ಬೆನ್ನಟ್ಟಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಚಲಿಸುತ್ತಿದ್ದ ಟ್ರಕ್‌ನಿಂದ ದನಗಳನ್ನು ಎಸೆದ ಗೋವುಗಳ ಕಳ್ಳರು..! | ವೀಕ್ಷಿಸಿ

ನವದೆಹಲಿ: ಕಳ್ಳರನ್ನು ಹರ್ಯಾಣ ಪೊಲೀಸರು ಶನಿವಾರ 22 ಕಿಲೋಮೀಟರ್‌ಗಳಷ್ಟು ದೂರ ಬೆನ್ನಟ್ಟಿದ ನಂತರ ಹಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಮತ್ತು ಗೋರಕ್ಷಕರ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಗುರುಗ್ರಾಮ್‌ನ ಐವರನ್ನು ಬಂಧಿಸಲಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಏಳು ಹಸುಗಳೊಂದಿಗೆ ಪರಾರಿಯಾಗುತ್ತಿದ್ದ ಹಸುಗಳ್ಳರನ್ನು ಮೂರು ಎಸ್ಯುವಿಗಳಲ್ಲಿ ಬೆನ್ನಟ್ಟುತ್ತಿದ್ದ ಜಾಗೃತದಳದ ಮೇಲೆ ಗೋ ಕಳ್ಳರು ಗುಂಡು ಹಾರಿಸಿದ್ದಾರೆ. ಅವರು … Continued

ಸುರತ್ಕಲ್: ಸಮುದ್ರದಲ್ಲಿ ಮುಳುಗಿ ಸಹೋದರಿಯರಿಬ್ಬರು ಸಾವು

ಮಂಗಳೂರು: ಒಂದೇ ಕುಟುಂಬದ ಇಬ್ಬರು ಯುವತಿಯರು ಮುಳುಗಿ ಮೃತಪಟ್ಟ ಘಟನೆ ಸುರತ್ಕಲ್ ಎನ್‌ಐಟಿಕೆ ಬೀಚ್‌ನಲ್ಲಿ ನಡೆದಿದೆ. ಮೃತರನ್ನು ಯುವತಿಯರನ್ನು ಮಂಗಳೂರು ಮೂಲದ ತೃಷಾ(17), ವೈಷ್ಣವಿ(18) ಎಂದು ಗುರುತಿಸಲಾಗಿದೆ. ಸಮುದ್ರಕ್ಕಿಳಿದು ಆಟವಾಡುತ್ತಿದ್ದಾಗ ದೊಡ್ಡ ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮೃತ ವೈಷ್ಣವಿ ತಂದೆ ವೆಂಕಟೇಶ ಎಂಬವರನ್ನು ರಕ್ಷಣೆ ಮಾಡಲಾಗಿದೆ. ಮೃತರು … Continued

ಮಾಲೀಕನ ಮೇಲೆ ಚಿರತೆ ದಾಳಿ: ಚಿರತೆ ಮೇಲೆ ಪ್ರತಿದಾಳಿ ಮಾಲೀಕನ ರಕ್ಷಿಸಿದ ಶ್ವಾನಗಳು…!

ಶಿವಮೊಗ್ಗ: ನಾಯಿಗಳೆಂದರೆ ನಂಬಿಗೆ ಹಾಗೂ ನಿಯತ್ತು. ಎಂಥದ್ದೇ ಸಂದರ್ಭದಲ್ಲಿಯೂ ಅದು ತನ್ನ ಒಡೆಯನನ್ನು ಬಿಟ್ಟುಕೊಡುವುದಿಲ್ಲ. ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತವೆ. ಇಂಥದ್ದೊಂದು ನಿದರ್ಶನಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಬಿಟ್ಟುಕೊಡುವುದಿಲ್ಲ. ಸೊರಬ ತಾಲೂಕಿನ ಆನವಟ್ಟಿ ಸಮೀಪದ ಎಣ್ಣೆಕೊಪ್ಪದಲ್ಲಿ ಮಾಲೀಕನನ್ನು ಶ್ವಾನಗಳು ಚಿರತೆಯಿಂದ ಕಾಪಾಡಿದ ಘಟನೆ ವರದಿಯಾಗಿದೆ. ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ ಎಣ್ಣೆಕೊಪ್ಪ ಗೊಲ್ಲರ ತಾಂಡಾದ ಬಂಗಾರಪ್ಪ ಅವರ … Continued

ಜನವಸತಿ ಪ್ರದೇಶದಲ್ಲಿ ರಸ್ತೆ ದಾಟಿದ 25-30 ಅಡಿ ಉದ್ದದ ದೈತ್ಯ ಹೆಬ್ಬಾವು.. ದೃಶ್ಯ ವೀಡಿಯೊದಲ್ಲಿ ಸೆರೆ

ಇದು ಅಂತಿಂತ ಹಾವಲ್ಲ, ಬರೋಬ್ಬರಿ 25-30 ಅಡಿಗಳಷ್ಟು ಉದ್ದವಿದೆ. ಈ ದೈತ್ಯ ಹೆಬ್ಬಾವು ಒಡಿಶಾದ ನಬರಂಗಪುರ ಜಿಲ್ಲೆಯ ರಸ್ತೆಯೊಂದರಲ್ಲಿ ಕಾಣಿಸಿಕೊಂಡಿದೆ. ಹಾವು ಸುಮಾರು 25-30 ಅಡಿ ಉದ್ದವಿರಬಹುದು ಎಂದು ಅಂದಾಜಿಸಲಾಗಿದೆ. ಶುಕ್ರವಾರ ರಾತ್ರಿ ಖಾತಿಗುಡ ಜವಾಹರ ನವೋದಯ ವಿದ್ಯಾಲಯದ ಮುಂದಿನ ಮುಖ್ಯರಸ್ತೆ ದಾಟುತ್ತಿದ್ದಾಗ ಸ್ಥಳೀಯರು ಹಾವನ್ನು ಕಂಡಿದ್ದಾರೆ. ಈ ದೈತ್ಯ ಹೆಬ್ಬಾವು ರಸ್ತೆ ದಾಟುವಾಗ ಮೊಬೈಲ್‌ನಲ್ಲಿ … Continued

ಚಂದ್ರು ಹತ್ಯೆ ಪ್ರಕರಣ ಸಿಐಡಿಗೆ ತನಿಖೆಗೆ ವಹಿಸಿದ ರಾಜ್ಯ ಸರ್ಕಾರ

ಬೆಂಗಳೂರು; ಭಾರೀ ಚರ್ಚೆಗೆ ಕಾರಣವಾಗಿರುವ ಬೆಂಗಳೂರು ನಗರದ ಚಂದ್ರು ಕೊಲೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಸಿಐಡಿ ತನಿಖೆ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರದ, ಹಳೆಗುಡ್ಡದ ಹಳ್ಳಿ ಪ್ರದೇಶದಲ್ಲಿ ನಡೆದ, ಚಂದ್ರಶೇಖರ್ ಎಂಬ ಯುವಕನ ಬರ್ಬರ ಹತ್ಯೆ ಪ್ರಕರಣವನ್ನು, ರಾಜ್ಯ ಸರಕಾರ ಸಿಐಡಿಗೆ ವಹಿಸಿದೆ ಎಂದು … Continued

ಇಮ್ರಾನ್ ಖಾನ್: ಕ್ರಿಕೆಟ್ ವೃತ್ತಿ ಜೀವನದ ಯಶಸ್ಸನ್ನು ರಾಜಕೀಯದಲ್ಲಿ ಪುನರಾವರ್ತಿಸಲು ವಿಫಲನಾದ ನಾಯಕ… ಇಮ್ರಾನ್‌ ಸವೆಸಿದ ಏಳುಬೀಳಿನ ದಾರಿ

ಇಸ್ಲಾಮಾಬಾದ್: 1992ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ದುರ್ಬಲ ತಂಡವನ್ನು ಚಾಂಪಿಯನ್‌ ಆಗಿ ಪರಿವರ್ತಿಸಿದ ಪಾಕಿಸ್ತಾನದ ಕ್ರಿಕೆಟಿಗ-ರಾಜಕಾರಣಿ ಇಮ್ರಾನ್ ಖಾನ್, ರಾಜಕೀಯದಲ್ಲಿ ಅದೇ ವರ್ಚಸ್ಸನ್ನು ಪುನರಾವರ್ತಿಸಲು ವಿಫಲರಾದರು. ಅಲ್ಲಿ ಅವರು ತಮ್ಮ ಮೊದಲ ಇನ್ನಿಂಗ್ಸ್‌ನ ಮಧ್ಯದಲ್ಲಿ ದೃಢವಾದ ವಿರೋಧ ಪಕ್ಷಗಳಿಂದ ರನೌಟ್ ಆದರು. 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪರಿಣಾಮಕಾರಿಯಾಗಿ ಬಹುಮತವನ್ನು ಕಳೆದುಕೊಂಡ ಖಾನ್ ಅವರು ಸಂಸತ್ತನ್ನು ವಿಸರ್ಜಿಸಿದರು … Continued

ಮಧ್ಯರಾತ್ರಿ ವಿಶ್ವಾಸಮತದಲ್ಲಿ ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ಇಮ್ರಾನ್‌ ಖಾನ್‌ ಪದಚ್ಯುತಿ, ಸರ್ಕಾರದ ಪತನ

ಇಸ್ಲಾಮಾಬಾದ್‌: ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ತಮ್ಮ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯದಲ್ಲಿ ಸೋಲನುಭವಿಸಿದ್ದಾರೆ. ಶನಿವಾರ ಮಧಯರಾತ್ರಿ ನಂತರ ಅವಿಶ್ವಾಸ ನಿರ್ಣಯದ ಮೇಲಿನ ಮತದಾನದ ಸಂದರ್ಭದಲ್ಲಿ ದೇಶದ ರಾಷ್ಟ್ರೀಯ ಅಸೆಂಬ್ಲಿಯ 174 ಸದಸ್ಯರು ಇಮ್ರಾನ್‌ ಖಾನ್‌ ವಿರುದ್ಧ ಮತಚಲಾಯಿಸಿದ ಕಾರಣ ಹೈ-ಆಕ್ಟೇನ್ ಮಧ್ಯರಾತ್ರಿಯ ನಾಟಕದಲ್ಲಿ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಪದಚ್ಯುತಗೊಂಡರು. ಇಮ್ರಾನ್ … Continued

ಧಾರವಾಡ: ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಹಿಂದೂಯೇತರ 4 ಅಂಗಡಿಗಳ ಮೇಲೆ ದಾಳಿ

ಧಾರವಾಡ : ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಹಿಂದೂಯೇತರ ವ್ಯಾಪಾರಿಗಳ 4 ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ. ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ನಬಿಸಾಬ್ ಎಂಬುವವರ ಅಂಗಡಿ ಸೇರಿದಂತೆ ಇತರೆ ನಾಲ್ಕು ಅಂಗಡಿಗಳಿಗೆ ಹಾನಿಮಾಡಲಾಗಿದೆ. ಅಂಗಡಿಯಲ್ಲಿದ್ದ ಕಲ್ಲಂಗಡಿ ಹಣ್ಣು, ತೆಂಗಿನಕಾಯಿ ಒಡೆದು ಹಾಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಕಳೆದ 15 … Continued

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಭಾರತೀಯ ಮೂಲದ ಕಲ್ಟ್‌ ನಾಯಕ ಬ್ರಿಟನ್‌ ಜೈಲಿನಲ್ಲಿ ಸಾವು

ಲಂಡನ್‌: ಲಂಡನ್‌ನಲ್ಲಿ ರಹಸ್ಯವಾದ ಉಗ್ರ ಮಾವೋವಾದಿ ಕಲ್ಟ್‌ ನಡೆಸುತ್ತಿದ್ದ ಹಾಗೂ ಆರು ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಬ್ರಿಟನ್‌ ನ್ಯಾಯಾಲಯದಿಂದ 23 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಲ್ಲಿಯೇ ಮೃತಪಟ್ಟಿದ್ದಾರೆ. ಕಾಮ್ರೇಡ್ ಬಾಲಾ ಎಂದು ಅವರ ಅನುಯಾಯಿಗಳಿಗೆ ತಿಳಿದಿರುವ ಅರವಿಂದನ್ ಬಾಲಕೃಷ್ಣನ್ ಅವರು 2016 ರಲ್ಲಿ ಆರು ಅಸಭ್ಯ … Continued

ಬಸವಕಲ್ಯಾಣದಲ್ಲಿ ಹೊಸ ಅನುಭವ ಮಂಟಪ ನಿರ್ಮಾಣ ಮೇ ತಿಂಗಳಲ್ಲಿ ಆರಂಭ: ಸಿಎಂ ಬೊಮ್ಮಾಯಿ

ಬಸವಕಲ್ಯಾಣ: 12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಅಸ್ತಿತ್ವದಲ್ಲಿದ್ದ ಮೂಲ ಅನುಭವ ಮಂಟಪ ಇದ್ದಲ್ಲಿ ಮೇ ತಿಂಗಳಿನಿಂದ ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಇಲ್ಲಿ ಪ್ರಕಟಿಸಿದ್ದಾರೆ. ಬಸವಕಲ್ಯಾಣ ಕ್ಷೇತ್ರ ಸಮಿತಿ ಹಾಗೂ ವಿಕಾಸ ಅಕಾಡೆಮಿ ಜಂಟಿಯಾಗಿ ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಯಾತ್ರೆ ಪರ್ವ ಉದ್ಘಾಟಿಸಿ ಮಾತನಾಡಿದ ಅವರು, … Continued