ತಮ್ಮ ಆಸ್ತಿ ಘೋಷಿಸಿದ ಪ್ರಧಾನಿ ಮೋದಿ, ₹ 26.13 ಲಕ್ಷ ಹೆಚ್ಚಳ, ತಮ್ಮ ಹೆಸರಿಗಿದ್ದ ಭೂಮಿ ದಾನ: ಈಗ ಮೋದಿ ಆಸ್ತಿ ಎಷ್ಟು ಗೊತ್ತಾ..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ₹ 2.23 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ, ಬಹುತೇಕ ಬ್ಯಾಂಕ್ ಠೇವಣಿಗಳಾಗಿವೆ. ಆದರೆ ಅವರು ಗಾಂಧಿನಗರದ ಒಂದು ತುಂಡು ಭೂಮಿಯಲ್ಲಿನ ತಮ್ಮ ಪಾಲನ್ನು ದಾನ ಮಾಡಿರುವುದರಿಂದ ಯಾವುದೇ ಸ್ಥಿರ ಆಸ್ತಿಯನ್ನು ಹೊಂದಿಲ್ಲ ಎಂದು ಅವರು ತಮ್ಮ ಇತ್ತೀಚಿನ ಆಸ್ತಿಯನ್ನು ಬಹಿರಂಗಪಡಿಸಿದ್ದಾರೆ. ಮಾರ್ಚ್ 31ರಂದು ನವೀಕರಿಸಿದ ಅವರ ಆಸ್ತಿ … Continued

ತನ್ನ ಜನ್ಮದಿನದಂದೇ ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ

ಚಾಮರಾಜನಗರ: ಕಾಲೇಜು ಉಪನ್ಯಾಸಕಿಯೋರ್ವರು ತಮ್ಮ ಜನ್ಮದಿನದಂದೇ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ. ನಗರದ ಜೆಎಸ್‌ಎಸ್ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಚಂದನಾ (26) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಚಂದನಾ ಯಳಂದೂರು ತಾಲ್ಲೂಕು ಅಂಬಳೆ ಗ್ರಾಮದವರು. ನಗರದ ಜೆ ಎಸ್ ಎಸ್ ಕಾಲೇಜು ಜೀವಶಾಸ್ತ್ರ ಉಪನ್ಯಾಸಕಿಯಾಗಿದ್ದರು. ಹಾಗೂ ನಗರದ ಜೆ ಎಸ್ … Continued

7 ಪಕ್ಷಗಳ ಮೈತ್ರಿ ಸರ್ಕಾರದಲ್ಲಿ ನಿತೀಶ ಸಿಎಂ, ತೇಜಸ್ವಿ ಯಾದವ್‌ ಡಿಸಿಎಂ, ಅಲ್ಲದೆ ಸ್ಪೀಕರ್‌ ಹುದ್ದೆ, ಗೃಹ ಖಾತೆಯನ್ನೂ ಕೇಳುತ್ತಿರುವ ಆರ್‌ಜೆಡಿ

ಪಾಟ್ನಾ: ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡಿರುವ ಬಿಹಾರ ಮುಖ್ಯಮಂತ್ರಿ ಆರ್‌ಜಡಿ ಹಾಗೂ ಕಾಂಗ್ರೆಸ್‌ ಜೊತೆ ಸೇರಿಒಟ್ಟಾಗಿ ಹೊಸ ಸರ್ಕಾರ ರಚನೆ ಯತ್ನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. “ನಾನು ರಾಜೀನಾಮೆ ನೀಡಿದ್ದೇನೆ. ನಾವು ಎನ್‌ಡಿಎ ಜೊತೆಗಿನ ಮೈತ್ರಿ ಮುರಿದುಕೊಂಡಿದ್ದೇವೆ. ಎಲ್ಲಾ ಜೆಡಿಯು ಸಂಸದರು ಮತ್ತು ಶಾಸಕರು ಎನ್‌ಡಿಎ ತೊರೆಯಲು ಬಯಸಿದ್ದರು” ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ … Continued

ನೋಯ್ಡಾದಲ್ಲಿ ಮಹಿಳೆ ಹಲ್ಲೆ ಪ್ರಕರಣ: ಪರಾರಿಯಾಗಿದ್ದ ಶ್ರೀಕಾಂತ್ ತ್ಯಾಗಿ, ಮೂವರು ಸಹಚರ ಬಂಧನ

ನವದೆಹಲಿ: ಮಹಿಳೆ ಮೇಲೆ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಶ್ರೀಕಾಂತ್ ತ್ಯಾಗಿಯನ್ನು ಬಂಧಿಸಲಾಗಿದೆ ಎಂದು ನೋಯ್ಡಾ ಪೊಲೀಸರು ಖಚಿತಪಡಿಸಿದ್ದಾರೆ. ಮಹಿಳೆಯೊಬ್ಬರನ್ನು ನಿಂದಿಸಿದ ಮತ್ತು ಹಲ್ಲೆ ಮಾಡಿದ ವಿಡಿಯೋ ವೈರಲ್ ಆದ ನಂತರ ಪರಾರಿಯಾಗಿದ್ದ ಆತನನ್ನು ಮೀರತ್‌ನಲ್ಲಿ ಬಂಧಿಸಿ ಪೊಲೀಸರು ಮಂಗಳವಾರ ಕರೆದೊಯ್ದಿದ್ದಾರೆ. ಅಲ್ಲದೆ, ಶ್ರೀಕಾಂತ್ ತ್ಯಾಗಿಯ ಮೂವರು ಸಹಚರರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಖಚಿತಪಡಿಸಿದ್ದಾರೆ. … Continued

ಬಿಹಾರದಲ್ಲಿ ಮುರಿದು ಬಿದ್ದ ಜೆಡಿಯು-ಬಿಜೆಪಿ ಮೈತ್ರಿ, ಹೊರನಡೆದ ಬಿಹಾರ ಸಿಎಂ ನಿತೀಶಕುಮಾರ : ಇಂದು ಸಂಜೆ 4 ಗಂಟೆಗೆ ರಾಜ್ಯಪಾಲರ ಭೇಟಿ

ಪಾಟ್ನಾ: ಬೃಹತ್ ಬೆಳವಣಿಗೆಯಲ್ಲಿ, ಮಂಗಳವಾರ ಜೆಡಿಯು ಅಧಿಕೃತವಾಗಿ ಎನ್‌ಡಿಎಯಿಂದ ಹೊರನಡೆದಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ಬಾರಿಗೆ ಯು-ಟರ್ನ್ ತೆಗೆದುಕೊಂಡರು. ಮೂಲಗಳ ಪ್ರಕಾರ, ಕುಮಾರ್ ಅವರ ನಿವಾಸದಲ್ಲಿ ನಡೆದ ಶಾಸಕರು ಮತ್ತು ಸಂಸದರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬೆಳವಣಿಗೆ ಜೆಡಿಯುಗೆ ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳೊಂದಿಗೆ ಸರ್ಕಾರ … Continued

ಮಹಾರಾಷ್ಟ್ರ ಸಂಪುಟ ವಿಸ್ತರಣೆ: ಸಂಪುಟಕ್ಕೆ 18 ಸಚಿವರು ಸೇರ್ಪಡೆ

ಮುಂಬೈ: ಮಂಗಳವಾರ ಬೆಳಗ್ಗೆ ಮುಂಬೈನ ರಾಜಭವನದಲ್ಲಿ ನಡೆದ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆಯ ಮೊದಲ ಹಂತದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಂಪುಟ ಸಚಿವರಾಗಿ 18 ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಗಿರೀಶ್ ಮಹಾಜನ್, ಚಂದ್ರಕಾಂತ್ … Continued

ಸ್ವಾತಂತ್ರ್ಯದ ನಡಿಗೆ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಗಾಂಧಿಗೆ ಆಹ್ವಾನ: ಭರ್ಜರಿ ಪ್ರದರ್ಶನಕ್ಕೆ ಡಿಕೆಶಿಯೂ ಸಜ್ಜು

ಬೆಂಗಳೂರು: ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದ ಬೆನ್ನಲ್ಲೇ ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಭರ್ಜರಿ ಶೋ ನಡೆಸಲು ಸಿದ್ಧತೆ ನಡೆಸಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಗಾಂಧಿ ಅವರನ್ನು ಅವರು ಆಹ್ವಾನಿಸಿದ್ದಾರೆ. ಸಿದ್ದರಾಮಯ್ಯ ಅವರ ಬಣಕ್ಕೆ ಕೌಂಟರ್‌ ಕೊಡಲು ಶಿವಕುಮಾರ್ ಅವರು ಪ್ರಿಯಾಂಕಾ ಗಾಂಧಿ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ … Continued

ದೇಶದ ಟಾಪ್ 1000 ನಗರಗಳಲ್ಲಿ 5G ಸೇವೆಗೆ ಸಜ್ಜಾದ ಜಿಯೊ…!

ಮುಂಬೈ: ಜಿಯೋ ಕಂಪನಿಯು ದೇಶದ ಟಾಪ್ 1,000 ನಗರಗಳಲ್ಲಿ 5G ಕವರೇಜ್ ಯೋಜನೆಯನ್ನು ಪೂರ್ಣಗೊಳಿಸಿದೆ ಮತ್ತು ತನ್ನ ಸ್ವದೇಶಿ 5G ಟೆಲಿಕಾಂ ಗೇರ್‌ಗಳ ಕ್ಷೇತ್ರ ಪ್ರಯೋಗಗಳನ್ನು ನಡೆಸಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ವರದಿಯಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) 2021-22ರ ಅವಧಿಯಲ್ಲಿ ತನ್ನ 100% ಸ್ಥಳೀಯ ತಂತ್ರಜ್ಞಾನದೊಂದಿಗೆ 5G ಗಾಗಿ … Continued

ಡಿ ಕೆ ಶಿವಕುಮಾರ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ: ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಕಾಲಾವಕಾಶ ನೀಡಿದ ಹೈಕೋರ್ಟ್‌

ಬೆಂಗಳೂರು: ಆದಾಯ ಮೀರಿದ ಆಸ್ತಿ ಸಂಪಾದನೆ ಮಾಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕರ್ನಾಟಕ ಹೈಕೋರ್ಟ್ಕಾಲಾವಕಾಶ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಸಲ್ಲಿಸಿರುವ … Continued

ಜಗತ್ತಿನಾದ್ಯಂತ ಸಾವಿರಾರು ಬಳಕೆದಾರರಿಂದ ಗೂಗಲ್‌ ಸ್ಥಗಿತದ ವರದಿ

ಸೋಮವಾರದ ಕೊನೆಯಲ್ಲಿ ಹಾಗೂ ಮಂಗಳವಾರ ಬೆಳಗ್ಗೆ ಸ್ವಲ್ಪ ಸಮಯ ಗೂಗಲ್ ಸರ್ಚ್ ಕೆಲಸ ಮಾಡಲಿಲ್ಲ. ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com Google ಸ್ಥಗಿತವನ್ನು ದೃಢಪಡಿಸಿದೆ. ಗೂಗಲ್ ಸರ್ಚ್‌ನಲ್ಲಿ ಅಮೆರಿಕದಲ್ಲಿಯೇ 40,000 ಕ್ಕೂ ಹೆಚ್ಚು ಸಮಸ್ಯೆಗಳ ಘಟನೆಗಳು ವರದಿಯಾಗಿವೆ ಎಂದು ಅದು ಹೇಳಿದೆ. ಜಪಾನ್‌ನಲ್ಲಿ ಸುಮಾರು 5,900 ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಿದ್ದಾರೆ ಎಂದು ಟ್ರ್ಯಾಕಿಂಗ್ ವೆಬ್‌ಸೈಟ್ … Continued