ಅಸಾಧ್ಯವೂ ಸಾಧ್ಯ..: ಕಡಿದಾದ ಬಂಡೆಗಳ ಪರ್ವತವನ್ನು ಬೈಕ್‌ ಮೇಲೆ ಏರಿದ ಸಾಹಸಿ…ವೀಕ್ಷಿಸಿ

ಮೋಟಾರ್‌ಸೈಕಲ್ ಸವಾರನ ಅಸಾಧಾರಣ ಸಾಹಸದ ವೀಡಿಯೊ ಇಂಟರ್ನೆಟ್‌ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ವ್ಯಕ್ತಿಯೊಬ್ಬ ಕಡಿದಾದ ಬಂಡೆಯ ಪರ್ವತವನ್ನು ಅಪಾಯಕಾರಿ ರೀತಿಯಲ್ಲಿ ಏರಲು ಡರ್ಟ್ ಬೈಕ್‌ ಚಲಾವಣೆ ಮಾಡಿಕೊಂಡು ಏರುತ್ತಿರುವುದನ್ನು ಕಾಣಬಹುದು. ಈ ಸಾಹಸವು ತುಂಬಾ ಕಷ್ಟಕರವಾಗಿದೆ ಎಂದು ತೋರುತ್ತದೆ, ಹೆಚ್ಚಿನ ವೀಕ್ಷಕರು ಈ ಸಾಹಸಕ್ಕೆ ಬೆರಗಾಗಿದ್ದಾರೆ. ಸಾಹಸಮಯ ಬೈಕ್‌ ಸವಾರಿಗಳ ವೀಡಿಯೋಗಳನ್ನು ಈಗ ಇಂಟರ್ನೆಟ್‌ನಲ್ಲಿ … Continued

ರಾಜಸ್ಥಾನದಲ್ಲಿ ನಡೆದ ಮುಖೇಶ ಅಂಬಾನಿ ಕಿರಿಯ ಪುತ್ರನ ಮದುವೆ ನಿಶ್ಚಿತಾರ್ಥ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪುತ್ರ ಅನಂತ ಅಂಬಾನಿ ಇಂದು, ಗುರುವಾರ ರಾಧಿಕಾ ಮರ್ಚೆಂಟ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥಜಿ ದೇವಸ್ಥಾನದಲ್ಲಿ ಇವರಿಬ್ಬರ ಸಾಂಪ್ರದಾಯಿಕ ರೋಕಾ ಸಮಾರಂಭ ನಡೆಯಿತು. ರಾಧಿಕಾ ಮರ್ಚಂಟ್ ಅವರು, ಔಷಧೀಯ ತಯಾರಿಕಾ ಕಂಪನಿಯ ಸಿಇಒ ಹಾಗೂ ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ. … Continued

ಕುಮಟಾ: ಹಿರಿಯ ಕಾಂಗ್ರೆಸ್‌ ನಾಯಕ ಮೋಂಟಿ ಫರ್ನಾಂಡಿಸ್‌ ನಿಧನ

ಕುಮಟಾ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಮೋಂಟಿ ಫಾರ್ನಾಂಡಿಸ್ ಗುರುವಾರ ನಿಧನರಾಗಿದ್ದಾರೆ. ಸರಳ ವ್ಯಕ್ತಿತ್ವದ ಅವರು ಕಾಂಗ್ರೆಸ್‌ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಎಲ್ಲ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಪಕ್ಷಾತೀತವಾಗಿ ಉತ್ತಮ ಸಂಬಂಧಹೊಂದಿದ್ದರು. ಅವರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಕುಮಟಾದಲ್ಲಿ ಆನ್‌ಲೈನ್ ಷೇರು ಮಾರುಕಟ್ಟೆಯು ಆರಂಭ … Continued

ಕರ್ನಾಟಕದ ಅತ್ಯಂತ ಅಗತ್ಯದ ಕಳಸಾ-ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರದಿಂದ ಅನುಮತಿ : ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ಇಂದು, ಗುರುವಾರ ಕೇಂದ್ರ ಜಲ ಆಯೋಗವು ಕರ್ನಾಟಕದ ಕಳಸಾ -ಬಂಡೂರಿ ವಿಸ್ತೃತ ಯೋಜನಾ ವರದಿಗೆ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟರಿನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಗೃಹ ಸಚಿವ ಅಮಿತ್ … Continued

ಗ್ಯಾಂಬಿಯಾ ನಂತರ ತಮ್ಮ ದೇಶದ 18 ಮಕ್ಕಳ ಸಾವಿಗೂ ಭಾರತೀಯ ಕಂಪನಿ ಸಿರಪ್‌ಗೂ ಸಂಬಂಧವಿದೆ ಎಂದು ಉಜ್ಬೇಕಿಸ್ತಾನ್ ಆರೋಪ

ಉಜ್ಬೇಕಿಸ್ತಾನ್ ಬುಧವಾರ 18 ಮಕ್ಕಳ ಸಾವನ್ನು ಭಾರತೀಯ ಕೆಮ್ಮು ಸಿರಪ್‌ಗೆ ಜೋಡಿಸಿದ ನಂತರ ಕೇಂದ್ರ ಸರ್ಕಾರವು ಕಾರಣ ಸ್ಥಿತಿಯನ್ನು ಹುಡುಕಿದೆ ಎಂದು ಮೂಲಗಳು ತಿಳಿಸಿವೆ. ಗ್ಯಾಂಬಿಯಾದಲ್ಲಿ ಇದೇ ರೀತಿಯ ಘಟನೆ ವರದಿಯಾದ ತಿಂಗಳ ನಂತರ, ಭಾರತೀಯ ಔಷಧೀಯ ಕಂಪನಿಯೊಂದು ತಯಾರಿಸಿದ ಔಷಧಿಗಳನ್ನು ಸೇವಿಸಿ ದೇಶದಲ್ಲಿ 18 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಉಜ್ಬೇಕಿಸ್ತಾನ್ ಆರೋಗ್ಯ ಸಚಿವಾಲಯ ಆರೋಪಿಸಿದೆ. … Continued

ಗಡಿ ವಿವಾದದ ನಂತರ ಈಗ ಆಲಮಟ್ಟಿ ಜಲಾಶಯದ ಎತ್ತರಕ್ಕೆ ಮಹಾರಾಷ್ಟ್ರ ತಕರಾರು

ನಾಗ್ಪುರ : ಕರ್ನಾಟಕದ ಜೊತೆಗೆ ಗಡಿ ಕ್ಯಾತೆ ತೆಗೆದಿರುವ ಮಹಾರಾಷ್ಟ್ರ ಸರ್ಕಾರ, ಈಗ ಕೃಷ್ಣಾ ನದಿಗೆ ಕಟ್ಟಲಾಗಿರುವ ಆಲಮಟ್ಟಿ ಆಣೆಕಟ್ಟ ವಿಷಯವನ್ನೂ ಸುಪ್ರೀಂಕೋರ್ಟ್‌ಗೆ ಕೊಂಡೊಯ್ಯುವ ಬೆದರಿಕೆ ಹಾಕಿದೆ. ಈ ಕುರಿತು ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಮಹಾರಾಷ್ಟ್ರವು ಪ್ರವಾಹದ ಪರಿಣಾಮದ ಕುರಿತು ನಡೆಸಲಾಗುತ್ತಿರುವ ಅಧ್ಯಯನವನ್ನು ಪೂರ್ಣಗೊಳಿಸುವ ವರೆಗೆ ಆಲಮಟ್ಟಿ ಜಲಾಶಯ ಎತ್ತರಿಸುವ … Continued

ರಾಹುಲ್ ಗಾಂಧಿ 113 ಬಾರಿ ಭದ್ರತಾ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ: ಭದ್ರತಾ ಉಲ್ಲಂಘನೆ ಆರೋಪದ ನಂತರ ಸಿಆರ್‌ಪಿಎಫ್‌ ಹೇಳಿಕೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭದ್ರತಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಗುರುವಾರ ಕೇಂದ್ರ ಮೀಸಲು ಪೊಲೀಸ್ ಪಡೆ ಆರೋಪಿಸಿದೆ, ಕಾಂಗ್ರೆಸ್ ಪಕ್ಷದ ಭದ್ರತಾ ಲೋಪಗಳ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಸಿಆರ್‌ಪಿಎಫ್ ಈ ಹೇಳೀಕೆಗಳು ಬಂದಿವೆ. ರಾಹುಲ್ ಗಾಂಧಿಯವರ ಕಡೆಯಿಂದ ನಿಗದಿಪಡಿಸಿದ ಮಾರ್ಗಸೂಚಿಗಳ ಉಲ್ಲಂಘನೆಯನ್ನು ಹಲವಾರು ಸಂದರ್ಭಗಳಲ್ಲಿ ಗಮನಿಸಲಾಗಿದೆ … Continued

ಪಿಎಫ್‌ಐಗೆ ಸಂಬಂಧಿಸಿದ 56 ಸ್ಥಳಗಳ ಮೇಲೆ ಎನ್‌ಐಎ ದಾಳಿ

ಚೆನ್ನೈ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಕೇರಳದ 56 ಸ್ಥಳಗಳ ಮೇಲೆ ದಾಳಿ ಆರಂಭಿಸಿದೆ. ಪಿಎಫ್‌ಐ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಕೇರಳದ 56 ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ ಎಂದು ತಿಳಿಸುತ್ತಿವೆ. ಪಿಎಫ್‌ಐ ಸದಸ್ಯರೊಂದಿಗೆ ನಂಟು ಹೊಂದಿರುವ ಹಲವಾರು ಶಂಕಿತರ ಆವರಣ ಮತ್ತು … Continued

ಜಾಗತಿಕವಾಗಿ ಟ್ವಿಟರ್‌ ಡೌನ್ : ಹಲವಾರು ಬಳಕೆದಾರರನ್ನು ಸ್ವಾಗತಿಸಿದ ದೋಷದ ಸಂದೇಶ

ಔಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com ಪ್ರಕಾರ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಗುರುವಾರ ಬೆಳಿಗ್ಗೆ ಸಾವಿರಾರು ಬಳಕೆದಾರರಿಗೆ ಸ್ಥಗಿತಗೊಂಡಿದೆ. ಮೊಬೈಲ್ ಮತ್ತು ಡೆಸ್ಕ್‌ಟಾಪ್ ಬಳಕೆದಾರರು ಸೈಟ್ ಅನ್ನು ಪ್ರವೇಶಿಸಲು ಅಥವಾ ಅಧಿಸೂಚನೆಗಳನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ಅಮೆರಿಕದಲ್ಲಿಯೇ ಸಾಮಾಜಿಕ ಮಾಧ್ಯಮ ವೆಬ್‌ಸೈಟ್ ಅನ್ನು ಪ್ರವೇಶಿಸುವಲ್ಲಿ 10,000 ಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಕೆಲವು ಬಳಕೆದಾರರು ಸ್ವಯಂಚಾಲಿತವಾಗಿ … Continued

ಶಿವಮೊಗ್ಗ: ಪ್ರಚೋದನಾಕಾರಿ ಭಾಷಣ, ಬಿಜೆಪಿಯ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್ ವಿರುದ್ಧ ದೂರು ದಾಖಲು

ಶಿವಮೊಗ್ಗ: ಇತ್ತೀಚೆಗೆ ಹಿಂದೂಪರ ಸಂಘಟನೆಯೊಂದು ಆಯೋಜಿಸಿದ್ದ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್.ಸುಂದರೇಶ ಅವರು ನೀಡಿದ ದೂರಿನ ಮೇರೆಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ … Continued