ಅಮರಾವತಿ ಕೊಲೆ ಪ್ರಕರಣ: ಡ್ರಗ್ಗಿಸ್ಟ್‌ ಉಮೇಶ್ ಕೊಲ್ಹೆ ಕೊಂದು ಆರೋಪಿಗಳು ಬಿರಿಯಾನಿ ಪಾರ್ಟಿ ಮಾಡಿದ್ದರು ಎಂದ ಎನ್‌ಐಎ

ಮುಂಬೈ: ಅಮರಾವತಿ ಮೂಲದ ರಸಾಯನಶಾಸ್ತ್ರಜ್ಞ ಉಮೇಶ್ ಕೊಲ್ಹೆ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳು ಹತ್ಯೆಯ ಸಂಭ್ರಮಾಚರಣೆಗಾಗಿ ನಡೆದ ಬಿರಿಯಾನಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ತಿಳಿಸಿದೆ. ಬುಧವಾರ ಅಮರಾವತಿಯಿಂದ ಬಂಧಿತರಾದ ಆರೋಪಿಗಳಾದ ಮೌಲವಿ ಮುಷ್ಫೀಕ್ ಅಹ್ಮದ್ (41) ಮತ್ತು ಅಬ್ದುಲ್ ಅರ್ಬಾಜ್ (23) ಅವರನ್ನು … Continued

ಕಾಮನ್‌ವೆಲ್ತ್ ಕ್ರೀಡಾಕೂಟ-2022 : ಕುಸ್ತಿಯಲ್ಲಿ ಚಿನ್ನ ಗೆದ್ದ ಭಾರತದ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್

ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಫೈನಲ್‌ನಲ್ಲಿ ಕೆನಡಾದ ಲಾಚ್ಲಾನ್ ಮೆಕ್‌ನೀಲ್ ಅವರನ್ನು ಸೋಲಿಸಿದ ಬಜರಂಗ್ ಪೂನಿಯಾ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕುಸ್ತಿ ಕ್ರೀಡೆಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಕೆಲವು ನಿಮಿಷಗಳ ನಂತರ, 2016 ರ ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು ಮಹಿಳೆಯರ 62 ಕೆಜಿ … Continued

ಹಿಂದೂ ದೇವತೆಗಳ ಆಕ್ಷೇಪಾರ್ಹ ಫೋಟೋ ಪ್ರಕಟಿಸಿದ್ದಕ್ಕಾಗಿ ‘ದಿ ವೀಕ್’ ವಿರುದ್ಧ ಎಫ್‌ಐಆರ್ ದಾಖಲು : ಕ್ಷಮೆಯಾಚಿಸಿದ ‘ದಿ ವೀಕ್’

ನವದೆಹಲಿ: ಹಿಂದೂ ದೇವತೆಗಳಾದ ಶಿವ ಮತ್ತು ಕಾಳಿಯ ಆಕ್ಷೇಪಾರ್ಹ ಚಿತ್ರವನ್ನು ಪ್ರಕಟಿಸಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಗುರುವಾರ, ಆಗಸ್ಟ್ 4 ರಂದು ದಿ ವೀಕ್ ನಿಯತಕಾಲಿಕದ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ಶಿವ ಮತ್ತು ಕಾಳಿಯ ಆಕ್ಷೇಪಾರ್ಹ ಚಿತ್ರವನ್ನು ಪ್ರಕಟಿಸಿದ್ದಕ್ಕೆ ಶುಕ್ರವಾರ, ಆಗಸ್ಟ್ … Continued

ಚೀನಾದಲ್ಲಿ ಅಂದಾಜು 15 ಕೋಟಿ ವರ್ಷಗಳಷ್ಟು ಹಳೆಯದಾದ 4300 ಡೈನೋಸಾರ್ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿದ ವಿಜ್ಞಾನಿಗಳು

ಜುಲೈ ಮೊದಲ ವಾರದಲ್ಲಿ ಮಾಡಿದ ವೈಜ್ಞಾನಿಕ ಪ್ರಕಟಣೆಯ ಪ್ರಕಾರ ಉತ್ತರ ಚೀನಾದಲ್ಲಿ ಅತಿ ಹೆಚ್ಚು ಡೈನೋಸಾರ್ ಹೆಜ್ಜೆಗುರುತುಗಳ ಪಳೆಯುಳಿಕೆಗಳು ಪತ್ತೆಯಾಗಿವೆ. ಚೀನಾದ ವಿಜ್ಞಾನಿಗಳು ಉತ್ತರ ಚೀನಾದ ಜಾಂಗ್‌ಜಿಯಾಕೌ ಪ್ರಾಂತ್ಯದ ಹೆಬೈ ಪ್ರಾಂತ್ಯದಲ್ಲಿ 4,300 ಕ್ಕೂ ಹೆಚ್ಚು ಡೈನೋಸಾರ್‌ಗಳ ಹೆಜ್ಜೆಗುರುತುಗಳನ್ನು ಕಂಡುಹಿಡಿದಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದೆ. ಸುಮಾರು 150 ಮಿಲಿಯನ್ … Continued

ಕಾರಿನ ಮೇಲೆ ಉರುಳಿ ಬಿದ್ದ ಮರ: ತಂದೆ-ಮಗ ಸ್ಥಳದಲ್ಲೇ ಸಾವು

ಚಾಮರಾಜನಗರ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಉರುಳಿಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸಮೀಪ ಹೆಗ್ಗವಾಡಿ ಕ್ರಾಸ್ ಬಳಿ ಘಟನೆ ನಡೆದಿದೆ. ಕುದೇರು ರಸ್ತೆಯಲ್ಲಿ ಚಲಿಸುತ್ತಿದ್ದ ಮಾರುತಿ ಒಮ್ನಿ ಕಾರಿನ ಮೇಲೆ ಹಳೆಯ ಮರ ಉರುಳಿ ಬಿದ್ದಿದೆ. ಮೃತರನ್ನು ಹೊನ್ನೂರಿನ ಹೆಚ್.ಬಿ. ರಾಜು(49) ಮತ್ತು ಅವರ ಪುತ್ರ ಶರತ್(22) ಎಂದು ಗುರುತಿಸಲಾಗಿದೆ. … Continued

ಪಿಯು ಅಂಕ ಪರಿಗಣಿಸದ ಕೆಇಎ: ಹೈಕೋರ್ಟ್‌ ಮೆಟ್ಟಿಲೇರಿದ ಪುನರಾವರ್ತಿತ ಸಿಇಟಿ ವಿದ್ಯಾರ್ಥಿಗಳು

ಬೆಂಗಳೂರು: 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕ್ರಮ ಪ್ರಶ್ನಿಸಿ ಕೆಲವು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪುನರಾವರ್ತಿತ ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಜಿ. ಮನಸ್ವಿನಿ ಸೇರಿದಂತೆ ಏಳು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯು ಗುರುವಾರ ನ್ಯಾಯಮೂರ್ತಿ ಎಸ್. … Continued

ಬೆಳಗಾವಿ: ಮಗನ ಮೇಲೆ ಚಿರತೆ ದಾಳಿ ಮಾಡಿದ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು

ಬೆಳಗಾವಿ: ಮಗನ ಮೇಲೆ ಚಿರತೆ ದಾಳಿ ಸುದ್ದಿ ಕೇಳಿ ತಾಯಿ ಸಾವು ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಖನಗಾವಿ ಕೆ.ಎಚ್. ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿದ್ದ ಸಿದರಾಯಿ ಮಿರಜಕರ್‌ಗೆ ಎಂಬವರ ಮೇಲೆ ಇಂದು, ಶುಕ್ರವಾರ ಚಿರತೆ ದಾಳಿ ಮಾಡಿತ್ತು‌. ಕಟ್ಟಡ ಕಾರ್ಮಿಕನ ಬೆನ್ನಿಗೆ ಪರಚಿದ ಗಾಯವಾಗಿತ್ತು. … Continued

ನವೆಂಬರ್‌ 1ರಂದು ಪುನೀತ್‌ ರಾಜಕುಮಾರಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ: ಸಿಎಂ ಬೊಮ್ಮಾಯಿ

ಬೆಂಗಳೂರು: ಚಿತ್ರನಟ ಡಾ. ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಇಂದು, ಶುಕ್ರವಾರ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ವತಿಯಿಂದ ಲಾಲ್‍ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ, ನಂತರ … Continued

ಪಾರ್ಥ ಚಟರ್ಜಿ, ಆಪ್ತ ಸಹಾಯಕಿಗೆ ಇನ್ನೂ 14 ದಿನಗಳ ಕಾಲ ಜೈಲು

ಕೋಲ್ಕತ್ತಾ: ಶಾಲಾ ಸೇವಾ ಆಯೋಗದ ನೇಮಕಾತಿ ಹಗರಣ ಪ್ರಕರಣದಲ್ಲಿ ಬಂಧಿತ ತೃಣಮೂಲ ಕಾಂಗ್ರೆಸ್ ನಾಯಕ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ. ಮುಂದಿನ ವಿಚಾರಣೆ ಆಗಸ್ಟ್ 18 ರಂದು ನಡೆಯಲಿದೆ. ಇ.ಡಿ, ಬಂಗಾಳದ ಮಾಜಿ ಶಿಕ್ಷಣ ಸಚಿವ ಮತ್ತು ಅರ್ಪಿತಾ ಮುಖರ್ಜಿಯನ್ನು 14 ದಿನಗಳ … Continued

ಬೆಂಗಳೂರು: 4 ವರ್ಷದ ಮಗಳನ್ನು 4ನೇ ಮಹಡಿಯಿಂದ ಎಸೆದ ಮಹಿಳೆ, ತಾನೂ ಬಾಲ್ಕನಿಯಿಂದ ಜಿಗಿಯಲು ಪ್ರಯತ್ನ | ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಮಹಿಳೆಯೊಬ್ಬರು ತಮ್ಮ ನಾಲ್ಕನೇ ಮಹಡಿಯ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ತನ್ನ ನಾಲ್ಕು ವರ್ಷದ ಮಗಳನ್ನು ಎಸೆದ ದೃಶ್ಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಮಹಿಳೆ ತನ್ನ ಮಗುವನ್ನು ಎಸೆದ ನಂತರ, ಮಹಿಳೆ ಬಾಲ್ಕನಿಯ ಗ್ರಿಲ್‌ಗಳ ಮೇಲೆ ಹತ್ತಿ ಕೆಲವು ಸೆಕೆಂಡುಗಳ ಕಾಲ ನಿಂತಿದ್ದಳು, ತಾನೂ ಬಾಲ್ಕನಿಯಿಂದ ತಾನೂ ಜಿಗಿಯುವ ಪ್ರಯತ್ನದಲ್ಲಿದ್ದಳು. ನಂತರ ಕುಟುಂಬ ಸದಸ್ಯರು ಹೊರಗೆ ಧಾವಿಸಿ, … Continued