಾಸರೆ ಅವರು ಭಾರೀ ಮತಗಳಿಂದ ಜಯಗಳಿಸಿದ್ದಾರೆ . ಜಿಲ್ಲೆಯಲ್ಲಿ ಚಲಾವಣೆಗೊಂಡ 2789 ಮತಗಳಲ್ಲಿ ಬಿ.ಎನ್. ವಾಸರೆ ಅವರು 2168 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಅತ್ಯಂತ ಹೆಚ್ಚಿನ ಅಂತರಗಳಿಂದ ಜಯಸಾಧಿಸಿದ್ದಾರೆ. ಇತರ ಸ್ಪರ್ಧಿಗಳಾದ ವೇಣುಗೋಪಾಲ್ ಮುದ್ಗಣಿ 346, … Continued

ಬೆಳಗಾವಿ ಜಿಲ್ಲಾ ಕಸಾಪ ಚುನಾವಣೆ : ಮಂಗಲಾ ಮೆಟಗುಡ್ಡಗೆ ಗೆಲುವು

posted in: ರಾಜ್ಯ | 0

ಬೆಳಗಾವಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮಂಗಲಾ ಮೆಟಗುಡ್ಡ ಜಯಭೇರಿ ಬಾರಿಸಿದ್ದಾರೆ. ಇಂದು (ಭಾನುವಾರ) ನಡೆದ ಚುನಾವಣೆಯಲಲ್ಲಿ 6477 ಜನ ಮತ ಚಲಾಯಿಸಿದ್ದು ಮಂಗಲಾ ಮೆಟಗುಡ್ಡ ಅವರಿಗೆ 4789 ಮತ ಲಭಿಸಿವೆ. ಕನ್ನಡ ಹೋರಾಟಗಾರ ಬಸವರಾಜ ಖಾನಪ್ಪನವರ ಹಾಗೂ ನ್ಯಾಯವಾದಿ ರವೀಂದ್ರ ತೋಟಿಗೇರ ಸೋಲು ಅನುಭವಿಸಿದ್ದಾರೆ. ಕಳೆದ ಸಲ ಮಂಗಲಾ ಮೆಟಗುಡ್ಡ ಅವರು ಜಯ … Continued

ಜೀವಂತ ಗೋವನ್ನು ಮರಕ್ಕೆ ಕಟ್ಟಿ ಸಿಂಹದ ಬಾಯಿಗೆ ಕೊಟ್ಟು ಕೊಲ್ಲುವುದು ನೋಡಿ ವಿಕೃತ ಆನಂದ…!:12 ಜನರ ವಿರುದ್ಧ ಪ್ರಕರಣ ದಾಖಲು

ಜುನಾಗಢ: ಗಿರ್ ಅರಣ್ಯದ ಹಳ್ಳಿಯೊಂದರಲ್ಲಿ ಕಂಬಕ್ಕೆ ಕಟ್ಟಿ ಹಾಕಿದ ಹಸುವನ್ನು ಸಿಂಹವೊಂದು ಕೊಂದು ತಿನ್ನುತ್ತಿರುವ ಕಾನೂನು ಬಾಹಿರ ಕಾರ್ಯಕ್ರಮ ವೀಕ್ಷಿಸಲು ನೆರೆದಿದ್ದ ಜನರ ಗುಂಪೊಂದರ ವಿಡಿಯೊ ಆಗಿದ್ದು, ಈ ಸಂಬಂಧ ಗುಜರಾತ್ ಅರಣ್ಯ ಇಲಾಖೆ 12 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಘಟನೆಯ ಕುರಿತು ಇದುವರೆಗೆ ನಡೆಸಲಾದ ತನಿಖೆಯ ಪ್ರಕಾರ, … Continued

ಪಾನ್ ಮಸಾಲಾ ಸಂಸ್ಥೆಗೆ ಲೀಗಲ್‌ ನೋಟಿಸ್‌ ಕಳುಹಿಸಿದ ಬಚ್ಚನ್:‌ ವರದಿ

ಬಾಲಿವುಡ್‌ ಸೂಪರ್‌ ಸ್ಟಾರ್ ಅಮಿತಾಭ್ ಬಚ್ಚನ್ ಅವರು ಪಾನ್ ಮಸಾಲಾ ಸಂಸ್ಥೆಗೆ ಲೀಗಲ್‌ ನೋಟಿಸ್‌ ಕಳುಹಿಸಿ ಕಾನೂನು ಎಚ್ಚರಿಕೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಒಪ್ಪಂದದ ಮುಕ್ತಾಯದ ಹೊರತಾಗಿಯೂ ಅವರನ್ನು ಒಳಗೊಂಡ ದೂರದರ್ಶನ ಜಾಹೀರಾತುಗಳನ್ನು ತೋರಿಸುವುದನ್ನು ಕಂಪನಿಯವರು ಮುಂದುವರೆಸಿದ್ದಾರೆ. ಅಕ್ಟೋಬರ್‌ನಲ್ಲಿ, ಯುವಕರು ತಂಬಾಕಿಗೆ ವ್ಯಸನಿಯಾಗುವುದನ್ನು ತಡೆಯಲು ಪಾನ್ ಮಸಾಲಾ ಬ್ರ್ಯಾಂಡ್‌ಗೆ ಪ್ರಾಯೋಜಕತ್ವವನ್ನು ನೀಡುವುದನ್ನು ನಿಲ್ಲಿಸುವಂತೆ ರಾಷ್ಟ್ರೀಯ … Continued

ಭಾರತದ ನೌಕಾಪಡೆಗೆ ಕ್ಷಿಪಣಿ ವಿಧ್ವಂಸಕ ಯುದ್ಧನೌಕೆ ಐಎನ್​ಎಸ್​ ವಿಶಾಖಪಟ್ಟಂ ಸೇರ್ಪಡೆ

ಮುಂಬೈ: ದೇಶದ ಮೊದಲ ಮೊದಲ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ನೌಕೆ ಐಎನ್​ಎಸ್​ ವಿಶಾಖಪಟ್ಟಣಂ ಅನ್ನು ಇಂದು (ಭಾನುವಾರ) ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು. ಈ ನೌಕೆಯನ್ನು ಇಂದು ರಾಷ್ಟ್ರಕ್ಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಂಬೈನ ನೌಕಾನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನೌಕಾಪಡೆಗೆ ಐಎನ್ಎಸ್ ವಿಶಾಖಪಟ್ಟಣಂ ಅನ್ನು ಅಧಿಕೃತವಾಗಿ ನಿಯೋಜಿಸುವ ಮೂಲಕ, ನೌಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. … Continued

ಪ್ರಕರಣ ಹೊರಬಂದು 8 ತಿಂಗಳಾದ್ರೂ ಮಾತಾಡದ ಕಾಂಗ್ರೆಸ್‌ನವರಿಗೆ ಈಗ ಶ್ರೀಕಿ ಬಂಧಿಸಿದ್ದು ನೋವಾಗಿದ್ಯಾ..?: ಅರಗ ಜ್ಞಾನೇಂದ್ರ ಪ್ರಶ್ನೆ

posted in: ರಾಜ್ಯ | 0

ಶಿವಮೊಗ್ಗ:ಬಿಟ್‌ ಕಾಯಿನ್‌  ಪ್ರಕರಣ ಹೊರಗೆಬಂದು 8 ತಿಂಗಳಾದರೂ ಮಾತನಾಡದ ಕಾಂಗ್ರೆಸ್ಸಿನವರು ಅಧಿವೇಶನದಲ್ಲೂ ಸಹ ಮಾತಾಡಿಲ್ಲ. ಆದರೆ ಶ್ರೀಕಿ ಬಂಧಿಸಿದ ನಂತರ ಅವರ ಮಾತು ಶುರುವಾಗಿದೆ. ಶ್ರೀಕಿ ಬಂಧಿಸಿದ್ದು ಕಾಂಗ್ರೆಸ್ಸಿಗೆ ನೋವಾಗಿದೆಯಾ ಎಂದು ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಶ್ನಿಸಿದರು. 2018ರಲ್ಲಿಯೇ ಹ್ಯಾಕರ್‌ ಶ್ರೀಕಿ ಬಗ್ಗೆ ಮಾಹಿತಿ ಗೊತ್ತಿದ್ದರೂ ಕಾಂಗ್ರೆಸ್‌ನವರು ಆಗ ಸುಮ್ಮನೆ ಕುಳಿತರು. ನಾವು … Continued

ನೂತನ ಶಾಸಕರಿಗೆ ತರಬೇತಿ- ಸರ್ವಪಕ್ಷಗಳ ಜೊತೆಗೆ ಸಮಾಲೋಚಿಸಿ ನಿರ್ಣಯ: ಕಾಗೇರಿ

posted in: ರಾಜ್ಯ | 0

ಬೆಂಗಳೂರು: ನೂತನವಾಗಿ ಆಯ್ಕೆಯಾಗುವ ಶಾಸಕರಿಗೆ ತರಬೇತಿ ನೀಡಬೇಕಿದೆ. ಈ ಬಗ್ಗೆ ಸರ್ವಪಕ್ಷಗಳ ಜೊತೆಗೆ ಸಮಾಲೋಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಇಂದು (ನವೆಂಬರ್ 21) ಹೇಳಿಕೆ ನೀಡಿರುವ ಅವರು, ಉತ್ತಮ ವಿಧಾನಸಭೆ, ಪರಿಷತ್ ಪ್ರಶಸ್ತಿ ನೀಡಲು ಸಮಿತಿ ರಚನೆಗೆ ನಿರ್ಣಯ ಕೈಗೊಳ್ಳಲಾಗಿದೆ. ರಾಷ್ಟ್ರಪತಿ, ರಾಜ್ಯಪಾಲರ ಭಾಷಣ, ಪ್ರಶ್ನೋತ್ತರ ವೇಳೆ ಸದನದಲ್ಲಿ … Continued