“ತಾಯಿ ಎಲ್ಲವನ್ನೂ ಕೊಡುತ್ತಾಳೆ”: ಮುಖ್ಯಮಂತ್ರಿ ಹುದ್ದೆಯ ಸಂದಿಗ್ಧತೆಯ ನಡುವೆ ಡಿಕೆ ಶಿವಕುಮಾರ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ನಂತರ ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಸಿದ್ದರಾಮಯ್ಯ ಅವರೊಂದಿಗಿನ ಜಿದ್ದಾಜಿದ್ದಿನ ಪೈಪೋಟಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ ಹೇಳಿದ್ದಾರೆ. ಆದರೆ ಅವರು “ಬೆನ್ನಿಗೆ ಚೂರಿ ಹಾಕುವ ಅಥವಾ ಬ್ಲ್ಯಾಕ್‌ಮೇಲ್” ತಂತ್ರವನ್ನು ಆಶ್ರಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಿವಕುಮಾರ ಅವರು ಹೊಟ್ಟೆಯ ಸೋಂಕಿನ ಕಾರಣದಿಂದ ಕೊನೆಯ ಕ್ಷಣದಲ್ಲಿ ನಿನ್ನೆ … Continued

ಅದಾನಿ ಕಂಪೆನಿಗಳ ತನಿಖೆ 2016ರಿಂದ ನಡೆದಿಲ್ಲ : ವರದಿ ಸಲ್ಲಿಕೆಗೆ 6 ತಿಂಗಳು ಬೇಕು ಎಂದು ಸೆಬಿಯಿಂದ ಸುಪ್ರೀಂ ಕೋರ್ಟಿಗೆ ಮನವಿ

ನವದೆಹಲಿ: 2016ರಿಂದ ಅದಾನಿ ಸಮೂಹದ ಯಾವುದೇ ಕಂಪೆನಿಗಳನ್ನು ತನಿಖೆ ಮಾಡಿಲ್ಲ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸೋಮವಾರ ಅಫಿಡವಿಟ್ ಮೂಲಕ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. [ ಸಂಘಟಿತ ಸಂಸ್ಥೆಗಳ ವ್ಯವಹಾರಗಳ ತನಿಖೆ ಅತ್ಯಂತ ಸಂಕೀರ್ಣವಾಗಿರುವುದರಿಂದ ತನಿಖೆಗೆ ಅಧಿಕ ಸಮಯ ಅಗತ್ಯವಿದೆ ಎಂದು ಸೆಬಿ ಮನವಿ ಮಾಡಿದೆ. ಅದಾನಿ ಸಮೂಹದ ವಿರುದ್ಧ ನಡೆಸುತ್ತಿರುವ ತನಿಖೆಯನ್ನು … Continued

ಸೇನಾ ಕಾಯಿದೆ, ಅಧಿಕೃತ ರಹಸ್ಯ ಕಾಯಿದೆಯಡಿ ಇಮ್ರಾನ್ ಖಾನ್ ವಿರುದ್ಧ ಕ್ರಮ ಕೈಗೊಳ್ಳುವ ಸುಳಿವು ನೀಡಿದ ಪಾಕ್ ಸೇನೆ

ಇಸ್ಲಾಮಾಬಾದ್‌ : ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ನಂತರ ಪಾಕಿಸ್ತಾನದಲ್ಲಿ ಹಲವಾರು ದಿನಗಳ ಹಿಂಸಾಚಾರ ಮತ್ತು ಅವ್ಯವಸ್ಥೆಯ ಬಳಿಕ, ಪಾಕ್ ಸೇನೆಯು ಎಲ್ಲಾ ಅಂಶಗಳ ಬಗ್ಗೆ ಸಹನೆಯನ್ನು ತೋರಿಸಲು ನಿರ್ಧರಿಸಿದೆ. ಹಿಂಸಾಚಾರದ ಸಂದರ್ಭದಲ್ಲಿ, ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 9 ರಂದು ಬಂಧಿಸಲ್ಪಟ್ಟಿದ್ದ ಇಮ್ರಾನ್ ಖಾನ್ ನೇತೃತ್ವದ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ … Continued

ಕರ್ನಾಟಕದ ಸೋಲಿನ ನಂತರ ಚುನಾವಣೆ ಸನಿಹದಲ್ಲಿರುವ 4 ರಾಜ್ಯಗಳಲ್ಲಿ ಕಾರ್ಯತಂತ್ರ ಬದಲಿಸಲಿರುವ ಬಿಜೆಪಿ

ನವದೆಹಲಿ : ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶವು ಈ ವರ್ಷಾಂತ್ಯದಲ್ಲಿ ನಡೆಯಲಿರುವ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಪ್ರಚಾರದ ಕಾರ್ಯತಂತ್ರ ವನ್ನು ಬದಲಾಯಿಸುವಂತೆ ಮಾಡಿದೆ ಎಂದು ವರದಿಯೊಂದು ಹೇಳಿದೆ. ನಾಲ್ಕು ಪ್ರಮುಖ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಗಳು ವರ್ಷಾಂತ್ಯದ ಸಮಯದಲ್ಲಿ ನಡೆಯಲಿವೆ. ಇವುಗಳಲ್ಲಿ, ಮಧ್ಯಪ್ರದೇಶದಲ್ಲಿ ಮಾತ್ರ ಬಿಜೆಪಿ … Continued

ಇಂದು ಬೆಳಗ್ಗೆ ದೆಹಲಿಗೆ ಹೋಗುತ್ತೇನೆ, ಸೋನಿಯಾ ಭೇಟಿಯೇ ಮೊದಲ ಆದ್ಯತೆ : ಡಿ.ಕೆ. ಶಿವಕುಮಾರ

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಈಗ ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಆಯ್ಕೆ ಸವಾಲಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಹಾಗೂ ಅವರ ಆಪ್ತ ಶಾಸಕರು ದೆಹಲಿಗೆ ತಲುಪಿದ್ದಾರೆ. ಈ ನಡುವೆ ಡಿ.ಕೆ. ಶಿವಕುಮಾರ ಅವರು ಮಂಗಳವಾರ (ಮೇ 16) ಬೆಳಿಗ್ಗೆ ದೆಹಲಿಗೆ … Continued