ಬುಲೆಟ್ ದೇಹ ಹೊಕ್ಕುವುದನ್ನು ತಡೆದು ಉಕ್ರೇನಿಯನ್ ಸೈನಿಕನ ಜೀವ ಉಳಿಸಿದ ಮೊಬೈಲ್‌ ಫೋನ್‌ | ವೀಕ್ಷಿಸಿ

ಉಕ್ರೇನ್‌ ಯುದ್ಧಭೂಮಿಯಲ್ಲಿ ಯೋಧನೊಬ್ಬ ತನ್ನ ಸ್ಮಾರ್ಟ್‌ಫೋನ್‌ನಿಂದಾಗಿ ಗುಂಡು ತಗಲುವುದರಿಂದ ಪಾರಾದ ಘಟನೆ ವರದಿಯಾಗಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎರಡನೇ ತಿಂಗಳಿಗೆ ಕಾಲಿಟ್ಟಿರುವ ರಷ್ಯಾ-ಉಕ್ರೇನ್ ಯುದ್ಧದ ವೀಡಿಯೊ ಎಂದು ಹೇಳಲಾಗಿದೆ. 30 ಸೆಕೆಂಡುಗಳ ಸುದೀರ್ಘ ವೀಡಿಯೊದಲ್ಲಿ, ಉಕ್ರೇನಿಯನ್ ಸೈನಿಕನು ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ, ಅಲ್ಲಿ ಆತ ಸ್ಮಾರ್ಟ್‌ಫೋನ್ ತನ್ನ ಜೀವವನ್ನು ಉಳಿಸಿದೆ … Continued

78,000ಕ್ಕೂ ಹೆಚ್ಚು ಜನರು ಒಮ್ಮೆಗೇ ರಾಷ್ಟ್ರಧ್ವಜ ಬೀಸಿ ದಾಖಲೆ, ಬಿಹಾರದಲ್ಲಿ ಪಾಕ್ ಹೆಸರಲ್ಲಿದ್ದ ವಿಶ್ವ ದಾಖಲೆ ಮುರಿದ ಭಾರತ…!

ಭೋಜ್‌ಪುರ: ಜನರು ರಾಷ್ಟ್ರಧ್ವಜವನ್ನು ಬೀಸಿದ್ದ ಪಾಕಿಸ್ತಾನದ 18 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಬಿಹಾರದ ಭೋಜ್‌ಪುರದಲ್ಲಿ ಭಾರತ ಮುರಿದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 78,000 ಕ್ಕೂ ಹೆಚ್ಚು ಭಾರತೀಯರು ಏಕಕಾಲದಲ್ಲಿ ರಾಷ್ಟ್ರಧ್ವಜ ಬೀಸುವುದರೊಂದಿಗೆ ಭಾರತವು ಶನಿವಾರ ಪಾಕಿಸ್ತಾನದ ದಾಖಲೆಯನ್ನು ಮುರಿದಿದೆ. ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ಬ್ರಿಟಿಷರ ವಿರುದ್ಧ … Continued

ಸಿದ್ದಾಪುರ: ಹೆಬ್ಬಾವಿನ ಮರಿ ನುಂಗಲು ಯತ್ನಿಸಿದ ಕಾಳಿಂಗ ಸರ್ಪ….ವೀಕ್ಷಿಸಿ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪೂರ ತಾಲೂಕಿನ ಹೆಗ್ಗರಣಿ ಸಮೀಪದ ಹಳೇಹಳ್ಳದ ಬಳಿ ಕಾಳಿಂಗ ಸರ್ಪವೊಂದು ಮರಿ ಹಬ್ಬಾವನ್ನು ನುಂಗಲು ಪ್ರಯತ್ನಿಸುತ್ತಿದ್ದ ವೀಡಿಯೋ ವೈರಲ್ ಆಗಿದೆ. ನಾರಾಯಣ ಹೆಗಡೆ ಎಂಬವರ ದನದ ಕೊಟ್ಟಿಗೆ ಸಮೀಪದ ಗೊಬ್ಬರ ಗುಂಡಿ ಬಳಿ ಬಂದಿದ್ದ ಕಾಳಿಂಗ ಸರ್ಪ ಹೆಬ್ಬಾವಿನ ಮರಿಯನ್ನು ನುಂಗಲು ಪ್ರಯತ್ನಿಸಿದೆ ಎಂದು ವರದಿಯಾಗಿದೆ. ಕೆಲಸ ಮಾಡುತ್ತಿದ್ದಾಗ ಮನೆಯ … Continued

ಮಂಗಳೂರು: ಬಿಎಂಡಬ್ಲ್ಯು ಕಾರ್‌ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯ ಮಿದುಳು ನಿಷ್ಕ್ರಿಯ; ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬ

ಮಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯ ಮಿದುಳು ಹದಿಮೂರು ದಿನಗಳ ಜೀವನ್ಮರಣ ಹೋರಾಟದಲ್ಲಿ ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಏಪ್ರಿಲ್ 19ರಂದು ಮಂಗಳೂರಿನ ಬಳ್ಳಾಲ್ ಭಾಗ್‌ನಲ್ಲಿ ಮದ್ಯದ ಅಮಲಿನಲ್ಲಿ ವೇಗವಾಗಿ ಬಿಎಂಡಬ್ಲೂ ಕಾರು ಚಲಾಯಿಸಿಕೊಂಡು ಬಂದು ಡಿವೈಡರ್ ಮೇಲೆ ಕಾರು ಹಾರಿಸಿ, ಇನ್ನೊಂದು ರಸ್ತೆಯಲ್ಲಿ … Continued

ಒಂದೇ ಕುಟುಂಬದ ಐವರ ಹತ್ಯೆ ಮಾಡಿ ಮನೆಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು

ನವದೆಹಲಿ: ಉತ್ತರಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಒಂದೇ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಮನೆಗೆ ಬೆಂಚಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾದ ಘಟನೆ ಆಘಾತಕಾರಿ ಘಟನೆ ನಡೆದಿದೆ. ಮನೆಗೆ ಏಕಾಏಕಿ ದುಷ್ಕರ್ಮಿಗಳು ದಾಳಿ ನಡೆಸಿ ಹರಿತವಾದ ಆಯುಧ ಬಳಸಿ ಒಂದೇ ಕುಟುಂಬದ ಐವರನ್ನು ಹತ್ಯೆ ಮಾಡಿದ್ದಾರೆ. ನಂತರ ಬಳಿಕ ಇಡೀ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. … Continued

ಕರ್ನಾಟಕದಲ್ಲಿಯೂ ನಿಧಾನವಾಗಿ ಏರುತ್ತಿದೆ ಕೊರೊನಾ ಸೋಂಕು

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರುತ್ತಿದೆ. ಇಂದು, ಶನಿವಾರ ಒಂದೇ ದಿನದಲ್ಲಿ 139 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಹೆಚ್ಚಿನವರು ಬೆಂಗಳೂರಿನಲ್ಲಿ ಹೆಚ್ಚಾಗಿ ಸೊಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,46,874ಕ್ಕೆ ಏರಿಕೆಯಾಗಿದೆ. ಇಂದು ಕೊರೊನಾದಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. … Continued

ಹುಬ್ಬಳ್ಳಿ ಹಿಂಸಾಚಾರ : ಎಐಎಂಐಎಂನ ಮಹಾನಗರ ಪಾಲಿಕೆ ಸದಸ್ಯ ವಶಕ್ಕೆ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ನಜೀರ್ ಅಹ್ಮದ್ ಹೊನ್ಯಾಳ ಅವರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಐಎಂಐ ಪಕ್ಷದ ಮುಖಂಡನಾಗಿರುವ ನಜೀರ್ ಹೊನ್ಯಾಳ, 71 ನೇ ವಾರ್ಡ್‌ನ ಸದಸ್ಯರಾಗಿದ್ದಾರೆ. ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ನಜೀರ್ ಅಹ್ಮದ್ ನನ್ನ ವಶಕ್ಕೆ ಪಡೆದು ಹಳೇಹುಬ್ಬಳ್ಳಿ ಠಾಣೆಗೆ ಕರೆತಂದು … Continued

ಹಾವೇರಿಯಲ್ಲಿ ಸೆಪ್ಟೆಂಬರ್ 23ರಿಂದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಬೆಂಗಳೂರು: ಹಾವೇರಿಯಲ್ಲಿ ಸೆಪ್ಟೆಂಬರ್ 23, 24 ಹಾಗೂ 25 ರಂದು ಮೂರು ದಿನಗಳ ಕಾಲ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಶನಿವಾರ ತೀರ್ಮಾನಿಸಲಾಯಿತು. ಇಂದು, ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಗೋಷ್ಠಿಗಳಲ್ಲಿ ಹೆಚ್ಚಿನ ಜನ … Continued

ಮಹಾರಾಷ್ಟ್ರ ಸಿಎಂ ಮನೆ ಮುಂದೆ ಹನುಮಾನ್ ಚಾಲೀಸಾ ಪಠಣ ವಿವಾದ: ಶಾಸಕ ರವಿ ರಾಣಾ, ಪತ್ನಿ ನವನೀತ್ ಅವರನ್ನು ಬಂಧಿಸಿದ ಮುಂಬೈ ಪೊಲೀಸರು

ಮುಂಬೈ: ಹನುಮಾನ್ ಚಾಲೀಸಾದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸ ಮಾತೋಶ್ರೀ ಮುಂದೆ ಪಠಿಸುವ ಬೆದರಿಕೆ ನಂತರ ಮಹಾರಾಷ್ಟ್ರ ಸಂಸದ ನವನೀತ್ ರಾಣಾ ಮತ್ತು ಅವರ ಪತಿ ಹಾಗೂ ಶಾಸಕ ರವಿ ರಾಣಾ ಅವರನ್ನು ಶನಿವಾರ ಸಂಜೆ ಖಾರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಬಳಿಕ ದಂಪತಿಯನ್ನು ಪೊಲೀಸರು ಬಂಧಿಸಿದರು. ನವನೀತ್ ರಾಣಾ ಮತ್ತು ರವಿ … Continued

ಕುಮಟಾ: ಕಡ್ಲೆ ಕಡಲ ತೀರದಲ್ಲಿ ಬೃಹತ್‌ ಡಾಲ್ಫಿನ್‌ ಕಳೆಬರ ಪತ್ತೆ…ವೀಕ್ಷಿಸಿ

ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅರಬ್ಬೀ ಸಮುದ್ರದ ಕರಾವಳಿಯ ಕಡ್ಲೆ ತೀರದಲ್ಲಿ ಡಾಲ್ಫಿನ್ ಕಳೆಬರಹ ಪತ್ತೆಯಾಗಿದೆ . ಸ್ಥಳೀಯವಾಗಿ ಇದಕ್ಕೆ ಹಂದಿ ಮೀನು ಎಂದು ಕರೆಯಲಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ೩೦ ನಾಟಿಕಲ್ ಮೈಲು ಒಳಗೆ ಇದರ ವಾಸಸ್ಥಾನ ಎಂದು ಹೇಳಲಾಗಿದೆ. ಅರಣ್ಯಾಧಿಕಾರಿಗಳು ಹೇಳುವಂತೆ ಮೀನುಗಾರಿಕಾ ಬೋಟ್‌ಗಳ ಫೋನ್‌ಗಳು ಬೋಟಿಗೆ ತಾಗಿ ಪೆಟ್ಟಾಗಿ ಸಾಯುವ … Continued