ಸಿದ್ದಾಪುರ: ಕೆರೆ ಬೇಟೆ ವೇಳೆ ಸಿಗದ ಮೀನು-ಆಯೋಜಕರು, ಪೊಲೀಸರ ಮೇಲೆ ಕಲ್ಲು ತೂರಾಟ

ಸಿದ್ದಾಪುರ: ಕೆರೆ ಬೇಟೆ (ಮೀನು ಬೇಟೆ )ಯಲ್ಲಿ ಮೀನು ಸಿಗಲಿಲ್ಲ ಎಂದು ಆಕ್ರೋಶಗೊಂಡ ಜನರು ಪೊಲೀಸರು ಹಾಗೂ ಆಯೋಜಕರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ುತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಾನಗೋಡಿನ ದೊಡ್ಡ ಕೆರೆಯಲ್ಲಿ ಭಾನುವಾರ (ಮೇ 29) ನಡೆದಿದೆ. ಕಾನಗೋಡಿನ ದೊಡ್ಡ ಕೆರೆಯಲ್ಲಿ ಈಶ್ವರ ದೇವಸ್ಥಾನದ ಸಹಾಯರ್ಥ ಕೆರೆ ಮೀನು ಬೇಟೆ … Continued

22 ಮಂದಿಯೊಂದಿಗೆ ನಾಪತ್ತೆಯಾಗಿದ್ದ ವಿಮಾನ ನೇಪಾಳದ ಮುಸ್ತಾಂಗ್ ಜಿಲ್ಲೆಯ ನದಿಯ ಸಮೀಪ ಪತನ

ಕಠ್ಮಂಡು (ನೇಪಾಳ) : ಇಂದು, ಭಾನುವಾರ ಬೆಳಿಗ್ಗೆ ಮಾಪತ್ತೆಯಾಗಿದ್ದ ನೇಪಾಳದ ತಾರಾ ಏರ್‌ 9-ಎನ್​ಎಇಟಿ ವಿಮಾನವು ಮುಸ್ತಾಂಗ್​ ಜಿಲ್ಲೆಯ ಕೋವಾಂಗ್ ಗ್ರಾಮದ ಲಾಮ್ಚೆ ನದಿಯ ಸಮೀಪಪತನಗೊಂಡಿದೆ ಎಂಬ ವರದಿಗಳು ತಿಳಿಸಿವೆ. ಸ್ಥಳೀಯರ ಮಾಹಿತಿಯ ಆಧಾರದ ಮೇರೆಗೆ ನೇಪಾಳದ ಸೇನೆ ವಿಮಾನ ಪತನವಾದ ಸ್ಥಳದತ್ತ ದೌಡಾಯಿಸಿದೆ ಎಂದು ಸೇನೆಯ ವಕ್ತಾರ ನಾರಾಯಣ ಸಿಲ್ವಾಲ್​ ತಿಳಿಸಿದ್ದಾರೆ. ಪೋಖರಾದಿಂದ ಟೇಕ್​ … Continued

ಮಡಿಕೇರಿ: ಕೋಟೆ ಅಬ್ಬಿ ಜಲಪಾತದ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಪ್ರವಾಸಿಗರ ಸಾವು

ಮಡಿಕೇರಿ: ಪ್ರವಾಸಕ್ಕೆಂದು ಬಂದಿದ್ದ ತೆಲಂಗಾಣ ಮೂಲದ ಮೂವರು ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಪ್ರವಾಸಿ ತಾಣ ಮುಕ್ಕೋಡ್ಲುವಿನ ಕೋಟೆ ಅಬ್ಬಿ ಜಲಪಾತದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ತೆಲಂಗಾಣದಿಂದ ಕೊಡಗಿಗೆ ಆಗಮಿಸಿದ್ದ 13 ಮಂದಿ ಪ್ರವಾಸಿಗರು ಕುಶಾಲನಗರ ಸಮೀಪದ ಹೋಂಸ್ಟೇನಲ್ಲಿ ವಾಸ್ತವ್ಯ ಮಾಡಿದ್ದರು. ಇಂದು, ಭಾನುವಾರ ಬೆಳಿಗ್ಗೆ ಪ್ರವಾಸಕ್ಕೆ ಮಾಂದಲ್‌ಪಟ್ಟಿ ಸಮೀಪದ ಮುಕ್ಕೋಡ್ಲು … Continued

ರಾಜ್ಯಸಭೆಗೆ ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನವರಸನಾಯಕ ಜಗ್ಗೇಶ್‌ಗೆ ಟಿಕೆಟ್‌

ಬೆಂಗಳೂರು: ಬಿಜೆಪಿಯು ರಾಜ್ಯಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್ ಮತ್ತು ಕನ್ನಡದ ನವರಸ ನಾಯಕ ಜಗ್ಗೇಶ್ ಅವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ. ಬಿಜೆಪಿ ಮತ್ತೊಮ್ಮೆ ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್ ಅವರನ್ನು ನಿರೀಕ್ಷೆಯಂತೆ ಕಣಕ್ಕಿಳಿಸಿದ್ದು, ಮಾಜಿ ಶಾಸಕ ಜಗ್ಗೇಶ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿಸುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ. ಏತನ್ಮಧ್ಯೆ, … Continued

ಸರ್ಕಾರ ಭದ್ರತೆ ಹಿಂಪಡೆದ ಮರುದಿನವೇ ಪಂಜಾಬಿ ಗಾಯಕ ಸಿಧು ಮೂಸ್ ವಾಲಾರನ್ನು ಗುಂಡಿಕ್ಕಿ ಕೊಂದ ದುರ್ಷರ್ಮಿಗಳು

ಮಾನಸಾ (ಪಂಜಾಬ್): ಮೇ 29 ರಂದು‌, ಭಾನುವಾರ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಪಂಜಾಬ್ ಪೊಲೀಸರು ಹಿಂಪಡೆದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಸಿಧು ಮೂಸ್ … Continued

ಟೆಂಪೊ ಟ್ರಾವೆಲರ್‌- ಟ್ರಕ್ ಮುಖಾಮುಖಿ ಡಿಕ್ಕಿ: ಅಯೋಧ್ಯೆಗೆ ತೆರಳುತ್ತಿದ್ದ ಕರ್ನಾಟಕದ 7 ಜನರ ದುರ್ಮರಣ

ಲಕ್ನೋ: ಬಹ್ಮೈಚ್ ಹಾಗೂ ಲಖಿಂಪುರ ಹೆದ್ದಾರಿಯಲ್ಲಿ ಪ್ರವಾಸಿ ವಾಹನ ಟ್ರಕ್‍ಗೆ ಡಿಕ್ಕಿ ಹೊಡೆದು ಮೂವರು ಮಹಿಳೆಯರು ಸೇರಿದಂತೆ 7 ಜನ ಮೃತಪಟ್ಟಿದ್ದು, 9 ಮಂದಿ ಗಂಭೀರ ಗಾಯಗೊಂಡ ಘಟನೆ ಉತ್ತರ ಪ್ರದೇಶದಲ್ಲಿ ಭಾನುವಾರ ನಡೆದ ಬಗ್ಗೆ ವರದಿಯಾಗಿದೆ. 9 ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಯೋಧ್ಯೆಗೆ ಟ್ರಾವೆಲರ್‌ನಲ್ಲಿ ಕರ್ನಾಟಕದ ಬೀದರ್‌ನ 16 ಜನರು ಸಾಗುತ್ತಿದ್ದರು. … Continued

ಜಮ್ಮು: ಅಮರನಾಥ ಯಾತ್ರೆಗೆ ಮುನ್ನ ಗ್ರೆನೇಡ್‌ಗಳು, ಜಿಗುಟಾದ ಬಾಂಬ್‌ ಹೊತ್ತು ತಂದ ಪಾಕ್ ಡ್ರೋನ್ ಹೊಡೆದುರುಳಿಸಿದ ಪೊಲೀಸರು…

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಕಥುವಾದಲ್ಲಿನ ರಾಜ್‌ಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ತಲ್ಲಿಹರಿಯ ಚಕ್ ಪ್ರದೇಶದಲ್ಲಿ ಪಾಕಿಸ್ತಾನದ ಗಡಿ ಭಾಗದಿಂದ ಏಳು ಯುಜಿಸಿಎಲ್ ಗ್ರೆನೇಡ್‌ಗಳು ಮತ್ತು ಏಳು ಮ್ಯಾಗ್ನೆಟಿಕ್ ಅಥವಾ ಜಿಗುಟಾದ ಬಾಂಬ್‌ಗಳನ್ನು ಹೊತ್ತ ಪಾಕಿಸ್ತಾನದ ಡ್ರೋನ್ ಅನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ಗುಹಾ ದೇಗುಲಕ್ಕೆ ವಾರ್ಷಿಕ ಯಾತ್ರೆಗೆ ಮುನ್ನ ಈ … Continued

“ಸಾಮಾನ್ಯ ವಿವೇಕ ಬಳಸಿ”: ಕೇಂದ್ರವು ಆಧಾರ್ ಫೋಟೋಕಾಪಿ ದುರ್ಬಳಕೆ ಎಚ್ಚರಿಕೆ ಹಿಂಪಡೆದ ಸರ್ಕಾರ-ಹೊರಬಿತ್ತು ಮತ್ತೊಂದು ಪತ್ರಿಕಾ ಹೇಳಿಕೆ

ನವದೆಹಲಿ: ಆಧಾರ್​ ಫೋಟೋಕಾಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಯುನಿಕ್​ ಐಡೆಂಟಿಫಿಕೇಷನ್​ ಆಥಾರಿಟಿ ಆಫ್​ ಇಂಡಿಯಾ (ಯುಐಡಿಎಐ) ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ಬೆನ್ನಿಗೇ ಆ ವಿಷಯ ಸಾಕಷ್ಟು ಚರ್ಚೆಗೆ ಒಳಗಾಗಿದ್ದು, ಈಗ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಅದಕ್ಕೆ ಸ್ಪಷ್ಟನೆ ನೀಡಿದೆ. ದುರುಪಯೋಗದ ಅಪಾಯಗಳ ಕುರಿತು ಆಧಾರ್‌ನ ನಕಲು ಪ್ರತಿಗಳನ್ನು ಹಂಚಿಕೊಳ್ಳದಂತೆ ಜನರನ್ನು ಕೇಳಿದ್ದ ಹೇಳಿಕೆಯನ್ನು … Continued

3 ದಿನ ಮುಂಚಿತವಾಗಿ ಕೇರಳ ತಲುಪಿದ ನೈಋತ್ಯ ಮಾನ್ಸೂನ್

ನವದೆಹಲಿ: ದೇಶದ ಸುಮಾರು 70% ಭಾಗಕ್ಕೆ ಮಳೆ ನೀಡುವ ನೈಋತ್ವ ಮಾನ್ಸೂನ್‌ ಭಾನುವಾರ (ಮೇ 29) ಕೇರಳ ರಾಜ್ಯದ ಕರಾವಳಿಯನ್ನು ತಲುಪಿದೆ. ಭಾರತೀಯ ಹವಾಮಾನ ಇಲಾಖೆ (IMD) ಇಂದು, ಭಾನುವಾರ ಕೇರಳದ ಮೇಲೆ ನೈರುತ್ಯ ಮಾನ್ಸೂನ್ ಪ್ರಾರಂಭವಾಗಲಿದೆ ಎಂದು ಘೋಷಿಸಿದೆ, ಅದು ಸಾಮಾನ್ಯವಾಗಿ ಆಗಮಿಸುವ ಅದರ ಸಾಮಾನ್ಯ ದಿನಾಂಕ ಜೂನ್ 1 ಕ್ಕಿಂತ ಮೂರು ದಿನಗಳ … Continued

ಕೇರಳ: ಸಮಾವೇಶದಲ್ಲಿ ಪ್ರಚೋದನಕಾರಿ ಘೋಷಣೆ ಪ್ರಕರಣದಲ್ಲಿ ಪಿಎಫ್‌ಐ ಮುಖಂಡ ಯಾಹ್ಯಾ ತಂಗಲ್ ಬಂಧನ

ಅಲಪ್ಪುಜ (ಕೇರಳ): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜಿಲ್ಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾವೇಶದಲ್ಲಿ ಅಪ್ರಾಪ್ತ ಬಾಲಕನೊಬ್ಬ ಪ್ರಚೋದನಕಾರಿ ಘೋಷಣೆ ಕೂಗಿದ ಆರೋಪದ ಮೇಲೆ ಭಾನುವಾರ ಬೆಳಗ್ಗೆ ಸಂಘಟನೆಯ ನಾಯಕನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಯಾಹ್ಯಾ ತಂಗಳ್ ಬಂಧನವನ್ನು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ತಂಗಳ್ ಬಾಲಕ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದ ಕಾರ್ಯಕ್ರಮದ ಸಂಘಟಕರಲ್ಲಿ … Continued