ಬಾಲ್ಯ ವಿವಾಹವಾಗಿದ್ದ ಮೂವರು ಸಹೋದರಿಯರು, ಇಬ್ಬರು ಮಕ್ಕಳು ಬಾವಿಯಲ್ಲಿ ಶವವಾಗಿ ಪತ್ತೆ…!

ಜೈಪುರ : ಶನಿವಾರ ಜೈಪುರ ಜಿಲ್ಲೆಯ ದುಡು ಪಟ್ಟಣದ ಬಾವಿಯಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ಹತ್ಯೆಗೀಡಾದ ಮಹಿಳೆಯರನ್ನು ಸಹೋದರಿಯರಾದ ಕಕಲುದೇವಿ (27), ಮಮತಾ (23), ಮತ್ತು ಕಮಲೇಶ್ (20) ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳಲ್ಲಿ ಒಬ್ಬನಿಗೆ ನಾಲ್ಕು ವರ್ಷ ವಯಸ್ಸು ಮತ್ತು ಮತ್ತೊಂದು ಮಗುವಿಗೆ ಕೇವಲ 27 ದಿನಗಳು. ಇಬ್ಬರು … Continued

ಮಂಗಳೂರು ವಿವಿ ಕಾಲೇಜ್: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ

ಮಂಗಳೂರು: ನಗರದಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇಂದು, ಶನಿವಾರ ಸಹ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಬಂದಿದ್ದು, ಅವರನ್ನು ಪ್ರಾಂಶುಪಾಲರು ವಾಪಸ್‌ ಕಳುಹಿಸಿದ್ದಾರೆ. ಈಗಾಗಲೇ ಹೈಕೋರ್ಟ್ ಆದೇಶದ ಅನ್ವಯ ಶಾಲಾ ಕಾಲೇಜುಗಳಲ್ಲಿ ತರಗತಿಯಲ್ಲಿ ಹಿಜಾಬ್ ನಿಷೇಧಿಸಲಾಗಿದೆ. ಆದರೂ ನಗರದ ಕಳೆದ ಮಂಗಳೂರು ವಿವಿ ಕಾಲೇಜಿನಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಹಿಜಾಬ್ ಗಲಾಟೆ ಮತ್ತೆ ಮುಂದುವರೆದಿದ್ದು, ಆದರೂ ಕಾಲೇಜಿಗೆ … Continued

ವಿಶೇಷ ಅಗತ್ಯವುಳ್ಳ ಮಗುವಿಗೆ ವಿಮಾನ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ಇಂಡಿಗೋಗೆ 5 ಲಕ್ಷ ರೂ. ದಂಡ

ನವದೆಹಲಿ: ರಾಂಚಿ ವಿಮಾನ ನಿಲ್ದಾಣದಲ್ಲಿ ವಿಶೇಷ ಮಗುವಿನ ಪ್ರಕರಣವನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲವಾದ ಇಂಡಿಗೋಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಡಿಜಿಸಿಎ ಹೇಳಿಕೆಯಲ್ಲಿ, “ಇಂಡಿಗೊ ಮೈದಾನದ ಸಿಬ್ಬಂದಿಯಿಂದ ವಿಶೇಷ ಮಗುವನ್ನು ನಿರ್ವಹಿಸುವಲ್ಲಿ ಕೊರತೆ ಉಂಟಾಗಿದೆ ಮತ್ತು ಪರಿಸ್ಥಿತಿಯನ್ನು ಉಲ್ಬಣಗೊಳಿಸಲಾಗಿದೆ ಎಂದು ಗಮನಿಸಲಾಗಿದೆ ಎಂದು ತಿಳಿಸಿದೆ. ವಿಶೇಷ ಸನ್ನಿವೇಶಗಳು ಅಸಾಧಾರಣ … Continued

ಆರ್‌ಎಸ್‌ಎಸ್‌ ಸಂಘಟನೆ ಇಟಲಿ ಮೂಲದ್ದಲ್ಲ: ಸಿದ್ದರಾಮಯ್ಯ ಹೇಳಿಕೆಗೆ ಸಚಿವ ನಾಗೇಶ ತಿರುಗೇಟು

ಕೊಪ್ಪಳ: ದೇಶಭಕ್ತ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌)ದ ಮೂಲದ ಇಟಲಿಯಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 70 ವರ್ಷ ಕಾಂಗ್ರೆಸ್ ಆಡಳಿತ ಮಾಡಿತ್ತು. ಸಿದ್ದರಾಮಯ್ಯ 5 ವರ್ಷ ರಾಜ್ಯದ ಆಡಳಿತ ಮಾಡಿದ್ದಾರೆ. … Continued

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಿಜೆಪಿಯ ಈರೇಶ ಅಂಚಟಗೇರಿ ನೂತನ ಮೇಯರ್‌, ಉಮಾ ಮುಕುಂದ ಉಪಮೇಯರ್‌

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಪಟ್ಟ ಬಿಜೆಪಿಗೆ ಒಲಿದಿದೆ.ಬಿಜೆಪಿಯ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಮೇಯರ್​ ಆಗಿ ಆಯ್ಕೆಯಾದರೆ ಉಪ‌ ಮೇಯರ್ ಆಗಿ ಉಮಾ ಮುಕುಂದ ಆಯ್ಕೆಯಾಗಿದ್ದಾರೆ. ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ಕ್ರಮವಾಗಿ ಈರೇಶ ಅಂಚಟಗೇರಿ ಹಾಗೂ ಉಮಾ ಮುಕುಂದ ನಾಮಪತ್ರ ಸಲ್ಲಿಸಿದರೆ ಕಾಂಗ್ರೆಸ್‌ನಿಂದ ಕ್ರಮವಾಗಿ ಮಯೂರ ಮೋರೆ ಹಾಗೂ ದೀಪಾ … Continued

ಬೆಂಗಳೂರು: ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ

ಬೆಂಗಳೂರು: ಆದಾಯ ತೆರಿಗೆ ವಂಚನೆ ಆರೋಪದಡಿ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಕೆಜಿಎಫ್ ಬಾಬು ನಿವಾಸ ಸೇರಿ 7 ಕಡೆಗಳಲ್ಲಿ ಶನಿವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು, ಶನಿವಾರ ಬೆಳಗ್ಗೆ 7:30ರ ಸುಮಾರಿಗೆ 4 ಇನೋವಾ ಕಾರಿನಲ್ಲಿ ವಸಂತ ನಗರಕ್ಕೆ ಆಗಮಿಸಿದ ಐಟಿ ಅಧಿಕಾರಿಗಳು ಅಲ್ಲಿಯ ಕೆಜಿಎಫ್ ಬಾಬು ಒಡೆತನದ ರುಕ್ಸಾನ ಪ್ಯಾಲೇಸ್ ಹಾಗೂ … Continued

ಬಾಲಕರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‍ಶಿಪ್: ಧಾರವಾಡದ ಖ್ವಾಜಾಮೈನುದ್ದೀನ್‍ಗೆ ಕಂಚಿನ ಪದಕ

ಧಾರವಾಡ: ರೆಸ್ಲ್ಟಿಂಗ್‌ ಫೆಡರೇಷನ್ ಆಫ್ ಇಂಡಿಯಾ ಮತ್ತು ಜಾರ್ಖಂಡ್ ರಾಜ್ಯ ಕುಸ್ತಿ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಂಚಿಯಲ್ಲಿ ನಡೆದ 15 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಧಾರವಾಡದ ಬಾಲ ಕುಸ್ತಿಪಟು ಖ್ವಾಜಾ ಮೈನುದ್ದೀನ್ ಮಾಳಗಿ ಕಂಚಿನ ಪದಕ ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಫ್ರೀಸ್ಟೈಲ್ ಕುಸ್ತಿಯ 52 ಕೆ.ಜಿ. ವಿಭಾಗದಲ್ಲಿ ಮಾಳಗಿ ತೃತೀಯ ಸ್ಥಾನ ಪಡೆದಿದ್ದಾರೆ. … Continued

ಕೆಜಿಎಫ್‌-2 ಸಿನೆಮಾ ಮೂರು ಸಲ ನೋಡಿದ ನಂತರ ಪೂರ್ಣ ಪ್ಯಾಕ್ ಸಿಗರೇಟ್ ಸೇದಿ ಆಸ್ಪತ್ರೆಗೆ ದಾಖಲಾದ ಬಾಲಕ..!

ಹೈದರಾಬಾದ್‌: ಜನಪ್ರಿಯ ಚಲನಚಿತ್ರ ಕೆಜಿಎಫ್-2 ಸಿನೆಮಾವನ್ನು ಎರಡು ದಿನಗಳಲ್ಲಿ ಮೂರು ಬಾರಿ ವೀಕ್ಷಿಸಿದ ನಂತರ, ಹೈದರಾಬಾದ್‌ನಲ್ಲಿ 15 ವರ್ಷದ ಹುಡುಗನೊಬ್ಬ ಮುಖ್ಯ ಪಾತ್ರ ರಾಕಿ ಭಾಯ್‌ನಿಂದ ಸ್ಫೂರ್ತಿ ಪಡೆದು ಪೂರ್ಣ ಪ್ಯಾಕ್ ಸಿಗರೇಟ್ ಸೇದಿದ್ದಾನೆ. ಇದರಿಂದ ತೀವ್ರ ಗಂಟಲು ನೋವು ಮತ್ತು ಕೆಮ್ಮು ಕಾಣಿಸಿಕೊಂಡು ಚಿಕಿತ್ಸೆಗಾಗಿ ಹುಡುಗನನ್ನು ನಂತರ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಶನಿವಾರ, ಹೈದರಾಬಾದ್‌ನ ಸೆಂಚುರಿ … Continued

ಹೊಸ ಅವತಾರದಲ್ಲಿ ಮತ್ತೆ ಬಿಡುಗಡೆಯಾಗಲಿದೆ ಭಾರತದ ಐಕಾನಿಕ್ ಕಾರ್‌ ಅಂಬಾಸಿಡರ್

ದಶಕಗಳಿಂದ ಸ್ಟೇಟಸ್ ಸಿಂಬಲ್ ಆಗಿ ಉಳಿದಿರುವ ಅತ್ಯಂತ ಶ್ರೇಷ್ಠ ಭಾರತೀಯ ಕಾರುಗಳಲ್ಲಿ ಒಂದಾದ ಹಿಂದೂಸ್ತಾನ್ ಮೋಟಾರ್ಸ್‌ನ ಅಂಬಾಸಿಡರ್ ಹೊಸ ಅವತಾರದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ತಯಾರಕರು ಬೇಡಿಕೆ ಮತ್ತು ಸಾಲದ ಕೊರತೆಯನ್ನು ಉಲ್ಲೇಖಿಸಿದ ನಂತರ ಐಕಾನಿಕ್ ಕಾರಿನ ಉತ್ಪಾದನೆಯನ್ನು 2014ರಲ್ಲಿ ನಿಲ್ಲಿಸಲಾಯಿತು. ಈಗ, ವರದಿಗಳ ಪ್ರಕಾರ ಅಂಬಾಸಿಡರ್ 2.0 ಭಾರತದಲ್ಲಿ ಎರಡು ವರ್ಷಗಳಲ್ಲಿ ಪುನಃ ಹೊಸ ಅವತಾರದಲ್ಲಿ … Continued

ಕಾರುಗಳಿಗೆ ಮಾರಾಟ ಮಾಡಲು, ಸರ್ವಿಸ್‌ ನೀಡಲು ಮೊದಲು ಅನುಮತಿ ನೀಡದ ಹೊರತು ಟೆಸ್ಲಾ ಕಾರನ್ನು ಭಾರತದಲ್ಲಿ ಉತ್ಪಾದಿಸುವುದಿಲ್ಲ: ಎಲೋನ್ ಮಸ್ಕ್

ನವದೆಹಲಿ: ಭಾರತದಲ್ಲಿ ತನ್ನ ವಾಹನಗಳನ್ನು ಮಾರಾಟ ಮಾಡಲು ಆಮದು ಸುಂಕವನ್ನು ಕಡಿತಗೊಳಿಸಲು ಬಯಸುತ್ತಿರುವ ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾವು ಮೊದಲು ಭಾರತದಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡಲು ಮತ್ತು ಸರ್ವಿಸ್‌ ನೀಡಲು ಅನುಮತಿಸದ ಹೊರತು ತನ್ನ ಉತ್ಪನ್ನಗಳನ್ನು ಸ್ಥಳೀಯವಾಗಿ ಉತ್ಪಾದಿಸುವುದಿಲ್ಲ ಎಂದು ಕಂಪನಿ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲೋನ್ ಮಸ್ಕ್ ಹೇಳಿದ್ದಾರೆ. … Continued