ಪಾನಮತ್ತರಾಗಿದ್ದ ಕಾರಣ ಫ್ರಾಂಕ್‌ಫರ್ಟ್‌ನಲ್ಲಿ ಪಂಜಾಬ್‌ ಸಿಎಂರನ್ನು ವಿಮಾನದಿಂದ ಕೆಳಗಿಳಿಸಲಾಯ್ತು : ಅಕಾಲಿದಳ, ಕಾಂಗ್ರೆಸ್‌ ಆರೋಪ, ನಿರಾಕರಿಸಿದ ಆಪ್‌

ಚಂಡೀಗಡ: ಶಿರೋಮಣಿ ಅಕಾಲಿದಳದ (ಎಸ್‌ಎಡಿ) ಹಿರಿಯ ನಾಯಕರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಜರ್ಮನಿಯ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಪಾನಮತ್ತರಾಗಿದ್ದ ಕಾರಣ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು ಎಂದು ಆರೋಪಿಸಿದ್ದು, “ಅವರು ಪಂಜಾಬಿಗಳ ಮಾನ ಹರಾಜು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಟ್ವಿಟರ್‌ನಲ್ಲಿ, SAD ನಾಯಕ ಸುಖ್‌ಬೀರ್ ಸಿಂಗ್ ಬಾದಲ್, “ಸಹ-ಪ್ರಯಾಣಿಕರನ್ನು ಉಲ್ಲೇಖಿಸಿ ಪಂಜಾಬ್‌ ಮುಖ್ಯಮಂತ್ರಿ ಮಾನ್‌ … Continued

ಎಫ್‌ಡಿಎ ನೌಕರಿ ಕೊಡಿಸುವ ಆಮಿಷ ಪ್ರಕರಣ : ಮೈಸೂರು ಪಿಎಸ್‌ಐ ಅಶ್ವಿನಿ ಅಮಾನತು

ಮೈಸೂರು: ಪ್ರಥಮ ದರ್ಜೆ ಸಹಾಯಕರ ಹುದ್ದೆ ಕೊಡಿಸಲು ಅವ್ಯವಹಾರ ನಡೆಸಿದ ಆರೋಪದ ಮೇಲೆ ಮೈಸೂರು ನರಸಿಂಹರಾಜ ಸಂಚಾರ ಪೊಲೀಸ್‌ ಠಾಣೆಯ ಪಿಎಸ್‌ಐ ಅಶ್ವಿನಿ ಅನಂತಪುರ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್‌ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ. ಕೆಪಿಎಸ್‌ಸಿಯ ಎಫ್‌ಡಿಎ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ಕೆಪಿಎಸ್​ಸಿ ವತಿಯಿಂದ ನಡೆದಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಗೆ ಅಭ್ಯರ್ಥಿ ಜತೆ … Continued

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾದ ಶಶಿ ತರೂರ್

ನವದೆಹಲಿ: ಕಾಂಗ್ರೆಸ್ ನಾಯಕ ಶಶಿ ತರೂರ್ ಸೋಮವಾರ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅವರ 10 ಜನಪಥ್ ರಸ್ತೆಯ ನಿವಾಸದಲ್ಲಿ ಭೇಟಿ ಮಾಡಿದರು. ಅಕ್ಟೋಬರ್ 17ರಂದು ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಈ ಸಭೆ ನಡೆದಿದೆ. ಶಶಿ ತರೂರ್ ಅವರು ಪಕ್ಷದ ಸಹ ನಾಯಕರಾದ ದೀಪೇಂದರ್ ಹೂಡಾ, ಜೈ ಪ್ರಕಾಶ್ ಅಗರ್ವಾಲ್ … Continued

ಹುಬ್ಬಳ್ಳಿ – ಅಂಕೋಲಾ ರೈಲು ಯೋಜನೆ ಜಾರಿಗೆ ಬೆಂಬಲ : ಸಾಮಾಜಿಕ ಜಾಲತಾಣ  ಜಾಗೃತಿ ಅಭಿಯಾನಕ್ಕೆ ಚಾಲನೆ

ಅಂಕೋಲಾ : ಹುಬ್ಬಳ್ಳಿ – ಅಂಕೋಲಾ ರೈಲ್ವೇ ಹೋರಾಟ ಕ್ರಿಯಾ ಸಮಿತಿ ವತಿಯಿಂದ‌ ಹುಬ್ಬಳ್ಳಿ – ಅಂಕೋಲಾ ರೈಲು ಯೋಜನೆ ಜಾರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣ‌ ಜಾಗೃತಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಅಂಕೋಲಾ ಅರ್ಬನ್ ಬ್ಯಾಂಕಿನಲ್ಲಿ ಈ ಅಭಿಯಾನದ‌ ಪೋಸ್ಟರ್ ಅನ್ನು ಹೋರಾಟ ಸಮಿತಿ … Continued

ಅಕ್ರಮ ಹಣ ವರ್ಗಾವಣೆ: ಇ.ಡಿ. ವಿಚಾರಣೆಗೆ ಶಿವಕುಮಾರ ಹಾಜರು

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಸೋಮವಾರ ಹಾಜರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಕಳೆದ ವಾರ ಇ.ಡಿ. ಅಧಿಕಾರಿಗಳು ಸಮನ್ಸ್ ನೀಡಿ ಸೋಮವಾರ (ಸೆಪ್ಟೆಂಬರ್‌ ೧೯) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಶಿವಕುಮಾರ್​ ಭಾನುವಾರ ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಿದ ಶಿವಕುಮಾರ, ಸೋಮವಾರ 11 … Continued

ಮಹ್ಸಾ ಅಮಿನಿ ಸಾವಿನ ವಿರುದ್ಧ ಪ್ರತಿಭಟನೆ: ಕೂದಲು ಕತ್ತರಿಸಿಕೊಂಡು ಹಿಜಾಬ್‌ ಸುಡುತ್ತಿರುವ ಇರಾನ್‌ ಮಹಿಳೆಯರು | ವೀಡಿಯೊಗಳು ವೈರಲ್‌

22 ವರ್ಷದ ಯುವತಿ ಮಹ್ಸಾ ಅಮಿನಿ ಸಾವಿನ ನಂತರ ಇರಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಇರಾನ್ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಹಿಜಾಬ್‌ಗಳನ್ನು ತೆಗೆದು ಸುಟ್ಟು ಹಾಕುತ್ತಿದ್ದಾರೆ. ಅಮಿನಿಯನ್ನು ಇರಾನ್‌ ಸರ್ಕಾರದ “ನೈತಿಕತೆ ಪೋಲೀಸ್” “ಅನುಚಿತವಾಗಿ” ಹಿಜಾಬ್ ಧರಿಸಿದ್ದಕ್ಕಾಗಿ ಬಂಧಿಸಿದರು. ಏಕೆಂದರೆ ಅವರು ಹಿಜಾಬ್‌ನಿಂದ ತಮ್ಮ ಕೂದಲನ್ನು ಸಂಪೂರ್ಣವಾಗಿ ಮುಚ್ಚಿರಲಿಲ್ಲ ಎಂದು ವರದಿಗಳು ತಿಳಿಸಿವೆ. ರಾಯಿಟರ್ಸ್ ವರದಿಯ ಪ್ರಕಾರ, … Continued

ಸೆಲ್ಫಿ ತೆಗೆಯಲು ಹೋಗಿ ಕಾಲುವೆಗೆ ಜಾರಿ ಬಿದ್ದು ಇಬ್ಬರು ವಿದ್ಯಾರ್ಥಿಗಳು ನೀರು ಪಾಲು

ರಾಯಚೂರು: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲುವೆಗೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ನೀರುಪಾಲದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ರಾಯಚೂರು ತಾಲೂಕಿನ ಕಲ್ಮಲಾ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ರಾಯಚೂರು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಸುಜಿತ್(16) ಮತ್ತು ವೈಭವ (16) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ (ಸೆಪ್ಟೆಂಬರ್‌18) ಕಾಲುವೆಗೆ ಜಾರಿ … Continued

ಕೇವಲ 41 ಗಂಟೆಗಳಲ್ಲಿ 2,700 ಕಿಮೀ. ಚಾಲನೆ ಮಾಡಿ ತೀವ್ರ ಅಸ್ವಸ್ಥ ಕಾರ್ಮಿಕನನ್ನು ಸ್ವಂತ ಊರಿಗೆ ಸುರಕ್ಷಿತವಾಗಿ ತಲುಪಿಸಿದ ಆಂಬುಲೆನ್ಸ್‌ ಚಾಲಕ..!

ಮಂಗಳೂರು: ಮೂಡುಬಿದಿರೆ ಅಡಕೆ ಗೋದಾಮಿನ ಮಾಡಿನಿಂದ ಬಿದ್ದು ಕೋಮಾದಲ್ಲಿದ್ದ ಕಾರ್ಮಿಕನನ್ನು ಆಂಬ್ಯುಲೆನ್ಸ್‌ನಲ್ಲಿ ಆಮ್ಲಜನಕದ ವ್ಯವಸ್ಥೆ ಮಾಡಿ ಸುಮಾರು 2,700 ಕಿ.ಮೀ. ದೂರದಲ್ಲಿರುವ ಉತ್ತರ ಪ್ರದೇಶದ ಮೊರಾದಾಬಾದ್‌ಗೆ ಕೇವಲ 41 ಗಂಟೆಗಳಲ್ಲಿ ಕರೆದೊಯ್ದ ಐರಾವತ ಆಂಬ್ಯುಲೆನ್ಸ್‌ನ ಚಾಲಕನ ಸಾಹಸ ಈಗ ಭಾರೀ ಪ್ರಶಂಸೆಗೆ ಕಾರಣವಾಗಿದೆ. ಗಾಯಗೊಂಡು ಕೋಮಾಕ್ಕೆ ಹೋಗಿದ್ದ ಕಾರ್ಮಿಕನೊಬ್ಬನನ್ನು ರೋಗಿಯ ಊರಾದ ಉತ್ತರ ಪ್ರದೇಶದ ಮೊರಾದಬಾದ್​​ಗೆ … Continued

ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ತೀವ್ರ ಹಿನ್ನಡೆ: ಪ್ರಮುಖ ಚುನಾವಣೆಗಳಲ್ಲಿ ಬಿಜೆಪಿಗೆ ಭಾರೀ ಜಯ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಭದ್ರಕೋಟೆಯಾದ ನಂದಿಗ್ರಾಮದಲ್ಲಿ ನಡೆದ ಸಹಕಾರಿ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮಮತಾ ಬ್ಯಾನರ್ಜಿಗೆ ಭಾರಿ ಹೊಡೆತ ನೀಡಿದ್ದ ಈ ಕ್ಷೇತ್ರದಲ್ಲಿ, 2021 ರಲ್ಲಿ ಬಂಗಾಳದ ಮುಖ್ಯಮಂತ್ರಿಯನ್ನು ಸೋಲಿಸಿ ಬಿಜೆಪಿಯ ಸುವೇಂದು ಅಧಿಕಾರಿ ಗೆಲುವು ಸಾಧಿಸಿದ್ದರು. ಈ ಹಿಂದೆ ಮಮತಾ ಬ್ಯಾನರ್ಜಿ ಅವರ ತೃಣಮೂಲ ನಡೆಸುತ್ತಿದ್ದ ಸಹಕಾರಿ ಸಂಸ್ಥೆ ಭೆಕುಟಿಯಾ … Continued

ಬ್ರಿಟನ್‌ ರಾಣಿಯ ಅಂತ್ಯಕ್ರಿಯೆಯ ಮೊದಲು ಲಂಡನ್‌ನಲ್ಲಿ ಕಿಂಗ್ ಚಾರ್ಲ್ಸ್ III ಭೇಟಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು

ಬಂಕಿಂಗ್‌ಹ್ಯಾಮ್: ಸೆಪ್ಟೆಂಬರ್ 8 ರಂದು ನಿಧನರಾದ ಬ್ರಿಟನ್‌ ರಾಣಿ ಕ್ವೀನ್ ಎಲಿಜಬೆತ್ ಅಂತ್ಯಸಂಸ್ಕಾರ ಇಂದು, ಸೋಮವಾರ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಪಂಚದ ಎಲ್ಲ ದೇಶಗಳ ಒಟ್ಟು 500ಕ್ಕೂ ಹೆಚ್ಚು ಗಣ್ಯರು ಬ್ರಿಟನ್ ತಲುಪಿದ್ದಾರೆ. ಭಾರತವನ್ನು ಪ್ರತಿನಿಧಿಸಿರುವ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಬ್ರಿಟನ್ ರಾಜ ಚಾರ್ಲ್ಸ್‌ III ಅವರನ್ನು ಭಾನುವಾರ ಭೇಟಿ ಮಾಡಿದ್ದಾರೆ. ಬಂಕಿಂಗ್‌ ಹ್ಯಾಮ್ … Continued