ಸಮಸ್ಯೆ ಹೇಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಸೋಮಣ್ಣ…!

ಚಾಮರಾಜನಗರ: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯೊಬ್ಬರಿಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ. ಶನಿವಾರ ಗ್ರಾಮದ ಗ್ರಾಮ ಪಂಚಾಯತದ ವತಿಯಿಂದ 175 ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಸಚಿವರು ಸಂಜೆ 6:30 ಕ್ಕೆ ಆಗಮಿಸಿದರು. ತಮಗೆ ನಿವೇಶನ ನೀಡಿ ಎಂದು ಜನರು … Continued

ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಡಾ ಅಜಿತ ಪ್ರಸಾದರಿಗೆ ಸನ್ಮಾನ

ಧಾರವಾಡ: ವಿದ್ಯಾಕಾಶಿ ಎಂದು ಕರೆಯಲ್ಪಡುವ ಧಾರವಾಡದ ಶೈಕ್ಷಣಿಕ ಬೆಳವಣಿಗೆಗೆ ಪ್ರೊ. ನ. ವಜ್ರಕುಮಾರ ಅವರ ಕೊಡುಗೆ ಅಪಾರ. ಅವರು ಧಾರವಾಡಕ್ಕೆ ಬರದೇ ಇದ್ದಿದ್ದರೆ ಧಾರವಾಡದ ಶೈಕ್ಷಣಿಕ ಕ್ಷೇತ್ರ ಬಡವಾಗುತ್ತಿತ್ತು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು. ಕರ್ನಾಟಕ ವಿದ್ಯಾ ವರ್ಧಕ ಸಂಘದ ವತಿಯಿಂದ ಡಾ.ಅಜಿತ ಪ್ರಸಾದ ಅವರನ್ನು ಸನ್ಮಾನಿಸು ಕಾರ್ಯಕ್ರಮದಲ್ಲಿ … Continued

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ನಿಧನ

ಬೆಳಗಾವಿ: ಸವದತ್ತಿ ಶಾಸಕ, ವಿಧಾನಸಭೆ ಉಪಸಭಾಪತಿ ಆನಂದ್ ಮಾಮನಿ (56) ಅವರು ತೀವ್ರ ಅನಾರೋಗ್ಯದಿಂದಾಗಿ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕ್ಯಾನ್ಸರ್ ಕಾಯಿಲೆಯಿಂದಾಗಿ ಕೆಲ ದಿನಗಳ ಹಿಂದೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. … Continued

ದೆಹಲಿ ಮಹಿಳೆಯ ಅಪಹರಣ, ಸಾಮೂಹಿಕ ಅತ್ಯಾಚಾರದ ಘಟನೆ ಕಟ್ಟುಕಥೆ : ಗಾಜಿಯಾಬಾದ್ ಪೊಲೀಸರು

ನವದೆಹಲಿ:  ಗಾಜಿಯಾಬಾದ್ ಪೊಲೀಸರು ಶನಿವಾರ ಮಹಿಳೆಯೊಬ್ಬರನ್ನು ಬಂಧಿಸಿದ್ದು, ಆಕೆ ಆಸ್ತಿಯನ್ನು ದೋಚುವ ಪ್ರಯತ್ನದಲ್ಲಿ ಸಾಮೂಹಿಕ ಅತ್ಯಾಚಾರದ ಆರೋಪದ ಕಥೆ ಕಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಆಕೆಯನ್ನು ದೆಹಲಿಯ ಗುರು ತೇಗ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೆಹಲಿಯಿಂದ ನಮ್ಮ ಪೊಲೀಸ್ ತಂಡವು ಮಹಿಳೆಯನ್ನು ಬಂಧಿಸಿದೆ. ಮಹಿಳೆಯನ್ನು ಕೆಲವು ಸಮಯದ ಹಿಂದೆ ದೆಹಲಿಯ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು” … Continued

ಪಕ್ಷ ಬದಲಾಯಿಸಲು ಉದ್ಧವ್ ಠಾಕ್ರೆ ಬಣದ ನಾಲ್ವರು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ : ನಾರಾಯಣ ರಾಣೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಆಡಳಿತ ಬಣಕ್ಕೆ ಸೇರಲು ಉದ್ಧವ್ ಠಾಕ್ರೆ ನೇತೃತ್ವದ ಬಣದ ನಾಲ್ವರು ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ನಾರಾಯಣ ರಾಣೆ ಶನಿವಾರ ಹೇಳಿದ್ದಾರೆ. ಆದರೆ ಶಾಸಕರ ಹೆಸರನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಸಚಿವ ರಾಣೆ ಅವರು … Continued

ಕ್ಸಿ ಮೇಲೆ ನಂಬಿಕೆ ಪುನರುಚ್ಚರಿಸಿದ ಚೀನಾ ಕಮ್ಯುನಿಸ್ಟ್‌ ಪಕ್ಷ: ನಂ. 2 ಲಿ ಕೆಕಿಯಾಂಗ್ ಸ್ಥಾನದಿಂದ ವಜಾ

ಬೀಜಿಂಗ್: ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ರಾಷ್ಟ್ರವನ್ನು ನಡೆಸುವಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ನಾಯಕರಾಗಿ ನಿರೀಕ್ಷಿತ ಮೂರನೇ ಬಾರಿಗೆ ಐದು ವರ್ಷಗಳ ಅವಧಿಯನ್ನು ನೀಡುವ ಒಂದು ದಿನ ಮುಂಚಿತವಾಗಿ ಅವರ ಪ್ರಾಬಲ್ಯವನ್ನು ಶನಿವಾರ ಪುನರುಚ್ಚರಿಸಿದೆ, . ಪಕ್ಷದ ಕಾಂಗ್ರೆಸ್ ಹಿರಿಯ ನಾಯಕತ್ವದಿಂದ ಪ್ರೀಮಿಯರ್ ಲಿ ಕೆಕಿಯಾಂಗ್ ಅವರನ್ನು ಪಕ್ಷವು ತೆಗೆದುಹಾಕಿದೆ. ರಾಷ್ಟ್ರದ ನಂ. 2 … Continued

ನಟ ಚೇತನ್ ವಿರುದ್ಧ ಮತ್ತೊಂದು ದೂರು ದಾಖಲು

ಬೆಂಗಳೂರು: ಕಾಂತಾರ ಚಿತ್ರದ ದೈವಾರಾಧನೆ ಹಿಂದೂ ಸಂಸ್ಕೃತಿಯಲ್ಲ ಎಂದು ನಟ ಚೇತನ್ ಹೇಳಿಕೆ ವಿರುದ್ಧ ಈಗ ಮತ್ತೊಂದು ದೂರು ದಾಖಲಾಗಿದೆ. ಇಂದು, ಶನಿವಾರ ಬೆಂಗಳೂರಿನಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಈಗಾಗಲೇ ಈ ಸಂಬಂಧ ರಾಜ್ಯದ ವಿವಿಧೆಡೆ ಹಲವು ಎಫ್ಐಆರ್ ದಾಖಲಾಗಿವೆ. ನಟ ಚೇತನ್ ಹಿಂದೂ ಸಂಸ್ಕೃತಿಯ ಬಗ್ಗೆ ನೀಡಿರುವ ಹೇಳಿಕೆ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು … Continued

ಏಲಿಯನ್ ಬೇಟೆ ಪ್ರಾರಂಭಿಸಲು ನಾಸಾ ಸಿದ್ಧ: 16-ಸದಸ್ಯರ ತಂಡದ ರಚನೆ

ವಾಷಿಂಗ್ಟನ್, ಡಿ.ಸಿ.: ಆಕಾಶದಲ್ಲಿ ಗುರುತಿಸಲಾಗದ ನಿಗೂಢ ಹಾರುವ ವಸ್ತುಗಳ (UFOs) ಹಿಂದಿನ ರಹಸ್ಯವನ್ನು ಬಹಿರಂಗಪಡಿಸಲು ನಾಸಾ (NASA) ಯೋಜನೆಯನ್ನು ರೂಪಿಸಿದೆ. ಇದು ತಲೆಮಾರುಗಳಿಂದಲೂ ನಮ್ಮ ಆಸಕ್ತಿಯನ್ನು ಯಾವಾಗಲೂ ಕೆರಳಿಸುವ ಪರಿಕಲ್ಪನೆಯಾಗಿದೆ. ಅಂತಿಮವಾಗಿ ಆಕಾಶದಲ್ಲಿ ಅಡಗಿರುವ ಈ ನಿಗೂಢ ವಸ್ತುಗಳು ಮತ್ತು ಅವುಗಳಿಂದ ಹೊರಹೊಮ್ಮುವ ಬಹುತೇಕ ಅದ್ಭುತ ಕಥೆಗಳ ಹಿಂದಿನ ಸತ್ಯವನ್ನು ಕಂಡುಹಿಡಿಯಲು, ನಾಸಾ 16 ಸದಸ್ಯರ … Continued

ಒಟ್ಟಾರೆಯಾಗಿ ರೋಗಿಗಳಿಗೆ 18,000 ಕೋಟಿ ರೂ.ಗಳಷ್ಟು ಉಳಿಸಿದ ಜನೌಷಧಿ ಯೋಜನೆ: ಆರೋಗ್ಯ ಸಚಿವ ಮಾಂಡವಿಯಾ

ನವದೆಹಲಿ: ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ರೋಗಿಗಳ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಇದು ಕಳೆದ 8 ವರ್ಷಗಳಲ್ಲಿ ನಾಗರಿಕರಿಗೆ 18,000 ಕೋಟಿ ರೂಪಾಯಿಗಳ ಉಳಿತಾಯಕ್ಕೆ ಸಹಾಯ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ಡಾ. ಮಾಂಡವಿಯಾ ಅವರು, ಎಲ್ಲರಿಗೂ ಉತ್ತಮ … Continued

ಪಕ್ಷ ಉಳಿಸಲು ಬ್ರಿಟನ್‌ ಪ್ರಧಾನಿ ಹುದ್ದೆಗೆ ಸ್ಪರ್ಧೆ ಮಾಡದಂತೆ ರಿಷಿ ಸುನಕ್ ಅವರನ್ನು ಕೇಳಿಕೊಳ್ಳುತ್ತಿರುವ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ : ವರದಿ

ಲಂಡನ್‌: ರಿಷಿ ಸುನಕ್ ಅವರು ಮುಂದಿನ ಬ್ರಿಟನ್‌ ಪ್ರಧಾನಿಯಾಗಲು ಮುಂಚೂಣಿಯಲ್ಲಿರಬಹುದು, ಆದರೆ ಲಿಜ್ ಸ್ಟ್ರಸ್ ಬದಲಿಗೆ ತಾವು ಮರಳಿ ಬ್ರಿಟನ್‌ ಪ್ರಧಾನಿಯಾಗಲು ಬೋರಿಸ್ ಜಾನ್ಸನ್ ಅವರು ರಿಷಿ ಸುನಕ್‌ ಅವರನ್ನು ಸ್ಪರ್ಧೆಯಿಂದ ಹೊರಗುಳಿಯುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮಗಳ ವರದಿಗಳು ಹೇಳುತ್ತವೆ. ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಓಟದಲ್ಲಿ ರಿಷಿ ಸುನಕ್ ಅವರನ್ನು ಸೋಲಿಸಿದ ನಂತರ ಲಿಜ್ … Continued