ಪಾಕಿಸ್ತಾನದಲ್ಲಿ ಈಗ ಔಷಧ ಕೊರತೆಗಳು ಉಲ್ಬಣ :.’ದಿವಾಳಿ’ ಪಾಕ್‌ ಆಸ್ಪತ್ರೆಗಳಲ್ಲಿ ಇನ್ಸುಲಿನ್, ಡಿಸ್ಪ್ರಿನ್, ಇತರ ಔಷಧಿಗಳು ಖಾಲಿ ಖಾಲಿ…!

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟು ಆರೋಗ್ಯ ವ್ಯವಸ್ಥೆಯ ಮೇಲೆಯೂ ಕೆಟ್ಟ ಪರಿಣಾಮ ಬೀರಿದೆ, ಅಲ್ಲಿ ರೋಗಿಗಳು ಅಗತ್ಯ ಔಷಧಿಗಳಿಗಾಗಿ ಹೆಣಗಾಡುತ್ತಿದ್ದಾರೆ. ದೇಶದಲ್ಲಿ ಫಾರೆಕ್ಸ್ ಮೀಸಲು ಕೊರತೆಯು ಅಗತ್ಯದ ಔಷಧಿಗಳನ್ನು ಅಥವಾ ದೇಶೀಯ ಉತ್ಪಾದನೆಯಲ್ಲಿ ಬಳಸುವ ಸಕ್ರಿಯ ಔಷಧೀಯ ಪದಾರ್ಥಗಳನ್ನು (API) ಆಮದು ಮಾಡಿಕೊಳ್ಳುವ ಪಾಕಿಸ್ತಾನದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ. ಪರಿಣಾಮವಾಗಿ, ಔಷಧಿಗಳು ಮತ್ತು … Continued

ಆಶಾ ಕಾರ್ಯಕರ್ತರಿಗೆ ವಿದೇಶಿ ಹಣ ಹಂಚಿದ ಶಾಸಕ ಜಮೀರ್: ಚರ್ಚೆಗೆ ಗ್ರಾಸ

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ. ಇದೀಗ ಬೆಂಗಳೂರಿ ಗೌರಿಪಾಳ್ಯದ ಪೋಸ್ಟ್ ಆಫೀಸ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಶಾ ಕಾರ್ಯಕರ್ತರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ವಿದೇಶಿ ನೋಟುಗಳನ್ನ ಹಂಚಿದ್ದಾರೆ ಎಂಬ ವಿಷಯ ಭಾರೀ ಸುದ್ದಿಯಾಗಿದೆ. ಪಾದರಾಯನಪುರದ ವಾರ್ಡ್ 135, ಜೆಜೆಆರ್ ನಗರದ ವಾರ್ಡ್ 136 ಹಾಗೂ … Continued

ಡಿಕ್ಕಿ ಹೊಡೆದ ನಂತರ ಕೆಳಗೆ ಸಿಲುಕಿದ ಸ್ಕೂಟರ್‌ ಅನ್ನು 2 ಕಿಮೀಗೂ ದೂರ ಎಳೆದೊಯ್ದ ಡಂಪರ್ ಟ್ರಕ್ : ಬಾಲಕ ಸೇರಿ ಇಬ್ಬರು ಸಾವು- ರಸ್ತೆಗೆ ಕಲ್ಲು ಹಾಕಿ ಲಾರಿ ತಡೆದ ಸ್ಥಳೀಯರು..!

ಮತ್ತೊಂದು ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದಲ್ಲಿ, ಉತ್ತರ ಪ್ರದೇಶದ ಮಹೋಬಾದಲ್ಲಿ ಟ್ರಕ್ ಅಡಿ ಸಿಲುಕಿದ ಆರು ವರ್ಷದ ಮಗುವನ್ನು ಬೈಕ್‌ ಸಮೇತ ಟ್ರಕ್‌ ಎರಡು ಕಿಲೋಮೀಟರ್‌ಗೂ ಹೆಚ್ಚು ದೂರ ಟ್ರಕ್‌ ಎಳೆದೊಯ್ದ ನಂತರ ಬಾಲಕ ಮೃತಪಟ್ಟಿದ್ದಾನೆ. ಈ ದುರ್ಘಟನೆಯಲ್ಲಿ ಸಾತ್ವಿಕ್ ಹಾಗೂ ಆತನ ಅಜ್ಜ ಇಬ್ಬರು ಮೃತಪಟ್ಟಿದ್ದಾರೆ. ಉದಿತ್ ನಾರಾಯಣ ಚಾನ್ಸೋರಿಯಾ (67) ಮತ್ತು ಅವರ … Continued

ಸಫಾರಿ ಜೀಪ್‌ ಮೇಲೆ ದಾಳಿ ಮಾಡಿದ ಘೇಂಡಾಮೃಗಗಳು…ತಗ್ಗಿಗೆ ಬಿದ್ದ ಜೀಪ್, ಏಳು ಮಂದಿಗೆ ಗಾಯ : ಮೈ ಜುಂ ಎನ್ನುವ ದೃಶ್ಯ ವೀಡಿಯೊದಲ್ಲಿ ಸೆರೆ

ಪಶ್ಚಿಮ ಬಂಗಾಳದ ಜಲ್ದಪಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಘೇಂಡಾಮೃಗಗಳು ಸಫಾರಿ ವಾಹನದ ಮೇಲೆ ದಾಳಿ ಮಾಡಲು ಬರುತ್ತಿರುವ ಹಾಗೂ ವಾಹನದಲ್ಲಿದ್ದವರು ಪ್ರಾಣಾಪಾಯದ ಭಯದಿಂದ ವಾಹನವನ್ನು ರಿವರ್ಸ್‌ನ್ಲಿ ಓಡಿಸುವಾಗ ವಾಹನ ಪಲ್ಟಿಯಾಗುವ ಭಯಾನಕ ದೃಶ್ಯಾವಳಿ ವೀಡಿಯೊದಲ್ಲಿ ಸೆರೆಯಾಗಿದೆ. ವನ್ಯಜೀವಿ ಸಫಾರಿ ವೇಳೆ ಈ ಘಟನೆ ನಡೆದಿದ್ದು, ಪ್ರವಾಸಿಗರು ಘೇಂಡಾಮೃಗಗಳ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಿರುವಾಗ ಅದು ದಾಳಿ ಮಾಡಲು ಮುಂದಾಗಿದೆ. … Continued

ಕಾಶ್ಮೀರದಲ್ಲಿ ಟಾರ್ಗೆಟೆಡ್‌ ಹತ್ಯೆ: ಪುಲ್ವಾಮಾದಲ್ಲಿ ಹಿಂದೂ ವ್ಯಕ್ತಿಯನ್ನು ಕೊಂದ ಭಯೋತ್ಪಾದಕರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಟಾರ್ಗೆಟ್ಟೆಡ್‌ ದಾಳಿಯಲ್ಲಿ ಹಿಂದೂ ಸಮುದಾಯದ ನಾಗರಿಕರೊಬ್ಬರನ್ನು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಮೃತಪಟ್ಟವರನ್ನು ಅಚನ್‌ನ ಕಾಶ್ಮೀರಿ ಹಿಂದೂ ನಿವಾಸಿ ಸಂಜಯ್ ಶರ್ಮಾ ಎಂದು ಗುರುತಿಸಲಾಗಿದೆ, ಅವರು ಸ್ಥಳೀಯ ಮಾರುಕಟ್ಟೆಗೆ ಹೋಗುತ್ತಿದ್ದಾಗ ಭಯೋತ್ಪಾದಕರು ಗುಂಡು ಹಾರಿಸಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, … Continued

ಎಂಥ ಲೋಕವಯ್ಯಾ..: ಬದುಕಿದ್ದಾಗ ಎಷ್ಟೇ ಪ್ರಯತ್ನಿಸಿದ್ರೂ ವರ್ಗಾವಣೆ ಆಗಲಿಲ್ಲ, ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ 66 ದಿನಗಳ ನಂತರ ವರ್ಗಾವಣೆಗೆ ಆದೇಶ…!

ಶಿವಪುರಿ: ಮಧ್ಯಪ್ರದೇಶ ಆರೋಗ್ಯ ಇಲಾಖೆಯ ವಿಚಿತ್ರ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಶಿವಪುರಿಯಲ್ಲಿ ಮಹಿಳಾ ನರ್ಸ್‌ ಒಬ್ಬರು ಮೃತಪಟ್ಟ 66 ದಿನಗಳ ಬಳಿಕ ಆರೋಗ್ಯ ಇಲಾಖೆಯು ನರ್ಸ್ ಅನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ….! ಬದುಕಿರುವಾಗ ಈ ಮಹಿಳಾ ಶುಶ್ರೂಷಕಿ ತನ್ನನ್ನು ವರ್ಗಾವಣೆ ಮಾಡುವಂತೆ ಇಲಾಖೆಯ ಹಲವು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಅರ್ಜಿ ಸಲ್ಲಿಸಿದ್ದರು. ಆದರೆ … Continued

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ: ಗೋದ್ರೇಜ್ ಮನವಿ ತಿರಸ್ಕಾರ, ಕೊನೆಯ ಅಡೆತಡೆ ತೆರವುಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಯಲ್ಲಿನ ಅಂತಿಮ ಅಡೆತಡೆಯನ್ನು ಸುಪ್ರೀಂ ಕೋರ್ಟ್‌ ಮುಕ್ತ ಮಾಡಿದೆ. ಮಹಾರಾಷ್ಟ್ರ ಸರ್ಕಾರಕ್ಕೆ 9.69 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡಿದ ಬಾಂಬೆ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಗೋದ್ರೇಜ್ ಮತ್ತು ಬಾಯ್ಸ್ ಮ್ಯಾನುಫ್ಯಾಕ್ಚರಿಂಗ್ ಕಂ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸುವುದರೊಂದಿಗೆ ಇದು ಕೊನೆಗೊಂಡಿದೆ. ಸಿಜೆಐ ಡಿ.ವೈ. ಚಂದ್ರಚೂಡ, … Continued

ಈ ವ್ಯಕ್ತಿಯೊಂದಿಗೆ ಕೊಕ್ಕರೆಯ ಸ್ನೇಹಕ್ಕೆ ಸರಿಸಾಟಿಯೇ ಇಲ್ಲ…ನೀನೆಲ್ಲೋ ನಾನೂ ಅಲ್ಲೇ ಅನ್ನುತ್ತದೆ ಈ ಪಕ್ಷಿ | ವೀಕ್ಷಿಸಿ

ಸ್ನೇಹ ಎಂಬುದು ಕೇವಲ ಮಾನವನಿಗೆ ಮಾತ್ರ ಸೀಮಿತವಾಗಿಲ್ಲ, ಇದು ಇತರ ಪ್ರಾಣಿಗಳಲ್ಲಿಯೂ ಇದು ಕಂಡುಬರುತ್ತದೆ. ಅವುಗಳು ಸ್ಬೇಹಕ್ಕೆ ಬಹಳ ಮಹತ್ವ ಕೊಡುತ್ತವೆ. ಇದು ಜಗತ್ತಿನ ಎಲ್ಲ ಜೀವಿಗಳಿಗೂ ಬೆಲೆ ಕಟ್ಟಲಾಗದ ನಿಧಿ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಮಧುರ ಬಾಂಧವ್ಯವನ್ನು ಸಾರುವ ವೀಡಿಯೊವೊಂದು ವೈರಲ್‌ ಆಗಿದೆ. ಇದರಲ್ಲಿ ಕೊಕ್ಕರೆ ಮತ್ತು ವ್ಯಕ್ತಿಯೊಬ್ಬರ ನಡುವಿನ ಮಧುರ ಬಾಂಧವ್ಯವನ್ನು ಕಾಣಬಹುದಾಗಿದೆ. … Continued

ಭಟ್ಕಳ: ಹಾಡುವಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ, ಇಬ್ಬರು ವಶಕ್ಕೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಾಲೂಕಿನ ಹಾಡುವಳ್ಳಿಯಲ್ಲಿ ಎಂಬಲ್ಲಿ ಕುಟುಂಬದ ನಾಲ್ವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಕೊಲೆಯಾದ ಶಂಭು ಭಟ್ಟ ಅವರ ಹಿರಿಯ ಸೊಸೆ ವಿದ್ಯಾ ಶ್ರೀಧರ ಭಟ್ಟ ಹಾಗೂ ಆಕೆಯ ತಂದೆ ಶ್ರೀಧರ ಜನಾರ್ಧನ ಭಟ್ಟ ಎಂಬವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ. ಶುಕ್ರವಾರ ಶಂಭು ಹೆಗಡೆ (65), … Continued

ಬೆಂಗಳೂರಿನ ವಂದೇ ಭಾರತ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟ, ಕಿಟಕಿಗೆ ಹಾನಿ

ಬೆಂಗಳೂರು: ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಕೆಲವರು ಕಲ್ಲು ತೂರಾಟ ನಡೆಸಿದ ಪರಿಣಾಮ ಗಾಜುಗಳಿಗೆ ಹಾನಿಯಾಗಿದೆ ಎಂದು ನೈಋತ್ಯ ರೈಲ್ವೆ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ. ರೈಲು ಮೈಸೂರಿನಿಂದ ತಮಿಳುನಾಡಿನ ರಾಜಧಾನಿ ಚೆನ್ನೈಗೆ ತೆರಳುತ್ತಿತ್ತು. ಯಾರಿಗೂ ಗಾಯಗಳಾಗಿಲ್ಲ, ಪೊಲೀಸ್ ಪ್ರಕರಣ ದಾಖಲಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ. ರೈಲು ಸಂಖ್ಯೆ 20608 ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ … Continued