‘ದಿ ಕೇರಳ ಸ್ಟೋರಿ’ ಸಿನೆಮಾ ಪ್ರಭಾವ : ಮತಾಂತರಕ್ಕೆ ಒತ್ತಾಯಿಸಿದ ಪ್ರೇಮಿಯ ವಿರುದ್ಧವೇ ದೂರು ದಾಖಲಿಸಿ ಜೈಲಿಗಟ್ಟಿದ ಯುವತಿ..!

ಇಂದೋರ್‌ : ತನ್ನ ಗೆಳತಿಯ ಮೇಲೆ ಅತ್ಯಾಚಾರ ಎಸಗಿ ಮತಾಂತರಕ್ಕೆ ಒತ್ತಡ ಹೇರಿದ ಆರೋಪದ ಮೇಲೆ 23 ವರ್ಷದ ಯುವಕನನ್ನು ಇಂದೋರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ‘ದಿ ಕೇರಳ ಸ್ಟೋರಿ’ ವೀಕ್ಷಿಸಿದ ನಂತರ ಮಹಿಳೆ ಪುರುಷನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವಾಹದ ನೆಪದಲ್ಲಿ ಪ್ರೀತಿಯ ಬಲೆಗೆ ಬಿದ್ದ ನಂತರ ಮತಾಂತರಕ್ಕೆ ಒತ್ತಡ ಹೇರಿದ … Continued

ನೂತನ ಸಂಸತ್ ಭವನ ಉದ್ಘಾಟನೆ ಬಹಿಷ್ಕರಿಸಲು ಟಿಎಂಸಿ, ಎಎಪಿ, ಸಿಪಿಐ ನಿರ್ಧಾರ

ನವದೆಹಲಿ: ಮೇ 28 ರಂದು ನಡೆಯಲಿರುವ ಹೊಸ ಸಂಸತ್ತಿನ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವ ನಿರ್ಧಾರವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಘೋಷಿಸಿದ ಕೆಲವೇ ಗಂಟೆಗಳ ನಂತರ, ಆಮ್ ಆದ್ಮಿ ಪಕ್ಷವೂ (ಎಎಪಿ) ಕಾರ್ಯಕ್ರಮಕ್ಕೆ ಹಾಜರಾಗಲು ಗೈರುಹಾಜರಾಗಲು ನಿರ್ಧರಿಸಿತು. ಎಎಪಿ ರಾಜ್ಯಸಭಾ ಸಂಸದ ಸಂಜಯ ಸಿಂಗ್ ಅವರು ಟ್ವಿಟರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿ ರಾಷ್ಟ್ರಪತಿಗಳನ್ನು … Continued

ಸಂಪುಟ ವಿಸ್ತರಣೆ : ಬುಧವಾರ ಸಿದ್ದರಾಮಯ್ಯ-ಶಿವಕುಮಾರ ದೆಹಲಿಗೆ..?

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಬುಧವಾರ ಸಂಜೆ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ ಎಂದು ವರದಿಯಾಗಿದೆ. ನಾಳೆ ಸಂಜೆ 6 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾತರ ಒಟ್ಟಾಗಿಯೇ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದು, ಹೈಕಮಾಂಡ್ ನಾಯಕರ ಜೊತೆ ಸಂಪುಟ … Continued

ಮೈಯಲ್ಲಿ ಹೊಕ್ಕ ‘ಭೂತʼ ಓಡಿಸಲು ಮಾಂತ್ರಿಕನಿಂದ ಬಾಲಕನಿಗೆ ಥಳಿತ : ಗಾಯಗಳಿಂದ ಬಾಲಕ ಸಾವು

ಮುಂಬೈ,: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ 14 ವರ್ಷದ ಅಸ್ವಸ್ಥ ಬಾಲಕನೊಬ್ಬನಿಗೆ ಮೈಯಲ್ಲಿ ಹೊಕ್ಕಿರುವ ಭೂತ ಬಿಡಿಸುವುದಾಗಿ ಹೇಳಿ ಮಾಂತ್ರಿಕರೊಬ್ಬರು ತೀವ್ರವಾಗಿ ಥಳಿಸಿದ ನಂತರ ಆತ ಸಾವಿಗೀಡಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಜಿಲ್ಲೆಯ ಕವಠೆ ಮಹಾಂಕಲ್‌ನಲ್ಲಿ ವಾಸವಿದ್ದ ಆರ್ಯನ್ ದೀಪಕ್ ಲಾಂಜೆ ಎಂಬ ಹದಹರೆಯದ ಬಾಲಕ ಮೇ 20 ರಂದು ಗಾಯಗೊಂಡು ಮೃತಪಟ್ಟಿದ್ದಾನೆ. ಆದರೆ ಮೂಢನಂಬಿಕೆ … Continued

ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ಜೋಕ್ ಆಗಿ ಪರಿವರ್ತಿಸಿದೆ : ದೆಹಲಿ ಸುಗ್ರೀವಾಜ್ಞೆ ವಿರುದ್ಧ ಎಎಪಿ, ಟಿಎಂಸಿ ವಾಗ್ದಾಳಿ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರವನ್ನು ಸ್ಥಾಪಿಸುವ ಕೇಂದ್ರ ಸುಗ್ರೀವಾಜ್ಞೆ ವಿರುದ್ಧದ ಹೋರಾಟಕ್ಕೆ ಬೆಂಬಲ ಕೋರಿದರು, ಇದು ಮೂಲಭೂತವಾಗಿ ದೆಹಲಿಯಲ್ಲಿ ಚುನಾಯಿತ ಸರ್ಕಾರಕ್ಕೆ ಅಧಿಕಾರಶಾಹಿಗಳ ಪೋಸ್ಟಿಂಗ್ ಮತ್ತು ವರ್ಗಾವಣೆಯ ನಿಯಂತ್ರಣವನ್ನು ನೀಡುವ ಸುಪ್ರೀಂ ಕೋರ್ಟ್ ಆದೇಶವನ್ನು ರದ್ದುಗೊಳಿಸುತ್ತದೆ. … Continued

ಹೊನ್ನಾವರ: ಬೃಹತ್‌ ಗ್ಯಾಸ್‌ ಟ್ಯಾಂಕರ್‌ ಪಲ್ಟಿ, ಸಂಚಾರ ವ್ಯತ್ಯಯ

ಹೊನ್ನಾವರ : ಗ್ಯಾಸ್ ತುಂಬಿದ ಟ್ಯಾಂಕರ್ ಒಂದು ಪಲ್ಟಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಶರಾವತಿ ಸರ್ಕಲ್ ಸಮೀಪ ನಡೆದಿದೆ. ಮಂಗಳೂರು ಕಡೆಯಿಂದ ಯಲ್ಲಾಪುರದ ಕಡೆ ಬರುತ್ತಿದ್ದ ಟ್ಯಾಂಕರ್, ಪಟ್ಟಣದ ಶರಾವತಿ ಸರ್ಕಲ್ ಬಳಿ ಬರುವಾಗ ಬೈಕ್‌ ತಪ್ಪಿಸಲು ಹೋಗಿ ಪಲ್ಟಿಯಾಗಿದೆ ಎನ್ನಲಾಗಿದೆ. ಘಟನೆ ಮಧ್ಯಾಹ್ನ 2ರ ಸುಮಾರಿಗೆ ನಡೆದಿದ್ದು, ಟ್ಯಾಂಕರ್ ಚಾಲಕನಿಗೆ … Continued

ಪರಾರಿಯಾಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಕರೆತಂದ ವಧು…!

ಬರೇಲಿ: ‘ಮದುವೆಯಿಂದ ತಪ್ಪಿಸಿಕೊಳ್ಳಲು ಓಡಿಹೋದ ವರ’ನನ್ನು ವಧು ಅಟ್ಟಿಸಿಕೊಂಡು ಹೋಗಿ ಹಿಡಿದು ಮದುವೆ ಮಂಟಪಕ್ಕೆ ಎಳೆದೊಯ್ದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಮದುಮಗಳ ಉಡುಪಿನಲ್ಲಿದ್ದ ಯುವತಿ ಮದುವೆಯಿಂದ ಓಡಿ ಹೋಗುತ್ತಿದ್ದ ತನ್ನ ವರನನ್ನು 20 ಕಿಲೋಮೀಟರ್ ದೂರದವರೆಗೆ ಹಿಂಬಾಲಿಸಿ ಆತನನ್ನು ಹಿಡಿದು ಮದುವೆ ಮಂಟಪಕ್ಕೆ ಎಳೆದು ತಂದಿದ್ದಾಳೆ. ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಪೊಲೀಸ್ … Continued

ಯುಪಿಎಸ್‌ಸಿ ಫಲಿತಾಂಶ ಪ್ರಕಟ; ರಾಜ್ಯದ 25 ಜನ ಉತ್ತೀರ್ಣ

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ 2022ನೇ ಸಾಲಿನ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಹೆಚ್‌ ಎಸ್‌ ಭಾವನಾ 55ನೇ ರ‍್ಯಾಂಕ್ ಪಡೆಯುವುದರೊಂದಿಗೆ ರಾಜ್ಯದ ಟಾಪರ್‌ ಆಗಿದ್ದಾರೆ. ಕರ್ನಾಟಕದಿಂದ ಈ ಬಾರಿ 20ಕ್ಕೂ ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ. ರಾಜ್ಯದಿಂದ ಆಯ್ಕೆಯಾದವರ ಹೆಸರು ಇಂತಿದೆ… ಎಸ್‌ ಭಾವನಾ-55 ಡಿ. ಸೂರಜ-197, ಎ.ಎಲ್. ಆಕಾಶ-210, ರವಿರಾಜ್ ಅವಸ್ತಿ-224, ಆರ್‌ ಚಲುವರಾಜ-238- ಕೆ.ಸೌರಭ … Continued

2022ರ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ : ಇಶಿತಾ ಕಿಶೋರ ಟಾಪರ್ | ಟಾಪ್‌-20 ಸ್ಥಾನ ಪಡೆದವರ ಪಟ್ಟಿ ಇಲ್ಲಿದೆ…

ನವದೆಹಲಿ : ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇಂದು, ಮಂಗಳವಾರ ನಾಗರಿಕ ಸೇವೆಗಳು 2022 ಪರೀಕ್ಷೆ ಫಳಿತಾಂಶವನ್ನು ಬಿಡುಗಡೆ ಮಾಡಿದೆ. ಈ ವರ್ಷ ಮೂರು ವಿಭಿನ್ನ ಹಂತಗಳಲ್ಲಿ ಸಂದರ್ಶನ ನಡೆಸಲಾಗಿದೆ. ಈ ವರ್ಷವೂ ಮಹಿಳೆಯರು ಪ್ರಾಬಲ್ಯ ಸಾಧಿಸಿದ್ದಾರೆ. ಇಶಿತಾ ಕಿಶೋರ್ ಅಖಿಲ ಭಾರತ ಮಟ್ಟದಲ್ಲಿ ಮೊದಲನೇ ರ್ಯಾಂಕ್‌ ಪಡೆದುಕೊಂಡಿದ್ದಾರೆ. ನಂತರದ ಸ್ಥಾನವನ್ನು ಗರಿಮಾ ಲೋಹಿಯಾ, … Continued

ಅಂಚೆ ಇಲಾಖೆಯಲ್ಲಿ 12828 ಹುದ್ದೆಗಳಿಗೆ ಅರ್ಜಿ ಆಹ್ವಾನ : 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು..

ಭಾರತೀಯ ಅಂಚೆ ಇಲಾಖೆ(Indian Post Office) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇಂಡಿಯಾ ಪೋಸ್ಟ್ ಅಧಿಕೃತ ಅಧಿಸೂಚನೆ ಮೇ 2023 ರ ಮೂಲಕ ಗ್ರಾಮೀಣ ಡಾಕ್ ಸೇವಕ (BPM/ABPM) ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತದಲ್ಲಿ ಒಟ್ಟು 12828 ಹುದ್ದೆಗಳು ಖಾಲಿ … Continued