ಅಪರೂಪದ ಮದುವೆ: ತಂದೆಯ ಮೇಣದ ಪ್ರತಿಮೆ ಮುಂದೆ ಮಗನ ವಿವಾಹ…!

ಮೈಸೂರು: ಯುವಕನೊಬ್ಬ ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆಯಾಗಲಿದ್ದಾನೆ. ವಿವಾಹ ಶಾಸ್ತ್ರಗಳು ಆರಂಭವಾಗಿದ್ದು, ಇಂದು ಭಾನುವಾರ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ವಿವಾಹ ನಡೆಯಲಿದೆ. ಮೈಸೂರು ಜಿಲ್ಲೆ ನಂಜನಗೂಡಿನ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಈ ಅಪರೂಪದ ವಿವಾಹ ನಡೆಯುತ್ತಿದ್ದು, ಡಾ.ಯತೀಶ ಹಾಗೂ ಡಾ. ಅಪೂರ್ವ ಅವರು ಡಾ.ಯತೋಶ ಅವರ ತಂದೆಯ ಮೇಣದ ಪ್ರತಿಮೆ ಮುಂದೆ ಹೊಸ … Continued

ಸುಪ್ರೀಂಕೋರ್ಟ್‌ನಲ್ಲಿ ದೇಶದ್ರೋಹ ಕಾನೂನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

ನವದೆಹಲಿ: ದೇಶದ್ರೋಹ ಕಾನೂನನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಅದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ವಜಾಗೊಳಿಸುವಂತೆ ಸುಪ್ರೀಂಕೋರ್ಟ್‌ಗೆ ಶನಿವಾರ ಮನವಿ ಮಾಡಿದೆ. ವಸಾಹತುಶಾಹಿ ಯುಗದ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ವಸಾಹತು ಕಾಲದ ದೇಶದ್ರೋಹ ಕಾನೂನಿನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ಮುಖ್ಯ ನ್ಯಾಯಮೂರ್ತಿ ಎನ್‌ವಿ … Continued

ಗೋವುಗಳನ್ನು ದತ್ತು ತೆಗೆದುಕೊಳ್ಳುವ ಪುಣ್ಯಕೋಟಿ ಯೋಜನೆ ಪ್ರಾರಂಭ : ಸಿಎಂ ಬೊಮ್ಮಾಯಿ

ಬೆಂಗಳೂರು : ರಾಜ್ಯದ ಗೋಶಾಲೆಗಳಲ್ಲಿನ ಗೋವುಗಳನ್ನು 11,000 ರೂ.ಗಳ ವಾರ್ಷಿಕ ಮೊತ್ತಕ್ಕೆ ದತ್ತು ತೆಗೆದುಕೊಳ್ಳುವ ಪುಣ್ಯಕೋಟಿ ದತ್ತು ಯೋಜನೆ ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಶನಿವಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಲಾಖೆಯ ವತಿಯಿಂದ ಕಿರುಚಿತ್ರ ಪ್ರದರ್ಶನ, ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಿಸಿ ಮಾತನಾಡಿದ ಅವರು, ಈ ಮೊದಲು ನಾನು‌ ನನ್ನ ಜನ್ಮದಿನವನ್ನು … Continued

ವಿಘ್ನೇಶ್ ಕಸ್ಟಡಿ ಸಾವು: ಕೊಲೆ ಆರೋಪದ ಮೇಲೆ 6 ಪೊಲೀಸರ ಬಂಧನ

ಚೆನ್ನೈ: ವಿಘ್ನೇಶ ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ಚೆನ್ನೈ ಪೊಲೀಸ್ ಅಪರಾಧ ವಿಭಾಗ-ಅಪರಾಧ ತನಿಖಾ ವಿಭಾಗ(ಸಿಬಿ-ಸಿಐಡಿ)ವು ಕೊಲೆ ಆರೋಪದ ಮೇಲೆ ಆರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 25 ವರ್ಷದ ಮೃತ ವ್ಯಕ್ತಿಯ ಮರಣೋತ್ತರ … Continued

40 ಕೋಟಿ ರೂ. ಬ್ಯಾಂಕ್‌ ವಂಚನೆ ಪ್ರಕರಣ: ಪಂಜಾಬ್‌ನ ಎಎಪಿ ಶಾಸಕನ ಸಂಸ್ಥೆಗಳ ಮೇಲೆ ಸಿಬಿಐ ದಾಳಿ

ಚಂಡಿಗಡ: 40 ಕೋಟಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಎಎಪಿ ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಶೋಧ ನಡೆಸುತ್ತಿದೆ. ಅಮರಗಢ ಶಾಸಕನ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗ್ರೂರ್ ಜಿಲ್ಲೆಯ ಮಲೇರ್ ಕೋಟ್ಲಾ ಪ್ರದೇಶದಲ್ಲಿ ಶೋಧ ನಡೆಸಲಾಗುತ್ತಿದೆ. ಬ್ಯಾಂಕ್ ಆಫ್ ಇಂಡಿಯಾ ನೀಡಿದ ದೂರಿನ … Continued

ಕಾನೂನು ತಿದ್ದುಪಡಿಯಾದರೂ ಅರಣ್ಯ ಅತಿಕ್ರಮಣ ಮಂಜೂರಿಗೆ ಮೂರು ತಲೆಮಾರಿನ ಕಾಗದಪತ್ರ ಕೇಳ್ತಾರೆ, ಇದು ಅಗತ್ಯವೇ: ಸರ್ಕಾರಕ್ಕೆ ರವೀಂದ್ರ ನಾಯ್ಕ ಪ್ರಶ್ನೆ

ಹೊನ್ನಾವರ: ಅರಣ್ಯ ಅತಿಕ್ರಮಣ ಮಂಜೂರಾತಿಗೆ ಮೂರು ತಲೆಮಾರಿನ ಕಾಗದಪತ್ರ ಕೇಳುತ್ತಾರೆ. ಕಾನೂನು ತಿದ್ದುಪಡಿಯಾಗಿದೆ. ಆದರೂ ಮೂರು ತಲೆಮಾರಿನ ಹಿಂದಿನ ಕಾಗದಪತ್ರಗಳ ಅಗತ್ಯವಿದೆಯೇ ಎಂದು ಸರ್ಕಾರಕ್ಕೆ ಸವಾಲು ಹಾಕುತ್ತೇನೆ ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರನಾಥ ನಾಯ್ಕ ಗುಡುಗಿದರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ಶನಿವಾರ ಜಿಲ್ಲಾ … Continued

ಮಾಜಿ ಸಚಿವ ಪ್ರಮೋದ ಮಧ್ವರಾಜ, ವರ್ತೂರ್‌ ಪ್ರಕಾಶ ಸೇರಿ ಹಲವರು ಬಿಜೆಪಿಗೆ ಸೇರ್ಪಡೆ

ಬೆಂಗಳೂರು: ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಪ್ರಭಾವಿ ನಾಯಕ ಪ್ರಮೋದ ಮಧ್ವರಾಜ ಮತ್ತು ವರ್ತೂರ್‌ ಪ್ರಕಾಶ್‌ ಬಿಜೆಪಿ ಸೇರಿದ್ದಾರೆ. ಪ್ರಮೋದ್ ಮಧ್ವರಾಜ ಶನಿವಾರ ಮಧ್ಯಾಹ್ನ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.ಶನಿವಾರ ಸಂಜೆ ಪರಾಗ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ … Continued

ದೆಹಲಿ ಬಿಜೆಪಿ ನಾಯಕ ತಜೀಂದರ್ ವಿರುದ್ಧ ಮೊಹಾಲಿ ಕೋರ್ಟಿನಿಂದ ವಾರೆಂಟ್ ಜಾರಿ: ಮತ್ತೆ ಬಂಧನದ ಭೀತಿ

ಚಂಡೀಗಢ: ಪಂಜಾಬ್ ಪೊಲೀಸರಿಂದ ಬಂಧಿಸಲ್ಪಟ್ಟು ಕೆಲವೇ ಗಂಟೆಗಳಲ್ಲಿ ಬಿಡುಗಡೆಯಾದ ಒಂದು ದಿನದ ನಂತರ, ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ಕಳೆದ ತಿಂಗಳು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಾಲಿಯಲ್ಲಿ ಶನಿವಾರ ನ್ಯಾಯಾಲಯವು ಅವರ ವಿರುದ್ಧ ವಾರಂಟ್ ಹೊರಡಿಸಿದ್ದರಿಂದ ಮತ್ತೊಂದು ಬಂಧನದ ಭೀತಿ ಎದುರಾಗಿದೆ. ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ತಜಿಂದರ್ … Continued

ಬಂಗಾಳಕೊಲ್ಲಿಯಲ್ಲಿ ತೀವ್ರ ಚಂಡಮಾರುತದ ಮುನ್ಸೂಚನೆಯ ನಡುವೆ ಅಸ್ಸಾಂನಲ್ಲಿ ಅಪರೂಪದ ಸುಂಟರಗಾಳಿ | ವೀಕ್ಷಿಸಿ

ಗುವಾಹತಿ: ಅಸ್ಸಾಂನ ಬರ್ಪೇಟಾದ ಚೆಂಗಾ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಕಡಿಮೆ ತೀವ್ರತೆಯ ಸುಂಟರಗಾಳಿ ಅಪ್ಪಳಿಸಿದೆ. ಈ ಅಪರೂಪದ ಹವಾಮಾನದ ವಿದ್ಯಮಾನವನ್ನು ತಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾಗಳಲ್ಲಿ ಬ ಸ್ಥಳೀಯ ನಿವಾಸಿಗಳು ಸೆರೆ ಹಿಡಿದಿದ್ದಾರೆ. ಆದರೆ, ಸುಂಟರಗಾಳಿಯಿಂದ ಪ್ರಾಣ ಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ಇನ್ನೂ ವರದಿಗಳು ಬಂದಿಲ್ಲ. ಕಡಿಮೆ ತೀವ್ರತೆಯ ಸುಂಟರಗಾಳಿ ಶನಿವಾರ ಅಸ್ಸಾಂನ ಬರ್ಪೇಟಾದಲ್ಲಿ … Continued

ದಾಖಲೆಯ ವರಮಾನ ಕಂಡ ರಿಲಯನ್ಸ್ ಇಂಡಸ್ಟ್ರೀಸ್: ಆದಾಯ 47% ಹೆಚ್ಚಳ, ನಿವ್ವಳ ಲಾಭ 26% ಜಾಸ್ತಿ

ಮುಂಬೈ: ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್‌) ಕಂಪನಿಯು ಒಟ್ಟು ₹ 7.92 ಲಕ್ಷ ಕೋಟಿ (104.6 ಬಿಲಿಯನ್ ಅಮೆರಿಕನ್ ಡಾಲರ್) ವರಮಾನ ಗಳಿಸಿದೆ. ಭಾರತದ ಕಂಪನಿಯೊಂದು 100 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ವಾರ್ಷಿಕ ವರಮಾನ ಗಳಿಸಿರುವುದು ಇದೇ ಮೊದಲು. 2021–22ನೇ ಹಣಕಾಸು ವರ್ಷದಲ್ಲಿ ಕಂಪನಿಯ ವರಮಾನವು ಹಿಂದಿನ ಆರ್ಥಿಕ … Continued