ಹಾವೇರಿ: ಕೃಷ್ಣಮೃಗಗಳ ಬೇಟೆ, ಐವರು ಆರೋಪಿಗಳ ಬಂಧನ

posted in: ರಾಜ್ಯ | 0

ಹಾವೇರಿ: ಎರಡು ಹೆಣ್ಣು ಕೃಷ್ಣಮೃಗಗಳನ್ನು ಬೇಟೆಯಾಡಿದ್ದ ಐವರು ಆರೋಪಿಗಳನ್ನು ರಟ್ಟೀಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಸತ್ತಿರುವ ಕೃಷ್ಣಮೃಗಗಳ ಮೇಲೆ ಬಂದೂಕಿನಿಂದ ಸಿಡಿದ ಗುಂಡಿನ ಕಲೆಗಳಿವೆ. ಭಾನುವಾರ ಮುಂಜಾನೆ ರಾಣೇಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ರಾತ್ರಿ ಕರ್ತವ್ಯ ನಿರತರಾಗಿದ್ದ ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ (ಇಆರ್‌ಎಸ್‌ಎಸ್) ಸಿಬ್ಬಂದಿ ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ಪಿಕಪ್ ವಾಹನವೊಂದು ನಿಲ್ಲದೆ ತಪಾಸಣಾ … Continued

ಕಾಶ್ಮೀರ: ಕುಲ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಸೇರಿ ಇಬ್ಬರು ಉಗ್ರರು ಹತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ ಇಬ್ಬರು ಉಗ್ರರಲ್ಲಿ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕನೂ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ಚೆಯಾನ್ ದೇವ್ಸರ್ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಅಲ್ಲಿ ಕಾರ್ಡನ್ ಮತ್ತು ಸರ್ಚ್ … Continued

ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಅರಣ್ಯಾಧಿಕಾರಿಗಳು-ಪೊಲೀಸರ ಮೇಲೆ ದಾಳಿ ಮಾಡಿದ ಚಿರತೆ | ದೃಶ್ಯ ವೀಡಿಯೊದಲ್ಲಿ ಸೆರೆ

ಹರಿಯಾಣದ ಪಾಣಿಪತ್‌ನ ಬೆಹ್ರಾಂಪುರ ಗ್ರಾಮದಲ್ಲಿ ಚಿರತೆ ಹಿಡಿಯುವ ಕಾರ್ಯಾಚರಣೆ ವೇಳೆ ಓರ್ವ ಪೊಲೀಸ್ ಹಾಗೂ ಇಬ್ಬರು ಅರಣ್ಯ ಇಲಾಖೆ ಅಧಿಕಾರಿಗಳು ಗಾಯಗೊಂಡಿದ್ದಾರೆ. ಬಳಿಕ ಚಿರತೆಯನ್ನು ಯಶಸ್ವಿಯಾಗಿ ಹಿಡಿಯಲಾಯಿತು. ಶನಿವಾರ ರಕ್ಷಣಾ ತಂಡವು ಚಿರತೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಚಿರತೆ ಕಂಡ ಗ್ರಾಮಸ್ಥರ ಮಾಹಿತಿ ಮೇರೆಗೆ ತಂಡ ಕಾರ್ಯಾಚರಣೆ ನಡೆಸುತ್ತಿತ್ತು. ಚಿರತೆಯೊಂದಿಗೆ … Continued

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ಸೋಮನಾಥ ನಾಯಕ್‌ಗೆ ಜೈಲು ಶಿಕ್ಷೆ ಕಾಯಂಗೊಳಿಸಿ ಹೈಕೋರ್ಟ್‌ ಆದೇಶ

posted in: ರಾಜ್ಯ | 0

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಕೆ. ಸೋಮನಾಥ ನಾಯಕ್‍ಗೆ ( ಹೈಕೋರ್ಟ್ ಜೈಲು ಶಿಕ್ಷೆ ಖಾಯಂಗೊಳಿಸಿದೆ. ಬೆಳ್ತಂಗಡಿ ಸಿವಿಲ್ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್, ತನಗೆ ಬೆಳ್ತಂಗಡಿ ನ್ಯಾಯಾಲಯ ವಿಧಿಸಿದ ಜೈಲು ಶಿಕ್ಷೆ, ಆಸ್ತಿ … Continued

ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ರಾಜಸ್ಥಾನ ಸಚಿವರ ಪುತ್ರನ ಮಹಿಳೆ ಆರೋಪ; ಎಫ್‌ಐಆರ್ ದಾಖಲಿಸಿದ ದೆಹಲಿ ಪೊಲೀಸರು

ನವದೆಹಲಿ: ಜೈಪುರದ 23 ವರ್ಷದ ಮಹಿಳೆಯೊಬ್ಬರು ರಾಜಸ್ಥಾನದ ಸಚಿವ ಮಹೇಶ್ ಜೋಶಿ ಅವರ ಪುತ್ರ ರೋಹಿತ್ ಜೋಶಿ ಒಂದು ವರ್ಷದಲ್ಲಿ ಅನೇಕ ಸಂದರ್ಭಗಳಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದು, ದೆಹಲಿ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಎಫ್‌ಐಆರ್ ಬಗ್ಗೆ ರಾಜಸ್ಥಾನ ಪೊಲೀಸರಿಗೆ ತಿಳಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ … Continued

ಶುಲ್ಕ ಪಾವತಿಸಿಲ್ಲವೆಂದು 35 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡ ಶಾಲೆ…!

ಬರೇಲಿ (ಉತ್ತರ ಪ್ರದೇಶ): ಶಾಲಾ ಶುಲ್ಕ ಪಾವತಿಸದ ಕಾರಣ ಸುಮಾರು 35 ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಹಾರ್ಟ್‌ಮ್ಯಾನ್ ಶಾಲೆಯ ಪೋಷಕರ ಸಂಘವು ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ನೀಡಲು ನಿರ್ಧರಿಸಿದೆ. ವರದಿಗಳ ಪ್ರಕಾರ, ಶುಲ್ಕ ಪಾವತಿಸದ ಕಾರಣ ಶಾಲಾ ಆಡಳಿತ ಮಂಡಳಿ ಶನಿವಾರ ಮಕ್ಕಳನ್ನು ಕೊಠಡಿಯಲ್ಲಿ ಕೂಡಿಹಾಕಿತ್ತು. ಶಾಲಾ ಸಮಯ ಮುಗಿದು ಮಕ್ಕಳನ್ನು ಕರೆದುಕೊಂಡು … Continued

ಮದುವೆ ಮೆರವಣಿಗೆಯಲ್ಲಿ ಮಿನಿಲಾರಿ ಹಾಯ್ದು ನಾಲ್ವರು ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

posted in: ರಾಜ್ಯ | 0

ಕಲಬುರಗಿ: ಮದುವೆ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದವರ ಮೇಲೆ ಡಿಜೆ ಸೌಂಡ್‌ ಇದ್ದ ಮಿನಿಲಾರಿ ಹರಿದು ನಾಲ್ವರು ಸಾವಿಗೀಡಾದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕಡತಾಲದಲ್ಲಿ ಸಂಭವಿಸಿದೆ. ಅಲ್ಲದೆ, ಘಟನೆಯಲ್ಲಿ ಹತ್ತಕ್ಕೂ ಅಧಿಕ ಜನರು ಗಾಯಗೊಂಡಿದ್ದು, ನಾಲ್ಕು ದಿನದ ಹಿಂದೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತೆಲಂಗಾಣ- ಕರ್ನಾಟಕ ಗಡಿಭಾಗ ಸೇಡಂ ತಾಲೂಕಿನ ಕಡತಾಲ … Continued

ಅಫ್ಘಾನಿಸ್ತಾನ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಬುರ್ಕಾ ಕಡ್ಡಾಯ ಮಾಡಿದ ತಾಲಿಬಾನ್‌

ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರವು ಮಹಿಳೆಯರಿಗೆ ಕಠಿಣ ನಿರ್ಬಂಧನೆ ವಿಧಿಸಿದೆ. ಮಹಿಳೆಯರು ಹಾಗೂ ಯುವತಿಯರು ಸಾರ್ವಜನಿಕ ಸ್ಥಳ ಸೇರಿದಂತೆ ದಿನನಿತ್ಯದ ಜೀವನದಲ್ಲಿ ಕಡ್ಡಾಯವಾಗಿ ಬುರ್ಖಾ ಧರಿಸಲು ಕಠಿಣ ಆದೇಶ ಜಾರಿಗೆ ತಂದಿದೆ.ಪ್ರತಿ ಮಹಿಳೆಯರು ಕಡ್ಡಾಯವಾಗಿ ಮೈ ಸಂಪೂರಣವಾಗಿ ಮುಚ್ಚಿಕೊಳ್ಳುವ ಬುರ್ಖಾ ಧರಿಸಬೇಕು ಎಂದು ಸೂಚಿಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಆಡಳಿತ ಮಹಿಳೆಯರಿಗೆ ಹಲವಾರು ನಿರ್ಬಂಧಗಳನ್ನು ಹೇರಿದೆ. ಶಾಲೆಗಳಲ್ಲಿ … Continued

ಧ್ವನಿವರ್ಧಕ ವಿಚಾರದಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳುವುದು ಬೇಡ: ಸಚಿವ ಪ್ರಹ್ಲಾದ ಜೋಶಿ

posted in: ರಾಜ್ಯ | 0

ಹುಬ್ಬಳ್ಳಿ: ಧ್ವನಿವರ್ಧಕಗಳ ಶಬ್ದಮಿತಿ ಬಗ್ಗೆ ರಾಜ್ಯ ಸರ್ಕಾರವೇ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತದೆ. ಯಾರೂ ಕಾನೂನು ಕೈಗೆತ್ತಿಕೊಳ್ಳುವ ಕೆಲಸಮಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಮಸೀದಿಗಳಲ್ಲಿ ಧ್ವನಿವರ್ಧಕ ತೆರವಿಗೆ ಶ್ರೀರಾಮ ಸೇನೆ ನೀಡಿದ ಗಡುವು ಕುರಿತು ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಕೆಲಸವನ್ನು ಸರ್ಕಾರ ಮಾಡುತ್ತದೆ. ಯಾರೂ ಕಾನೂನು … Continued

ತಾಯಂದಿರ ದಿನ -2022: ಕೈ ತೋಳುಗಳಿಲ್ಲದಿದ್ದರೇನಂತೆ… ತನ್ನ ಕಾಲುಗಳಿಂದಲೇ ಹೆಣ್ಣು ಮಗುವಿಗೆ ಡ್ರೆಸ್‌ ಹಾಕುವ ಈ ಹೀರೋ ಅಮ್ಮ | ವೀಕ್ಷಿಸಿ

ತಾಯಂದಿರ ದಿನದ ಈ ಸಂದರ್ಭದಲ್ಲಿ, ಅಂಗವಿಕಲ ವ್ಯಕ್ತಿಯ ಸವಾಲುಗಳ ನಡುವೆಯೂ ತನ್ನ ಹೆಣ್ಣು ಮಗುವನ್ನು ಸ್ವತಃ ನೋಡಿಕೊಳ್ಳುವ ಎರಡೂ ಕೈಗಳಿಲ್ಲದ ಈ ಸ್ಫೂರ್ತಿದಾಯಕ ಮಹಿಳೆಯ ವೀಡಿಯೊ ಹೊರಬಂದಿದೆ. ಹಾಗೂ ಅಂತರ್ಜಾಲದಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ವೀಡಿಯೊದಲ್ಲಿ ಬೆಲ್ಜಿಯಂ ಕಲಾವಿದೆ ಸಾರಾ ತಲ್ಬಿ ಕಾಣಿಸಿಕೊಂಡಿದ್ದಾರೆ. ಅವರು ತೋಳುಗಳಿಲ್ಲದೆಯೇ ಜನಿಸಿದರು. ವೀಡಿಯೊವನ್ನು ಮೂಲತಃ ಎರಡು ವರ್ಷಗಳ ಹಿಂದೆ ಮಹಿಳೆಯ … Continued