ಸಂಜೆ ಬಳಿಕವೂ ವಿದ್ಯಾರ್ಥಿಗಳು ಬಸ್ ಪಾಸ್ ನಲ್ಲಿ ಪ್ರಯಾಣಿಸಬಹುದು: ಬಿಎಂಟಿಸಿ

ಬೆಂಗಳೂರು: ವಿದ್ಯಾರ್ಥಿಗಳ ಬಸ್ ಪಾಸ್ ಕುರಿತು ಸಂಜೆ 7:30 ರ ನಂತರ ಮಾನ್ಯವಿಲ್ಲವೆಂದು ಬಸ್ ನಿರ್ವಾಹಕರು ವಿದ್ಯಾರ್ಥಿಗಳಿಗೆ ಟಿಕೆಟ್ ನೀಡಬಾರದು ಎಂದು ಬಿಎಂಟಿಸಿ ಸೂಚನೆ ನೀಡಿದೆ. ಈ ಮೊದಲು ವಿದ್ಯಾರ್ಥಿಗಳು ಸಂಜೆ 7:30ರ ಬಳಿಕ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವ ಹಾಗಿಲ್ಲ ಎಂಬ ಸೂಚನೆ ಸಾಕಷ್ಟು ತೊಂದರೆಯಾಗುತ್ತಿತ್ತು. ಹೀಗಾಗಿ ವಿದ್ಯಾರ್ಥಿಗಳು ಬಿಎಂಟಿಸಿ ಕಚೇರಿಗೆ ದೂರು ಸಲ್ಲಿಸಿದ್ದರು. ವಿದ್ಯಾರ್ಥಿಗಳ … Continued

ವೈದ್ಯಕೀಯ ಪವಾಡ: ಕೈ ಮೇಲೆ ಮೂಗನ್ನು ಬೆಳೆಸಿ, ಮಹಿಳೆಯ ಮುಖಕ್ಕೆ ಕಸಿ ಮಾಡಿದ ವೈದ್ಯರು…!

ಫ್ರಾನ್ಸ್ ನ ಶಸ್ತ್ರಚಿಕಿತ್ಸಕರು ಒಬ್ಬ ಮಹಿಳೆಯ ಮುಂಗೈ ಮೇಲೆ ಮೂಗನ್ನು ಬೆಳೆಸಿ, ನಂತರ ಆ ಮೂಗನ್ನು ಆಕೆಯ ಮುಖದ ಮೇಲೆ ಕಸಿ ಮಾಡಿದ್ದಾರೆ ಎಂದು ವರದಿಯಾಗಿದೆ. ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ತನ್ನ ಮುಖದ ಮೇಲಿದ್ದ ಮೂಗಿನ ಹೆಚ್ಚಿನ ಭಾಗವನ್ನು ಮಹಿಳೆ ಕಳೆದುಕೊಂಡ ನಂತರ ಫ್ರಾನ್ಸ್‌ನ ಶಸ್ತ್ರಚಿಕಿತ್ಸಕರು ಆ ಮಹಿಳೆಯ ಮುಂಗೈಯ ಮೇಲೆ ಮೂಗನ್ನು ಯಶಸ್ವಿಯಾಗಿ ಕಸಿ … Continued

28ರ ವರ್ಷದ ತನ್ನ ಪ್ರಿಯಕರನ ಜೊತೆ ತನ್ನ 15 ವರ್ಷದ ಮಗಳನ್ನೇ ಮದುವೆ ಮಾಡಿದ ಮಹಿಳೆ…!

ಆಘಾತಕಾರಿ ಘಟನೆಯೊಂದರಲ್ಲಿ, ಪುಣೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಆಕೆಯ ತಾಯಿ ತನ್ನ 28 ವರ್ಷದ ಪ್ರಿಯಕರನೊಂದಿಗೆ ಬಲವಂತವಾಗಿ ವಿವಾಹ ಮಾಡಿದ್ದಾಳೆ ಹಾಗೂ ಅಪ್ರಾಪ್ತ ಬಲಿಪಶುವನ್ನು ಆತನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದಳು ಎಂದು ಮಹಾರಾಷ್ಟ್ರ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. 36 ವರ್ಷದ ಮಹಿಳೆ ಮತ್ತು ಆಕೆಯ 28 ವರ್ಷದ ಪ್ರೇಮಿಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ … Continued

ಹೀಗೊಂದು ಮದುವೆ…: ವರನಿಗೆ ರಾತ್ರಿ 9ರ ವರೆಗೆ ಸ್ನೇಹಿತರೊಂದಿಗೆ ಸುತ್ತಾಡಲು ಅವಕಾಶ ನೀಡುವ ಒಪ್ಪಂದಕ್ಕೆ ಸಹಿ ಹಾಕಿದ ವಧು…!

ಕೇರಳದ ವಧು ತಮ್ಮ ಮದುವೆಯ ದಿನದಂದು ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ. ಒಪ್ಪಂದದಲ್ಲಿ ಮದುವೆಯ ನಂತರವೂ ತನ್ನ ಪತಿಗೆ ಸಂಜೆ 9 ಗಂಟೆಯವರೆಗೆ ಸ್ನೇಹಿತರೊಂದಿಗೆ ಸುತ್ತಾಡಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ…! ಏಷ್ಯಾನೆಟ್ ವರದಿ ಪ್ರಕಾರ, ಅರ್ಚನಾ ಮತ್ತು ರಘು ಕಳೆದ ಶನಿವಾರ (ನವೆಂಬರ್ 5) ಕೇರಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಲ್ಲಿ, ರಘು ತನ್ನ ಸ್ನೇಹಿತರ … Continued

ಟಿಪ್ಪು ಸುಲ್ತಾನ್‌ 100 ಅಡಿ ಪ್ರತಿಮೆ ಮಾಡಿಯೇ ಮಾಡ್ತೇವೆ: ತನ್ವೀರ್ ಸೇಠ್

ಮೈಸೂರು: ಟಿಪ್ಪು ಸುಲ್ತಾನನ ಆಳ್ವಿಕೆಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಅವರ 100 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಎಷ್ಟೇ ವಿರೋಧ ಬಂದರೂ ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ತನ್ವೀರ್ ಸೇಠ್ ಹೇಳಿದ್ದಾರೆ. ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಪ್ರತಿಮೆ ಪ್ರತಿಷ್ಠಾಪಿಸುವುದು ಖಚಿತ. ಅದನ್ನು … Continued

ನಳಿನಿ ಶ್ರೀಹರನ್, ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ, 3 ದಶಕಗಳ ನಂತರ ಜೈಲಿನಿಂದ ಬಿಡುಗಡೆ

ವೆಲ್ಲೂರು: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳನ್ನು 31 ವರ್ಷಗಳ ಜೈಲುವಾಸದ ನಂತರ ಸುಪ್ರೀಂಕೋರ್ಟ್ ಬಿಡುಗಡೆ ಮಾಡಿದ ಒಂದು ದಿನದ ನಂತರ, ಮೂವರು ಆರೋಪಿಗಳಾದ ನಳಿನಿ ಶ್ರೀಹರನ್, ಅವರ ಪತಿ ಮುರುಗನ್ ಮತ್ತು ಸಂತನ್ ಅವರನ್ನು ನಂತರ ಶನಿವಾರ ಸಂಜೆ ಬಿಡುಗಡೆ ಮಾಡಲಾಗಿದೆ. ಪೆರೋಲ್ ಷರತ್ತುಗಳ ಭಾಗವಾಗಿ ತನ್ನ ಉಪಸ್ಥಿತಿಯನ್ನು ಗುರುತಿಸಲು ನಳಿನಿ ಇಂದು … Continued

ಇಸ್ಲಾಮಿಕ್ ಸ್ಟೇಟ್ ಕರಪತ್ರ, ಬಾಂಬ್ ತಯಾರಿಕಾ ಕೈಪಿಡಿ ಸಾಗಿಸುತ್ತಿದ್ದವರ ಬಂಧನ

ಚೆನ್ನೈ: ಇಸ್ಲಾಮಿಕ್ ಸ್ಟೇಟ್ ಸಂಬಂಧಿತ ಕರಪತ್ರಗಳು ಮತ್ತು ಬಾಂಬ್ ತಯಾರಿಕೆ ಕೈಪಿಡಿಯನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಆತನ ಇಬ್ಬರು ಸಹಚರರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ನಾಗೂರ್ ಮೀರನ್ ಬಂಧಿತ ಆರೋಪಿ. ಈತ ಮತ್ತು ಈತನ ಇಬ್ಬರು ಸಹಚರರು ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಮತ್ತು ಸಿರಿಯಾ (ಐಎಸ್‌ಐಎಸ್) ಎಂಬ ಉಗ್ರಗಾಮಿ ಸಂಘಟನೆಯ … Continued

ಎರಡನೇ ಬಾರಿ ಐಸಿಸಿ ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಆಯ್ಕೆ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ICC) ನೂತನ ಅಧ್ಯಕ್ಷರಾಗಿ ಎರಡನೇ ಬಾರಿ ನ್ಯೂಜಿಲೆಂಡ್‍ನ ಗ್ರೆಗ್ ಬಾರ್ಕ್ಲೇ ಆಯ್ಕೆಯಾಗಿದ್ದಾರೆ. ಐಸಿಸಿ ಬೋರ್ಡ್ ಸದಸ್ಯರ ಒಮ್ಮತದ ಆಯ್ಕೆಯಾಗಿ ಎರಡನೇ ಬಾರಿ ಗ್ರೆಗ್ ಬಾರ್ಕ್ಲೇ ಆಯ್ಕೆಯಾಗುವ ಮೂಲಕ 2022ರಲ್ಲಿ ಮತ್ತೊಮ್ಮೆ ಅಧ್ಯಕ್ಷರಾಗಿ 2 ವರ್ಷಗಳ ಅಧಿಕಾರವಧಿ ವರೆಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. 2024ರ ವರೆಗೆ ಗ್ರೆಗ್ ಬಾರ್ಕ್ಲೇ ಅಧ್ಯಕ್ಷರಾಗಿರಲಿದ್ದಾರೆ. 2015ರ … Continued

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅವಮಾನ: ಸಚಿವ ಅಖಿಲ್ ಗಿರಿ ವಿರುದ್ಧ ವ್ಯಾಪಕ ಟೀಕೆ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ನ ಸಚಿವ ಅಖಿಲ್ ಗಿರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತಾದ ಹೇಳಿಕೆಗಳಿಗೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ, ಪಶ್ಚಿಮ ಬಂಗಾಳದ ಆಡಳಿತ ಸುಧಾರಣಾ ಸಚಿವರು ಗುರುವಾರ ನಂದಿಗ್ರಾಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಅವರು (ಸುವೆಂದು ಅಧಿಕಾರಿ) ನಾನು ಸುಂದರವಾಗಿಲ್ಲ ಎಂದು ಹೇಳಿದರು. ಅವರು ಎಷ್ಟು ಸುಂದರವಾಗಿದ್ದಾರೆ? ನಾವು … Continued

ದಕ್ಷಿಣ ಭಾರತದಾದ್ಯಂತ ಭಾರೀ ಮಳೆ: ಇಂದು ತಮಿಳುನಾಡು, ಪುದುಚೇರಿಯಲ್ಲಿ ಶಾಲೆಗಳಿಗೆ ರಜೆ

ನವದೆಹಲಿ: ತಮಿಳುನಾಡು ಮತ್ತು ಪುದುಚೇರಿಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾವೃತಗೊಂಡಿದ್ದು, ನವೆಂಬರ್ 12 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವರದಿಗಳ ಪ್ರಕಾರ, ಮಳೆಯಿಂದಾಗಿ ಚೆನ್ನೈ, ಕಾಂಚೀಪುರಂ, ರಾಣಿಪೇಟ್, ವೆಲ್ಲೂರು, ತಿರುವಳ್ಳೂರು, ವಿಲ್ಲುಪುರಂ, ತಿರುವರೂರು, ಮೈಲಾಡುತುರೈ, ನೀಲಗಿರಿ ಸೇರಿದಂತೆ 23 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ಬಸ್ಸಿ ರಸ್ತೆ, ಲಾಸ್‌ಪೇಟ್ ಪೂರ್ವ ಕರಾವಳಿ ರಸ್ತೆ, ಕರುವಾಡಿಕುಪ್ಪಂ … Continued