ಸಚಿನ್ ತೆಂಡೂಲ್ಕರ್ ಚುನಾವಣಾ ಆಯೋಗದ ‘ರಾಷ್ಟ್ರೀಯ ಐಕಾನ್’

ನವದೆಹಲಿ : ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಮತದಾರರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಚುನಾವಣಾ ಆಯೋಗದ (ಇಸಿ) “ರಾಷ್ಟ್ರೀಯ ಐಕಾನ್” ಎಂದು ಬುಧವಾರ ನೇಮಕ ಮಾಡಲಾಗುತ್ತಿದೆ. ಬುಧವಾರ ತೆಂಡೂಲ್ಕರ್ ಮತ್ತು ಚುನಾವಣಾ ಸಮಿತಿ ನಡುವೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗುತ್ತದೆ. ಮೂರು ವರ್ಷಗಳ ಒಪ್ಪಂದದ ಭಾಗವಾಗಿ, ತೆಂಡೂಲ್ಕರ್ ಮತದಾರರಲ್ಲಿ ಮತದಾನದ ಜಾಗೃತಿಯನ್ನು … Continued

ಅಮೆರಿಕದ ಮೃಗಾಲಯದಲ್ಲಿ ವಿಶಿಷ್ಟ ಜಿರಾಫೆ ಜನನ

ನ್ಯೂಯಾರ್ಕ್: ಅಮೆರಿಕದ ಟೆನ್ನೆಸ್ಸಿಯಲ್ಲಿರುವ ಬ್ರೈಟ್ಸ್ ಮೃಗಾಲಯದಲ್ಲಿ ಅಪರೂಪದ ಜಿರಾಫೆಯೊಂದು ಜನಿಸಿದೆ. ಸಾಮಾನ್ಯವಾಗಿ ಜಿರಾಫೆ ದೇಹದ ತುಂಬಾ ಆಕರ್ಷಕ ಕಂದು ಬಣ್ಣದ ದೊಡ್ಡ ಗಾತ್ರದ ಚುಕ್ಕೆಗಳು ಅಥವಾ ತೇಪೆಗಳನ್ನು ಕಾಣುತ್ತೇವೆ ಆದರೆ ಈ ಜಿರಾಫೆಯು ತನ್ನ ದೇಹದಲ್ಲಿ ಒಂದೇ ಒಂದು ಚುಕ್ಕೆ ಅಥವಾ ತೇಪೆಗಳಿಲ್ಲದೆ ಜನಿಸಿದೆ. ಜುಲೈ 31 ರಂದು ಜನಿಸಿದ ಜಿರಾಫೆಗೆ ಇನ್ನೂ ಹೆಸರಿಡಲಾಗಿಲ್ಲ. ಇಡೀ … Continued

ಈಗ ಹೇರ್‌ ಕಟ್‌ ಮಾಡಲು ಬಂತು ರೋಬೋಟ್‌ | ವೀಕ್ಷಿಸಿ

ತಾಂತ್ರಿಕ ಪ್ರಗತಿಗಳ ಮಧ್ಯೆ, ವ್ಯಕ್ತಿಗಳು ಈಗ ತಮ್ಮ ವೈಯಕ್ತಿಕ ಅನುಕೂಲಕ್ಕಾಗಿ ವೈವಿಧ್ಯಮಯ ರೋಬೋಟ್‌ಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಸ್ವಯಂಚಾಲಿತ ಫ್ಲೋರ್ ಕ್ಲೀನರ್‌ಗಳಿಂದ ಹಿಡಿದು ಮನೆ ಸಹಾಯಕರವರೆಗೆ, ಸಾಧ್ಯತೆಗಳ ಶ್ರೇಣಿಗೆ ಮಿತಿಯಿಲ್ಲ. ಇಂತಹದ್ದೇ ಒಂದು ನಿದರ್ಶನದಲ್ಲಿ, ಆರ್ಕೈವ್ ಮಾಡಲಾದ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ, ಹೇರ್‌ಕಟ್ ಮಾಡಲು ವಿನ್ಯಾಸಗೊಳಿಸಲಾದ ರೋಬೋಟ್‌ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ವೀಡಿಯೊದಲ್ಲಿ, ಅಮೇರಿಕನ್ ಇಂಜಿನಿಯರ್ … Continued

ಕೊಲೆ ಯತ್ನ ಪ್ರಕರಣ : ಲಕ್ಷದ್ವೀಪ ಸಂಸದರಿಗೆ ಸುಪ್ರೀಂ ಕೋರ್ಟಿನಲ್ಲಿ ಭಾರೀ ಹಿನ್ನಡೆ

ನವದೆಹಲಿ: ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರಿಗೆ ಸುಪ್ರೀಂ ಕೋರ್ಟ್‌ ನಲ್ಲಿ ಭಾರೀ ಹಿನ್ನಡೆಯಾಗಿದ್ದು, ಕೊಲೆ ಯತ್ನ ಪ್ರಕರಣದಲ್ಲಿ ಅವರ ಅಪರಾಧ ಮತ್ತು ಶಿಕ್ಷೆಯನ್ನು ಅಮಾನತುಗೊಳಿಸಿದ್ದ ಕೇರಳ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್ ಆರು ವಾರಗಳಲ್ಲಿ ಹೊಸ ಪರಿಗಣನೆಗೆ ತೆಗೆದುಕೊಳ್ಳುವಂತೆ ಈ ಪ್ರಕರಣವನ್ನು ಮತ್ತೆ ಹೈಕೋರ್ಟ್‌ಗೆ ಹಿಂತಿರುಗಿಸಿದೆ. ಆ ಅವಧಿಯಲ್ಲಿ … Continued

ಕಾವೇರಿ-ಮಹದಾಯಿ ಜಲ ವಿವಾದದ ಬಗ್ಗೆ ಚರ್ಚಿಸಲು ನಾಳೆ ಸರ್ವಪಕ್ಷಗಳ ಸಭೆ

ಬೆಂಗಳೂರು : ಕಾವೇರಿ ಹಾಗೂ ಮಹದಾಯಿ ಜಲವಿವಾದಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸರ್ವಪಕ್ಷಗಳ ಸಭೆಯನ್ನು ಬುಧವಾರ (ಆಗಸ್ಟ್‌ 23) ರಂದು ಕರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಸಭೆಗೆ ಹಾಜರಾಗಿ ತಮ್ಮ ಸಲಹೆ ನೀಡುವಂತೆ ಸಂಸದರು, ಸರ್ವಪಕ್ಷಗಳ ಮುಖಂಡರು ಹಾಗೂ ಮಾಜಿ … Continued

70 ಕಿಮೀ ದೂರದಿಂದ ತೆಗೆದ ಚಂದ್ರನ ಮೇಲ್ಮೈ ಫೋಟೊಗಳನ್ನು ಹಂಚಿಕೊಂಡ ಚಂದ್ರಯಾನ-3 | ವೀಕ್ಷಿಸಿ

ನವದೆಹಲಿ: ಚಂದ್ರಯಾನ-3 ಮಿಷನ್ ಆಗಸ್ಟ್ 23 ರ ಬುಧವಾರ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಚಂದ್ರಯಾನ-3ರ ಎಲ್ಲ ವ್ಯವಸ್ಥೆಗಳು ನಿಯಮಿತ ತಪಾಸಣೆಗೆ ಒಳಗಾಗುತ್ತಿವೆ ಮತ್ತು ಸುಗಮ ನೌಕಾಯಾನ ಮುಂದುವರಿಯುತ್ತಿದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಲ್ಯಾಂಡಿಂಗ್ ಕಾರ್ಯಾಚರಣೆಗಳ ನೇರ ಪ್ರಸಾರವು ಆಗಸ್ಟ್ 23 … Continued

ಮಾನನಷ್ಟ ಮೊಕದ್ದಮೆ; ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ

ಮುಂಬೈ: ಆರ್‌ಎಸ್‌ಎಸ್ ಕಾರ್ಯಕರ್ತ ತಮ್ಮ ವಿರುದ್ಧ ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕೆಲ ಹೆಚ್ಚುವರಿ ದಾಖಲೆಗಳನ್ನು ಅಂಗೀಕೃತ ಸಾಕ್ಷ್ಯವಾಗಿ ಸ್ವೀಕರಿಸಿದ ಥಾಣೆ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಭಿವಂಡಿ ಮ್ಯಾಜಿಸ್ಟ್ರೇಟ್‌ಗೆ ನೀಡಿದ ದೂರಿನಲ್ಲಿ ರಾಜೇಶ ಕುಂಟೆ, ರಾಹುಲ್ ಗಾಂಧಿ ಅವರು ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ … Continued

ಚಂದ್ರಯಾನ-3 ಕುರಿತು ಅಪಹಾಸ್ಯ: ನಟ ಪ್ರಕಾಶ ರೈ ವಿರುದ್ಧ ದೂರು ದಾಖಲು

ಬೆಂಗಳೂರು: ಚಂದ್ರಯಾನ-3 ಮಿಷನ್ ಕುರಿತು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ನಟ ಪ್ರಕಾಶ ರೈ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ ಎಂದು ವರದಿಯಾಗಿದೆ. ಹಿಂದೂ ಸಂಘಟನೆಗಳ ಮುಖಂಡರು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ನಟ ಪ್ರಕಾಶ ರೈ ವಿರುದ್ಧ ದೂರು ದಾಖಲಿಸಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆಗಸ್ಟ್ 20 ರಂದು, ನಟ … Continued

ಚಂದ್ರಯಾನ-3 ವಿಕ್ರಂ ಲ್ಯಾಂಡರ್‌ ಚಂದ್ರನ ಮೇಲೆ ಹೇಗೆ ಇಳಿಯಲಿದೆ? ಆ ಕೊನೆಯ 20 ನಿಮಿಷಗಳು ಅತ್ಯಂತ ನಿರ್ಣಾಯಕ

ನವದೆಹಲಿ : ಭಾರತದ ಚಂದ್ರಯಾನ-3 ಬಾಹ್ಯಕಾಶ ನೌಕೆಯ ವಿಕ್ರಂ ಲ್ಯಾಂಡರ್‌ ಅನ್ನು ಬುಧವಾರ ಚಂದ್ರನ ದಕ್ಷಿಣ ಧ್ರುವದ ಬಳಿ ಮೃದುವಾಗಿ ಇಳಿಸಿ ಇತಿಹಾಸವನ್ನು ಸೃಷ್ಟಿಸಲು ಇಸ್ರೊ ಸಿದ್ಧವಾಗಿದೆ. ಇಸ್ರೋಕ್ಕೆ ಸಾಫ್ಟ್​ ಲ್ಯಾಂಡಿಂಗ್ ಮಾಡುವುದು​ ಒಂದು ಸವಾಲಾಗಿದ್ದು, ಸಾಫ್ಟ್‌ ಲ್ಯಾಂಡಿಗ್‌ನ ಕೊನೆಯ 20 ನಿಮಿಷದ ಪ್ರಕ್ರಿಯೆ ಅತ್ಯಂತ ನಿರ್ಣಾಯಕವಾಗಿದೆ. ವಿಕ್ರಮ್ ಲ್ಯಾಂಡರ್  ಬುಧವಾರ ಸಂಜೆ ಚಂದ್ರನ ಮೇಲ್ಮೈಯಲ್ಲಿ … Continued

ಗೋಕರ್ಣ ಮಹಾಬಲೇಶ್ವರ ದೇಗುಲ : ನಾಲ್ವರು ನಾಮನಿರ್ದೇಶಿತರನ್ನು ಬದಲಾಯಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು : ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದ ಆಡಳಿತ ನಿರ್ವಹಣೆಗಾಗಿ ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ನಾಮ ನಿರ್ದೇಶನಗೊಂಡಿದ್ದ ಇಬ್ಬರು ಉಪಾಧಿವಂತರು ಮತ್ತು ಇಬ್ಬರು ವಿದ್ವಾಂಸರನ್ನು ಬದಲಾಯಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಮಧ್ಯಂತರ ತಡೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹೊಸನಗರದ ರಾಮಚಂದ್ರಾಪುರ ಮಠದ … Continued