ಭಾರತದ ತಪ್ಪು ನಕಾಶೆ ಪ್ರಕಟಿಸಿದ್ದಕ್ಕೆ ಕೇಂದ್ರ ಸಚಿವರ ತರಾಟೆ ನಂತರ ಕ್ಷಮೆ ಕೋರಿದ ವಾಟ್ಸಾಪ್

ನವದೆಹಲಿ: ಭಾರತದ ವಿರೂಪಗೊಳಿಸಿದ ನಕ್ಷೆಯನ್ನು ಹಾಕಿದ್ದಕ್ಕಾಗಿ ಮೆಟಾ ಒಡೆತನದ ವಾಟ್ಸಾಪ್ ಅನ್ನು ಕೇಂದ್ರ ಸಚಿವ ರಾಜೀವ ಚಂದ್ರಶೇಖರ ತರಾಟೆಗೆ ತೆಗೆದುಕೊಂಡ ನಂತರ ಅದು ಕ್ಷಮೆಯಾಚಿಸಿದೆ. ವಾಟ್ಸಾಪ್ ತಪ್ಪು ನಕ್ಷೆಯನ್ನು ತೆಗೆದುಹಾಕಿದೆ. ಉದ್ದೇಶಪೂರ್ವಕವಲ್ಲದ ದೋಷದ ಬಗ್ಗೆ ಸೂಚಿಸಿದ್ದಕ್ಕಾಗಿ ಸಚಿವರಿಗೆ ಧನ್ಯವಾದಗಳು; ನಾವು ತಕ್ಷಣವೇ ಸ್ಟ್ರೀಮ್ ಅನ್ನು ತೆಗೆದುಹಾಕಿದ್ದೇವೆ, ಕ್ಷಮೆಯಾಚಿಸುತ್ತೇವೆ. ಭವಿಷ್ಯದಲ್ಲಿ ನಾವು ಜಾಗರೂಕರಾಗಿರುತ್ತೇವೆ ಎಂದು ರಾಜೀವ ಚಂದ್ರಶೇಖರ … Continued

ರೈಲಿನಿಂದ ಇಳಿದು ಓಡಿ.. ಓಡಿ…ಮುಂದಿನ ಸ್ಟಾಪ್‌ನಲ್ಲಿ ಮತ್ತೆ ಅದೇ ರೈಲು ಏರಿದ ವ್ಯಕ್ತಿ…ಹಳೆಯ ವೀಡಿಯೊ ವೈರಲ್ ; ವೀಕ್ಷಿಸಿ

ಲಂಡನ್‌ನಲ್ಲಿ ಸುರಂಗಮಾರ್ಗದ ರೈಲಿ(subway train)ನಿಂದ ಇಳಿದು ಮುಂದಿನ ನಿಲ್ದಾಣದಲ್ಲಿ ಅದೇ ರೈಲನ್ನು ಹತ್ತಲು ವ್ಯಕ್ತಿಯೊಬ್ಬ ಓಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಹುಚ್ಚುಚ್ಚಾಗಿ ವೈರಲ್ ಆಗಿದೆ. ಆ ವ್ಯಕ್ತಿ ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಓಡುತ್ತಿರುವುದನ್ನು ಶರೀರದ(ಬಾಡಿ) ಕ್ಯಾಮರಾ ಮೂಲಕ ರೆಕಾರ್ಡ್ ಮಾಡಿಕೊಂಡಿದ್ದು, ಮತ್ತೊಬ್ಬ ವ್ಯಕ್ತಿ ರೈಲಿನ ಚಲನವಲನಗಳನ್ನು ಸೆರೆ ಹಿಡಿದಿದ್ದಾನೆ. ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು … Continued

ಚೀನಾವು ಬೌದ್ಧ ಧರ್ಮ ನಾಶಮಾಡಲು ಪ್ರಯತ್ನಿಸಿತು ಆದರೆ…: ಚೀನಾ ಸರ್ಕಾರದ ವಿರುದ್ಧ ಹರಿಹಾಯ್ದ ದಲೈ ಲಾಮಾ

ನವದೆಹಲಿ : ಚೀನಾವು ಬೌದ್ಧ ಧರ್ಮವನ್ನು ಗುರಿಯಾಗಿಸಿಕೊಂಡು ನಾಶಮಾಡಲು ಪ್ರಯತ್ನಿಸುತ್ತಿದೆ, ಆದರೆ ಅದು ಯಶಸ್ವಿಯಾಗುವುದಿಲ್ಲ ಎಂದು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರು ಬೋಧಗಯಾದ ಕಾಲಚಕ್ರ ಮೈದಾನದಲ್ಲಿ ಮೂರನೇ ಮತ್ತು ಕೊನೆಯ ದಿನದ ಬೋಧನಾ ಕಾರ್ಯಕ್ರಮದಲ್ಲಿ ಹೇಳಿದರು. ಚೀನಾ ಬೌದ್ಧ ಧರ್ಮವನ್ನು ವಿಷಪೂರಿತವೆಂದು ಪರಿಗಣಿಸುತ್ತಿದೆ ಮತ್ತು ಧರ್ಮವನ್ನು ನಾಶಮಾಡಲು ಮತ್ತು ಅದರ ಸಂಸ್ಥೆಗಳನ್ನು ನಾಶಪಡಿಸುವ … Continued

ಆನೆಯ ಮುಂದೆ ಬಾಲಕಿಯ ಭರತನಾಟ್ಯ: ಕಟೀಲು ದೇವಸ್ಥಾನದ ವೀಡಿಯೊ ಹಂಚಿಕೊಂಡ ಉದ್ಯಮಿ ಆನಂದ ಮಹಿಂದ್ರಾ | ವೀಕ್ಷಿಸಿ

ಮಂಗಳೂರು : ಉದ್ಯಮಿ ಆನಂದ್ ಮಹೀಂದ್ರಾ ಅವರು ಹಂಚಿಕೊಂಡ ಕರ್ನಾಟಕದ ದೇವಸ್ಥಾನವೊಂದರಲ್ಲಿ ಚಿತ್ರೀಕರಿಸಿದ ಇತ್ತೀಚಿನ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಹೃದಯಗಳನ್ನು ಗೆದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ ಪ್ರಸಿದ್ಧ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಚಿತ್ರೀಕರಿಸಿದ 57 ಸೆಕೆಂಡುಗಳ ವೀಡಿಯೊವನ್ನು ಆನಂದ್ ಮಹೀಂದ್ರಾ ಪೋಸ್ಟ್ ಮಾಡಿದ್ದಾರೆ. ದೇವಾಲಯದ ಆನೆಯ ಮುಂದೆ ಸಾಂಪ್ರದಾಯಿಕ ಉಡುಗೆಯಲ್ಲಿ … Continued

ಸ್ನಿಫರ್ ನಾಯಿ 3 ಮರಿಗಳಿಗೆ ಜನ್ಮ ನೀಡಿದ ನಂತ್ರ ಗಡಿ ಭದ್ರತಾ ಪಡೆ ನ್ಯಾಯಾಲಯದ ತನಿಖೆಗೆ ಆದೇಶ..!

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯಲ್ಲಿ ಕರ್ತವ್ಯದಲ್ಲಿದ್ದ ಸ್ನಿಫರ್ ನಾಯಿಯು ಸಕ್ರಿಯ ಕರ್ತವ್ಯದಲ್ಲಿರುವಾಗ ಅನಿರೀಕ್ಷಿತವಾಗಿ 3 ನಾಯಿಗಳಿಗೆ ಜನ್ಮ ನೀಡಿದೆ. ಇದರ ಬೆನ್ನಲ್ಲೇ ಭದ್ರತಾ ಪಡೆ ಈ ಲೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಆದೇಶಿಸಿದೆ. ಶಿಲ್ಲಾಂಗ್‌ನ ಬಾಂಗ್ಲಾದೇಶದ ಗಡಿಯಲ್ಲಿರುವ ಬಾರ್ಡರ್ ಔಟ್‌ಪೋಸ್ಟ್‌ನಲ್ಲಿ (BOB) ನಿಯೋಜಿಸಲಾದ ಗಡಿ ಭದ್ರತಾ ಪಡೆ (BSF)ಯ ನಾಯಿ ಮೂರು ಮರಿಗಳಿಗೆ … Continued

2023ರ ಹೊಸ ವರ್ಷದ ಮೊದಲ ದಿನವೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಹೆಚ್ಚಳ

ನವದೆಹಲಿ : ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 2023ರ ಹೊಸ ವರ್ಷದ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸಿವೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 25 ರೂ.ವರೆಗೆ ಹೆಚ್ಚಿಸಿದ್ದಾರೆ. ಆದಾಗ್ಯೂ, ಗೃಹಬಳಕೆಯ ಸಿಲಿಂಡರ್‌ಗಳ ದರಗಳನ್ನು ಬದಲಾವಣೆ ಮಾಡಲಾಗಿಲ್ಲ. ವಾಣಿಜ್ಯ LPG ಸಿಲಿಂಡರ್ ಹೆಚ್ಚಳದ ಬೆಲೆಗಳು: ತೈಲ ಮಾರುಕಟ್ಟೆ ಕಂಪನಿಗಳು (OMC) ಜನವರಿ 1, 2023 ರಿಂದ … Continued

2022 : ಕಾಶ್ಮೀರದಲ್ಲಿ 42 ವಿದೇಶಿ ಉಗ್ರರು ಸೇರಿ 172 ಭಯೋತ್ಪಾದಕರ ಹತ್ಯೆ

ಶ್ರೀನಗರ: ಕಾಶ್ಮೀರದಲ್ಲಿ 2022ರಲ್ಲಿ ಭದ್ರತಾ ಪಡೆಗಳು ನಡೆಸಿದ 42 ವಿದೇಶಿ ಭಯೋತ್ಪಾದಕರೂ ಸೇರಿದಂತೆ 172 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ತಿಳಿಸಿದ್ದಾರೆ. ಈ ಭಾಗದಲ್ಲಿ ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗುವವರ ಸಂಖ್ಯೆಯಲ್ಲಿ ಶೇ 37ರಷ್ಟು ಇಳಿಕೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “2022ರಲ್ಲಿ ಕಾಶ್ಮೀರದಲ್ಲಿ ಒಟ್ಟು 93 ಯಶಸ್ವಿ ಎನ್‌ಕೌಂಟರ್‌ಗಳು … Continued

ಮಹದಾಯಿ ಕಾಮಗಾರಿಗೆ 2 ತಿಂಗಳಲ್ಲಿ ಶಂಕುಸ್ಥಾಪನೆ : ಸಚಿವ ಪ್ರಲ್ಹಾದ ಜೋಶಿ

ಹುಬ್ಬಳ್ಳಿ: ರಾಜ್ಯದ ಅರಣ್ಯ ಇಲಾಖೆಯ ಒಪ್ಪಿಗೆ ಪಡೆದು, ಎರಡು ತಿಂಗಳಲ್ಲಿ ಮಹದಾಯಿ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಶನಿವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ‘ಈಗಾಗಲೇ ಕೇಂದ್ರ ಸರ್ಕಾರ ಮಹದಾಯಿ ಯೋಜನೆಯ ಪರಿಷ್ಕೃತ ಡಿಪಿಆರ್‌ಗೆ ಒಪ್ಪಿಗೆ ನೀಡಿದೆ. ಇದು ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ಪರಿಸರ … Continued