ಕರ್ನಾಟಕದಲ್ಲಿ ವಾರಾಂತ್ಯದಲ್ಲಿ ಮಳೆ ಪ್ರಮಾಣದಲ್ಲಿ ಏರಿಕೆ: ಮುನ್ಸೂಚನೆ

ಬೆಂಗಳೂರು : ಕರ್ನಾಟಕದಲ್ಲಿ ವಾರಾಂತ್ಯದಲ್ಲಿ ಮಳೆ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ ಹೇಳಿದ್ದಾರೆ. ಮೇಲ್ಮೈ ಸುಳಿಗಾಳಿ ದಕ್ಷಿಣ ತಮಿಳುನಾಡು ಪ್ರದೇಶದಲ್ಲಿದೆ. ಟ್ರಫ್ ತೆಲಂಗಾಣದಿಂದ ದಕ್ಷಿಣ ತಮಿಳುನಾಡು ಕಡೆಗೆ ಸಾಗಿದೆ. ನಿನ್ನೆವರೆಗೂ ಇದ್ದ ಅರಬ್ಬೀ ಸಮುದ್ರದ ಮೇಲ್ಮೈ ಸುಳಿಗಾಳಿ ದುರ್ಬಲಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕರಾವಳಿಯಲ್ಲಿ ಏಪ್ರಿಲ್ 21ರ ವರೆಗೂ … Continued

ಪಾಕಿಸ್ತಾನ: 37 ಸದಸ್ಯರ ಸಂಪುಟ ಪ್ರಮಾಣ ವಚನ ಸ್ವೀಕಾರ, ಸದ್ಯಕ್ಕೆ ಹೊರಗುಳಿದ ಬಿಲಾವಲ್ ಭುಟ್ಟೊ

ನವದೆಹಲಿ: ಮುಂದಿನ ವಿದೇಶಾಂಗ ಸಚಿವ ಎಂದು ಬಿಂಬಿಸಲಾಗಿದ್ದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಸಂಪುಟ ಸೇರದಿರಲು ನಿರ್ಧರಿಸಿದ್ದಾರೆ. ನಂತರದ ದಿನಗಳಲ್ಲಿ ಭುಟ್ಟೊ ಸಂಪುಟ ಸೇರಬಹುದು ಎಂದು ತಿಳಿದು ಬಂದಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಂಪುಟದಲ್ಲಿ ಮೂವತ್ತೊಂದು ಕ್ಯಾಬಿನೆಟ್‌ ಮಂತ್ರಿಗಳು, ಮೂವರು ರಾಜ್ಯ ಸಚಿವರು ಮತ್ತು ಮೂವರು … Continued

ನಟ ದಿಲೀಪ ಅರ್ಜಿ ವಜಾ ಮಾಡಿದ ಕೇರಳ ಹೈಕೋರ್ಟ್

ತಿರುವನಂತಪುರಂ: ಮಲಯಾಳಂ ನಟ ದಿಲೀಪ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ತನಿಖಾಧಿಕಾರಿಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಪ್ರಕರಣದಲ್ಲಿ ಪೊಲೀಸರು ಮಲಯಾಳಂ ನಟ ದಿಲೀಪ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಮಂಗಳವಾರ ನ್ಯಾಯಮೂರ್ತಿ ಜಿಯಾದ್ ರೆಹಮಾನ್ ಈ ಕುರಿತು ತೀರ್ಪು ಪ್ರಕಟಿಸಿದರು ಹಾಗೂ ಅರ್ಜಿಯನ್ನು ವಜಾಗೊಳಿಸಿದರು.ಮಲಯಾಳಂ ಚಿತ್ರರಂಗವೇ ಕೇರಳ ಹೈಕೋರ್ಟ್ ತೀರ್ಪಿಗಾ ಎದುರು ನೋಡುತ್ತಿತ್ತು. … Continued

ಸರ್ಪ್ರೈಸ್​ ಗಿಫ್ಟ್​ ಕೊಡುವುದಾಗಿ ಕಣ್ಣು ಮುಚ್ಚಲು ಹೇಳಿ ಭಾವಿ ಪತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಯುವತಿ..!

ವಿಜಯವಾಡ: ಮದುವೆಯಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಭಾವಿ ಪತಿಯನ್ನೇ ಹತ್ಯೆ ಮಾಡಲು ಸಂಚು ರೂಪಿಸಿರುವ ಘಟನೆ ಆಂಧ್ರ ಪ್ರದೇಶದ ಅನಕಪಲ್ಲೆ ಜಿಲ್ಲೆಯ ರವಿಕಾಮತಮ್​ ಮಂಡಲದ ಕೋಮಲಪುಡಿ ಗ್ರಾಮದಲ್ಲಿ ನಡೆದ ಆಘಾತಕಾರಿ ಘಟನೆ ವರದಿಯಾಗಿದ್ದು, ಅದೃಷ್ಟವಶಾತ್​ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂತ್ರಸ್ತ ರಾಮು ನಾಯ್ಡು ಹೈದರಾಬಾದ್​ನ ಸಿಎಸ್​ಐಆರ್​ನಲ್ಲಿ​ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಮದುವೆ ಆರೋಪಿತ ಯುವತಿ ಜೊತೆ ಮೇ … Continued

ದಲಿತ ಅಪ್ರಾಪ್ತ ವಿದ್ಯಾರ್ಥಿಗೆ ಥಳಿಸಿ, ಕಾಲು ನೆಕ್ಕಿಸಿದರು…! ವೀಡಿಯೊ ವೈರಲ್‌ ಆದ ನಂತರ ಏಳು ಮಂದಿ ಬಂಧನ

ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ದಲಿತ ಸಮುದಾಯದ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆಸಿದ ಕೆಲವರು ಅಪ್ರಾಪ್ತ ಬಾಲಕನಿಂದ ತಮ್ಮ ಪಾದಗಳನ್ನು ನೆಕ್ಕಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಏಳು ಮಂದಿಯನ್ನು ಬಂಧಿಸಲಾಗಿದೆ. 10ನೇ ತರಗತಿಯ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ಕಾಲು ನೆಕ್ಕುವಂತೆ ಮಾಡಿರುವುದನ್ನು ವೀಡಿಯೊ ತೋರಿಸಿದೆ. … Continued

ಈ ವರ್ಷದಿಂದಲೇ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ: ಶಿಕ್ಷಣ ಸಚಿವ ನಾಗೇಶ

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿಯೇ ಪಠ್ಯದಲ್ಲಿ ಭಗವದ್ಗೀತೆಯನ್ನು ನೈತಿಕ ಶಿಕ್ಷಣ ವಿಭಾಗದಲ್ಲಿ ಸೇರ್ಪಡೆ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ ತಿಳಿಸಿದ್ದಾರೆ. ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು ಈ ವರ್ಷದಿಂದಲೇ ಭಗವದ್ಗೀತೆಯು ಸೇರ್ಪಡೆಯಾದರೂ ಆದರೆ ಪರೀಕ್ಷೆಗೆ ಈ ವಿಷಯ ಇರುವುದಿಲ್ಲ. ಇದು ನೈತಿಕ ಶಿಕ್ಷಣದ ಭಾಗವಾಗಿರಲಿದೆ ಎಂದು ಸ್ಪಷ್ಟಪಡಿಸಿದರು. ಭಗವದ್ಗೀತೆಯನ್ನು ನೈತಿಕ … Continued

ಕಾಬೂಲ್ ಹೈಸ್ಕೂಲ್‌ನಲ್ಲಿ ಸರಣೀ ಸ್ಫೋಟ: ಕನಿಷ್ಠ 6 ಮಂದಿ ಸಾವು, ಹಲವರಿಗೆ ಗಾಯ

ಕಾಬೂಲ್‌ : ಅಫ್ಘಾನಿಸ್ತಾನದ ಭದ್ರತಾ ಮತ್ತು ಆರೋಗ್ಯ ಅಧಿಕಾರಿಗಳ ಪ್ರಕಾರ, ಮಂಗಳವಾರ ಪಶ್ಚಿಮ ಕಾಬೂಲ್‌ನ ಪ್ರೌಢಶಾಲೆಯೊಂದರಲ್ಲಿ ಮೂರು ಸ್ಫೋಟಗಳು ಸಂಭವಿಸಿವೆ, ಹಲವಾರು ಜನರು ಮೃತಪಟ್ಟಿದ್ದಾರೆ. ಕನಿಷ್ಠ 6 ಜನರು ಮೃತಪಟ್ಟಿದ್ದಾರೆ, ಡಜನ್ಗಟ್ಟಲೆ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಆತಂಕವಿದೆ. ನೆರೆಹೊರೆಯಲ್ಲಿರುವ ಅನೇಕ ನಿವಾಸಿಗಳು ಶಿಯಾ ಹಜಾರಾ ಸಮುದಾಯಕ್ಕೆ ಸೇರಿದ್ದಾರೆ, ಇಸ್ಲಾಮಿಕ್ ಸ್ಟೇಟ್ ಸೇರಿದಂತೆ ಸುನ್ನಿ … Continued

ಏಪ್ರಿಲ್‌ 22ರಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಹಿಜಾಬ್‌ ಸೇರಿ ಧರ್ಮ ಸೂಚಕ ವಸ್ತ್ರ ಧರಿಸಲು ಅವಕಾಶ ಇಲ್ಲ ಎಂದ ಶಿಕ್ಷಣ ಸಚಿವರು

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ  ಏಪ್ರಿಲ್‌ 22ರಿಂದ ಆರಂಭವಾಗಲಿದ್ದು, ಹಿಜಾಬ್ ಸೇರಿ ಯಾವುದೇ ಧರ್ಮ ಸೂಚಕ ವಸ್ತ್ರ ಧರಿಸಲು ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಈಗಾಗಲೇ ಡಿಸಿ, ಎಸ್ಪಿಗಳ ಜೊತೆ ಸಭೆ ನಡೆಸಲಾಗಿದೆ. ಆದರೆ ಪರೀಕ್ಷೆಗೆ ಹಿಜಬ್ ನಿಷೇಧಿಸಲಾಗಿದೆ. ಸಮವಸ್ತ್ರದಲ್ಲೇ ಪರೀಕ್ಷೆಗೆ ಬರಬೇಕು. ಧಾರ್ಮಿಕ … Continued

20 ವರ್ಷದ ಯುವತಿ ಅಪಹರಿಸಿ ಮಾದಕ ವಸ್ತು ನೀಡಿ ಅತ್ಯಾಚಾರ ಮಾಡಿದ ಟಿಆರ್‌ಎಸ್ ಮುಖಂಡನ ಮಗ, ಆತನ ಸ್ನೇಹಿತ: ಬಂಧನ

ಹೈದರಾಬಾದ್: ಸೂರ್ಯಪೇಟ್ ಜಿಲ್ಲೆಯ ಕೊಡಾಡ್ ಪಟ್ಟಣದ ಟಿಆರ್‌ಎಸ್ ವಾರ್ಡ್ ಕೌನ್ಸಿಲರ್‌ನ ಮಗ ಮತ್ತು ಆತನ ಸ್ನೇಹಿತ 20 ವರ್ಷದ ಯುವತಿಯನ್ನು ಅಪಹರಿಸಿ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ. ಶುಕ್ರವಾರ ಸಂತ್ರಸ್ತೆಯನ್ನು ಸಂಬಂಧಿಕರೊಬ್ಬರ ಮನೆಗೆ ಹೋಗುತ್ತಿದ್ದಾಗ ಅಪಹರಿಸಿದ ಇಬ್ಬರೂ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. 20 ವರ್ಷದ ಸಂತ್ರಸ್ತೆ ತನ್ನ ತಾಯಿಯೊಂದಿಗೆ … Continued

ಚಂದ್ರನ ಎರಡು ಮುಖಗಳ ನಡುವೆ ದೊಡ್ಡ ವ್ಯತ್ಯಾಸ ಯಾಕೆ: ರಹಸ್ಯ ಭೇದಿಸಿದ ವಿಜ್ಞಾನಿಗಳು…!

ವಿವಿಧ ದೇಶಗಳು ಚಂದ್ರನ ಹಿಂದೆ ಓಡುತ್ತಿರುವಾಗ, ಹೊಸ ಸಂಶೋಧನೆಯು ಚಂದ್ರನ ಎರಡು ಬದಿಗಳು ಏಕೆ ವಿಭಿನ್ನವಾಗಿವೆ ಎಂಬುದರ ಹಿಂದೆ ಈವರೆಗೆ ತಿಳಿದಿಲ್ಲದ ರಹಸ್ಯವನ್ನು ಬಹಿರಂಗಪಡಿಸಿದೆ. ಈ ಒಗಟಿಗೆ ಪರಿಹಾರವು 4.3 ಶತಕೋಟಿ ವರ್ಷಗಳ ಹಿಂದೆ ಚಂದ್ರನಿಗೆ ಡಿಕ್ಕಿ ಹೊಡೆದು ಅಲುಗಾಡಿಸಿದ ಪ್ರಾಚೀನ ಕ್ಷುದ್ರಗ್ರಹ ಘರ್ಷಣೆಯಲ್ಲಿದೆ. ಈ ಘರ್ಷಣೆಯು ಎಷ್ಟು ದೊಡ್ಡದಾಗಿತ್ತು ಎಂದರೆ ಅದು ಭೂಮಿಯ ನೈಸರ್ಗಿಕ … Continued