ನಾಲ್ವರು ಭಾರತೀಯರು ಸೇರಿ 22 ಜನರಿದ್ದ ನೇಪಾಳ ವಿಮಾನ ಅಪಘಾತ ಸ್ಥಳದಲ್ಲಿ 14 ಮೃತದೇಹಗಳು ಪತ್ತೆ

ಕಠ್ಮಂಡು (ನೇಪಾಳ): ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಪ್ರಯಾಣಿಸುತ್ತಿದ್ದ ವಿಮಾನವು ನೇಪಾಳದ ಪರ್ವತ ಪ್ರದೇಶದಲ್ಲಿ ಪತನಗೊಂಡ ವಿಮಾನದ ಅವಶೇಷಗಳಿಂದ 14 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರವನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ. “ಇಲ್ಲಿಯವರೆಗೆ ಹದಿನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ, ಉಳಿದವರಿಗಾಗಿ ಶೋಧ ಮುಂದುವರೆದಿದೆ. ಹವಾಮಾನವು ತುಂಬಾ ಕೆಟ್ಟದಾಗಿದೆ. ಆದರೆ ನಾವು ಅಪಘಾತದ … Continued

ಕರ್ನಾಟಕಕ್ಕೆ ಜೂನ್ 2ರಂದು ಮುಂಗಾರು ಪ್ರವೇಶ ಸಾಧ್ಯತೆ

ಬೆಂಗಳೂರು: ಜೂನ್ 2ರಂದು ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಪ್ರದೇಶಗಳಿಗೆ ಮುಂಗಾರು ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಾಡಿಕೆಗಿಂತ ಮೂರು ದಿನ ಮುಂಚಿತವಾಗಿ ಮಾನ್ಸೂನ್ ಮೇ 29 ರಂದು ಕೇರಳವನ್ನು ಪ್ರವೇಶಿಸಿದೆ. ಸಾಮಾನ್ಯವಾಗಿ ಮಾನ್ಸೂನ್ ಕೇರಳ ಪ್ರವೇಶಿಸಿದ ಮೂರರಿಂದ ನಾಲ್ಕು ದಿನಗಳ ನಂತರ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮಳೆಯಾಗುತ್ತದೆ … Continued

ರಾಜ್ಯಸಭಾ ಟಿಕೆಟ್‌ ನಿರಾಕರಿಸಿದ ನಂತರ ನಮ್ಮ ವರ್ಷಗಳ ತಪಸ್ಸು ಕಡಿಮೆಯಾಯ್ತು ಎಂದು ಮಾರ್ಮಿಕವಾಗಿ ಹೇಳಿದ ಕಾಂಗ್ರೆಸ್‌ನ ನಗ್ಮಾ, ಪವನ್ ಖೇರಾ

ನವದೆಹಲಿ: ಮಹಾರಾಷ್ಟ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉತ್ತರ ಪ್ರದೇಶದ ಇಮ್ರಾನ್ ಪ್ರಾಪ್ತಗಿರಿ ಎದುರು ತಮ್ಮ 18 ವರ್ಷಗಳ ತಪಸ್ಸು ಕಡಿಮೆಯಾಗಿದೆ ಎಂದು ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಕಾಂಗ್ರೆಸ್ ನಾಯಕಿ ನಗ್ಮಾ ಹೇಳಿದ್ದಾರೆ. ಜೂನ್ 10 ರಂದು ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ 10 ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಕಾಂಗ್ರೆಸ್ ಪ್ರಕಟಿಸಿದ ನಂತರ ನಗ್ಮಾ ಅವರ ಈ ಹೇಳಿಕೆ … Continued

11 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು:11 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಜನೀಶ ಗೋಯಲ್ ಗೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಐಎಸ್ಎನ್ ಪ್ರಸಾದಗೆ ಅಭಿವೃದ್ಧಿ ಆಯುಕ್ತರ ಹೆಚ್ಚುವರಿ ಹೊಣೆ ನೀಡಲಾಗಿದೆ. 11 ಮಂದಿ ಐಎಎಸ್ ಅಧಿಕಾರಿಗಳ ಹುದ್ದೆಗಳ ವಿವರ… ರಜನೀಶ್ ಗೋಯಲ್‌- ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯ ಹೆಚ್ಚುವರಿ … Continued

ಮಧ್ಯಪ್ರದೇಶದಲ್ಲಿ 700 ಕೋಟಿ ರೂ. ಜಿಎಸ್‌ಟಿ ವಂಚನೆ ಪತ್ತೆ: 5 ಮಂದಿ ಬಂಧನ

ಭೋಪಾಲ್: 700 ಕೋಟಿ ರೂ.ಗಳ ಮೊತ್ತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಾಲ ವಂಚನೆಗೆ ಸಂಬಂಧಿಸಿದಂತೆ ಗುಜರಾತ್‌ನ ಐವರನ್ನು ಬಂಧಿಸಲಾಗಿದೆ ಎಂದು ಮಧ್ಯಪ್ರದೇಶ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಆರೋಪಿಗಳು ನಕಲಿ ದಾಖಲೆಗಳು, ವಿಳಾಸಗಳು ಮತ್ತು ನಕಲಿ ಗುರುತುಗಳನ್ನು ಬಳಸಿಕೊಂಡು ಸುಮಾರು 500 ನಕಲಿ ಸಂಸ್ಥೆಗಳ ಜಾಲವನ್ನು ಸೃಷ್ಟಿಸುವ ಮೂಲಕ ನಕಲಿ ಜಿಎಸ್‌ಟಿ ಇನ್‌ಪುಟ್ ತೆರಿಗೆ … Continued

ಇದು ರಾಯರ ಪವಾಡ…: ರಾಜ್ಯಸಭೆಗೆ ಬಿಜೆಪಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ನಟ ಜಗ್ಗೇಶ್ ಟ್ವೀಟ್

ಬೆಂಗಳೂರು: ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್ ಸಿಕ್ಕಿರುವುದಕ್ಕೆ ನಟ ಜಗ್ಗೇಶ್ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ನಾಯಕರು, ಸಂಘ ಪರಿವಾರದ ಆಶೀರ್ವಾದ ಮತ್ತು ರಾಯರ ಪವಾಡ ಎಂದು ಸಾಮಾಜಿಕ ಜಾಲತಾಣದಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ. ನಟ ಜಗ್ಗೇಶ್ ಅವರು ಮಂತ್ರಾಲಯ ರಾಯರ ಪರಮ ಭಕ್ತರು. ಅಂತೆಯೇ ಮಂತ್ರಾಲಯಕ್ಕೆ ಆಗಾಗ ತೆರಳಿ ದರ್ಶನ ಪಡೆದು ಬರುತ್ತಾರೆ. ರಾಜ್ಯದಿಂದ ರಾಜ್ಯಸಭೆಯ … Continued

ರಾಜ್ಯಸಭಾ ಚುನಾವಣೆ: ಪಿ ಚಿದಂಬರಂ, ಜೈರಾಂ ರಮೇಶ ಸೇರಿ ಕಾಂಗ್ರೆಸ್‌ನಿಂದ 10 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ನವದೆಹಲಿ: ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಭಾನುವಾರ 10 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮಾಜಿ ಕೇಂದ್ರ ಸಚಿವರಾದ ಪಿ ಚಿದಂಬರಂ, ಜೈರಾಂ ರಮೇಶ ಮತ್ತು ಅಜಯ್ ಮಾಕನ್ ಮತ್ತು ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಅವರನ್ನು ಕಣಕ್ಕಿಳಿಸಿದೆ. ತಮಿಳುನಾಡಿನಿಂದ ಪಿ.ಚಿದಂಬರಂ, ಕರ್ನಾಟಕದಿಂದ ಜೈರಾಂ ರಮೇಶ, ಹರಿಯಾಣದಿಂದ ಮಾಕೆನ್ ಮತ್ತು … Continued

ಗಾಯಕ ಸಿಧು ಮೂಸೆವಾಲಾ ಹತ್ಯೆಯ ಹೊಣೆ ಹೊತ್ತ ಕೆನಡಾ-ಮೂಲದ ಗ್ಯಾಂಗ್‌ಸ್ಟರ್‌ : ಪೊಲೀಸರು

ನವದೆಹಲಿ: ಕಾಂಗ್ರೆಸ್ ನಾಯಕ ಹಾಗೂ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಭಾನುವಾರ ಮಾನ್ಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುಂಡಿನ ದಾಳಿಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ. ಪಂಜಾಬ್ ಸರ್ಕಾರ ಮೂಸೆವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಹಿಂಪಡೆದ ಒಂದು ದಿನದ ನಂತರ ಈ ಘಟನೆ ನಡೆದಿದೆ. ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕುವ ಭಗವಂತ್ ಮಾನ್ … Continued

ಬಾಲಚಂದ್ರ ಸಾಯಿಮನೆಗೆ ಪಾವನಾ ಪರಿಸರ ಪ್ರಶಸ್ತಿ

ಶಿರಸಿ: ಪಾವನಾ ಪರಿಸರ ಪ್ರತಿಷ್ಠಾನದಿಂದ ಕೊಡಲಾಗುತ್ತಿರುವ ಪ್ರತಿಷ್ಠಿತ “ಪಾವನಾ ಪರಿಸರ ಪ್ರಶಸ್ತಿ”ಯನ್ನು ಈ ಬಾರಿ ಕೃಷಿಕ-ಪರಿಸರ ವಿಜ್ಞಾನಿ ಬಾಲಚಂದ್ರ ಸಾಯಿಮನೆ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿಯು . ೫೦ ಸಾವಿರ ರೂ.ಗಳ ನಗದುಹಾಗೂ ಸ್ಮರಣಿಕೆಯನ್ನೊಳಗೊಂಡಿದೆ. ಜೂನ್‌ ೫ರಂದು “ವಿಶ್ವ ಪರಿಸರ ದಿನ”ದಂದು ಶಿರಸಿಯಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್‌. ಎನ್‌. ನಾಗಮೋಹನದಾಸ … Continued

ಮುಂದಿನ ವರ್ಷದಿಂದ ಶಾಲಾ-ಕಾಲೇಜುಗಳಲ್ಲಿ ಯೋಗ ಆರಂಭ

ಬೆಂಗಳೂರು: ಮುಂದಿನ ವರ್ಷದಿಂದ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಯೋಗ ಆರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಲಾ-ಕಾಲೇಜುಗಳಲ್ಲಿ ಯೋಗ ಆರಂಭಿಸುವ ಕುರಿತು ಯೋಗ ಪರಿಣಿತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ರಾಜ್ಯದಲ್ಲಿ ಇತ್ತೀಚೆಗೆ ಮಕ್ಕಳು ಒತ್ತಡದಲ್ಲಿದ್ದಾರೆ. ಅದರಲ್ಲೂ ಕೋವಿಡ್ ನಂತರ ಹೊಸ ರೀತಿಯ ಒತ್ತಡಗಳು ಉಂಟಾಗಿದೆ. ಯಾವುದೇ ಒತ್ತಡವಿಲ್ಲದೆ ಬಾಲ್ಯವನ್ನು … Continued