ಮೈಸೂರಿನ ಮೈಲಾರಿ ಹೋಟೆಲ್​​ನಲ್ಲಿ ದೋಸೆ ಮಾಡಿದ ಪ್ರಿಯಾಂಕಾ ಗಾಂಧಿ; ನಂತ್ರ ಕಾಂಗ್ರೆಸ್​ ನಾಯಕರೊಂದಿಗೆ ಉಪಹಾರ ಸೇವನೆ | ವೀಕ್ಷಿಸಿ

posted in: ರಾಜ್ಯ | 0

ಮೈಸೂರು: ಮೈಸೂರು ನಗರದ 80 ವರ್ಷ ಹಳೆಯ ಮೈಲಾರಿ ದೋಸೆ ಹೋಟೆಲ್‌ಗೆ ಭೇಟಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು (Priyanka Gandhi) ತಾವೇ ಕಾವಲಿ ಮೇಲೆ ದೋಸೆ ಹೊಯ್ದಿದ್ದಾರೆ(makes dosa). ದೋಸೆ ಮಾಡಿದ ನಂತರ ತಾವೂ ಸವಿದು, ಕಾಂಗ್ರೆಸ್​ ನಾಯಕರಿಗೂ ನೀಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಮೈಸೂರಿನಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಇಂದು, ಬುಧವಾರ (ಏಪ್ರಿಲ್‌ 26) ಮೈಸೂರಿನ ಅಗ್ರಹಾರದಲ್ಲಿರುವ ಮೈಲಾರಿ ಹೋಟೆಲ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿ ದೋಸೆ ಮಾಡಿದ್ದಾರೆ. ನಂತರ ದೋಸೆ ಹಾಗೂ ಇಡ್ಲಿ ತಿಂದು, ಅಲ್ಲಿದ್ದ ಕಾಂಗ್ರೆಸ್​​ ನಾಯಕರಿಗೂ ತಾವು ಮಾಡಿದ ದೋಸೆ ನೀಡಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ​, ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲ ಹಾಗೂ ಇತರ ಕಾಂಗ್ರೆಸ್​ ನಾಯರಕು ಇದ್ದರು. ನಂತರ ಹೋಟೆಲ್​ನಿಂದ ಹೊರಡುವ ಮುನ್ನ ಹೋಟೆಲ್​ ಮಾಲೀಕರ ಕುಟುಂಬದವರ ಜೊತೆ ಮಾತನಾಡಿದ್ದಾರೆ. ಹೋಟೆಲ್​ನಲ್ಲಿದ್ದ ಗ್ರಾಹಕರು ಹಾಗೂ ಮಕ್ಕಳ ಜೊತೆಗೂ ಪ್ರಿಯಾಂಕ ಮಾತನಾಡಿದರು. ಪ್ರಿಯಾಂಕಾ ಗಾಂಧಿ ಅವರು ಮೈಲಾರಿ ದೋಸೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಹೋಟೆಲ್‌ ಮಾಲೀಕರ ದೋಸೆ ಮಾಡುವ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ನಂತರ ತಾವೇ ದೋಸೆ ಹಾಕಿಬಿಟ್ಟರು. ಅವರೇ ಒಟ್ಟು ನಾಲ್ಕು ದೋಸೆ ಮಾಡಿದ್ದಾರೆ. ನಂತರ ಮೈಲಾರಿ ಹೋಟೆಲ್ ಮಾಲೀಕರಾದ ಶೃತಿ ಲೋಕೇಶ್ ಹಾಗೂ ಪುತ್ರಿ ಪಾರ್ವತಿ ಅವರುಗಳ ಜೊತೆ ಪ್ರಿಯಾಂಕಾ ಫೋಟೋ ತೆಗೆಸಿಕೊಂಡಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರು ಇಲ್ಲಿಗೆ ಬಂದಿದ್ದು ನಮಗೆ ಖುಷಿ ತಂದಿದೆ. ಪ್ರಿಯಾಂಕಾ ಗಾಂಧಿ ಅವರು ನಮ್ಮನ್ನೇ ಅತಿಥಿಯಂತೆ ನೋಡಿಕೊಂಡರು ಎಂದು ಮೈಲಾರಿ ಹೋಟೆಲ್ ಮಾಲೀಕರಾದ ಶೃತಿ ಲೋಕೇಶ ಸಂತಸ ವ್ಯಕ್ತಪಡಿಸಿದ್ದಾರೆ.

ಹೋಟೆಲ್​ನಲ್ಲಿ ಉಪಹಾರ ಸವಿದ ಬಳಿಕ ಟ್ವೀಟ್​ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರು, “ಮೈಸೂರಿನ 80 ವರ್ಷ ಹಳೆಯ ಮೈಲಾರಿ ಹೋಟೆಲ್‌ನಲ್ಲಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಇಡ್ಲಿ ಹಾಗೂ ದೋಸೆ ಸವಿಯುವುದರೊಂದಿಗೆ ಇಂದಿನ ಪ್ರಾರಂಭಿಸಿದೆನು. ಇಲ್ಲಿನ ಆಹಾರವು ನಿಮ್ಮ ಹೊಟ್ಟೆಯನ್ನು ಮಾತ್ರ ತುಂಬಿಸಿಲ್ಲ, ಅದು ನಿಮ್ಮ ಹೃದಯವನ್ನೂ ತುಂಬಿಸುತ್ತದೆ” ಎಂದು ಬರೆದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement