ಅಧಿಕಾರ ಹಂಚಿಕೆ ಸೂತ್ರಕ್ಕೆ ಬಹುತೇಕ ಒಪ್ಪಿಕೊಂಡ ಡಿಕೆ ಶಿವಕುಮಾರ…ಆದ್ರೂ ಮುಂದುವರಿದ ಸಿಎಂ ಆಯ್ಕೆ ಕಗ್ಗಂಟು ಯಾಕೆಂದರೆ…

ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿಯ ಯಾರೆಂದು ನಿರ್ಧರಿಸಲು ಚರ್ಚೆಗಳು ಮತ್ತು ಸರಣಿ ಸಭೆಗಳು ಸಭೆಗಳು ಮುಂದುವರೆದೆ. ಈ ಮಧ್ಯೆ ಕಾಂಗ್ರೆಸ್‌ ಹೈಕಮಾಂಡ್‌ ಪ್ರಸ್ತಾಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಹಿರಿಯ ನಾಯಕ ಸಿದ್ದರಾಮಯ್ಯ ಅವರ ಮಧ್ಯೆ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಶಿವಕುಮಾರ ಒಪ್ಪಿಕೊಂಡಿದ್ದರೂ ಐದು ವರ್ಷಗಳ ಅಧಿಕಾರಾವಧಿಯ ಮೊದಲ ಅವಧಿಯಲ್ಲೇ ತನಗೆ ಮುಖ್ಯಮಂತ್ರಿ ನೀಡಬೇಕು … Continued

ಈ ಖಾರಿಫ್ ಋತುವಿನಲ್ಲಿ ರಸಗೊಬ್ಬರಗಳ ಸಬ್ಸಿಡಿಗಾಗಿ 1.08 ಲಕ್ಷ ಕೋಟಿ ರೂ.ಗಳಿಗೆ ಅನುಮೋದನೆ ನೀಡಿದ ಕೇಂದ್ರ ಸಂಪುಟ

ನವದೆಹಲಿ: ರೈತರಿಗೆ ಕೈಗೆಟುಕುವ ಮತ್ತು ಸಮಂಜಸವಾದ ಬೆಲೆಯಲ್ಲಿ ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು 2023-24 ಖಾರಿಫ್ ಋತುವಿಗೆ ರಸಗೊಬ್ಬರ ಸಬ್ಸಿಡಿ ಹಣಕ್ಕಾಗಿ 1.08 ಲಕ್ಷ ಕೋಟಿ ರೂಪಾಯಿಗಳನ್ನು ತೆಗೆದಿರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ಖಾರಿಫ್ ಹಂಗಾಮಿಗೆ ಯೂರಿಯಾಕ್ಕೆ 70,000 ಕೋಟಿ ರೂಪಾಯಿ ಮತ್ತು ಡಿಎಪಿ ಮತ್ತು ಇತರ ರಸಗೊಬ್ಬರಗಳಿಗೆ 38,000 ಕೋಟಿ … Continued

ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ಹಾಜರಾತಿ ಕೊರತೆಯಿದ್ದವರಿಗೂ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಅವಕಾಶ

ಬೆಂಗಳೂರು: ತರಗತಿ ಅವಧಿಯಲ್ಲಿ ಹಾಜರಾತಿ ಕೊರತೆಯಿಂದ 2023ರ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗದ ಕಲಾ ಮತ್ತು ವಾಣಿಜ್ಯ ವಿಭಾಗದ 12,385 ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಖಾಸಗಿ ಅಭ್ಯರ್ಥಿಗಳಾಗಿ ನೋಂದಣಿ ಮಾಡಿಕೊಳ್ಳಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅವಕಾಶ ಕಲ್ಪಿಸಿದೆ. ದ್ವಿತೀಯ ಪಿಯುಸಿಗೆ ತರಗತಿ ವಿದ್ಯಾರ್ಥಿಗಳಾಗಿ ನೋಂದಣಿ ಮಾಡಿಕೊಂಡಿದ್ದ ಈ … Continued

ವೀಡಿಯೊ…: ಕಟೀಲು ದೇವಸ್ಥಾನದ ಮುಂಭಾಗದಲ್ಲಿ ಹೊತ್ತಿ ಉರಿದ ಖಾಸಗಿ ಬಸ್‌

ಮಂಗಳೂರು : ಖಾಸಗಿ ಬಸ್ಸಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದೇವಸ್ಥಾನದ ಮುಂಭಾಗದಲ್ಲಿ ಇಂದು, ಬುಧವಾರ ಮಧ್ಯಾಹ್ನ ಸಂಭವಿಸಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಯಾಣಿಕರು ಹಾಗೂ ಬಸ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಇಂದು ಮಧ್ಯಾಹ್ನ 2:30 ರ ಸುಮಾರಿಗೆ ಗೋಲ್ಡನ್ ಟ್ರಾವೆಲ್ಸ್ ಎಂಬ ಹೆಸರಿನ ಬಸ್ಸಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ … Continued

ಅದಾನಿ ಕುರಿತ ಹಿಂಡೆನ್‌ಬರ್ಗ್‌ ವರದಿ: ಆಗಸ್ಟ್ 14ರೊಳಗೆ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸಲು ಸೆಬಿಗೆ ಸುಪ್ರೀಂ ಕೋರ್ಟ್‌ ಸೂಚನೆ

ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಿಂಡೆನ್‌ ಬರ್ಗ್‌ ವರದಿಯ ಸುತ್ತಲಿನ ವಿವಾದ ಮತ್ತು ಆ ಸಂಸ್ಥೆಯ ವಿರುದ್ಧದ ಆರೋಪಗಳ ಕುರಿತು ನಡೆಸಿರುವ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ)ಗೆ ಸುಪ್ರೀಂ ಕೋರ್ಟ್‌ ಆಗಸ್ಟ್ 14ರ ವರೆಗೆ ಕಾಲಾವಕಾಶ ನೀಡಿದೆ. ಅದಾನಿ ಸಮೂಹದ ವ್ಯವಹಾರಗಳ ತನಿಖೆ ಹೆಚ್ಚು ಸಂಕೀರ್ಣಮಯವಾಗಿದ್ದು ತನಿಖೆ ಮಾಡಲು … Continued

ಹಿಂದೂಜಾ ಗ್ರೂಪ್‌ ಅಧ್ಯಕ್ಷ ಎಸ್‌.ಪಿ. ಹಿಂದೂಜಾ ನಿಧನ

ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಶ್ರೀಚಂದ್ ಪರಮಾನಂದ ಹಿಂದುಜಾ ಅವರು ಬುಧವಾರ ಲಂಡನ್‌ನಲ್ಲಿ 87 ನೇ ವಯಸ್ಸಿನಲ್ಲಿ ನಿಧನರಾದರು. ಕುಟುಂಬದ ವಕ್ತಾರರು ಈ ಸುದ್ದಿಯನ್ನು ತಿಳಿಸಿದ್ದಾರೆ. ಎಸ್‌.ಪಿ.ಹಿಂದುಜಾ ಅವರು ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದರು. ನಾಲ್ವರು ಹಿಂದೂಜಾ ಸಹೋದರರಲ್ಲಿ ಎಸ್‌.ಪಿ.ಹಿಂದುಜಾ ಅವರು ಹಿರಿಯರಾಗಿದ್ದರು. ಅವರು ಭಾರತೀಯ ಮೂಲದ ಬ್ರಿಟನ್‌ ಪ್ರಜೆಯಾಗಿದ್ದರು.ಗೋಪಿಚಂದ್, ಪ್ರಕಾಶ್, ಅಶೋಕ್ ಮತ್ತು ಇಡೀ ಹಿಂದೂಜಾ ಕುಟುಂಬವು … Continued

ಪ್ರೇಮ ವಿವಾಹವಾದವರಲ್ಲೇ ಹೆಚ್ಚಿನ ವಿಚ್ಛೇದನಗಳಾಗುತ್ತಿವೆ : ಸುಪ್ರೀಂ ಕೋರ್ಟ್

ನವದೆಹಲಿ: ಪ್ರೇಮ ವಿವಾಹವಾದವರಲ್ಲೇ ಹೆಚ್ಚಿನ ವಿಚ್ಛೇದನಗಳು ಉಂಟಾಗುತ್ತಿವೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಟೀಕಿಸಿದೆ. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂಜಯ ಕರೋಲ್ ಅವರ ಪೀಠವು ವೈವಾಹಿಕ ವಿವಾದದಿಂದ ಉದ್ಭವಿಸಿದ ವರ್ಗಾವಣೆ ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ ಪ್ರಕರಣದ ವಕೀಲರು ವಿವಾಹವು ಪ್ರೇಮ ವಿವಾಹವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ನ್ಯಾಯಮೂರ್ತಿ ಗವಾಯಿ ಅವರು ಪ್ರತಿಕ್ರಿಯಿಸಿ, ಹೆಚ್ಚಿನ … Continued

ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಅಸ್ಸಾಂ ಕಾಂಗ್ರೆಸ್‌ ಯುವ ಘಟಕದ ಉಚ್ಚಾಟಿತ ನಾಯಕಿಯೊಬ್ಬರ ಗೌರವಕ್ಕೆ ಧಕ್ಕೆ ತಂದ ಆರೋಪದಲ್ಲಿ ಕರ್ನಾಟಕ ಮೂಲದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ. ತನಗೆ ಮಾನಸಿಕ ಹಿಂಸೆ ನೀಡಿದ್ದಾರೆಂದು ಆರೋಪಿಸಿ ಅಸ್ಸಾಂ ಕಾಂಗ್ರೆಸ್‌ ಯುವ ಘಟಕದ … Continued

ಮುಖ್ಯಮಂತ್ರಿ ಆಯ್ಕೆ ಇನ್ನೂ ಅಂತಿಮವಾಗಿಲ್ಲ, ಚರ್ಚೆ ನಡೆಯುತ್ತಿದೆ: ಸುರ್ಜೇವಾಲಾ ಸ್ಪಷ್ಟನೆ

ನವದೆಹಲಿ : ಮುಖ್ಯಮಂತ್ರಿ ಹುದ್ದೆಗೆ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ಯಾವುದೇ ಊಹಾಪೋಹಗಳಿಗೆ ಕಿವಿಕೊಡಬೇಡಿ. ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನಿವಾಸದ ಬಳಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಾರು ಎಂಬದುರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರೇ ತೀರ್ಮಾನ ಮಾಡುತ್ತಾರೆ. ಅವರ ನೇತೃತ್ವದಲ್ಲಿಯೇ ಸಮಾಲೋಚನೆ ನಡೆಯುತ್ತಿದೆ. ಮುಖ್ಯಮಂತ್ರಿ ಆಯ್ಕೆ … Continued

ಕಾಂಗ್ರೆಸ್ಸಿನಿಂದ ಇಂದು ಸಂಜೆ ರಾಜ್ಯದ ನೂತನ ‘ಮುಖ್ಯಮಂತ್ರಿ’ ಹೆಸರು ಘೋಷಣೆ…?

ಬೆಂಗಳೂರು : ಇಂದು, ಬುಧವಾರ ಸಂಜೆ 6 ಗಂಟೆಗೆ ರಾಜ್ಯದ ನೂತನ ಮುಖ್ಯಮಂತ್ರಿ ಯಾರಾಗುತ್ತಾರೆಂದು ಕಾಂಗ್ರೆಸ್‌ ಹೈಕಮಾಂಡ್‌ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ನಿಚ್ಚಳವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಸಂಜೆ 6 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ನಾಳೆ ಕರ್ನಾಟಕದ ನೂತನ ಮುಖ್ಯಮಂತ್ರಿ … Continued