ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿ ಸಮಯಕ್ಕೆ ಸರಿಯಾಗಿ ತುರ್ತು ಚಿಕಿತ್ಸೆ ಸಿಗದೆ ಒಂದೂವರೆ ವರ್ಷದ ಮಗು ಸಾವು

ಬೆಂಗಳೂರು : ಬೆಂಗಳೂರಿನ ಟ್ರಾಫಿಕ್‌ನಲ್ಲಿ ಆಂಬುಲೆನ್ಸ್ ಸಿಲುಕಿದ ಹಿನ್ನೆಲೆಯಲ್ಲಿ ಆಂಬುಲೆನ್ಸ್ ಆಸ್ಪತ್ರೆ ತಲುಪಲು ವಿಳಂಬವಾಗಿ ತುರ್ತು ಚಿಕಿತ್ಸೆ ಸಿಗದೆ ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ವರದಿಯಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಹುದಾ ಕೌಸರ್​​ ಎಂಬ ಒಂದೂವರೆ ವರ್ಷದ ಮಗು ನೆಲಮಂಗಲದ ಬಳಿ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಂಡು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಲಾಗದೆ ಚಿಕಿತ್ಸೆ ದೊರಕದೆ ಮೃತಪಟ್ಟಿದೆ. … Continued

ಅಮೆರಿಕದ ಅಣ್ವಸ್ತ್ರ ತಾಣದ ಮೇಲೆ ಚೀನಾದ ‘ಪತ್ತೇದಾರಿ’ ಬಲೂನು ಹಾರಾಟ : ಪೆಂಟಗನ್

ಅಮೆರಿಕದ ವಾಯುಪ್ರದೇಶದಲ್ಲಿ ಶಂಕಿತ ಚೀನೀ ‘ಪತ್ತೇದಾರಿ’ ಬಲೂನ್ ಕಂಡುಬಂದಿದೆ. ಆದರೆ ಅದು ಜನರಿಗೆ ಹಾನಿಯನ್ನುಂಟು ಮಾಡಬಹುದು ಎಂಬ ಕಾರಣಕ್ಕೆ ಪೆಂಟಗನ್ ಅದನ್ನು ಶೂಟ್ ಮಾಡದಿರಲು ನಿರ್ಧರಿಸಿದೆ. ಮಾಹಿತಿ ಸಂಗ್ರಹಿಸಲು ಚೀನಾದ ‘ಪತ್ತೇದಾರಿ’ ಬಲೂನ್ “ಸೂಕ್ಷ್ಮ ತಾಣಗಳ” ಮೇಲೆ ಹಾರುತ್ತಿದೆ ಎಂದು ಪೆಂಟಗನ್ ನಂಬಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು. ಮಾಲ್ಮ್‌ಸ್ಟ್ರೋಮ್ ಏರ್ ಫೋರ್ಸ್ … Continued

ಸಾಲಗಾರರ ಕಾಟಕ್ಕೆ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ: ಓರ್ವ ಮಹಿಳೆ ಸಾವು

ರಾಮನಗರ : ಸಾಲಗಾರರ ಕಾಟಕ್ಕೆ ಹೆದರಿ ಒಂದೇ ಕುಟುಂಬದ ಏಳು ಮಂದಿ ಇಲಿಪಾಷಾಣ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ದೊಡ್ಡಮಣ್ಣುಗುಡ್ಡೆದೊಡ್ಡಿಯಲ್ಲಿ ನಡೆದಿದೆ. ಇವರಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದು, ಆರು ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಮೃತಪಟ್ಟ ಮಹಿಳೆಯನ್ನು ಮಂಗಳಮ್ಮ (28) ಎಂದು ಗುರುತಿಸಲಾಗಿದೆ. ಉಳಿದ ಆರು ಮಂದಿಯನ್ನು ಮಂಡ್ಯದ ವಿಮ್ಸ್‌ಗೆ ದಾಖಲಿಸಿ ತೀವ್ರ ನಿಗಾ … Continued

ತಮಿಳುನಾಡಿನ ಐದು ಜಿಲ್ಲೆಗಳಿಗೆ ಭಾರೀ ಮಳೆ ಮುನ್ನೆಚ್ಚರಿಕೆ : ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ತಮಿಳುನಾಡಿನ ನಾಗಪಟ್ಟಣಂ, ತಿರುವರೂರ್ ಮತ್ತು ಮೈಲಾಡುತುರೈ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಕೆಲವು ಭಾರಿ ಮಳೆಯಾಗಿರುವುದರಿಂದ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ನೀಡಲಾಯಿತು. ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿದ ಇತ್ತೀಚಿನ ಬುಲೆಟಿನ್ ಪ್ರಕಾರ, ಬಂಗಾಳದ ನೈಋತ್ಯ ಕೊಲ್ಲಿಯಲ್ಲಿನ ಖಿನ್ನತೆಯು ಪಶ್ಚಿಮ-ನೈಋತ್ಯ ದಿಕ್ಕಿನಲ್ಲಿ 15 ಕಿಮೀ ವೇಗದಲ್ಲಿ ಚಲಿಸುತ್ತದೆ ಮತ್ತು ಗುರುವಾರ ಮುಂಜಾನೆ 03.30 … Continued

ಮಂಗಳೂರಿನಲ್ಲಿ ಹಿಟ್ ಅಂಡ್ ರನ್ ಪ್ರಕರಣ: ಇಬ್ಬರು ಸಾವು, ಒಬ್ಬರಿಗೆ ಗಾಯ

ಮಂಗಳೂರು: ಮಂಗಳೂರು ಸಮೀಪದ ಪಡುಪಣಂಬೂರಿನಲ್ಲಿ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಓರ್ವನಿಗೆ ಗಾಯಗಳಾಗಿವೆ. ಬುಧವಾರ ತಡರಾತ್ರಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರಿನಿಂದ ಸುಮಾರು 30 ಕಿಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಬಬ್ಲು ಮತ್ತು ಅಚಲ್ ಸಿಂಗ್ ಎಂದು ಗುರುತಿಸಲಾಗಿದೆ. ಅನೀಶ್ … Continued

ದೆಹಲಿ ಮದ್ಯ ಪ್ರಕರಣ : ಗೋವಾ ಚುನಾವಣಾ ಪ್ರಚಾರಕ್ಕೆ ಹಗರಣದ ಹಣ ಬಳಸಿಕೊಂಡ ಎಎಪಿ-ಇ.ಡಿ.ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ನವದೆಹಲಿ: ಆಮ್ ಆದ್ಮಿ ಪಕ್ಷವು ದೆಹಲಿ ಮದ್ಯ ಹಗರಣದಿಂದ ಬಂದ ಹಣವನ್ನು ಗೋವಾದಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ಹೇಳಿದೆ. “ಇದುವರೆಗಿನ ಈ ಕಿಕ್‌ಬ್ಯಾಕ್‌ನ ಜಾಡು ತನಿಖೆಯಿಂದ ಈ ಹಣವನ್ನು ಎಎಪಿಯ ಚುನಾವಣಾ ಪ್ರಚಾರಕ್ಕೆ ಬಳಸಲಾಗಿದೆ ಎಂದು ತಿಳಿದುಬಂದಿದೆ” ಎಂದು ಪ್ರಕರಣದಲ್ಲಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಇ.ಡಿ. ಹೇಳಿದೆ. 2022ರಲ್ಲಿ ನಡೆದ ಗೋವಾ … Continued

ಕಣ್ಣೂರಿನಲ್ಲಿ ಕಾರಿಗೆ ಆಕಸ್ಮಿಕ ಬೆಂಕಿ: ಗರ್ಭಿಣಿ ಮಹಿಳೆ-ಪತಿ ಸಜೀವ ದಹನ…

ಕಣ್ಣೂರು: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರಿನಲ್ಲಿದ್ದ ಗರ್ಭಿಣಿ ಮಹಿಳೆ ಮತ್ತು ಆಕೆಯ ಪತಿ ಸಜೀವ ದಹನಗೊಂಡ ದಾರುಣ ಘಟನೆ ಕಣ್ಣೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆ ಬಳಿ ಸಂಭವಿಸಿದೆ. ಮೃತ ದಂಪತಿಯನ್ನು ಕುಟ್ಟಿಯತ್ತೂರು ಕರಂಬುವಿನ ಪ್ರಜಿತ್(32) ಮತ್ತು ಅವರ ಪತ್ನಿ ರೀಶಾ (26) ಎಂದು ಗುರುತಿಸಲಾಗಿದೆ. ಇಬ್ಬರೂ ಕುಟ್ಟಿಯತ್ತೂರಿನಿಂದ ಜಿಲ್ಲಾ ಆಸ್ಪತ್ರೆಗೆ ತೆರಳುತ್ತಿದ್ದಾಗ … Continued

ವಿಶ್ವದ ಟಾಪ್‌ 15 ಶ್ರೀಮಂತರ ಪಟ್ಟಿಯಿಂದಲೂ ಹೊರಬಿದ್ದ ಗೌತಮ್‌ ಅದಾನಿ…! ಈಗ ಮುಕೇಶ ಅಂಬಾನಿ ಏಷ್ಯಾದ ನಂ.1 ಶ್ರೀಮಂತ

ನವದೆಹಲಿ : ಕಳೆದ ಕೆಲ ದಿನಗಳಿಂದ ಅದಾನಿ ಗ್ರೂಪ್‌ ಷೇರುಗಳು ಭಾರೀ ಕುಸಿತ ಕಾಣುತ್ತಿವೆ. ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಕ್ಯಾಪ್ ಸುಮಾರು $ 100 ಬಿಲಿಯನ್‌ನಷ್ಟು ಕುಸಿದಿದೆ. ಕಳೆದ ವಾರ ಅಮೆರಿಕ (US) ಮೂಲದ ಶಾರ್ಟ್‌ ಸೆಲ್ಲರ್‌ ಸಂಸ್ಥೆ ‘ಹಿಂಡೆನ್‌ಬರ್ಗ್ ರಿಸರ್ಚ್‌’ನ ವರದಿಯು ಅದಾನಿ ಗ್ರೂಪ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಖಾತೆ ವಂಚನೆಯಲ್ಲಿ ತೊಡಗಿಸಿಕೊಂಡಿದೆ … Continued

ಅದಾನಿ ಗ್ರೂಪ್‌ಗೆ ಸಾಲ : ಭಾರತೀಯ ಬ್ಯಾಂಕ್‌ಗಳಿಂದ ಮಾಹಿತಿ ಕೇಳಿದ ಆರ್‌ಬಿಐ

ನವದೆಹಲಿ: ಅಮೆರಿಕದ ಹಿಂಡಬ್‌ಬರ್ಗ್ ವರದಿಯ ಬಳಿಕ ಅದಾನಿ ಗ್ರೂಪ್ ಕಂಪನಿಯ ಷೇರುಗಳು ನಿರಂತರವಾಗಿ ಕುಸಿತ ಕಾಣುತ್ತಿದೆ. ಹಾಗೆಯೇ ಸಂಸ್ಥೆಯು ಬುಧವಾರ ತನ್ನ 20,000 ಕೋಟಿ ರೂಪಾಯಿಗಳ ಎಫ್‌ಪಿಒ ಹಿಂಪಡೆಯುವ ನಿರ್ಧಾರವನ್ನು ಕೂಡಾ ಘೋಷಣೆ ಮಾಡಿದೆ. ಇದೆಲ್ಲದರ ನಡುವೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಅದಾನಿ ಗ್ರೂಪ್‌ಗೆ ಯಾವೆಲ್ಲಾ ಬ್ಯಾಂಕ್‌ಗಳು ಸಾಲ ನೀಡಿವೆ ಹಾಗೂ ಎಷ್ಟು ಪ್ರಮಾಣದ … Continued

ಸಿ.ಡಿ. ಪ್ರಕರಣ : ಸಿಬಿಐ ತನಿಖೆ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಚರ್ಚೆ- ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು : ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ ಜಾರಕಿಹೊಳಿ ನನಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಬುಧವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿ.ಡಿ. ಪ್ರಕರಣವನ್ನು ಸಿಬಿಐಗೆ ವಹಿಸುವ ವಿಷಯದ ಬಗ್ಗೆ ರಮೇಶ ಜಾರಕಿಹೊಳಿ ನನಗೆ ಮಾಹಿತಿ … Continued