ನೀವು ನನಗೆ ವಿಷ ಹಾಕಿದರೆ..’: ಪೊಲೀಸ್ ಪ್ರಧಾನ ಕಚೇರಿಯಲ್ಲಿ ಚಹಾ ಕುಡಿಯಲು ನಿರಾಕರಿಸಿದ ಮಾಜಿ ಸಿಎಂ ಅಖಿಲೇಶ ಯಾದವ್ : ವೀಕ್ಷಿಸಿ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ ಅವರು ಭಾನುವಾರ ಲಕ್ನೋದಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಚಹಾವನ್ನು ಕುಡಿಯಲು ನಿರಾಕರಿಸಿದರು. ತಾವು ಉತ್ತರ ಪ್ರದೇಶ ಪೊಲೀಸರನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ, ಅಖಿಲೇಶ ಯಾದವ ತಮ್ಮ ಸಿಬ್ಬಂದಿಗೆ ಹೊರಗಿನಿಂದ ಚಹಾ ತರುವಂತೆ ಆಜ್ಞಾಪಿಸುತ್ತಿದ್ದು, ಅಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳು ನೀಡಿದ ಚಹಾ ಕುಡಿಯಲು ನಿರಾಕರಿಸಿದ್ದಾರೆ.
ನಾವು ಇಲ್ಲಿಂದ ಚಹಾ ಕುಡಿಯುವುದಿಲ್ಲ. ನಾವು ಹೊರಗಿನಿಂದ ಚಹಾ ಕುಡಿಯುತ್ತೇವೆ ಅಥವಾ ನಮ್ಮದೇ ಚಹಾವನ್ನು ತರುತ್ತೇವೆ, ನಿಮ್ಮ ಕಪ್ ತೆಗೆದುಕೊಳ್ಳುತ್ತೇವೆ. ಆದರೆ ನೀವು ಕೊಟ್ಟ ಚಹಾ ಕುಡಿಯುವುದಿಲ್ಲ. ನೀವು ನನಗೆ ವಿಷ ಕೊಟ್ಟರೆ ಏನು ಮಾಡುವುದು ? ನನಗೆ ನಂಬಿಕೆ ಇಲ್ಲ. ನಾನು ಚಹಾವನ್ನು ಹೊರಗಿನಿಂದ ತರುತ್ತೇನೆ” ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ ಯಾದವ್‌ ಅವರ ಮಾತು ವೈರಲ್ ವಿಡಿಯೋದಲ್ಲಿ ಕೇಳಿ ಬಂದಿದೆ.
ಪಕ್ಷದ ಕಾರ್ಯಕರ್ತರ ಬಂಧನದ ನಂತರ ಅಖಿಲೇಶ್ ಪೊಲೀಸ್ ಕೇಂದ್ರ ಕಚೇರಿಗೆ ತೆರಳಿದ್ದರು. ಪಕ್ಷದ ಟ್ವಿಟರ್ ಹ್ಯಾಂಡಲ್‌ನ ಮಾಧ್ಯಮ ನಿರ್ವಾಹಕ ಮನೀಶ ಜಗನ್ ಅಗರ್ವಾಲ್ ಅವರನ್ನು ಬಂಧಿಸಿದ ನಂತರ ಅಖಿಲೇಶ ಯಾದವ ಅವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಲಕ್ನೋ ಮೂಲದ ಪೊಲೀಸ್ ಪ್ರಧಾನ ಕಚೇರಿಗೆ ತಲುಪಿದ್ದರು.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

ಮಹಿಳೆಯರು ಮತ್ತು ಬಿಜೆಪಿ ನಾಯಕರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅಸಭ್ಯ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಸಮಾಜವಾದಿ ಪಾರ್ಟಿಯ ಸಾಮಾಜಿಕ ಮಾಧ್ಯಮ ಸಂಯೋಜಕ ಮನೀಶ ಜಗನ್ ಅಗರ್ವಾಲ್ ಅವರನ್ನು ಭಾನುವಾರ ಬೆಳಿಗ್ಗೆ ಬಂಧಿಸಲಾಗಿದೆ.
ಪಕ್ಷದ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮೂಲಕ ಟ್ವಿಟ್ಟರ್‌ನಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಅಗರ್ವಾಲ್ ವಿರುದ್ಧ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.
ಸಮಾಜವಾದಿ ಪಕ್ಷದ ಕಾರ್ಯಕರ್ತ ಮನೀಶ್ ಜಗನ್ ಅಗರ್ವಾಲ್ ಅವರನ್ನು ಲಕ್ನೋ ಪೊಲೀಸರು ಬಂಧಿಸಿರುವುದು ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿ! ಪೊಲೀಸರು ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು” ಎಂದು ಎಸ್ಪಿ ಟ್ವಿಟ್ಟರಿನಲ್ಲಿ ಹೇಳಿದೆ.

 

ಅವಹೇಳನಕಾರಿ ಹೇಳಿಕೆಗಾಗಿ ಅಗರ್ವಾಲ್ ಬಂಧನ: ಪೊಲೀಸರು
“ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯ ಮತ್ತು ಅವಹೇಳನಕಾರಿ ಹೇಳಿಕೆಗಳಿಗಾಗಿ ಮನೀಶ್ ಜಗನ್ ಅಗರ್ವಾಲ್ ಅವರನ್ನು ಬಂಧಿಸಲಾಗಿದೆ. ಭಾನುವಾರ ಬೆಳಿಗ್ಗೆ ಅವರನ್ನು ಬಂಧಿಸಲಾಗಿದೆ. ಜನವರಿ 4 ರಂದು ಅವರ ವಿರುದ್ಧ ಐಟಿ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ ಅಗರ್ವಾಲ್ ಬಂಧನದ ನಂತರ, ಹಜರತ್‌ಗಂಜ್‌ನ ಸಹಾಯಕ ಪೊಲೀಸ್‌ ಆಯುಕ್ತ ಅರವಿಂದಕುಮಾರ ವರ್ಮಾ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement