8ನೇ ವೇತನ ಆಯೋಗ ರಚಿಸುವ ಯಾವುದೇ ಯೋಜನೆ ಪರಿಗಣನೆಯಲ್ಲಿಲ್ಲ : ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಎಂಟನೇ ವೇತನ ಆಯೋಗವನ್ನು ಸ್ಥಾಪಿಸುವ ಯಾವುದೇ ಯೋಜನೆಯನ್ನು ಸರ್ಕಾರ ಹೊಂದಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ ಎಂಟನೇ ವೇತನ ಆಯೋಗದ ರಚನೆಗೆ ಅಂತಹ ಯಾವುದೇ ಪ್ರಸ್ತಾಪವನ್ನು ಸರ್ಕಾರವು ಪರಿಗಣಿಸುತ್ತಿಲ್ಲ” ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಚೌಧರಿ … Continued

ಸಿಇಟಿಗೆ ಪಿಯು ಅಂಕ ವಿವಾದ; ಮುಂದಿನ ವಿಚಾರಣೆ ವರೆಗೆ ಕೌನ್ಸೆಲಿಂಗ್ ಆರಂಭಿಸುವುದಿಲ್ಲ ಎಂದು ಹೈಕೋರ್ಟಿಗೆ ತಿಳಿಸಿದ ಸರ್ಕಾರ

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ಸಂಬಂಧಿಸಿದ ಕೌನ್ಸೆಲಿಂಗ್‌ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಈಗ ದಾಖಲೆ ಪರಿಶೀಲನೆ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ. ಮುಂದಿನ ವಿಚಾರಣೆಯ ವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸುವುದಿಲ್ಲ” ಎಂದು ರಾಜ್ಯ ಸರ್ಕಾರವು ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ … Continued

ಇಟ್‌ ಹ್ಯಾಪನ್ಸ್‌ ಓನ್ಲಿ ಇನ್‌ ಇಂಡಿಯಾ..: ಸಚಿವರು, ಅವರ ಪರಿವಾರದ ವಾಹನಗಳು ಹಾದು ಹೋಗುವವರೆಗೆ ಆಂಬ್ಯುಲೆನ್ಸ್ ಅನ್ನೇ ತಡೆದು ನಿಲ್ಲಿಸಿದ ಪೊಲೀಸರು…! ವೀಕ್ಷಿಸಿ

ಚೆನ್ನೈ: ತಮಿಳುನಾಡಿನ ತಂಜಾವೂರಿನಲ್ಲಿ ವಿವಿಐಪಿ ಸಂಸ್ಕೃತಿಯ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸಚಿವರು ಹಾಗೂ ಅವರ ಪರಿವಾರದ ಕಾರುಗಳ ಗುಂಪು ರಸ್ತೆಯ ಮೂಲಕ ಹಾದುಹೋಗುವವರೆಗೆ ಆಂಬ್ಯುಲೆನ್ಸ್ ಅನ್ನು ಪೊಲೀಸರು ತಡೆಹಿಡಿದ ಆಘಾತಕಾರಿ ಹಾಗೂ ವಿಲಕ್ಷಣ ಘಟನೆಯ ಮೊಬೈಲ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ. ಶುಕ್ರವಾರ, ಆಗಸ್ಟ್ 5 ರಂದು ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ … Continued