ʼಸುಲಭ್ ಇಂಟರ್‌ನ್ಯಾಶನಲ್ʼ ಸಂಸ್ಥಾಪಕ- ಸಾರ್ವಜನಿಕ ನೈರ್ಮಲ್ಯದ ಪ್ರವರ್ತಕ ಬಿಂದೇಶ್ವರ ಪಾಠಕ ಇನ್ನಿಲ್ಲ

ನವದೆಹಲಿ: ಸುಲಭ್ ಇಂಟರ್‌ನ್ಯಾಶನಲ್ ಸಂಸ್ಥಾಪಕ ಮತ್ತು ಸಾಮಾಜಿಕ ಕಾರ್ಯಕರ್ತ ಬಿಂದೇಶ್ವರ ಪಾಠಕ ಅವರು ಮಂಗಳವಾರ (ಆಗಸ್ಟ್‌ 15) ಹೃದಯ ಸ್ತಂಭನದಿಂದ  ನಿಧನರಾದರು. ಇಂದು, ಮಂಗಳವಾರ ಬೆಳಗ್ಗೆ ನಡೆದ ಸ್ವಾತಂತ್ರ್ಯ ದಿನಾಚರಣೆಯ ವೇಳೆ 80 ವರ್ಷದ ವೃದ್ಧರು ಅಸ್ವಸ್ಥೆಯಿಂದ ಬಳಲುತ್ತಿದ್ದರು. ನಂತರ ಅವರನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್‌)ಗೆ ಕರೆದೊಯ್ಯಲಾಯಿತು ಎಂದು ಸುಲಭ್ … Continued

20 ವರ್ಷಗಳ ನಿಷೇಧದ ನಂತರ ಸ್ವಾತಂತ್ರ್ಯ ದಿನದಂದು ಹಿಂದಿ ಸಿನೆಮಾ ಪ್ರದರ್ಶನಕ್ಕೆ ಮುಂದಾದ ಮಣಿಪುರ: ಇಷ್ಟು ವರ್ಷ ಹಿಂದಿ ಸಿನೆಮಾ ನಿಷೇಧಕ್ಕೆ ಕಾರಣ ಗೊತ್ತಾ?

ಗುವಾಹತಿ : 20 ವರ್ಷಗಳ ಸುದೀರ್ಘ ವಿರಾಮದ ನಂತರ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಮಂಗಳವಾರ (ಆಗಸ್ಟ್ 15) ಹಿಂದಿ ಚಲನಚಿತ್ರವೊಂದು ಪ್ರದರ್ಶನಗೊಳ್ಳಲಿದೆ. ಹಿಂದಿ ಚಲನಚಿತ್ರವು ಮಂಗಳವಾರ (ಆಗಸ್ಟ್ 15) ಸಂಜೆ ಮಣಿಪುರದ ಅತ್ಯಂತ ಹೆಚ್ಚು ಹಿಂಸಾ ಪೀಡಿತ ಚುರಚಂದಪುರ ಜಿಲ್ಲೆಯ ರೆಂಗ್‌ಕೈ ಎಂಬ ಎಚ್‌ಎಸ್‌ಎ (HSA) ಕ್ಯಾಂಪಸ್‌ನಲ್ಲಿ ಪ್ರದರ್ಶಿತವಾಗಲಿದೆ. ಮಣಿಪುರದ ಬುಡಕಟ್ಟು ವಿದ್ಯಾರ್ಥಿಗಳ ಸಂಘಟನೆಯಾದ ಹ್ಮಾರ್ … Continued

ಅವರು ಮನೆಯಲ್ಲಿ ಧ್ವಜಾರೋಹಣ ಮಾಡ್ತಾರೆ’ : ಮುಂದಿನ ವರ್ಷ ಕೆಂಪುಕೋಟೆಯಲ್ಲಿ ಭೇಟಿಯಾಗೋಣ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಖರ್ಗೆ ವ್ಯಂಗ್ಯ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯೋತ್ಸವ ಭಾಷಣದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯವರ ‘ಕೆಂಪುಕೋಟೆಯಲ್ಲಿ ಮುಂದಿನ ವರ್ಷ ಭೇಟಿಯಾಗೋಣ’ ಎಂಬ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಖರ್ಗೆ, ಪ್ರಧಾನಿಯವರ ಹೇಳಿಕೆಗಳು ಅವರ “ಅಹಂಕಾರ”ವನ್ನು ತೋರಿಸುತ್ತದೆ ಮತ್ತು ಮುಂದಿನ ವರ್ಷ “ತಮ್ಮ ಮನೆಯಲ್ಲಿ” ಧ್ವಜಾರೋಹಣ ಮಾಡಲಿದ್ದಾರೆ ಎಂದು ಹೇಳಿದರು. ಅವರು [ಮೋದಿ] ಮುಂದಿನ … Continued

ಇದೇ ಸ್ಥಳ, ಇದೇ ಸಮಯ..ಮುಂದಿನ ವರ್ಷ ಕೆಂಪುಕೋಟೆಯಲ್ಲಿ ಭೇಟಿಯಾಗೋಣ : ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮುಂದಿನ ಅವಧಿಗೆ ದಿಟ್ಟ ಘೋಷಣೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಮುಂದಿನ ವರ್ಷ ಕೆಂಪು ಕೋಟೆಯಿಂದ ರಾಷ್ಟ್ರ ಭಾಷಣ ಮಾಡಲಿದ್ದೇನೆ ಎಂಬ ವಿಶ್ವಾಸವಿದೆ ಮತ್ತು ಜನರಿಗೆ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಮಾಡಿದ ಪ್ರಗತಿಯನ್ನು ವಿವರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬದಲಾವಣೆಯ ಭರವಸೆ ನನ್ನನ್ನು ಇಲ್ಲಿಗೆ ಕರೆತಂದಿತು, ನನ್ನ ಕಾರ್ಯಕ್ಷಮತೆ ನನ್ನನ್ನು ಮತ್ತೊಮ್ಮೆ ಇಲ್ಲಿಗೆ ಕರೆತಂದಿತು. ಮುಂಬರುವ ಐದು ವರ್ಷಗಳು ಅಭೂತಪೂರ್ವ ಅಭಿವೃದ್ಧಿ … Continued

ಕುಮಟಾ: ಸ್ವಾತಂತ್ರ್ಯೋತ್ಸವ ಧ್ವಜಾರೋಹಣಕ್ಕೆ ಹೊರಟ ಶಿಕ್ಷಕ ಅಪಘಾತದಲ್ಲಿ ಸಾವು

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಗುಡೆ ಅಂಗಡಿಯ ಪ್ರಾಥಮಿಕ ಶಾಲಾ ಶಿಕ್ಷಕ ಗೋಪಾಲ ಪಟಗಾರ (50) ಅಪಘಾತದಲ್ಲಿ ನಿಧನರಾಗಿದ್ದಾರೆ. ಆಗಸ್ಟ್‌ ೧೫ರಂದು ಮುಂಜಾನೆ 7 ಗಂಟೆಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಗುಡೆ ಅಂಗಡಿ ಶಾಲೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಅಘನಾಶನಿ ರಸ್ತೆಯ ಹಳಕಾರ ತಿರುವಿನ ಸಮೀಪ ಬೊಲೆರೊ ವಾಹನ ದ್ವಿಚಕ್ರ ವಾಹನಕ್ಕೆ … Continued

ಗೃಹಲಕ್ಷ್ಮೀ ಯೋಜನೆಯ ಹಣ ಆಗಸ್ಟ್‌ 27ರಂದು ಮಹಿಳೆಯರ ಖಾತೆಗೆ : ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು : ಆಗಸ್ಟ್ 27 ರಂದು ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ 2000 ರೂ.ಗಳನ್ನು ವರ್ಗಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಬಡತನ ನಿವಾರಣೆಗೆ ನೇರ ನಗದು ನೀಡುವ ಕಾರ್ಯಕ್ರಮಗಳು ಅತ್ಯುತ್ತಮ ಪರಿಹಾರ ನೀಡಬಹುದು. ಈ ಹಿನ್ನೆಲೆಯಲ್ಲಿ … Continued

ಮಧ್ಯಮ ವರ್ಗ, ಮಹಿಳಾ ನೇತೃತ್ವದ ಅಭಿವೃದ್ಧಿಗೆ ಆದ್ಯತೆ: ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಪ್ರತಿಪಾದನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ತಮ್ಮ ಕೊನೆಯ ಸ್ವಾತಂತ್ರ್ಯ ದಿನದ ಭಾಷಣವನ್ನು ಮಾಡುವಾಗ “ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಭಾರತದ ವಿಧಾನ”, ಬಡತನವನ್ನು ನಿವಾರಿಸಲು ಸರ್ಕಾರದ ಪ್ರಯತ್ನಗಳು ಮತ್ತು ಬೆಳೆಯುತ್ತಿರುವ ಮಧ್ಯಮ ವರ್ಗದ ಬಗ್ಗೆ ಮಾತನಾಡಿದ್ದಾರೆ. ಹಿಂಸಾಚಾರದಿಂದ ಹಾನಿಗೊಳಗಾದ ಮಣಿಪುರದೊಂದಿಗೆ ದೇಶ ನಿಂತಿದೆ ಎಂದು ಪ್ರಧಾನಿ ಮೋದಿ ಹೇಳಿದರು. … Continued

ದೇಶವು ಮಣಿಪುರದೊಂದಿಗಿದೆ, ಪರಿಸ್ಥಿತಿ ಸುಧಾರಿಸುತ್ತಿದೆ: 77ನೇ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ

ನವದೆಹಲಿ: ಕೆಂಪು ಕೋಟೆಯ ಆವರಣದಿಂದ 77 ನೇ ಸ್ವಾತಂತ್ರ್ಯ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಡೀ ರಾಷ್ಟ್ರವು ಮಣಿಪುರದೊಂದಿಗೆ ಇದೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರವು ಪರಿಹಾರವನ್ನು ಕಂಡುಹಿಡಿಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಅದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ. ಕೆಂಪು ಕೋಟೆಯಿಂದ ಸತತ 10 ನೇ ಭಾಷಣದ ಆರಂಭದಲ್ಲಿ ಪ್ರಧಾನಿ … Continued

ಆಗಸ್ಟ್ 15 ರಿಂದ ಟೊಮೆಟೊ ಕೆಜಿಗೆ 50 ರೂ.ಗಳಿಗೆ ಮಾರಾಟಕ್ಕೆ ಸರ್ಕಾರದ ಸೂಚನೆ

ನವದೆಹಲಿ: ಆಗಸ್ಟ್ 15 ರಿಂದ ಟೊಮೆಟೊವನ್ನು ಕೆಜಿಗೆ 50 ರೂ.ಗಳಿಗೆ ಚಿಲ್ಲರೆ ದರದಲ್ಲಿ ಮಾರಾಟ ಮಾಡುವಂತೆ ಕೇಂದ್ರ ಸರ್ಕಾರ ಸೋಮವಾರ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಒಕ್ಕೂಟ (ನಾಫೆಡ್)ಕ್ಕೆ ನಿರ್ದೇಶನ ನೀಡಿದೆ. ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಈ ನಿರ್ಧಾರ … Continued

ದೆಹಲಿಯ ಕರ್ನಾಟಕ ಪ್ರತಿನಿಧಿಯಾಗಿ ಪ್ರಕಾಶ ಹುಕ್ಕೇರಿ ನೇಮಕ

ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ ಅವರನ್ನು ದೆಹಲಿಯ ಕರ್ನಾಟಕದ ಎರಡನೇ ಪ್ರತಿನಿಧಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಅಲ್ಲದೆ, ಹುಕ್ಕೇರಿ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಈ ಹಿಂದೆ ಸಚಿವರಾಗಿ ಕೆಲಸ ನಿರ್ವಹಿಸಿದ್ದ ಹುಕ್ಕೇರಿಯವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಹಿರಿತನಕ್ಕೆ … Continued