ಸಿಎಂ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿಗಳು, ಕಾನೂನು ಸಲಹೆಗಾರರ ನೇಮಕ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ, ರಾಜಕೀಯ ಕಾರ್ಯದರ್ಶಿಗಳಾಗಿ ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜ ಹಾಗೂ ನಜೀರ್ ಅಹ್ಮದ್ ಅವರನ್ನು ನೇಮಿಸಲಾಗಿದೆ. ಹಾಗೂ ಕಾನೂನು ಸಲಹೆಗಾರರನ್ನಾಗಿ ಎ.ಎಸ್ ಪೊನ್ನಣ್ಣ ಅವರನ್ನು ನೇಮಕ ಮಾಡಲಾಗಿದೆ. ವಿಧಾನಪರಿಷತ್ ಸದಸ್ಯರಾದ ಕೆ.ಗೋವಿಂದರಾಜ್ ಮತ್ತು ನಜೀರ್ ಅಹ್ಮದ್ ಅವರನ್ನು ರಾಜ್ಯ ಸರ್ಕಾರವು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಗುರುವಾರ ಆದೇಶ ಹೊರಡಿಸಿದೆ. … Continued

ಸಿಎಂ ಏಕನಾಥ್ ಶಿಂಧೆ ಭೇಟಿ ಮಾಡಿದ ಶರದ ಪವಾರ್ : ‘ವೈಯಕ್ತಿಕ ಭೇಟಿ’ ಎಂದ ಬಿಜೆಪಿ

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ ಪವಾರ್ ಅವರು ಗುರುವಾರ ಮುಂಬೈನ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಭೇಟಿಯಾದರು. ಸಭೆಯ ಕುರಿತು ಟ್ವೀಟ್ ಮಾಡಿರುವ ಶರದ ಪವಾರ್ ಅವರು, ದಕ್ಷಿಣ ಮುಂಬೈನ ಐಕಾನಿಕ್ ಸಿನಿಮಾ ಹಾಲ್ ಮರಾಠ ಮಂದಿರದ 75ನೇ ವಾರ್ಷಿಕೋತ್ಸವಕ್ಕೆ ಮುಖ್ಯಮಂತ್ರಿಯನ್ನು ಆಹ್ವಾನಿಸಲು ಹೋಗಿದ್ದೆ ಎಂದು … Continued

ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಸಂಬಂಧ ಇಂದು ಅಧಿಸೂಚನೆ ಹೊರಡಿಸಿದ್ದು, ಹೊರ್ಟಿಕಲ್ಚರ್ ಮತ್ತು ಸೆರಿಕಲ್ಟರ್ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಜೇಂದ್ರಕುಮಾರ ಕಠಾರಿಯ ಅವರನ್ನು ವರ್ಗಾವಣೆ ಮಾಡಿದ್ದು, ಅವರನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ಐಎಎಸ್ ಅಧಿಕಾರಿ ಪಂಕಜಕುಮಾರ ಪಾಂಡೆ ಅವರನ್ನು ಎಂಎಸ್ಎಂಇ ಮತ್ತು … Continued

ಅಬಕಾರಿ ನೀತಿ ತುಂಬಾ ಉತ್ತಮವಾಗಿದ್ದರೆ ನೀವು ಹಿಂತೆಗೆದುಕೊಂಡಿದ್ದು ಯಾಕೆ ? : ಮನೀಶ ಸಿಸೋಡಿಯಾ ಪ್ರಶ್ನಿಸಿದ ಕೋರ್ಟ್‌

ನವದೆಹಲಿ : ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿತರಾಗಿರುವ ಮಾಜಿ ಉಪಮುಖ್ಯಮಂತ್ರಿ ಮನೀಶ ಸಿಸೋಡಿಯಾ ಅವರಿಗೆ ದೆಹಲಿ ಹೈಕೋರ್ಟ್‌ ಗುರುವಾರ ನೀತಿ ತುಂಬಾ ಉತ್ತಮವಾಗಿದ್ದರೆ ಅದನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದು ಏಕೆ ಎಂಬುದನ್ನು ವಿವರಿಸುವಂತೆ ಕೇಳಿದೆ. ನ್ಯಾಯಮೂರ್ತಿ ದಿನೇಶಕುಮಾರ ಶರ್ಮಾ ಅವರು, ಆರೋಪಿತ ಹಗರಣದಿಂದ ಉದ್ಭವಿಸಿದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಹ ಆರೋಪಿ … Continued

ವಾಣಿಜ್ಯ ಎಲ್‌ ಪಿ ಜಿ ಸಿಲಿಂಡರ್ ದರದಲ್ಲಿ ಇಳಿಕೆ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ₹83.50 ರೂಪಾಯಿ ಇಳಿಕೆ ಮಾಡಿದೆ. ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಗೆ ಬರಲಿದೆ. ಹೊಸ ಬೆಲೆಗಳು ಜೂನ್‌ 1ರಿಂದ ಅನ್ವಯವಾಗಲಿದೆ ಎಂದು ಹೇಳಿದೆ. ಅಡುಗೆ ಅನಿಲ ದರ ಯಥಾಸ್ಥಿತಿಯಲ್ಲಿದೆ. ಸಿಲಿಂಡರ್ ಬೆಲೆ ದರ ಕಡಿತದ ನಂತರ, 19 ಕೆಜಿ ವಾಣಿಜ್ಯ … Continued

ಕಾರಿನಲ್ಲಿ ಕರೆದೊಯ್ದು ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆಗೈದ ತಂದೆ

ದಾವಣಗೆರೆ: ತಂದೆಯೇ ತನ್ನ ಅವಳಿ ಮಕ್ಕಳನ್ನು ಕಾರಿನಲ್ಲಿ ಕರೆದೊಯ್ದ ಅವರ ಮುಖಕ್ಕೆ ಟೆಕ್ಸೋ ಟೇಪ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಗೇಟ್ ಬಳಿ ನಡೆದ ವರದಿಯಾಗಿದೆ. ಮೃತ ಮಕ್ಕಳನ್ನು ಅದ್ವೈತ್ (4), ಅನ್ವಿತ್‌ (4 ಎಂದು ಗುರುತಿಸಲಾಗಿದೆ. ತಂದೆ ಅಮರ ಕಿತ್ತೂರು ಎಂಬವರು ಪತ್ನಿ ತವರಿಗೆ ವಿಜಯಪುರಕ್ಕೆ … Continued

ಅರ್ನಾಲ್ಟ್‌ ಹಿಂದಕ್ಕಿ ಪುನಃ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲೋನ್‌ ಮಸ್ಕ್‌

ಎಲೋನ್ ಮಸ್ಕ್ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಗುರುವಾರ ಬಿಡುಗಡೆಯಾದ ಬ್ಲೂಮ್ ಬರ್ಗ್ ಬಿಲಿಯನರ್ಸ್ ಸೂಚ್ಯಂಕದ ಪ್ರಕಾರ ಮಸ್ಕ್ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಪ್ಯಾರಿಸ್ ವಹಿವಾಟಿನಲ್ಲಿ ಅರ್ನಾಲ್ಟ್‌ನ LVMH ಷೇರುಗಳು 2.6% ಕುಸಿದ ನಂತರ ಟೆಸ್ಲಾ ಮುಖ್ಯಸ್ಥ ಮಸ್ಕ್‌ ಅವರು … Continued

ಹೊಸದಾಗಿ ನಿರ್ಮಿಸಿದ ರಸ್ತೆಯನ್ನು ಬರಿಗೈಯಲ್ಲಿ ಎತ್ತಿ ತೋರಿಸಿದ ಗ್ರಾಮಸ್ಥರು | ವೀಕ್ಷಿಸಿ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿರುವ ವೀಡಿಯೊವೊಂದರಲ್ಲಿ ಹೊಸದಾಗಿ ನಿರ್ಮಿಸಲಾದ ರಸ್ತೆಯನ್ನು ಗ್ರಾಮಸ್ಥರು ತಮ್ಮ ಕೈಗಳಿಂದ ಎತ್ತುತ್ತಿರುವುದನ್ನು ತೋರಿಸುತ್ತದೆ. ಹಲವಾರು ಟ್ವಿಟರ್ ಹ್ಯಾಂಡಲ್‌ಗಳು ಹೇಳಿಕೊಂಡಂತೆ ಮಹಾರಾಷ್ಟ್ರದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. 38 ಸೆಕೆಂಡುಗಳ ಕ್ಲಿಪ್‌ನಲ್ಲಿ ಕಾರ್ಪೆಟ್ ತರಹದ ವಸ್ತುವನ್ನು ನೇರವಾಗಿ ರಸ್ತೆಯ ಕೆಳಗೆ ಇರಿಸಲಾಗಿದೆ, ಇದನ್ನು ಸ್ಥಳೀಯ ಗುತ್ತಿಗೆದಾರರು ನಿರ್ಮಿಸಿದ್ದಾರೆ. ಕ್ಲಿಪ್‌ನಲ್ಲಿ ಸ್ಥಳೀಯ ಗುತ್ತಿಗೆದಾರನ ಕಳಪೆ … Continued

ಸಮುದ್ರಕ್ಕೆ ಹಾರಿ ನೀರಿನಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ರಕ್ಷಿಸಿದ ಬಿಜೆಪಿ ಶಾಸಕ | ವೀಕ್ಷಿಸಿ

ಗುಜರಾತ್‌ನ ರಾಜುಲಾ ಕ್ಷೇತ್ರದ ಬಿಜೆಪಿ ಶಾಸಕ ಹೀರಾ ಸೋಲಂಕಿ ಅವರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರು ಮೂರು ಜೀವಗಳನ್ನ ಉಳಿಸಿದ್ದಾರೆ. ನಾಲ್ವರು ಯುವಕರು ಗುಜರಾತ್‌ನ ರಾಜುಲಾ ಸಮೀಪದ ಪಟ್ವಾ ಗ್ರಾಮದ ಸಮುದ್ರ ತೀರದಲ್ಲಿರುವ ತೊರೆಗೆ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ಅವರು ಮುಳುಗುತ್ತಿದ್ದರು. ಘಟನೆಯ ಬಗ್ಗೆ ತಿಳಿದ ರಾಜುಲಾ ಕ್ಷೇತ್ರದ ಬಿಜೆಪಿ ಶಾಸಕ ಹೀರಾ … Continued

ಚಾಮರಾಜನಗರ: ಲಘು ವಿಮಾನ ಪತನ; ಪೈಲಟ್‌ಗಳು ಪಾರು

ಚಾಮರಾಜನಗರ: ತಾಲೂಕಿನ ಭೋಗಾಪುರ ಸಮೀಪದ ಕೆ.ಮೂಕಹಳ್ಳಿಯಲ್ಲಿ ಬಳಿ ಕಿರಣ ಹೆಸರಿನ ಲಘು ವಿಮಾನ ಪತನವಾಗಿದ್ದು, ಪೈಲಟ್‌ಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇಂದು, ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ವಿಮಾನ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್ಟುಗಳು ಪ್ಯಾರಾಚೂಟ್‌ ಮೂಲಕ ಹಾರಿ ಪಾರಾಗಿದ್ದಾರೆ. ಒಬ್ಬರು ಮಹಿಳಾ ಪೈಲಟ್‌ ಕೂಡ ಇದ್ದರು … Continued