ಕೊಳದಲ್ಲಿ ಟ್ರ್ಯಾಕ್ಟರ್ ಬಿದ್ದು ಮಹಿಳೆಯರು, ಮಕ್ಕಳು ಸೇರಿ 26 ಯಾತ್ರಿಕರು ಸಾವು

ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಕೊಳಕ್ಕೆ ಬಿದ್ದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿ ಕನಿಷ್ಠ 26 ಯಾತ್ರಾರ್ಥಿಗಳು ಸಾವಿಗೀಡಾಗಿದ್ದಾರೆ. ಹಾಗೂ ಎರಡು ಡಜನ್‌ಗೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 50 ಜನರಿದ್ದ ಟ್ರ್ಯಾಕ್ಟರ್ ಉನ್ನಾವೊದ ಚಂದ್ರಿಕಾ ದೇವಿ ದೇವಸ್ಥಾನದಿಂದ ವಾಪಸಾಗುತ್ತಿದ್ದಾಗ ಕಾನ್ಪುರದ ಘಟಂಪುರ ಪ್ರದೇಶದಲ್ಲಿ ಈ ದುರಂತ … Continued

ಸೆಪ್ಟೆಂಬರ್‌ ತಿಂಗಳಲ್ಲಿ ₹1.47 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ: 26% ಏರಿಕೆ, ಕರ್ನಾಟಕದಲ್ಲೂ ಹೆಚ್ಚಳ

ನವದೆಹಲಿ: ಭಾರತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಒಟ್ಟು ಸಂಗ್ರಹ ಸೆಪ್ಟೆಂಬರ್‌ನಲ್ಲಿ 1,47,686 ಕೋಟಿ ರೂ.ಗಳಿಗೆ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹದಲ್ಲಿ ಶೇ. 26ರಷ್ಟು ಹೆಚ್ಚಳವಾಗಿದೆ. ಸರಕುಗಳ ಆಮದುಗಳಿಂದ ಬಂದಿರುವ ಆದಾಯವು ಶೇ. 39ರಷ್ಟು ಹೆಚ್ಚಾಗಿದ್ದರೆ, ದೇಶೀಯ ವಹಿವಾಟುಗಳು ಮತ್ತು ಸೇವೆಗಳ ಆಮದುಗಳಿಂದ ಬಂದ ಆದಾಯದಲ್ಲಿ ಶೇ. 22ರಷ್ಟು ಹೆಚ್ಚಳ ಕಂಡುಬಂದಿದೆ. … Continued

ಜುಬಿಲಿ ಹಿಲ್ಸ್ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರು ಅಪ್ರಾಪ್ತರನ್ನು ವಯಸ್ಕರಂತೆ ಪರಿಗಣಿಸಲು ಬಾಲ ನ್ಯಾಯ ಮಂಡಳಿ ಸೂಚನೆ

ಹೈದರಾಬಾದ್‌: ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಐವರು ಅಪ್ರಾಪ್ತ ಆರೋಪಿಗಳಲ್ಲಿ ನಾಲ್ವರಿಗೆ ಕೃತ್ಯದ ಪರಿಣಾಮಗಳ ಬಗ್ಗೆ ತಿಳಿದಿದ್ದುದರಿಂದ ವಯಸ್ಕರಂತೆ ಅವರನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ನಗರದ ಬಾಲ ನ್ಯಾಯ ಮಂಡಳಿ (ಜೆಜೆಬಿ) ತೀರ್ಪು ನೀಡಿದೆ. ಕಾನೂನು ಸಂಘರ್ಷದಲ್ಲಿ ತೊಡಗಿರುವ ಐದನೇ ಅಪ್ರಾಪ್ತ ವಯಸ್ಕ ಸ್ಥಳೀಯ ಶಾಸಕರ ಮಗನಾಗಿದ್ದು … Continued

ವಚನ ಸಾಹಿತ್ಯದ ಶಿಖರ ಶರಣ ಸಾಹಿತಿ ಡಾ.ಸಂಗಮೇಶ ಹಂಡಗಿ | ಭಾನುವಾರ ಸಂಗಮ ಸಿರಿ ಪ್ರಶಸ್ತಿ ಪ್ರದಾನ, ಆಧುನಿಕ ವಚನಗಳು ಸಂಪುಟ- ೧೦ ಬಿಡುಗಡೆ

(ಡಾ. ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಠಾನ (ರಿ), ಹುಬ್ಬಳ್ಳಿ ವತಿಯಿಂದ ಇಂದು (೦೨-೧೦-೨೦೨೨) ಸಾಯಂಕಾಲ ೫.೩೦ಕ್ಕೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಸಂಗಮ ಸಿರಿ ಪ್ರಶಸ್ತಿ ಪ್ರಧಾನ ಹಾಗೂ ಸಂಗಮೇಶ ಹಂಡಗಿ ಸಂಪಾದಿತ ಆಧುನಿಕ ವಚನಗಳು ಸಂಪುಟ ೧೦ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ) ೮೪ ವರ್ಷ ಬಾಳಿದ ಡಾ.ಸಂಗಮೇಶ ಹಂಡಗಿ (ಜನನ: ೦೬.೦೫.೧೯೩೮ ನಿಧನ: … Continued

ಭವಿಷ್ಯ ಅದ್ಭುತವಾಗಿಸಲಿವೆಯೇ ರೋಬೋಟ್‌ಗಳು: ವೇದಿಕೆ ಮೇಲೆ ಕ್ಯಾಟ್‌ವಾಕ್‌ ಮಾಡಿ ಜನರತ್ತ ಕೈಬೀಸಿ ಹೊರನಡೆದ ಟೆಸ್ಲಾ ಹ್ಯುಮನಾಯ್ಡ್ ರೋಬೋಟ್‌ಗಳು | ವೀಕ್ಷಿಸಿ

ಟೆಸ್ಲಾದ ಎರಡು ಹ್ಯುಮನಾಯ್ಡ್ ರೋಬೋಟ್‌ಗಳು ವೇದಿಕೆ ಮೇಲೆ ನಡೆದು ಬಂದು ಜನರತ್ತ ಕೈಬೀಸಿ ಕ್ಯಾಟ್‌ ವಾಕ್‌ ಮಾಡಿದ ನಂತರ ಜನರಿಂದ ಚಪ್ಪಾಳೆಗಳ ಸುರಿಮಳೆಯಾಯಿತು. ಎರಡು ಬೋರ್ಡ್‌ಗಳು, ಪರಿಧಮನಿಯ ಹೃದಯವನ್ನು ರೂಪಿಸುವ ಎರಡು ರೋಬೋಟಿಕ್ ಅಂಗೈಗಳು, ವೇದಿಕೆಯ ಮೇಲೆ ಪಕ್ಕಕ್ಕೆ ಜಾರಿದವು, ಚಪ್ಪಾಳೆಗಳ ನಂತರ ‘ಆಪ್ಟಿಮಸ್’ ರೊಬೋಟ್‌ಗಳು ಹೊರನಡೆದವು. ಅದು ವೇದಿಕೆಯ ಮುಂಭಾಗದವರೆಗೆ ನಡೆದು ಟೆಸ್ಲಾ ಸಿಇಒ … Continued

ಸಿ.ಪಿ.ಯೋಗೇಶ್ವರ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ : ಲಾಠಿ ಪ್ರಹಾರ

ಚನ್ನಪಟ್ಟಣ: ಜೆಡಿಎಸ್ ಕಾರ್ಯಕರ್ತರು ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಅವರ ಕಾರಿನ ಮೇಲೆ ಮೊಟ್ಟೆ ಹಾಗೂ ಕಲ್ಲು ತೂರಾಟ ನಡೆಸಿದ ಘಟನೆನಂತರ ಬೊಂಬೆ ನಗರಿ ಚನ್ನಪಟ್ಟಣ ಉದ್ವಿಗ್ನಗೊಂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ 50 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಗುದ್ದಲಿ ಪೂಜೆ ನೆರವೇರಿಸಲು ಬಿಜೆಪಿ … Continued

ರಾಮಾಯಣ ಧಾರಾವಾಹಿಯ ಶ್ರೀರಾಮನ ಪಾತ್ರಧಾರಿ ಅರುಣ್ ಗೋವಿಲ್‌ಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪುಳಕಿತಳಾದ ಮಹಿಳೆ..| ವೀಕ್ಷಿಸಿ

ನವದೆಹಲಿ: 90ರ ದಶಕದಲ್ಲಿ ಇಡೀ ಭಾರತದ ಮನೆಮಾತಾಗಿದ್ದ, ರಾಮಾನಂದ ಸಾಗರ್ ನಿರ್ಮಾಣದ ‘ರಾಮಾಯಣ’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್ ಇತ್ತೀಚೆಗೆ ವಿಮಾನ ನಿಲ್ದಾಣವೊಂದರಲ್ಲಿ ಇದ್ದಾಗ, ಅವರ ಬಳಿಗೆ ಆಗಮಿಸಿದ ದಂಪತಿ ಅವರಿಗೆ ನಮಸ್ಕರಿಸಿದ್ದಾರೆ.  ಮಹಿಳೆಯೊಬ್ಬರು ಅವರಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿರುವ ವೀಡಿಯೊ ವೈರಲ್‌ ಆಗಿದೆ. ರಾಮಾಯಣ ಧಾರಾವಾಹಿ ಶ್ರೀರಾಮನ ಪಾತ್ರದಿಂದ ಅಪಾರ ಜನಪ್ರಿಯತೆ … Continued

ಸಿಇಟಿ ಪರಿಷ್ಕೃತ ರ್‍ಯಾಂಕಿಂಗ್ ಬಿಡುಗಡೆ, ಮೊದಲ 500 ರ್‍ಯಾಂಕಿಂಗ್‌ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ: ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದಂತೆ ಸಿಇಟಿ ರ್‍ಯಾಂಕಿಂಗ್‌ನ ಪರಿಷ್ಕೃತ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ ಬಿಡುಗಡೆ ಮಾಡಿದ್ದು, ಜುಲೈ 30ರಂದು ಹೊರಡಿಸಿದ್ದ ರ್‍ಯಾಂಕಿಂಗ್ ಪಟ್ಟಿ ಮತ್ತು ಈಗಿನ ಪರಿಷ್ಕೃತ ಪಟ್ಟಿಯಲ್ಲಿ ಮೊದಲ 500 ರ್‍ಯಾಂಕಿಂಗ್‌ಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಹೋದ ವರ್ಷವೇ ದ್ವಿತೀಯ … Continued

ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರನಿಂದ ಪಾಲಿಕೆ ಮಹಿಳಾ ಸಿಬ್ಬಂದಿಗೆ ಬ್ಲಾಕ್ ಮೇಲ್: ಧರ್ಮದೇಟು

ತುಮಕೂರು: ಮಹಾನಗರ ಪಾಲಿಕೆ ಸಿಬ್ಬಂದಿಗೆ ಬ್ಲಾಕ್ ಮೇಲ್ ಮಾಡಿದ್ದ ಆರೋಪದ ಮೇರೆಗೆ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರ ಪ್ರದೀಪ ಎಂಬವನಿಗೆ ಗೂಸಾ ನೀಡಿದ್ದಾರೆ. ಇದಲ್ಲದೇ ಮಾನವ ಹಕ್ಕುಗಳ ಕಾರ್ಯಕರ್ತರು ಎಂದು ಹೇಳಿಕೊಂಡು ಬಂದಿದ್ದ ಯುವತಿಯರಿಗೂ ಸಾರ್ವಜನಿಕರು ಥಳಿಸಿದ್ದಾರೆ ಎಂದು ವರದಿಯಾಗಿದೆ. ಪ್ರದೀಪ ವಾರಪತ್ರಿಕೆಯೊಂದರ ಸಂಪಾದಕನಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಈತ ಸಬ್ಸಿಡಿ ಸಾಲ … Continued

ಕಾರ್ಯಕ್ರಮಕ್ಕೆ ಅಡ್ಡಿ, ಸಿ.ಪಿ. ಯೋಗೇಶ್ವರ ಕಾರಿನ ಮೇಲೆ ಕಲ್ಲು ತೂರಾಟ: ಜೆಡಿಎಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್

ರಾಮನಗರ: ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಕಾರಿನ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ಹಾಗೂ ಮೊಟ್ಟೆ ಎಸೆದಿದ್ದು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಮುಖ್ಯಮಂತ್ರಿಗಳ 50 ಕೋಟಿ ವಿಶೇಷ ಅನುದಾನದ ಅಡಿ ವಿವಿಧ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ ಗ್ರಾಮದಲ್ಲಿತ್ತು. ವಿಧಾನ ಪರಿಷತ್ ಸದಸ್ಯ … Continued