ಆನೆ vs ಹಲಸಿನ ಹಣ್ಣು : ಎರಡೇ ಕಾಲಲ್ಲಿ ನಿಂತು ಹಲಸಿನ ಕಾಯಿ ಗೊಂಚಲನ್ನೇ ಕೀಳುವ ಆನೆಯ ಸಾಹಸ ನೋಡಿದ್ದೀರಾ | ವೀಕ್ಷಿಸಿ

ಆನೆಗಳಿಗೆ ಸಂಬಂಧಪಟ್ಟ ವೀಡಿಯೊಗಳು ಸಾಮಾನ್ಯವಾಗಿ ನೋಡಲು ಮುದ ನೀಡುತ್ತವೆ ಮತ್ತು ವೀಕ್ಷಿಸಲು ಆನಂದದಾಯಕವಾಗಿರುತ್ತವೆ.ಮಣ್ಣಿನ ಸ್ನಾನ ಮಾಡುವುದರಿಂದ ಹಿಡಿದು ಇಳಿಜಾರುಗಳಲ್ಲಿ ಜಾರುವ ವರೆಗೆ, ಅಂತಹ ಅದ್ಭುತ ವೀಡಿಯೊಗಳಿಂದ ಇಂಟರ್ನೆಟ್ ತುಂಬಿದೆ. ಏತನ್ಮಧ್ಯೆ, ಸ್ಥಳೀಯರ ಪ್ರೋತ್ಸಾಹದಿಂದ ಆನೆಯೊಂದು ಮರದಿಂದ ಹಲಸು ಕೀಳಲು ಹೆಣಗಾಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಭಾರತೀಯ ಆಡಳಿತ ಸೇವೆಗಳ ಅಧಿಕಾರಿ ಸುಪ್ರಿಯಾ ಸಾಹು ಅವರು ಹಂಚಿಕೊಂಡ 30 … Continued

ಕಾಮನ್‌ವೆಲ್ತ್ ಗೇಮ್ಸ್‌ -2022 : ಮಹಿಳೆಯರ 48 ಕೆಜಿ ವಿಭಾಗ ಜುಡೊದಲ್ಲಿ 2ನೇ ಬೆಳ್ಳಿ ಗೆದ್ದ ಶುಶೀಲಾ ದೇವಿ

ಸೋಮವಾರ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌- 2022 ರಲ್ಲಿ ಮಹಿಳೆಯರ ಜುಡೊ 48 ಕೆಜಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್‌ಬೂಯಿ ವಿರುದ್ಧ ಸೋತ ನಂತರ ಜೂಡೋಕಾ ಶುಶೀಲಾ ದೇವಿ ಲಿಕ್ಮಾಬಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತನ್ನ ಎರಡನೇ ಬೆಳ್ಳಿ ಗೆದ್ದರು. ಪಂದ್ಯವು 4 ನಿಮಿಷಗಳ ಅಂತ್ಯದಲ್ಲಿ 0-0 ಆಗಿ ಉಳಿದ ನಂತರ ಗೋಲ್ಡನ್ ಪಾಯಿಂಟ್‌ಗೆ ಹೋಯಿತು. ಚಿನ್ನದ … Continued

ಭಾರಿ ಮಳೆಗೆ ಪ್ರವಾಹ : ಎರಡು ದಿನ ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳದಂತೆ ಸೂಚನೆ

posted in: ರಾಜ್ಯ | 0

ಸುಬ್ರಹ್ಮಣ್ಯ: ಭಾರಿ ಮಳೆ ಸುರಿಯುತ್ತಿರುವ ಕಾರಣ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಆದಿ ಸುಬ್ರಹ್ಮಣ್ಯ ದೇಗುಲದ ಒಳಗೆ ನೀರು ಹೊಕ್ಕಿದೆ. ಹೀಗಾಗಿ ಮುಂದಿನ ಎರಡು ದಿನಗಳ ಕಾಲ ಹೊರ ಜಿಲ್ಲೆಗಳ ಭಕ್ತರು ದೇವಾಲಯಕ್ಕೆ ಭೇಟಿ ನೀಡದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಕುಮಾರಧಾರ ನದಿ ಉಕ್ಕಿ ಹರಿದು ಆದಿ ಸುಬ್ರಹ್ಮಣ್ಯ ದೇವಾಲಯಕ್ಕೆ ನೀರು ಒಳಹೊಕ್ಕಿದೆ. … Continued

ಮುಂಬೈನಲ್ಲಿ ಹಣ ಉಳಿಯಲ್ಲ ಎಂಬ ಹೇಳಿಕೆಗೆ ಕ್ಷಮೆಯಾಚಿಸಿದ ಮಹಾರಾಷ್ಟ್ರ ರಾಜ್ಯಪಾಲರು

ಮುಂಬೈ: ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಈ ವಾರದ ಆರಂಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಗೆ ಸೋಮವಾರ ಕ್ಷಮೆಯಾಚಿಸಿದ್ದಾರೆ. ಅವರ ಹೇಳಿಕೆ ರಾಜ್ಯದಲ್ಲಿ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು. ಜುಲೈ 29 ರಂದು ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮುಂಬೈನ ಅಭಿವೃದ್ಧಿಗೆ ಕೆಲವು ಸಮುದಾಯಗಳ ಕೊಡುಗೆಯನ್ನು ಶ್ಲಾಘಿಸುವ ಭರದಲ್ಲಿ ನಾನು ತಪ್ಪು ಮಾತಾಡಿದೆ. ಮಹಾರಾಷ್ಟ್ರ ಮಾತ್ರವಲ್ಲ, … Continued

ತಾಳಗುಪ್ಪ : ಖಾಸಗಿ ಬಸ್ – ಕಾರ್ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಚಾಲಕ ಸಾವು, 6 ಮಂದಿಗೆ ಗಾಯ

posted in: ರಾಜ್ಯ | 0

ತಾಳಗುಪ್ಪ : ಮಾರುತಿ ಇಕೋ ಕಾರು ಮತ್ತು ಹಾಗೂ ಪ್ರವಾಸಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟು ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಆಲಳ್ಳಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಜೋಗದಿಂದ ಸಾಗರದ ಕಡೆ ಬರುತ್ತಿದ್ದ ಕಾರು ಪ್ರವಾಸಿ ಬಸ್ಸಿಗೆ ಗುದ್ದಿ … Continued

₹ 88,078 ಕೋಟಿಯೊಂದಿಗೆ 5G ಸ್ಪೆಕ್ಟ್ರಮ್ ಬಿಡ್‌ಗಳಲ್ಲಿ ಅಗ್ರಸ್ಥಾನ ಪಡೆದ ರಿಲಯನ್ಸ್ ಜಿಯೋ, ಅದಾನಿ ಖರೀದಿಸಿದ್ದು…

ನವದೆಹಲಿ: ಬಿಲಿಯನೇರ್ ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಸೋಮವಾರ 5G ಸ್ಪೆಕ್ಟ್ರಮ್‌ಗಾಗಿ ಅತಿ ದೊಡ್ಡ ಬಿಡ್ಡರ್ ಆಗಿ ಹೊರಹೊಮ್ಮಿದೆ. ಇತ್ತೀಚಿನ ಹರಾಜಿನಲ್ಲಿ ₹ 88,078 ಕೋಟಿಗೆ ಮಾರಾಟವಾದ ಎಲ್ಲ ಏರ್‌ವೇವ್‌ಗಳ ಅರ್ಧದಷ್ಟು ಭಾಗವನ್ನು ಪಡೆದುಕೊಂಡಿದೆ. ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, ಅದಾನಿ ಸಮೂಹವು ₹ 212 ಕೋಟಿಗೆ 400 MHz ಅಥವಾ ಮಾರಾಟವಾದ … Continued

ಜಬಲ್‌ಪುರ ಆಸ್ಪತ್ರೆಯಲ್ಲಿ ಬೆಂಕಿ ಅನಾಹತ; 10 ಮಂದಿ ಸಾವು

ಜಬಲ್ಪುರ: ಮಧ್ಯಪ್ರದೇಶದ ಜಬಲ್‌ಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ನಾಲ್ವರು ರೋಗಿಗಳು ಸೇರಿದಂತೆ ಕನಿಷ್ಠ ಹತ್ತು ಜನರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಐವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಗೋಹಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಂದಲ್ ಭಾಟಾದಲ್ಲಿರುವ ನ್ಯೂ ಲೈಫ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅಗ್ನಿ ಅವಘಡದಲ್ಲಿ ಹತ್ತು … Continued

ಆಂಧ್ರಪ್ರದೇಶದ ಮಾಜಿ ಸಿಎಂ ಎನ್‌ಟಿಆರ್‌ ಪುತ್ರಿ ಆತ್ಮಹತ್ಯೆ

ಹೈದರಾಬಾದ್:‌ ದಿವಂಗತ ನಟ-ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಎನ್‌.ಟಿ. ರಾಮರಾವ್ ಅವರ ಪುತ್ರಿ ಕೆ. ಉಮಾ ಮಹೇಶ್ವರಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಮಾ ಮಹೇಶ್ವರಿ ಅವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಕಳೆದ ಕೆಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಮಹೇಶ್ವರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮಲಗುವ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ … Continued

ಸ್ಮೃತಿ ಇರಾನಿ, ಅವರ ಮಗಳು ಗೋವಾ ರೆಸ್ಟೋರೆಂಟ್ ಮಾಲೀಕರಲ್ಲ, ಪರವಾನಗಿಗಾಗಿ ಅರ್ಜಿಯನ್ನೂ ಸಲ್ಲಿಸಿಲ್ಲ: ದೆಹಲಿ ಹೈಕೋರ್ಟ್

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅವರ ಪುತ್ರಿ  ಗೋವಾ ರೆಸ್ಟೋರೆಂಟ್‌ನ ಮಾಲೀಕರಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ಹೇಳಿದೆ. ಅವರ ಪರವಾಗಿ ಯಾವುದೇ ಪರವಾನಗಿ ನೀಡಲಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ ಹಾಗೂ ಅವರ ವಿರುದ್ಧದ ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿದೆ. ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ, ನೆಟ್ಟಾ ಡಿಸೋಜಾ ಮತ್ತು ಇತರರು … Continued

ಎರಡು ದಿನ ಶ್ರಮಪಟ್ಟು 36 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿದ್ದ 63 ನಾಣ್ಯಗಳನ್ನು ಹೊರತೆಗೆದ ವೈದ್ಯರು…!

ಜೋಧ್‌ಪುರ: ರಾಜಸ್ಥಾನದ ಜೋಧ್‌ಪುರದಲ್ಲಿ 36 ವರ್ಷದ ವ್ಯಕ್ತಿಯೊಬ್ಬರು 1 ರೂಪಾಯಿಯ 63 ನಾಣ್ಯಗಳನ್ನು ಸೇವಿಸಿ ಅಸ್ವಸ್ಥಗೆ ಒಳಗಾದ ವಿಲಕ್ಷಣ ಘಟನೆ ನಡೆದಿದೆ. ನಂತರ ಜುಲೈ 27 ರಂದು ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದಾಗ, ವೈದ್ಯರು ಅವರ ಹೊಟ್ಟೆಯಲ್ಲಿ ಲೋಹದ ಗಡ್ಡೆಯನ್ನು ಕಂಡುಕೊಂಡರು. ಆದರೆ, ಆ ವ್ಯಕ್ತಿ 63 ರೂ.ಗಳ … Continued