ದೆಹಲಿ ಗಲಭೆ: ಎಎಪಿ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್, ಇತರ ಐವರ ವಿರುದ್ಧ ಪಿತೂರಿ, ಗಲಭೆ ಆರೋಪ ಹೊರಿಸಲು ಕೋರ್ಟ್‌ ಆದೇಶ

ನವದೆಹಲಿ: ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿ ಎಎಪಿಯ ಪಾಲಿಕೆ ಮಾಜಿ ಸದಸ್ಯ ತಾಹಿರ್‌ ಹುಸೇನ್‌ ಹಾಗೂ ಇತರ ಐವರ ವಿರುದ್ಧ ಕೊಲೆ ಯತ್ನ, ಗಲಭೆಗೆ ಸಂಚು ರೂಪಿಸಿದ್ದಕ್ಕೆ ಸಂಬಂಧಿಸಿದ ಆರೋಪಗಳನ್ನು ಹೊರಿಸುವಂತೆ ಇಲ್ಲಿನ ಕೋರ್ಟ್‌ ಆದೇಶಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲಾ, ‘ಆರೋಪಿಗಳೆಲ್ಲರೂ ಹಿಂದೂಗಳನ್ನು ಗುರಿಯಾಗಿಸಿ ಗಲಭೆ ನಡೆಸಿದ್ದಾರೆ. ಅವರ … Continued

ಆಟೋರಿಕ್ಷಾ ಸೇವೆ: ಸರ್ಕಾರ ನಿಗದಿಪಡಿಸಿದ ದರದ ಜೊತೆಗೆ ಶೇ. 10 ದರ ವಿಧಿಸಲು ಓಲಾ, ಉಬರ್‌ಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಆಟೋರಿಕ್ಷಾ ಸೇವೆಗಳಿಗೆ 2021ರ ನವೆಂಬರ್‌ನಲ್ಲಿ ರಾಜ್ಯ ಸರ್ಕಾರ ನಿಗದಿಪಡಿಸಿರುವ ದರದ ಜೊತೆಗೆ ಹೆಚ್ಚುವರಿಯಾಗಿ ಶೇ. 10ರಷ್ಟು ದರ ಮತ್ತು ಸರಕು ಹಾಗೂ ಸೇವಾ ತೆರಿಗೆ(ಜಿಎಸ್‌ಟಿ)ಯನ್ನು ವಿಧಿಸುವ ಮೂಲಕ ಆ್ಯಪ್‌ ಆಧರಿತ ಓಲಾ ಮತ್ತು ಉಬರ್‌ ಆಟೋರಿಕ್ಷಾ ಸೇವೆ ಮುಂದುವರಿಸಬಹುದು ಎಂದು ಹೈಕೋರ್ಟ್‌ ಶುಕ್ರವಾರ ಆದೇಶ ಮಾಡಿದೆ. ಓಲಾ ಮತ್ತು ಉಬರ್‌ ಇನ್ನು ಮುಂದೆ ತಮ್ಮ … Continued

ಮನೆ ಜಪ್ತಿಯಾಗುವ ಹೊತ್ತಿಗೆ ಲಕ್‌ ಹೊಡೀತು…! ಬಂಪರ್ ಬಹುಮಾನದಿಂದ ಜೀವನದ ದಿಕ್ಕೇ ಬದಲಾಯ್ತು…!

ಕೊಲ್ಲಂ: ಸಾಲ ಮರುಪಾವತಿಸದ ಕಾರಣ ಕೇರಳದ ಮೀನು ವ್ಯಾಪಾರಿಯೊಬ್ಬರ ಮನೆ ಜಪ್ತಿ ಮಾಡುವುದಾಗಿ ಬ್ಯಾಂಕ್‌ ನೋಟಿಸ್‌ ನೀಡಿದ ನಂತರ ಕಂಗಾಲಾಗಿದ್ದ ವ್ಯಾಪಾರಿಗೆ ಕೆಲವೇ ಗಂಟೆಗಳಲ್ಲಿ 70 ಲಕ್ಷ ರೂ.ಗಳ ಮೊತ್ತದ ಲಾಟರಿ ಹೊಡೆದಿದೆ…! ರಾಜ್ಯ ಸರ್ಕಾರದ ₹70 ಲಕ್ಷಗಳ ಅಕ್ಷಯ ಲಾಟರಿಯನ್ನು ಗೆದ್ದಿರುವ ಮೀನು ವ್ಯಾಪಾರಿ ಕುಟುಂಬ ಸದ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಪೂಕುಂಜು ಅವರು … Continued

ಪೋಕ್ಸೋ ಪ್ರಕರಣ: ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋದ ಮುರುಘಾ ಶರಣರು

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಜಾಮೀನು ಕೋರಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಜಾಮೀನು ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರು ಇಬ್ಬರು ಅಪ್ರಾಪ್ತರ ಜೊತೆಗೆ ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸೇರಿದಂತೆ … Continued

ನೀವು ಈ ದೇಶದ ಯುವ ಪೀಳಿಗೆಯ ಮನಸ್ಸನ್ನು ಕಲುಷಿತಗೊಳಿಸುತ್ತಿದ್ದೀರಿ: ಏಕ್ತಾ ಕಪೂರ್ ವಿರುದ್ಧ ಸುಪ್ರೀಂಕೋರ್ಟ್‌ ವಾಗ್ದಾಳಿ

ನವದೆಹಲಿ: ಸುಪ್ರೀಂಕೋರ್ಟ್ ಶುಕ್ರವಾರ ನಿರ್ಮಾಪಕ ಏಕ್ತಾ ಕಪೂರ್ ಅವರ ವೆಬ್ ಸೀರೀಸ್ ‘ಎಕ್ಸ್‌ಎಕ್ಸ್‌ಎಕ್ಸ್’ ನಲ್ಲಿ “ಆಕ್ಷೇಪಾರ್ಹ ವಿಷಯ” ದ ಕುರಿತು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು, ಅವರು ಈ ದೇಶದ ಯುವ ಪೀಳಿಗೆಯ ಮನಸ್ಸನ್ನು ಕಲುಷಿತಗೊಳಿಸುತ್ತಿದ್ದಾರೆ ಎಂದು ಅದು ಹೇಳಿದೆ. ತನ್ನ ಒಟಿಟಿ ಪ್ಲಾಟ್‌ಫಾರ್ಮ್ ಎಎಲ್‌ಟಿ ಬಾಲಾಜಿಯಲ್ಲಿ ಪ್ರಸಾರವಾದ ವೆಬ್ ಸರಣಿಯಲ್ಲಿ ಸೈನಿಕರನ್ನು ಅವಮಾನಿಸಿದ ಮತ್ತು ಅವರ … Continued

ಥಾಣೆ ಶಾಕರ್… : ಯುವತಿಗೆ ಕಿರುಕುಳ ನೀಡಿ, ಆಟೋದಲ್ಲಿ ಎಳೆದೊಯ್ದ ಚಾಲಕ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಥಾಣೆ: ಮಹಾರಾಷ್ಟ್ರದ ಥಾಣೆ ನಗರದಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿಗೆ ಆಟೋರಿಕ್ಷಾ ಚಾಲಕನೊಬ್ಬ ಕಿರುಕುಳ ನೀಡಿ ವಾಹನದಲ್ಲಿ ಎಳೆದೊಯ್ದಿರುವ ಘಟನೆ ಇಂದು, ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದಲ್ಲಿ ಬೆಳಗ್ಗೆ 6:45ರ ಸುಮಾರಿಗೆ ನಡೆದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಿಳೆಯು ಕಾಲೇಜಿಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ನಿಂತಿದ್ದ ಆಟೋರಿಕ್ಷಾ … Continued

ಚಿಕ್ಕಮಗಳೂರು: ದಂಡ ಹಾಕಿದ್ದಕ್ಕೆ ಕುಡಿದು ಬಂದು ಜಡ್ಜ್‌ ಕಡೆಗೆ ಚಪ್ಪಲಿ ತೂರಿದ ವ್ಯಕ್ತಿಯ ಬಂಧನ

ಚಿಕ್ಕಮಗಳೂರು: ದಂಡ ಹಾಕಿದ್ದಕ್ಕೆ (Fine) ವ್ಯಕ್ತಿಯೊಬ್ಬ ಜಡ್ಜ್ ಮೇಲೆ ಚಪ್ಪಲಿ ತೂರಿರುವ ಘಟನೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ 1ನೇ ಹೆಚ್ಚುವರಿ ಕಿರಿಯ ಶ್ರೇಣಿಯ ವಿಭಾಗದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಚಪ್ಪಲಿ ತೂರಿದ ಆರೋಪಿ ಅರವಿಂದ ನಗರ ನಿವಾಸಿ ಲೋಕೇಶ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ತಿಂಗಳ ಹಿಂದೆ ಕುಡಿದು ವಾಹನ ಚಲಾಯಿಸುತ್ತಿದ್ದ ವೇಳೆ ಲೋಕೇಶ ಪೊಲೀಸರ … Continued

ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ನಮನ್‌ ಭಟ್‌ ಉತ್ತಮ ಸಾಧನೆ

ಧಾರವಾಡ: ಇಲ್ಲಿನ ಅರ್ಜುನ (ಶಾಂತಿನಿಕೇತನ) ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ನಮನ್‌ ಭಟ್ ಅವರು ಐಐಟಿ ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಪ್ರಮುಖ ಶ್ರೇಣಿ ಅಂಕ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ೭೭೮೦ ನೇ ರ‍್ಯಾಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ. ಕೇರಳದ ತಿರುವುನಂತಪುರದಲ್ಲಿರುವ ಏಷ್ಯಾದ ಮೊಟ್ಟಮೊದಲ ಬಾಹ್ಯಾಕಾಶದ ಅಧ್ಯಯನ ಹಾಗೂ ಸಂಶೋಧನೆಯ ವಿಶ್ವವಿದ್ಯಾಲಯ (IIST – … Continued

ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿಳಿಯಿತು ವಿಶ್ವದ ದೊಡ್ಡ ವಿಮಾನ

ಬೆಂಗಳೂರು: ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು, ಶುಕ್ರವಾರ ಪ್ರಪಂಚದ ಅತಿ ದೊಡ್ಡ ವಿಮಾನ ಎ380( ಸೂಪರ್‌ಜಂಬೋ ಬಂದಿಳಿದಿದೆ. ದುಬೈನಿಂದ( ಬೆಳಗ್ಗೆ 10:30ಕ್ಕೆ ಹೊರಟ ಎಮಿರೇಟ್ಸ್‌ ವಿಮಾನ ಮಧ್ಯಾಹ್ನ 3:30ಕ್ಕೆ ಬೆಂಗಳೂರು ತಲುಪಿತು. ಎಮಿರೇಟ್ಸ್‌ ಸಂಸ್ಥೆಯ ಏರ್‌ಬಸ್‌ ಎ380 ವಿಮಾನ ಲ್ಯಾಂಡ್‌ ಆದ ಎರಡನೇ ನಿಲ್ದಾಣ ಬೆಂಗಳೂರು ಆಗಿದೆ. ಈ ಮೊದಲು 2014ರಲ್ಲಿ ಎಮಿರೇಟ್ಸ್‌ ಸಂಸ್ಥೆ … Continued

ಮತ್ತೊಂದು ಮೈಲಿಗಲ್ಲು…: ಪರಮಾಣು ಜಲಾಂತರ್ಗಾಮಿಯಿಂದ ಯಶಸ್ವಿಯಾಗಿ ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿದ ಭಾರತ

ನವದೆಹಲಿ: ಭಾರತದ ಪರಮಾಣು ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆ INS ಅರಿಹಂತ್ ಇಂದು, ಶುಕ್ರವಾರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ಒಂದು ಪ್ರಮುಖ ಮೈಲಿಗಲ್ಲು ಎಂದು ವ್ಯಾಖ್ಯಾನಿಸಲಾಗಿದೆ. ಈ ಹಿಂದೆ ಸ್ಥಿರವಾದ ನೀರೊಳಗಿನ ಪೊಂಟೂನ್‌ಗಳಿಂದ ಪರೀಕ್ಷಾ-ಗುಂಡು ಹಾರಿಸಲಾಗಿತ್ತು; ಈ ಬಾರಿ ಜಲಾಂತರ್ಗಾಮಿ ಸ್ವತಃ ಕ್ಷಿಪಣಿಯನ್ನು ಉಡಾಯಿಸಿತು. ಜಲಾಂತರ್ಗಾಮಿಯಿಂದ ಉಡಾವಣೆಗೊಂಡ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಯು ಭಾರತದ … Continued