ವೀಡಿಯೊ…: ರಾಹುಲ್ ಗಾಂಧಿ 50 ವರ್ಷದ ಮುದುಕಿಗೆ ಏಕೆ ಫ್ಲೈಯಿಂಗ್ ಕಿಸ್ ಕೊಡ್ತಾರೆ ? ; ಮತ್ತೊಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್ ಶಾಸಕಿ ಹೇಳಿಕೆ

ನವದೆಹಲಿ: ರಾಹುಲ್ ಗಾಂಧಿ ಅವರ ‘ಫ್ಲೈಯಿಂಗ್ ಕಿಸ್’ ವಿವಾದದ ನಡುವೆ, ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ವ್ಯಂಗ್ಯವಾಡುವ ಮೂಲಕ ಈಗ ಹೊಸ ವಿವಾದ ಸೃಷ್ಟಿಸಿದ್ದಾರೆ.
ಹುಡುಗಿಯರ ಕೊರತೆಯಿಲ್ಲ, ಹೀಗಾಗಿ ರಾಹುಲ್‌ ಗಾಂಧಿ 50 ವರ್ಷದ ಮಹಿಳೆಗೆ ಏಕೆ ಫ್ಲೈಯಿಂಗ್ ಕಿಸ್ ನೀಡುತ್ತಾರೆ ಎಂದು ನೀತು ಸಿಂಗ್‌ ವೀಡಿಯೊದಲ್ಲಿ ಕೇಳಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ಹುಡುಗಿಯರ ಕೊರತೆ ಇಲ್ಲ, ಅವರು ಫ್ಲೈಯಿಂಗ್ ಕಿಸ್ ಕೊಡಬೇಕಾದರೆ ಯುವತಿಗೆ ಕೊಡುತ್ತಾರೆ ಮತ್ತು ಸ್ಮೃತಿ ಇರಾನಿಯಂತಹ 50 ವರ್ಷದ ವಯಸ್ಸಾದ ಮಹಿಳೆಗೆ ಏಕೆ ಕೊಡುತ್ತಾರೆ ? ರಾಹುಲ್ ಗಾಂಧಿ ವಿರುದ್ಧದ ಈ ಆರೋಪಗಳು ಆಧಾರರಹಿತವಾಗಿವೆ ಎಂದು ನೀತು ಸಿಂಗ್ ಹೇಳಿದ್ದಾರೆ.
ಬಿಹಾರದ ಹಿಸುವಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ, “ಫ್ಲೈಯಿಂಗ್ ಕಿಸ್” ವಿವಾದವು ರಾಹುಲ್ ಗಾಂಧಿಯವರ ಇಮೇಜ್ ಅನ್ನು ಕೆಡಿಸುವ ಬಿಜೆಪಿಯ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ನೀತು ಸಿಂಗ್ ಹೇಳಿಕೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಪಕ್ಷದ ವಕ್ತಾರ ಗೌರವ್ ಭಾಟಿಯಾ ಅವರು X ನಲ್ಲಿ ಸ್ಮೃತಿ ಇರಾನಿ ವಿರುದ್ಧದ ನೀತು ಸಿಂಗ್‌ ಟೀಕೆಗಳು ‘ನಾಚಿಕೆಗೇಡಿನದ್ದು’ ಎಂದು ಹೇಳಿದ್ದಾರೆ.
ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್ ‘ಮಹಿಳಾ ವಿರೋಧಿ ಪಕ್ಷ’ ಮತ್ತು ಅದು ತನ್ನ ನಾಯಕ ರಾಹುಲ್ ಗಾಂಧಿಯನ್ನು ರಕ್ಷಿಸಲು ಯಾವುದೇ ಹಂತಕ್ಕೆ ಹೋಗಬಹುದು ಎಂದು ಹೇಳಿದರು.

ಪ್ರಮುಖ ಸುದ್ದಿ :-   ದ್ವೇಷ ಭಾಷಣ : ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳದ ಚುನಾವಣಾ ಆಯೋಗ ; ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

ಫ್ಲೈಯಿಂಗ್ ಕಿಸ್ ವಿವಾದ
ಬುಧವಾರ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಮೃತಿ ಇರಾನಿ, ಅವರನ್ನು ಸ್ತ್ರೀದ್ವೇಷವಾದಿ ಎಂದು ಕರೆದರು ಮತ್ತು ಸದನವು ಅಂತಹ “ಅಸಭ್ಯ ಕೃತ್ಯ” ವನ್ನು ನೋಡಿಲ್ಲ ಎಂದು ಹೇಳಿದರು. ಬಿಜೆಪಿ ಮಹಿಳಾ ಸಂಸದರು ನಂತರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಗಾಂಧಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಸದನದಲ್ಲಿ ಮಾತನಾಡುತ್ತಿದ್ದಾಗ ಕಾಂಗ್ರೆಸ್ ಸದಸ್ಯರು ಸ್ಮೃತಿ ಇರಾನಿ ಕಡೆಗೆ “ಅನುಚಿತ ಸನ್ನೆ” ಮಾಡಿದರು ಎಂದು 20 ಕ್ಕೂ ಹೆಚ್ಚು ಮಹಿಳಾ ಸಂಸದರು ಸಹಿ ಮಾಡಿದ ದೂರಿನಲ್ಲಿ ಆರೋಪಿಸಲಾಗಿದೆ.
”ನನಗಿಂತ ಮೊದಲು ಮಾತನಾಡಿದ ವ್ಯಕ್ತಿ… ಅಸಭ್ಯ ವರ್ತನೆ ತೋರಿದ… ಮಹಿಳಾ ಸಂಸದರು ಇರುವ ಸಂಸತ್ತಿನಲ್ಲಿ ಸ್ತ್ರೀದ್ವೇಷದ ಪುರುಷ ಮಾತ್ರ ಫ್ಲೈಯಿಂಗ್ ಕಿಸ್ ನೀಡಬಲ್ಲ… ಇಂತಹ ಅಸಭ್ಯ ಕೃತ್ಯವನ್ನು ಸದನ ಹಿಂದೆಂದೂ ಕಂಡಿರಲಿಲ್ಲ. ಇಡೀ ದೇಶವು (ಗಾಂಧಿ) ಕುಟುಂಬದ ಸಂಸ್ಕೃತಿಯನ್ನು ನೋಡಿದೆ” ಎಂದು ಸ್ಮೃತಿ ಇರಾನಿ ಹೇಳಿದರು.
ಚರ್ಚೆಯಲ್ಲಿ ಭಾಗವಹಿಸಿ ಸದನದಿಂದ ನಿರ್ಗಮಿಸುವಾಗ ಗಾಂಧಿ ಅವರು ಆಡಳಿತ ಪಕ್ಷದ ಸಂಸದರು ಬೊಬ್ಬೆ ಹೊಡೆದರು. ನಂತರ ರಾಹುಲ್‌ ಗಾಂಧಿ ತಿರುಗಿ ಫ್ಲೈಯಿಂಗ್ ಕಿಸ್ ನೀಡಿದರು.

ಪ್ರಮುಖ ಸುದ್ದಿ :-   ವಿಶ್ವದಾದ್ಯಂತ ಕೋವಿಡ್ ಲಸಿಕೆ ಹಿಂತೆಗೆದುಕೊಂಡ ಆಸ್ಟ್ರಾಜೆನೆಕಾ : ವರದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement