ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರಿಡಲು ಸಚಿವ ಸಂಪುಟದಿಂದ ಒಪ್ಪಿಗೆ: ಸಿಎಂ ಬೊಮ್ಮಾಯಿ

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೆಸರಿಡಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿದೆ. ಈ ನಿರ್ಧಾರವನ್ನು ಅನುಮೋದನೆಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬುಧವಾರ ಸಂಜೆ ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣದ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ … Continued

ವೃದ್ಧೆಗೆ ಹೊಡೆದು ಕಾರು ಕದ್ದೊಯ್ದ ವ್ಯಕ್ತಿ ಕೆಲವೇ ಹೊತ್ತಿನಲ್ಲಿ ಶವವಾಗಿ ಪತ್ತೆ..!

ಅಮೆರಿಕದಲ್ಲಿ 72 ವರ್ಷದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಅವರ ಕಾರ್‌ ಕದ್ದೊಯ್ದ ವ್ಯಕ್ತಿಯೊಬ್ಬ ಕೆಲವೇ ತಾಸಿನ ನಂತರ ಶವವಾಗಿ ಪತ್ತೆಯಾಗಿದ್ದಾನೆ. ಕಳೆದ ವಾರ ಸ್ಯಾನ್ ಆಂಟೋನಿಯೊದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ಕದ್ದ ಕಾರನ್ನು ಒಯ್ಯುವಾಗ ಢಿಕ್ಕಿ ಹೊಡೆದು ಸಾವಿಗೀಡಾಗಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. 72 ವರ್ಷದ ಶಿರ್ಲೀನ್ ಹೆರ್ನಾಂಡೆಜ್ ಡಯಟ್ … Continued

ದೆಹಲಿಯಲ್ಲಿ ಬುಧವಾರ 1,009 ಹೊಸ ಕೋವಿಡ್ ಪ್ರಕರಣಗಳು ದಾಖಲು, ಒಂದೇ ದಿನದಲ್ಲಿ 60%ರಷ್ಟು ಜಿಗಿತ..!

ನವದೆಹಲಿ: ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ (ಬುಧವಾರ) 1,009 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದು ನಿನ್ನೆಗಿಂತ ಶೇಕಡಾ 60 ರಷ್ಟು ಏರಿಕೆಯಾಗಿದೆ…! ಸಕಾರಾತ್ಮಕತೆಯ ದರವು 5.7 ಶೇಕಡಾಕ್ಕೆ ಏರಿದೆ. ಕೋವಿಡ್ ಪ್ರಕರಣಗಳಲ್ಲಿ ಸ್ಥಿರವಾದ ಕುಸಿತದ ನಂತರ, ದೆಹಲಿ ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಏಪ್ರಿಲ್ 11 ಮತ್ತು 18 ರ ನಡುವೆ ಧನಾತ್ಮಕ ದರವು … Continued

ಸಿದ್ದಾಪುರ: ಮಂಗನಕಾಯಿಲೆಗೆ ಮಹಿಳೆ ಸಾವು

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲಗೇರಿಯ ಜಾನಕಿ ವೀರಭದ್ರ ಹೆಗಡೆ(85)  ಮಂಗನ ಕಾಯಿಲೆಯಿಂದ  ಸಾವಿಗೀಡಾಗಿದ್ದಾರೆ. ಶಿವಮೊಗ್ಗ ಮೆಗ್ಗಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಮಂಗನಕಾಯಿಲೆ(KFD)ಗೆ ಬುಧವಾರ ಬೆಳಿಗ್ಗೆ ನಿಧನಳಾಗಿದ್ದಾರೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ ಮೊದಲ ಸಾವಾಗಿದೆ. ಒಂದು ವಾರದಲ್ಲಿ ಮಂಗನ ಕಾಯಿಲೆಯ ಆರು ಸೋಂಕಿತರು ಪತ್ತೆ‌ಯಾಗಿದ್ದಾರೆ. ‌ ಏಪ್ರಿಲ್‌ 12ರಂದು  … Continued

ಹುಣಸೂರು: ಭೀಕರ ಅಪಘಾತ 6 ಮಂದಿ ಸ್ಥಳದಲ್ಲೇ ಸಾವು

ಮೈಸೂರು: ಮದುವೆ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದ ಬೊಲೆರೊ ವಾಹನ ಮರಕ್ಕೆ ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಮೈಸೂರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್‌ ಬೆಟ್ಟ ಬಳಿ ಬುಧವಾರ ಸಂಜೆ ನಡೆದ ಬಗ್ಗೆ ವರದಿಯಾಗಿದೆ. ಹುಣಸೂರು ಕಡೆಯಿಂದ ಪಾಲಿಬೆಟ್ಟ ಗ್ರಾಮಕ್ಕೆ ತೆರಳುತ್ತಿದ್ದ ಬುಲೆರೋ ವಾಹನ ರಸ್ತೆ ಪಕ್ಕದ ಮರಕ್ಕೆ ಢಿಕ್ಕಿ ಹೊಡೆದ … Continued

ಪ್ರಾಧ್ಯಾಪಕಿ ವಿರುದ್ಧ ಮಾನಹಾನಿಕರ ಪೋಸ್ಟರ್‌ ಅಂಟಿಸಿ ಕಿರುಕುಳ: ಕಾಲೇಜು ಸಂಚಾಲಕ, ಇಬ್ಬರು ಪ್ರಾಧ್ಯಾಪಕರ ಬಂಧನ

ಮಂಗಳೂರು: ಕಾಲೇಜಿನ ಪ್ರಾಧ್ಯಾಪಕಿಯೊಬ್ಬರ ಕುರಿತು ಮಾನಹಾನಿಕರ ಪತ್ರವನ್ನು ಬರೆದು ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಅಂಟಿಸಿ ಚಾರಿತ್ರ್ಯವಧ ಮಾಡಿದ ಆರೋಪದ ಮೇಲೆ ಕಾಲೇಜಿನ ಸಂಚಾಲಕ ಹಾಗೂ ಇಬ್ಬರು ಪ್ರಾಧ್ಯಾಪಕರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಲಾಯಿಲ ನಿವಾಸಿ, ಪ್ರಕಾಶ್ ಶೆಣೈ (44), ಬಂಟ್ವಾಳದ ಸಿದ್ದಕಟ್ಟೆ, ಮೇಗಿನ ಉಳಿರೋಡಿ ನಿವಾಸಿ, ಪ್ರದೀಪ್ ಪೂಜಾರಿ (36), ಉಡುಪಿ … Continued

ತುಮಕೂರು: ರಸ್ತೆ ಕಾಮಗಾರಿಗೆ ಮನವಿ ಮಾಡಿದ್ದಕ್ಕೆ ಯುವಕನಿಗೆ ಕಪಾಳಮೋಕ್ಷ ಶಾಸಕ…! ವೀಕ್ಷಿಸಿ

ತುಮಕೂರು : ತನ್ನ ಸಮಸ್ಯೆ ಹೇಳಲು ಬಂದ ಯುವಕನೊಬ್ಬನ ಮೇಲೆ ಸಿಟ್ಟಿಗೆದ್ದ ಪಾವಗಡ ಶಾಸಕ ವೆಂಕಟರಮಣಪ್ಪ ಆ ಯುವಕನಿಗೆ ಕಪಾಳಮೋಕ್ಷ ಮಾಡಿದ ಘಟನೆ ವರದಿಯಾಗಿದೆ. ಈ ಘಟನೆ ಪಾವಗಡ ತಾಲೂಕು ಕಚೇರಿ ಆವರಣದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಶಾಸಕ ವೆಂಕಟರಮಣಪ್ಪ ಅವರು ಕಚೇರಿ ಆವರಣದಿಂದ ತಮ್ಮ ಕಾರಿನ ಬಳಿ ಬರುತ್ತಿದ್ದಂತೆ ಅವರ ಸಮೀಪ ಹೋದ ಯುವಕನೊಬ್ಬ … Continued

ಮೂರ್ಛೆ ಹೋಗಿ ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಬಿದ್ದ ಮಹಿಳೆ, ಪವಾಡ ಸದೃಶ ರೀತಿಯಲ್ಲಿ ಪಾರು..ವೀಕ್ಷಿಸಿ

ಅರ್ಜೆಂಟೀನಾದಲ್ಲಿ ಚಲಿಸುತ್ತಿದ್ದ ರೈಲಿನ ಕೆಳಗೆ ಬಿದ್ದ ಮಹಿಳೆಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಬ್ಯೂನಸ್ ಐರಿಸ್‌ನ ಇಂಇಪೆಂಡೆಂಟ್‌ ನಿಲ್ದಾಣದಲ್ಲಿ ನಿಂತಿದ್ದ ಇತರ ಪ್ರಯಾಣಿಕರು ಅವಳನ್ನು ಸುರಕ್ಷಿತವಾಗಿ ಹೊರಗೆಳೆದಿದ್ದಾರೆ. ರೈಲು ನಿಲ್ದಾಣದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಹಿಡಿಯಲಾದ ದೃಶ್ಯಗಳಲ್ಲಿ ಕ್ಯಾಂಡೆಲಾ ಎಂಬ ಹೆಸರಿನ ಮಹಿಳೆ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದಳು. ರೈಲು ಬರುವ ಸಮಯಕ್ಕೆ ಕ್ಯಾಂಡೆಲಾ … Continued

50 ಕೋಟಿ ರೂ.ಗಳಿಗಿಂತ ಮೇಲ್ಪಟ್ಟ ಕಾಮಗಾರಿಗಳ ಅನುಮೋದನೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ: ಸಿಎಂ ಬೊಮ್ಮಾಯಿ

ಶಿವಮೊಗ್ಗ: ರಾಜ್ಯದ ಎಲ್ಲ ಇಲಾಖೆಯ 50 ಕೋಟಿ ರೂ.ಗಳ ಮೇಲ್ಪಟ್ಡ ಕಾಮಗಾರಿಗಳಿಗೆ ಅನುಮೋದನೆ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಮಗಾರಿಗಳ ಅಂದಾಜು ವೆಚ್ಚ ಮಾಡುವಾಗಿನಿಂದಲೇ ಎಲ್ಲವೂ ಪ್ರಾರಂಭವಾಗುತ್ತದೆ ಎಂಬ ದೂರಿನ ಹಿನ್ನೆಲೆಯಲ್ಲಿ ಹಾಗೂ ತಮಗೆ ಬೇಕಾದಂತವರಿಗೆ ಟೆಂಡರ್ … Continued

ಸ್ನಾನಕ್ಕೆ ತೆರಳಿದ್ದ ಪೀತಾಂಬರೇಶ್ವರ ಆಶ್ರಮದ ನಾಲ್ವರು ಬಾಲಕಿಯರು ಕಾಲುವೆ ನೀರಿನ ಪಾಲು

ಖಾಂಡ್ವಾ (ಮಧ್ಯಪ್ರದೇಶ): ಜಿಲ್ಲೆಯ ಓಂಕಾರೇಶ್ವರ ಪ್ರದೇಶದಲ್ಲಿರುವ ಕೋಠಿ ಗ್ರಾಮದಲ್ಲಿ ಓಂಕಾರೇಶ್ವರ ಅಣೆಕಟ್ಟಿನ ಕಾಲುವೆಯಲ್ಲಿ ಸಾಧ್ವಿ ಋತಂಬರ ಪೀತಾಂಬರೇಶ್ವರ ಆಶ್ರಮದ ನಾಲ್ವರು ಹುಡುಗಿಯರು ಮುಳುಗಿ ಮೃತಪಟ್ಟಿದ್ದಾರೆ ಬುಧವಾರ ಬೆಳಗ್ಗೆ 6 ಗಂಟೆಗೆ 6 ಬಾಲಕಿಯರು ಸ್ನಾನಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ. ಕಾಲುವೆಯ ರೇಲಿಂಗ್​ಗೆ ಕಟ್ಟಿದ್ದ ಚೈನ್ ಹಿಡಿದುಕೊಂಡು ಎಲ್ಲರೂ ಸ್ನಾನ ಮಾಡುತ್ತಿದ್ದರು. ಆಗ ಚೈನ್‌ ಒಬ್ಬ ಹುಡುಗಿಯ … Continued