ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ಮಹಿಳೆಯ ಸಾವು, ಐವರಿಗೆ ಗಾಯ

ವಿಜಯಪುರ: ಚಲಿಸುತ್ತಿದ್ದ ಆಟೋ ಮೇಲೆ ಬೃಹತ್ ಮರ ಉರುಳಿ ಬಿದ್ದು ಓರ್ವ ಮಹಿಳೆ ಸಾವಿಗೀಡಾದ ಘಟನೆ ಇಲ್ಲಿನ ಪೊಲೀಸ್ ಪರೇಡ್ ಮೈದಾನದ ಬಳಿ ಮಂಗಳವಾರ ನಡೆದಿದೆ. ಅಲ್ಲದೆ, ಐವರಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯ ಸಿದ್ದಾರೂಢ ಕಾಲನಿಯ ನಿವಾಸಿ ಯಲ್ಲಮ್ಮಾ ಕೊಂಡಗೂಳಿ (45) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಆಟೋ ಚಾಲಕ ಸಚಿನ ರಾಠೋಡ್‌ ಹಾಗೂ ಇತರ ನಾಲ್ವರು … Continued

ಧ್ವನಿವರ್ಧಕ ಮಿತಿ ಆದೇಶ ಉಲ್ಲಂಘಿಸಿದ್ರೆ ಕಾನೂನು ಕ್ರಮ: ಬೆಂಗಳೂರು ಪೊಲೀಸ್ ಆಯುಕ್ತ ಕಮಲ್‌ ಪಂತ್‌

ಬೆಂಗಳೂರು: ಪ್ರಾರ್ಥನಾ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಹೈಕೋರ್ಟ್ ನೀಡಿರುವ ಆದೇಶವನ್ನು ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಮಂಗಳವಾರ ತಿಳಿಸಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಸೀದಿ, ಮಂದಿರಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಕಳೆದ ಆರು ತಿಂಗಳ ಹಿಂದೆಯೇ ಹೈಕೋರ್ಟ್ ಆದೇಶ ನೀಡಿದೆ. … Continued

ಬಳಕೆದಾರರಿಗೆ ಎಡಿಟ್ ಬಟನ್ ಬೇಕೇ ಎಂದು ಕೇಳಿದ ಟ್ವಿಟರ್‌ನ ಅತಿದೊಡ್ಡ ಷೇರುದಾರರಾದ ಎಲೋನ್ ಮಸ್ಕ್

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಶನಿವಾರದಂದು ಟ್ವಿಟ್ಟರಿನ ಅತಿದೊಡ್ಡ ಷೇರುದಾರನಾದ ನಂತರ ತನ್ನ ಟ್ವಿಟರ್ ವೈಶಿಷ್ಟ್ಯದ ಆದ್ಯತೆಗಳನ್ನು ಸ್ಪಷ್ಟಪಡಿಸಲು ಸಮಯವ್ಯರ್ಥ ಮಾಡಿಲ್ಲ. ಟೆಸ್ಲಾ ಸಿಇಒ ಅವರು ತಮ್ಮ 80 ಮಿಲಿಯನ್ ಅನುಯಾಯಿಗಳ ಬಳಿ, ಪೋಸ್ಟ್ ಮಾಡಿದ ನಂತರ ತಮ್ಮ ಟ್ವೀಟ್‌ಗಳನ್ನು ಎಡಿಟ್‌ (edit) ಮಾಡಲು ಬಯಸುತ್ತಾರೆಯೇ ಎಂಬುದರ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಟ್ವಿಟರ್‌ನ … Continued

ಟಿವಿ ನ್ಯೂಸ್ ಚಾನೆಲ್‌ಗಳ ಲೋಗೊ ಬಳಸಿ ನಕಲಿ ಸುದ್ದಿಗಳನ್ನು ಹರಡುತ್ತಿದ್ದ ಭಾರತದ 18, ಪಾಕ್ ಮೂಲದ 4 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದ ಮಾಹಿತಿ-ಪ್ರಸಾರ ಸಚಿವಾಲಯ

ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 18 ಭಾರತೀಯ ಮತ್ತು ನಾಲ್ಕು ಪಾಕಿಸ್ತಾನ ಮೂಲದ ಯೂ ಟ್ಯೂಬ್ ಸುದ್ದಿ ಚಾನೆಲ್‌ಗಳನ್ನು ನಕಲಿ ಸುದ್ದಿ ಹಾಗೂ ಭಾರತ ವಿರೋಧಿ ವಿಷಯವನ್ನು ಪೋಸ್ಟ್ ಮಾಡಿದ್ದಕ್ಕಾಗಿ ನಿರ್ಬಂಧಿಸಿದೆ. ವೀಕ್ಷಕರನ್ನು ದಾರಿತಪ್ಪಿಸಲು ಈ ಯೂ ಟ್ಯೂಬ್ ಚಾನೆಲ್‌ಗಳು ಟಿವಿ ನ್ಯೂಸ್ ಚಾನೆಲ್‌ಗಳ ಲೋಗೊಗಳು ಮತ್ತು ಸುಳ್ಳು ಥಂಬ್‌ನೇಲ್‌ಗಳನ್ನು ಬಳಸಿಕೊಂಡಿವೆ ಎಂದು ಸಚಿವಾಲಯ … Continued

ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ರಾಜಕೀಯ ಬಿಕ್ಕಟ್ಟು: ಮೈತ್ರಿಕೂಟದಿಂದ ಹೊರನಡೆದ 41 ಸಂಸದರು, ಬಹುಮತ ಕಳೆದುಕೊಂಡ ರಾಜಪಕ್ಸೆ ಸರ್ಕಾರ

ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರ ಆಡಳಿತ ಒಕ್ಕೂಟವು 225 ಸದಸ್ಯರ ಸಂಸತ್ತಿನಲ್ಲಿ ತನ್ನ ಬಹುಮತವನ್ನು ಕಳೆದುಕೊಂಡಿದೆ. ಕನಿಷ್ಠ 41 ಶಾಸಕರು ಆರ್ಥಿಕ ಬಿಕ್ಕಟ್ಟಿನ ಮೇಲೆ ಹೆಚ್ಚುತ್ತಿರುವ ಅಶಾಂತಿಯ ನಡುವೆ ಮೈತ್ರಿಯಿಂದ ಹೊರನಡೆದರು ಎಂದು ಸುದ್ದಿ ವರದಿಗಳು ತಿಳಿಸಿವೆ. ನಮ್ಮ ಪಕ್ಷವು ಜನರ ಪರವಾಗಿದೆ” ಎಂದು ರಾಜಪಕ್ಸೆ ಅವರ ಒಕ್ಕೂಟಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡ ಶ್ರೀಲಂಕಾ … Continued

ಕಾಲೇಜು ಶಿಕ್ಷಣ ಇಲಾಖೆ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗಾವಣೆ ಕೌನ್ಸೆಲಿಂಗ್ ಆದೇಶ ಪ್ರಕಟ

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗಾವಣೆಗೆ ಕಾಲೇಜು ಶಿಕ್ಷಣ ಇಲಾಖೆಯಿಂದ ಕೌನ್ಸೆಲಿಂಗ್‌ಗೆ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಕೂ ಮೂಲಕ ಮಾಹಿತಿ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣಅವರು ವರ್ಗಾವಣೆ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದಾರೆ. ರಾಜ್ಯದ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ … Continued

ಆಜಾನ್ ಮಾತ್ರವಲ್ಲ, ಬಸ್ ಸೌಂಡಿಗೂ ಮಿತಿಯಿದೆ, ಕೋರ್ಟ್ ಆದೇಶ ಎಲ್ಲರಿಗೂ ಅನ್ವಯ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಆಜಾನ್​ಗೆ ಮಾತ್ರ ಶಬ್ದ ಮಿತಿಯಲ್ಲ, ಬಸ್ ಸೌಂಡಿಗೂ ಇದೆ, ಶಬ್ದ ಮಾಲಿನ್ಯ ಬಗ್ಗೆ ಕೋರ್ಟ್ ಆದೇಶ ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ತಿಳಿಸಿದರು. ಕೋರ್ಟ್ ಆದೇಶ ಪಾಲಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಕಾನೂನು … Continued

ಮಲೆನಾಡು ಬಯಲಾಗುತ್ತದೆ, ಬಯಲು ಮಲೆನಾಡಾಗುತ್ತದೆ…ದೇಶದಲ್ಲಿ ದೊಡ್ಡ ಅವಘಡ ಸಂಭವಿಸಲಿದೆ: ಕೋಡಿಮಠ ಶ್ರೀಗಳು ಭವಿಷ್ಯ

ಹಾಸನ : ದೇಶದಲ್ಲಿ ರಾಜಕೀಯ ವಿಪ್ಲವವಾಗಿ, ಗುಂಪುಗಳಾಗುತ್ತವೆ. ಬೆಂಕಿ, ಗಾಳಿ, ಗುಡುಗು ಸಿಡಿಲಿನಿಂದ ವಿಪರೀತ ಅನಾಹುತಗಳಾಗುತ್ತವೆ. ದೇಶದಲ್ಲಿ ಅಶಾಂತಿ, ಮತೀಯ ಗಲಭೆ, ದೊಂಬಿಗಳು, ಸಾವು-ನೋವುಗಳು ಕೊಲೆಗಳು ಹೆಚ್ಚಾಗಲಿವೆ. ವಿಶೇಷವಾಗಿ ವಿದ್ಯುತ್‌ನಿಂದ ಹೆಚ್ಚು ಅಪಾಯವಿದೆ ಎಂದು ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಈ ವರ್ಷದ ಫಲಾಫಲದ ಬಗ್ಗೆ ಮಾತನಾಡಿದ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ … Continued

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ತುಟ್ಟಿ ಭತ್ಯೆ ಹೆಚ್ಚಳ ಮಾಡಿದ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸರ್ಕಾರ ರಾಜ್ಯ ಸರ್ಕಾರದ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ. ಜನವರಿ 1 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯನ್ನು ಶೇ. 2.75 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್‌ ಮಾಡಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಜನವರಿ 1 … Continued

ಮುಂದಿದೆ ಸವಾಲಿನ ಹಾದಿ, ಎಲ್ಲ ಹಂತಗಳಲ್ಲಿ ಒಗ್ಗಟ್ಟು ಬೇಕು: ಕಾಂಗ್ರೆಸ್‌ ಸಂಸದರ ಸಭೆಯಲ್ಲಿ ಬಂಡಾಯ ಗುಂಪಿಗೆ ಸುಳಿವು ನೀಡಿದ ಸೋನಿಯಾ ಗಾಂಧಿ

ನವದೆಹಲಿ: ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಸಾಧನೆ “ಆಘಾತಕಾರಿ ಮತ್ತು ನೋವಿನಿಂದ ಕೂಡಿದೆ” ಎಂದು ಹೇಳಿರುವ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಮುಂದಿನ ಹಾದಿಯು ಹಿಂದೆಂದಿಗಿಂತಲೂ ಹೆಚ್ಚು ಸವಾಲಿನದ್ದಾಗಿದೆ ಮತ್ತು ಸಂಘಟನೆಯ ಎಲ್ಲ ಹಂತಗಳಲ್ಲಿ ಒಗ್ಗಟ್ಟು ಅತಿಮುಖ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಮಂಗಳವಾರ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, ಪಕ್ಷವು ಒಗ್ಗಟ್ಟಿನಿಂದ ಇರುವುದನ್ನು … Continued